ಮಣಿಪುರದ 18 ವರ್ಷದ ಯುವತಿ ಮೇಲೆ ಗ್ಯಾಂಗ್ ರೇಪ್, ದುರಂತಕ್ಕೆ ಮಹಿಳೆಯರ ನೆರವು!

By Suvarna News  |  First Published Jul 23, 2023, 9:00 PM IST

ಮಣಿಪುರದಲ್ಲಿ ಅತ್ಯಾಚಾರ, ಹಿಂಸಾಚಾರಗಳಿಗೆ ಬ್ರೇಕ್ ಬೀಳುವ ಲಕ್ಷಣಗಳು ಕಾಣಿಸುತ್ತಿಲ್ಲ. ಭಯಾನಕ, ಭೀಕರ ಹಾಗೂ ತಲೆತಗ್ಗಿಸುವ ಘಟನೆಗಳು ನಡೆಯುತ್ತಿದೆ. ನಗ್ನ ಮೆರವಣಿಗೆ, ಗ್ಯಾಂಗ್ ರೇಪ್ ಬಳಿಕ ಇದೀಗ 18 ವರ್ಷದ ಯುವತಿ ಮೇಲೆ ಗ್ಯಾಂಗ್ ರೇಪ್ ನಡೆದಿದೆ. ಇದಕ್ಕೆ ಮಹಿಳೆಯರೇ ನೆರವು ನೀಡಿದ ಆಘಾತಕಾರಿ ವಿಚಾರವೂ ಬಯಲಾಗಿದೆ.


ಇಂಫಾಲ್(ಜು.23) ಮಣಿಪುರದಲ್ಲಿ ಭೀಕರ ಘಟನೆಗಳು ಬೆಚ್ಚಿ ಬೀಳಿಸುತ್ತಿದೆ. ಹಿಂಸಾಚಾರ, ಗುಂಡಿನ ದಾಳಿ, ಹತ್ಯೆ, ಅತ್ಯಾಚಾರ, ಮನೆಗೆ ಬೆಂಕಿ ಸೇರಿದಂತೆ ಅತೀರೇಖದ ಘಟನೆಗಳು ವರದಿಯಾಗುತ್ತಲೇ ಇದೆ. ಇತ್ತೀಚೆಗೆ ಬೆತ್ತಲೇ ಮೆರವಣಿಗೆ, ವೀರ ಯೋಧನ ಪತ್ನಿಯ ಸಜೀವ ದಹನ ಸೇರಿದಂತೆ ಹಲವು ಭಯಾನಕ ಘಟನೆ ಕಣ್ಣ ಮುಂದಿದೆ. ಇದರ ಬೆನ್ನಲ್ಲೇ 18 ವರ್ಷದ ಯುವತಿಯನ್ನು ಉದ್ರಿಕ್ತರ ಗುಂಪು ಅತ್ಯಾಚಾರ ಎಸಗಿದೆ. ಮತ್ತೊಂದು ದುರಂತ ಎಂದರೆ ಈ ಯುವತಿಯನ್ನು ಮಹಿಳೆಯರ ಗುಂಪು ಹಿಡಿದು ಶಸ್ತ್ರಾಸ್ತ್ರ ಮೂಲಕ ದಾಳಿ ಮಾಡುತ್ತಿದ್ದ ಉದ್ರಿಕ್ತರ ಗುಂಪಿಗೆ ನೀಡಿದೆ. ನಾಲ್ವರು ಉದ್ರಿಕ್ತರ ಯುವತಿ ಮೇಲೆ ಅತ್ಯಾಚಾರ ಎಸಗಲಾಗಿದೆ.

ಪೂರ್ವ ಇಂಫಾಲ್‌ನಲ್ಲಿ ಈ ಗ್ಯಾಂಗ್ ರೇಪ್ ನಡೆದಿದೆ. ನಗ್ನ ಮೆರವಣಿಗೆ ವಿಡಿಯೋ ವೈರಲ್ ಬಳಿಕ ಮೈತಿ ಸಮುದಾಯದ ಯುವತಿಯರನ್ನು ಟಾರ್ಗೆಟ್ ಮಾಡಿ ಅತ್ಯಾಚಾರ ಮಾಡಲಾಗುತ್ತಿದೆ. ಇದರ ಭಾಗವಾಗಿ ಹಲವು ಮಹಿಳೆಯರು ಮೈತಿ ಮಹಿಳೆಯರು, ಯುವತಿಯರ ಮೇಲೆ ದಾಳಿ ಮಾಡಲು ಆರಂಭಿಸಿದ್ದರು. ಈ ವೇಳೆ 18 ವರ್ಷದ ಮೈತಿಯೇ ಸಮುದಾಯದ ಯುವತಿಯನ್ನು ಹಲವು ಮಹಿಳೆಯರು ಹಿಡಿದು ತೀವ್ರವಾಗಿ ಥಳಿಸಿದ್ದಾರೆ. ಬಳಿಕ ಫೋನ್ ಕಾಲ್ ಮೂಲಕ ಶಸ್ತ್ರಾಸ್ತ್ರ ಸಜ್ಜಿತ ಉದ್ರಿಕ್ತ ಗುಂಪಿಗೆ ಕರೆ ಮಾಡಿದ್ದಾರೆ. ಕಲವೇ ಕ್ಷಣದಲ್ಲಿ ಸ್ಥಳಕ್ಕೆ ಆಗಮಿಸಿದ ಉದ್ರಿಕ್ತರ ಗುಂಪು ಕಾರಿನಲ್ಲಿ ಯುವತಿಯನ್ನು ಎಳೆದೊಯ್ದಿದ್ದಾರೆ.

Tap to resize

Latest Videos

 

ಕಾರ್ಗಿಲ್‌ನಲ್ಲಿ ದೇಶ ಕಾಪಾಡಿದ ನನ್ಗೆ, ಪತ್ನಿ ಕಾಪಾಡಲಾಗಲಿಲ್ಲ,ನಗ್ನ ಮೆರವಣಿಗೆ ಸಂತ್ರಸ್ತೆ ಪತಿ ಕಣ್ಣೀರು!

ಯುವತಿಯನ್ನು ಹತ್ತಿರದಲ್ಲಿದ್ದ ಬೆಟ್ಟದ ತುದಿಗೆ ಕರೆದುಕೊಂಡು ಹೋಗಿ ಗುಂಡಿಕ್ಕಿ ಸಾಯಿಸುವುದು ಉದ್ದೇಶವಾಗಿತ್ತು. ಇದರಂತೆ ಬೆಟ್ಟದ ಮೇಲೆ ಕಾರು ನಿಲ್ಲಿಸಿ ಯುವತಿಯನ್ನು ಹೊರಗೆಳೆದಿದ್ದಾರೆ. ಬಳಿಕ ತೀವ್ರವಾಗಿ ಥಲಿಸಿದ್ದಾರೆ. ಯುವತಿ ಗಾಯಗೊಂಡು ದೆಹದಿಂದ ರಕ್ತ ಸುರಿಯಲು ಆರಂಭಿಸಿದೆ. ಅಲ್ಲಿಂದ ಮತ್ತೆ ಮತ್ತೊಂದು ಬೆಟ್ಟಕ್ಕೆ ಕಾರಿನಲ್ಲಿ ಕರೆದುಕೊಂಡು ಹೋಗಿ ಮೂವರು ಅತ್ಯಾಚಾರ ಎಸಗಿದ್ದಾರೆ. ಬಳಿಕ ಅಪಘಾತ ರೀತಿ ಬಿಂಬಿಸಲು ಪ್ಲಾನ್ ಮಾಡಿದ್ದಾರೆ.

ಯುವತಿಯನ್ನು ಬೆಟ್ಟದ ಮೇಲಿಂದ ಕೆಳಕ್ಕೆ ದೂಡಿದ್ದಾರೆ. ಅದೃಷ್ಟವಶಾತ್ ಬೆಟ್ಟದಿಂದ ಕೆಳಕ್ಕೆ ಉರುಳಿದ ಯುವತಿ ಕೆಲಭಾಗದ ರಸ್ತೆಯ ಪಕ್ಕ ಬಿದ್ದಿದ್ದಾರೆ. ಕೆಲ ಹೊತ್ತಿನ ಬಳಿಕ ಸ್ವಲ್ಪ ಸಾವರಿಸಿಕೊಂಡ ಯುವತಿ ಅದೇ ರಸ್ತೆಯಲ್ಲಿ ಬಂದ ಆಟೋ ಬಳಿ ನೆರವು ಕೇಳಿದ್ದಾಳೆ. ರಕ್ತದಿಂದ ತುಂಬಿದ್ದ ಯುವತಿಯನ್ನು ನೇರವಾಗಿ ಪೊಲೀಸ್ ಠಾಣೆಗೆ ಕರೆದೊಯ್ದ ಆಟೋ ಚಾಲಕ,ಪೊಲೀಸರಿಗೆಒಪ್ಪಿಸಿದ್ದಾನೆ. ಪೊಲೀಸರು ತಕ್ಷಣವೇ ಮಣಿಪುರದ ಹಾಗೂ ನಾಗಾಲ್ಯಾಂಡ್ ಗಡಿಯಲ್ಲಿರುವ ಆಸ್ಪತ್ರೆ ದಾಖಲಿಸಿದ್ದಾರೆ. 

ಮಹಿಳೆ ನಗ್ನ ಮೆರವಣಿಗೆ ಪ್ರಕರಣ ಆರೋಪಿ ಮನೆಗೆ ಬೆಂಕಿ, ಮಣಿಪುರದಲ್ಲಿ ಮತ್ತೆ ಹಿಂಸಾಚಾರ!

ಯುವತಿ ಸ್ಥಿತಿ ಗಂಭೀರವಾಗಿದೆ. ಮೇ.15ರ ಸಂಜೆ 5 ಗಂಟೆಗೆ ಅತ್ಯಾಚಾರ ನಡೆದಿದೆ. ಮೇ. 21ರಂದು ದೂರು ದಾಖಲಾಗಿದೆ. ಈ ಪ್ರಕರಣದ ಸಂಬಂಧ ಇದುವರೆಗೂ ಯಾರು ಬಂಧನವಾಗಿಲ್ಲ. 

click me!