ಅಮೆರಿಕಾದ 1, ದೇಶದ 2 ಉಪಗ್ರಹಗಳನ್ನು ಯಶಸ್ವಿಯಾಗಿ ಕಕ್ಷೆಗೆ ಸೇರಿಸಿದ ಇಸ್ರೋದ SSLV-D2

By Anusha KbFirst Published Feb 10, 2023, 2:09 PM IST
Highlights

ಮೂರು ಉಪಗ್ರಹಗಳನ್ನು ಕಕ್ಷೆಗೆ ಸೇರಿಸುವುದರೊಂದಿಗೆ ಎಸ್‌ಎಸ್‌ಎಲ್‌ವಿಯ ಎರಡನೇ ಡೆವಲಪ್‌ಮೆಂಟಲ್ ಪ್ಲೈಟ್ ಅನ್ನು ಇಸ್ರೋ ಯಶಸ್ವಿಯಾಗಿ ಇಂದು ಬೆಳಗ್ಗೆ ಉಡಾವಣೆ ಮಾಡಿದೆ.  

ಶ್ರೀಹರಿಕೋಟಾ: ಮೂರು ಉಪಗ್ರಹಗಳನ್ನು ಯಶಸ್ವಿಯಾಗಿ ಕಕ್ಷೆಗೆ ಸೇರಿಸುವುದರೊಂದಿಗೆ ಎಸ್‌ಎಸ್‌ಎಲ್‌ವಿಯ ಎರಡನೇ ಡೆವಲಪ್‌ಮೆಂಟಲ್ ಪ್ಲೈಟ್ ಅನ್ನು ಇಸ್ರೋ ಯಶಸ್ವಿಯಾಗಿ ಇಂದು ಬೆಳಗ್ಗೆ ಉಡಾವಣೆ ಮಾಡಿದೆ.  ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ಇಸ್ರೋ, ಮೂರು ಉಪಗ್ರಹಗಳನ್ನು ಹೊಂದಿದ್ದ ತನ್ನ ಎರಡನೇ ಅಭಿವೃದ್ಧಿಯ ಸಣ್ಣ ಉಪಗ್ರಹ ಉಡಾವಣಾ ವಾಹನ - SSLV-D2 ಅನ್ನು ಯಶಸ್ವಿಯಾಗಿ ಲಾಂಚ್ ಮಾಡಿತ್ತು. ಇದು ಮೂರು ಉಪಗ್ರಹಗಳನ್ನು ನಿಖರವಾದ ಕಕ್ಷೆಯಲ್ಲಿ ಇರಿಸಿದೆ. 15 ನಿಮಿಷಗಳಲ್ಲಿ ಇದು ಮೂರು ಉಪಗ್ರಹಗಳನ್ನು 450 ಕಿಮೀನ ವೃತ್ತಾಕಾರದ ಕಕ್ಷೆಗೆ ಸೇರಿಸಿತು ಎಂದು ಇಸ್ರೋ ಹೇಳಿದೆ. 

ಮೂರು ಉಪಗ್ರಹಗಳಲ್ಲೀ ಒಂದು ಇಸ್ರೋದ ಭೂ ವೀಕ್ಷಣಾ ಉಪಗ್ರಹ ಇಒಎಸ್ 07 ಆದರೆ 2ನೇಯದ್ದು ಯುಎಸ್ ಮೂಲದ ಸಂಸ್ಥೆ ಅಂಟಾರಿಸ್‌ನ ಜಾನಸ್ -1  ಹಾಗೂ ಮೂರನೇಯದ್ದು,  ಚೆನ್ನೈ ಮೂಲದ ಬಾಹ್ಯಾಕಾಶ ಸ್ಟಾರ್ಟ್ ಅಪ್ ಸ್ಪೇಸ್‌ಕಿಡ್ಜ್‌ನ ಆಜಾದಿ ಸ್ಯಾಟ್ -2 ಆಗಿದೆ.  ಶ್ರೀಹರಿಕೋಟಾದ (Sriharikota) ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರ (Satish Dhawan Space Centre)ಶಾರ್‌ನಲ್ಲಿರುವ ಮೊದಲ ಉಡಾವಣಾ ಕೇಂದ್ರದಿಂದ ಬೆಳಗ್ಗೆ 9.18 ಕ್ಕೆ SSLV-D2 ಅನ್ನು ಟೇಕಾಫ್ ಮಾಡಲಾಯಿತು.  ಇದು 2023 ರ ಮೊದಲ ಉಪಗ್ರಹ ಉಡಾವಣೆಯಾಗಿದೆ.  ಈ ಉಪಗ್ರಹ ಹೊತ್ತೊಯ್ದ ವಾಹನ ಟೇಕ್‌ ಆಫ್ ಆದ ಕೆಲವೇ ನಿಮಿಷಗಳಲ್ಲಿ ಇಸ್ರೋ (ISRO) ತನ್ನ ಟ್ವಿಟರ್‌ ಖಾತೆಯಲ್ಲಿ SLV D2 EOS 07 ಮಿಷನ್ ಯಶಸ್ವಿಯಾಗಿ ನೆರವೇರಿದೆ ಎಂದು  ಪೋಸ್ಟ್ ಮಾಡಿದೆ.

ISRO Recruitment 2023: ವಿವಿಧ 526 ಹುದ್ದೆಗಳಿಗೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಅರ್ಜಿ ಆಹ್ವಾನ

ಇಸ್ರೋ ಅಧ್ಯಕ್ಷ (ISRO Chairman)ಎಸ್.ಸೋಮನಾಥ್ ಈ ಬಗ್ಗೆ ಮಾತನಾಡಿದ್ದರು, 'ತನ್ನ ಎರಡನೇ ಪ್ರಯತ್ನದಲ್ಲಿ SSLV-D2 ಉಪಗ್ರಹ ವಾಹಕ EOS-07 ಉಪಗ್ರಹವನ್ನು ತನ್ನ ಉದ್ದೇಶಿತ ಕಕ್ಷೆಯಲ್ಲಿ ಅತ್ಯಂತ ನಿಖರವಾಗಿ ಇರಿಸಿದೆ. ಇನ್ನೂ ಎರಡು ಉಪಗ್ರಹಗಳಾದ ಜಾನಸ್1 ಮತ್ತು ಆಜಾದಿ ಸ್ಯಾಟ್ -2 ಅನ್ನು ಸಹ ಅಗತ್ಯವಿರುವ ಕಕ್ಷೆಯಲ್ಲಿ ಅದು ಇರಿಸಿದೆ ಎಂದು ಮಾಹಿತಿ ನೀಡಿದರು.  ಇಸ್ರೋದ ಎಸ್‌ಎಸ್‌ಎಲ್‌ವಿ (Small Satellite Launch Vehicle) ಮೊದಲಿಗೆ  ಎಸ್‌ಎಸ್‌ಎಲ್‌ವಿ-ಡಿ 1 ಅನ್ನು ಹೊಂದಿತ್ತು.  ಆದರೆ ಅದರ ವೇಗದಲ್ಲಿನ ಕೊರತೆಯಿಂದಾಗಿ ನಾವು ಉಪಗ್ರಹವನ್ನು ಕಕ್ಷೆಯಲ್ಲಿ ಇರಿಸುವುದನ್ನು ಸ್ವಲ್ಪದರಲ್ಲಿ ತಪ್ಪಿಸಿಕೊಂಡೆವು.  ಈ  SSLV D1 ನಲ್ಲಿ ಎದುರಿಸಿದ ಸಮಸ್ಯೆಗಳನ್ನು ನಾವು ಪರಿಶೀಲಿಸಿ ಸರಿಪಡಿಸಿದ್ದು, ಈಗ ಅದನ್ನು ಕಾರ್ಯಗತಗೊಳಿಸಿದ್ದೇವೆ ಎಂದು ಹೇಳಲು ನನಗೆ ಬಹಳ ಸಂತೋಷವಾಗುತ್ತಿದೆ.  ಈ ಬಾರಿ ಉಪಗ್ರಹ ವಾಹನ ಯಶಸ್ವಿಯಾಗಲಿದೆ ಎಂದು ಖಚಿತಪಡಿಸಿಕೊಳ್ಳಲು ನಾವು ಸಾಕಷ್ಟು ಅಧ್ಯಯನಗಳನ್ನು ಮಾಡಿದ್ದೇವೆ ಎಂದು ಎಸ್.ಸೋಮನಾಥ್ ಅವರು ಹೇಳಿದರು.

ಅಭಿವೃದ್ಧಿಯ ಪ್ರತೀಕ: ಭಾರತ ಪ್ರಕಾಶಿಸುತ್ತಿದೆ: ಇಸ್ರೋ ವರದಿ ಬಿಡುಗಡೆ

ಇದನ್ನು ನಿಜವಾಗಿಯೂ ಕಾರ್ಯರೂಪಕ್ಕೆ ತಂದಿರುವುದಕ್ಕೆ ನನಗೆ ಬಹಳ ಖುಷಿಯಾಗಿದೆ. ಈ ವಾಹಕವೂ ಉಪಗ್ರಹಗಳನ್ನು ಸೇರಿಸಿದ ಕಕ್ಷೆಯೂ ತುಂಬಾ ಉತ್ತಮವಾಗಿದೆ ಎಂದು ಸೋಮನಾಥ್ (Somanath)ಹೇಳಿದರು.

ಈ SSLV ಯೋಜನೆಯೂ 2018ರಲ್ಲಿ ಪ್ರಾರಂಭವಾಯ್ತು ಎಂದು SSLV ಮಿಷನ್  ನಿರ್ದೇಶಕ ಎಸ್, ಎಸ್ ವಿನೋದ್ (S.S. Vinod) ಹೇಳಿದರು. ನಾವು ಕಳೆದ ವರ್ಷ ಆಗಸ್ಟ್‌ನಲ್ಲಿ ಮೊದಲ ಸ್ಯಾಟ್‌ಲೈಟ್ ಹಾರಾಟ ಆರಂಭಿಸಿದೆವು. ಆದರೆ ನಮಗೆ ಉಪಗ್ರಹವನ್ನು ಉದ್ದೇಶಿಸಿದ್ದ ಕಕ್ಷೆಯಲ್ಲಿ ಇಡಲು ಸಾಧ್ಯವಾಗಲಿಲ್ಲ. ಇದಾದ ಬಳಿಕ ನಾವು ಹಲವಾರು ತಂಡಗಳೊಂದಿಗೆ ಕುಳಿತು ಈ ವ್ಯವಸ್ಥೆಯಲ್ಲಿನ ಸಮಸ್ಯೆಯನ್ನು ಗುರುತಿಸಿ ಅದಕ್ಕೆ ಪರಿಹಾರ ಹುಡುಕಲು ಸಾಧ್ಯವಾಯ್ತು. ಈಗ ನಾವು ಅದರಲ್ಲಿ ಗೆಲುವು ಕಂಡಿದ್ದೇವೆ ಎಂದು ವಿನೋದ್ ಸಂತಸ ವ್ಯಕ್ತಪಡಿಸಿದರು.  ಕೇವಲ ಐದು ತಿಂಗಳಲ್ಲಿ ನಾವು ಮತ್ತೆ ಮರಳಿದ್ದೇವೆ. ಹಾಗೂ ಶೀಘ್ರದಲ್ಲೇ ಎಸ್‌ಎಸ್‌ಎಲ್‌ವಿ ಮೂಲಕ ಮತ್ತೊಂದು ಲಾಂಚ್ ಮಾಡಲಿದ್ದೇವೆ ಎಂದರು. 

SSLV-D2/EOS-07 Mission is accomplished successfully.

SSLV-D2 placed EOS-07, Janus-1, and AzaadiSAT-2 into their intended orbits.

— ISRO (@isro)

 

click me!