33 ಗಂಟೆಗಳ ಸಾವು- ಬದುಕಿನ ಹೋರಾಟ: ಕೊನೆಯುಸಿರೆಳೆದ ಮುಂಬೈನ 'ನಿರ್ಭಯಾ'!

By Suvarna News  |  First Published Sep 11, 2021, 2:27 PM IST

* ಮುಂಬೈನಲ್ಲೊಂದು ಭೀಕರ ಅತ್ಯಾಚಾರ ಪ್ರಕರಣ

* ಮಹಿಳೆ ಮೇಲೆರಗಿದ ಕಾಮುಕ, ಅತ್ಯಾಚಾರ ನಡೆಸಿ ಗುಪ್ತಾಂಗಕ್ಕೆ ರಾಡ್ ಹಾಕಿದ

* 33 ಗಂಟೆಗಳ ಸಾವು ಬದುಕಿನ ಹೋರಾಟದಲ್ಲಿ ಕೊನೆಯುಸಿರೆಳೆದ ಮಹಿಳೆ


ಮುಂಬೈ(ಸೆ.11): ಮುಂಬೈನ ಸಾಕಿ ನಾಕಾ ಪ್ರದೇಶದಲ್ಲಿ ನಡೆದ ಭೀಕರ ಅತ್ಯಾಚಾರಕ್ಕೊಳಗಾದ 34 ವರ್ಷದ ಮಹಿಳೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಅವರು ಘಾಟ್‌ಕೋಪರ್‌ನ ರಾಜಾವಾಢೀ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಈ ಕುಕೃತ್ಯ ಶುಕ್ರವಾರ ಬೆಳಗ್ಗೆ ಮುಂಬೈನ ಸಾಕಿ ನಾಕಾ ಪ್ರದೇಶದ ಖೈರಾನಿ ರಸ್ತೆಯಲ್ಲಿ ನಡೆದಿದೆ. ಆರೋಪಿ ಮೊದಲು ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ್ದು, ಬಳಿಕ ಆಕೆಯ ಗುಪ್ತಾಂಗಕ್ಕೆ ಕಬ್ಬಿಣದ ರಾಡ್‌ ಹಾಕಿ ಹಾಕಿದ್ದಾನೆ. ಬಳಿಕ ರಕ್ತಸಿಕ್ತ ಸ್ಥಿತಿಯಲ್ಲಿ ರಸ್ತೆ ಬದಿಯಲ್ಲಿದ್ದ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿಲಾಗಿತ್ತು. ಈ ಅತ್ಯಾಚಾರ ಪ್ರಕರಣವೂ ದೆಹಲಿಯಲ್ಲಿ ನಡೆದ ನಿರ್ಭಯಾ ಪ್ರಕರಣದಷ್ಟೇ ಘನಘೋರವಾಗಿದ್ದು, ಈ ಮಹಿಳೆಯನ್ನು ಮುಂಬೈನ ನಿರ್ಭಯಾ ಎಂದೇ ಕರೆಯಲಾಗುತ್ತಿದೆ. 

ಘಟನೆಯ ಸಿಸಿಟಿವಿ ಬಹಿರಂಗ

Tap to resize

Latest Videos

ಘಟನೆಯ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಇದರಲ್ಲಿ ಮಹಿಳೆ ಮೇಲೆ ಹಲ್ಲೆ ನಡೆಸಿಸಿದ ದೃಶ್ಯಗಳಿವೆ. ಮಹಿಳೆಯ ಮೇಲೆ ಹಲ್ಲೆ ಮಾಡಿದ ನಂತರ ಆರೋಪಿ ಆಕೆಯನ್ನು ಟೆಂಪೋದಲ್ಲಿ ಕೂರಿಸಿ ಪರಾರಿಯಾಗಿದ್ದಾನೆ. ಬಳಿಕ ದಾರಿಹೋಕನೊಬ್ಬ ಮಹಿಳೆ ಪ್ರಜ್ಞಾಹೀನ ಸ್ಥಿತಿಯಲ್ಲಿರುವುದನ್ನು ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ, ಪೊಲೀಸರು 45 ವರ್ಷದ ಆರೋಪಿಯನ್ನು ಐಪಿಸಿ ಸೆಕ್ಷನ್ 376 (ಅತ್ಯಾಚಾರಕ್ಕೆ ಶಿಕ್ಷೆ) ಮತ್ತು 307 (ಕೊಲೆ ಯತ್ನ) ಅಡಿಯಲ್ಲಿ ಬಂಧಿಸಿದ್ದಾರೆ. ಘಟನೆಯಲ್ಲಿ ಹೆಚ್ಚಿನ ಜನರು ಭಾಗಿಯಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಏತನ್ಮಧ್ಯೆ, ರಾಷ್ಟ್ರೀಯ ಮಹಿಳಾ ಆಯೋಗ (ಎನ್‌ಸಿಡಬ್ಲ್ಯೂ) ಈ ವಿಷಯದ ಬಗ್ಗೆ ಮಾಹಿತಿ ಪಡೆದಿದೆ.

ಮುಂಬೈನಲ್ಲೊಂದು ನಿರ್ಭಯಾ ಪ್ರಕರಣ; ಅತ್ಯಾಚಾರ ಎಸಗಿ ಗುಪ್ತಾಂಗಕ್ಕೆ ಕಬ್ಬಿಣದ ರಾಡ್ ತುರುಕಿದ ಪಾಪಿ!

15 ನಿಮಿಷಗಳ ನೋವಿನಿಂದ ನರಳಿದ್ದ ಮಹಿಳೆ

ಮಾಧ್ಯಮ ವರದಿಗಳ ಪ್ರಕಾರ, ಘಟನೆಯ ಬಳಿಕ, ಮಹಿಳೆ ಸುಮಾರು 15 ನಿಮಿಷಗಳ ಕಾಲ ರಕ್ತದ ಮಡುವಿನಲ್ಲಿ ನರಳಿದ್ದಾಳರೆ. ಇದಾದ ನಂತರ ದಾರಿಹೋಕನೊಬ್ಬ ಇದನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಇದಾದ ನಂತರ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅಲ್ಲಿ ಮಹಿಳೆ ಸುಮಾರು 33 ಗಂಟೆಗಳ ಕಾಲ ಸಾವು ಬದುಕಿನೊಂದಿಗೆ ಹೋರಾಡಿ, ಪ್ರಾಣ ಕಳೆದುಕೊಂಡಿದ್ದಾಳೆ.

ಇಬ್ಬರು ಹೆಣ್ಮಕ್ಕಳು, ಮುಂಬೈನಲ್ಲೇ ವಾಸವಿದ್ದ ಮಹಿಳೆ

ಮಾಧ್ಯಮ ವರದಿಗಳ ಪ್ರಕಾರ, ಮೃತ ಮಹಿಳೆಗೆ 13 ಮತ್ತು 16 ವರ್ಷದ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಆಕೆ ಮುಂಬೈನಲ್ಲಿ ವಾಸಿಸುತ್ತಿದ್ದಳು. ಮನೆಯ ಖರ್ಚುಗಳನ್ನು ನಿರ್ವಹಿಸಲು ಮಹಿಳೆ ಖಾಸಗಿ ಕೆಲಸ ಮಾಡುತ್ತಿದ್ದಳು. ಹೀಗಿರುವಾಗಲೇ ಆರೋಪಿ ಈ ಕುಕೃತ್ಯ ಎಸಗಿದ್ದಾನೆ. ಇನ್ನು ಆರೋಪಿ ಯಾವತ್ತೂ ನಶೆಯಲ್ಲಿ ತೇಲಿಕೊಂಡಿರುತ್ತಿದ್ದ ಎನ್ನಲಾಗಿದೆ. ಇನ್ನು ವಿಚಾರಣೆ ಸಮಯದಲ್ಲಿ, ಆರೋಪಿ ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದಾನೆ.

ಹಾಥ್ರಸ್ ಪ್ರಕರಣದಲ್ಲಿ ಧ್ವನಿ ಎತ್ತಿದವರು ಮೌನವೇಕೆ?

Mumbai’s Nirbhaya has died unfortunately

But Hathras lobby silent

No word from Rahul & Priyanka ? https://t.co/t4IZK5GXd4

— Shehzad Jai Hind (@Shehzad_Ind)

ಇನ್ನು ಸಂತ್ರಸ್ತೆಯ ಸಾವಿನ ಬೆನ್ನಲ್ಲೇ ಟ್ವೀಟ್ ಮಾಡಿರುವ ರಾಜಕೀಯ ತಜ್ಞ ಶಹಜಾದ್ ಪೂನಾವಾಲಾ 'ಹಾಥ್ರಸ್‌ ಪ್ರಕರಣದಲ್ಲಿ ಧ್ವನಿ ಎತ್ತಿದವರು ಈಗೇಕೆ ಮೌನ ವಹಿಸಿದ್ದಾರೆ?' ಎಂದು ಪ್ರಶ್ನಿಸಿದ್ದಾರೆ. 

click me!