ಕರಗುತ್ತಿವೆ ಟಿಬೆಟ್‌ನ ಹಿಮಗಡ್ಡೆಗಳು, ಪತ್ತೆಯಾಯ್ತು 1000 ಹೊಸ ಬ್ಯಾಕ್ಟೀರಿಯಾಗಳು, ಭಾರತ-ಚೀನಾಗೆ ಅಪಾಯ!

By Suvarna News  |  First Published Jun 28, 2022, 1:35 PM IST

* ಕರಗುತ್ತಿವೆ ಟಿಬೆಟ್‌ನ ಹಿಮಗಡ್ಡೆಗಳು

* ಪತ್ತೆಯಾಯ್ತು 1000 ಹೊಸ ಬ್ಯಾಕ್ಟೀರಿಯಾಗಳು

* ಬ್ಯಾಕ್ಟೀರಿಯಾದಿಂದ ಚೀನಾ ಹಾಗೂ ಭಾರತಕ್ಕೆ ಅಪಾಯ


ಟಿಬೆಟ್‌(ಜೂ.28): ಟಿಬೆಟ್‌ನ ಹಿಮನದಿಗಳಲ್ಲಿ 1000 ಹೊಸ ಜಾತಿಯ ಬ್ಯಾಕ್ಟೀರಿಯಾಗಳು ಕಂಡುಬಂದಿವೆ. ಇವುಗಳಲ್ಲಿ ನೂರಾರು ವೈರಸ್‌ಗಳ ಬಗ್ಗೆ ವಿಜ್ಞಾನಿಗಳಿಗೂ ಏನೂ ತಿಳಿದಿಲ್ಲ. ಹವಾಮಾನ ಬದಲಾವಣೆಯಿಂದಾಗಿ ಈ ಹಿಮನದಿಗಳು ವೇಗವಾಗಿ ಕರಗುತ್ತಿವೆ. ಅವು ಕರಗಿದರೆ, ಅವುಗಳ ನೀರು ಬ್ಯಾಕ್ಟೀರಿಯಾದೊಂದಿಗೆ ಚೀನಾ ಮತ್ತು ಭಾರತದ ನದಿಗಳಲ್ಲಿ ವಿಲೀನವಾಗಲಿದೆ. ಇದನ್ನು ಕುಡಿಯುವುದರಿಂದ ಜನರು ಹೊಸ ರೋಗಗಳಿಗೆ ತುತ್ತಾಗಬಹುದು. ಆದರೆ, ಇದಕ್ಕೆಲ್ಲಾ ಮನುಷ್ಯನೇ ಕಾರಣ. ಏಕೆಂದರೆ ಹವಾಮಾನ ಬದಲಾವಣೆಯಾಗುತ್ತಿದ್ದು, ಏರುತ್ತಿರುವ ತಾಪಮಾನದಿಂದಾಗಿ ಸಂಭವಿಸುತ್ತಿದೆ. 

ನೇಚರ್ ಬಯೋಟೆಕ್ನಾಲಜಿಯಲ್ಲಿ ಪ್ರಕಟವಾಗಿರುವ ಈ ಹೊಸ ವರದಿ ಭಾರತ ಮತ್ತು ಚೀನಾದ ಆತಂಕಕ್ಕೆ ಕಾರಣವಾಗಿದೆ. ಚೀನಾದ ಚೈನೀಸ್ ಅಕಾಡೆಮಿ ಆಫ್ ಸೈನ್ಸ್ ವಿಶ್ವವಿದ್ಯಾಲಯದ ವಿಜ್ಞಾನಿಗಳು ಟಿಬೆಟಿಯನ್ ಪ್ರಸ್ಥಭೂಮಿಯಲ್ಲಿ 21 ಹಿಮನದಿಗಳ ಮಾದರಿಗಳನ್ನು ಸಂಗ್ರಹಿಸಿದ್ದಾರೆ. ಈ ಮಾದರಿಗಳನ್ನು 2016 ಮತ್ತು 2020 ರ ನಡುವೆ ಸಂಗ್ರಹಿಸಲಾಗಿದೆ. ಇವುಗಳಲ್ಲಿ 968 ಜಾತಿಯ ಬ್ಯಾಕ್ಟೀರಿಯಾಗಳು ಕಂಡುಬಂದಿವೆ. ಇದರಲ್ಲಿ 82 ಪ್ರತಿಶತ ಬ್ಯಾಕ್ಟೀರಿಯಾಗಳು ಹೊಚ್ಚ ಹೊಸದು. ಪ್ರಪಂಚದಾದ್ಯಂತದ ವಿಜ್ಞಾನಿಗಳಿಗೆ ಯಾವುದೇ ಮಾಹಿತಿ ಇಲ್ಲ.

Tap to resize

Latest Videos

ಹಿಮನದಿಗಳು ಮತ್ತು ಮಂಜುಗಡ್ಡೆಗಳು ಭೂಮಿಯ ಮೇಲ್ಮೈಯ 10% ನಷ್ಟು ಭಾಗವನ್ನು ಆವರಿಸುತ್ತವೆ. ಅವು ಭೂಮಿ ಮೇಲಿನ ಶುದ್ಧ ನೀರಿನ ಮೂಲವನ್ನು ಹೊಂದಿವೆ. ಸಮಸ್ಯೆಯೆಂದರೆ ಈ ಹಿಮನದಿಗಳ ಅಡಿಯಲ್ಲಿ ಸಾವಿರಾರು ವರ್ಷಗಳಿಂದ ಸಂಗ್ರಹವಾಗಿದೆ. ಇದು ಯಾವ ರೀತಿಯ ಪರಿಸರ? ಯಾವ ರೀತಿಯ ಜೀವಿಗಳು ಮತ್ತು ಸೂಕ್ಷ್ಮಜೀವಿಗಳು ಅಲ್ಲಿ ವಾಸಿಸುತ್ತವೆ? ಎಂಬುವುದು ವಿಜ್ಞಾನಿಗಳ ಆವಿಷ್ಕಾರಕ್ಕೆ ಇದು ಯಾವಾಗಲೂ ಪ್ರಮುಖ ವಿಷಯವಾಗಿದೆ. ಹಿಮನದಿ ಕರಗಿದರೆ ಏನಾಗುತ್ತದೆ ಎಂದು ವಿಜ್ಞಾನಿಗಳು ತಿಳಿದುಕೊಳ್ಳಲು ಬಯಸುತ್ತಾರೆ. ಇಲ್ಲಿ ಇರುವ ಸೂಕ್ಷ್ಮಾಣುಜೀವಿಗಳು ಮಾನವರು ಮತ್ತು ಇತರ ಜೀವಿಗಳ ಮೇಲೆ ಯಾವ ಪರಿಣಾಮ ಬೀರುತ್ತವೆ? ಎಂಬುವುದು ಪ್ರಮುಖ ಪಾಥ್ರ ವಹಿಸುತ್ತದೆ. 

ಹಿಮನದಿಗಳಲ್ಲಿ ಅನೇಕ ರೀತಿಯ ಜೀವಗಳು ಬದುಕುವುದು ಕಷ್ಟ ಎಂದು ಮೊದಲು ನಂಬಲಾಗಿತ್ತು. ಆದರೆ ಕಳೆದ ವರ್ಷ ನಡೆಸಿದ ಅಧ್ಯಯನದಲ್ಲಿ 15 ಸಾವಿರ ವರ್ಷಗಳಷ್ಟು ಹಳೆಯದಾದ ಹಿಮನದಿಯಲ್ಲಿ ಹಲವು ಬಗೆಯ ವೈರಾಣುಗಳು ಪತ್ತೆಯಾಗಿರುವುದು ಬೆಳಕಿಗೆ ಬಂದಿದೆ. ಹೆಚ್ಚುತ್ತಿರುವ ತಾಪಮಾನದಿಂದಾಗಿ ಟಿಬೆಟಿಯನ್ ಪ್ರಸ್ಥಭೂಮಿಯ ಹಿಮನದಿಗಳು ವೇಗವಾಗಿ ಕರಗುತ್ತಿವೆ ಎಂದು ಹೊಸ ಅಧ್ಯಯನವೊಂದು ಬಹಿರಂಗಪಡಿಸಿದೆ. ಇದು ಹವಾಮಾನ ಬದಲಾವಣೆಯ ಪರಿಣಾಮವಾಗಿದೆ. ಹಿಮ ಕರಗುವುದರೊಂದಿಗೆ ಎತ್ತರದಲ್ಲಿರುವ ಬ್ಯಾಕ್ಟೀರಿಯಾಗಳು ಕೆಳಗೆ ಹರಿಯುತ್ತವೆ ಎಂಬುವುದೇ ಬಹುದೊಡ್ಡ ಸಮಸ್ಯೆಯಾಗಿದೆ. ನದಿಗಳ ಮೂಲಕ ಇದು ಜನತರನ್ನು ತಲುಪುತ್ತದೆ. ಆಗ ಅದು ವಿನಾಶಕ್ಕೆ ಕಾರಣವಾಗಬಹುದು.

ಅಧ್ಯಯನದ ಪ್ರಕಾರ, ಹಿಮನದಿಯ ಮಂಜುಗಡ್ಡೆಯಲ್ಲಿ ಬಂಧಿಸಲ್ಪಟ್ಟಿರುವ ಆಧುನಿಕ ಮತ್ತು ಪ್ರಾಚೀನ ಬ್ಯಾಕ್ಟೀರಿಯಾಗಳು ಹೊರಬಂದಾಗ, ಅವು ಸ್ಥಳೀಯವಾಗಿ ಅಥವಾ ದೊಡ್ಡ ಪ್ರಮಾಣದಲ್ಲಿ ಸಾಂಕ್ರಾಮಿಕ ರೋಗಗಳನ್ನು ಹರಡಬಹುದು. ಇವುಗಳೊಂದಿಗೆ, ಅಂತಹ ವೈರಲೆನ್ಸ್ ಅಂಶಗಳು ಸಹ ಬರಬಹುದು, ಇದು ಮನುಷ್ಯರಿಗೆ, ಸಸ್ಯಗಳಿಗೆ ಮತ್ತು ಪ್ರಾಣಿಗಳಿಗೆ ಅಪಾಯವನ್ನುಂಟುಮಾಡುತ್ತದೆ. ಪ್ರಾಚೀನ ಬ್ಯಾಕ್ಟೀರಿಯಾಗಳು ಮಾನವರು ಅಥವಾ ಇತರ ಜೀವಿಗಳ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎಂಬುದು ವಿಜ್ಞಾನಿಗಳಿಗೆ ತಿಳಿದಿಲ್ಲ. ಆದ್ದರಿಂದ, ಅವುಗಳನ್ನು ತಪ್ಪಿಸಲು, ಹಿಮನದಿ ಕರಗದಂತೆ ನೋಡಿಕೊಳ್ಳುವುದು ಅವಶ್ಯಕ.

ಟಿಬೆಟ್ ಇರುವ ಸ್ಥಳವನ್ನು 'ಏಷ್ಯಾದ ವಾಟರ್ ಟವರ್' ಎಂದು ಕರೆಯಲಾಗುತ್ತದೆ. ಏಷ್ಯಾದ ಕೆಲವು ದೊಡ್ಡ ಮತ್ತು ಶಕ್ತಿಯುತ ನದಿಗಳು ಇಲ್ಲಿಂದ ಹುಟ್ಟುತ್ತವೆ. ಈ ನದಿಗಳ ಸುತ್ತಲೂ ಜನರು ದಟ್ಟವಾದ ಜನಸಂಖ್ಯೆಯಲ್ಲಿ ವಾಸಿಸುತ್ತಿದ್ದಾರೆ. ಹಾಗೆ- ಯಾಂಗ್ಟ್ಜಿ ನದಿ, ಹಳದಿ ನದಿ, ಗಂಗಾ ಮತ್ತು ಬ್ರಹ್ಮಪುತ್ರ ನದಿ. ಈ ನದಿಗಳ ಸಹಾಯದಿಂದ ಬ್ಯಾಕ್ಟೀರಿಯಾವು ಚೀನಾ ಮತ್ತು ಭಾರತದ ಜನನಿಬಿಡ ಪ್ರದೇಶಗಳನ್ನು ತಲುಪಿದರೆ, ಪರಿಸ್ಥಿತಿ ತುಂಬಾ ಕೆಟ್ಟದಾಗಿರುತ್ತದೆ. ಇದರಿಂದ ಭಾರತ ಮತ್ತು ಚೀನಾ ಸಂಕಷ್ಟಕ್ಕೆ ಸಿಲುಕಲಿವೆ. ಇದಲ್ಲದೆ, ಈ ನದಿಗಳ ನೀರನ್ನು ಇತರ ಏಷ್ಯಾದ ದೇಶಗಳು ಸಹ ಬಳಸುತ್ತವೆ

click me!