ಒಟ್ಟಿಗೆ 36 ಉಪಗ್ರಹಗಳ ಉಡಾವಣೆ ಯಶಸ್ವಿ: ದೀಪಾವಳಿ ಆಚರಣೆ ಆರಂಭ ಎಂದ ISRO ಮುಖ್ಯಸ್ಥ

Published : Oct 23, 2022, 08:30 AM ISTUpdated : Oct 23, 2022, 08:31 AM IST
ಒಟ್ಟಿಗೆ 36 ಉಪಗ್ರಹಗಳ ಉಡಾವಣೆ ಯಶಸ್ವಿ: ದೀಪಾವಳಿ ಆಚರಣೆ ಆರಂಭ ಎಂದ ISRO ಮುಖ್ಯಸ್ಥ

ಸಾರಾಂಶ

ಇಸ್ರೋ ದೊಡ್ಡ ರಾಕೆಟ್ ‘ಎಲ್‌ಎಂವಿ3-ಎಂ2’ ವಾಹಕದ ಮೊದಲ ವಾಣಿಜ್ಯಿಕ ಉಡ್ಡಯನವನ್ನು ಮಾಡಿದೆ. ಮುಂದಿನ ವರ್ಷವೂ 36 ಉಪಗ್ರಹಗಳ ಉಡಾವಣೆಯಾಗಲಿದೆ ಎಂದು ತಿಳಿದುಬಂದಿದೆ. 

ಶ್ರೀಹರಿಕೋಟ: ಭಾರತೀಯ ಬಾಹ್ಯಾಕಾಶ ಸಂಸ್ಥೆಯ (Indian Space Research Organization) (ಇಸ್ರೋ) (ISRO) ಎಲ್‌ವಿಎಂ3-ಎಂ2 (LVM3-M2) ವಾಹಕ ಇದೇ ಮೊದಲ ಬಾರಿಗೆ ತನ್ನ ವಾಣಿಜ್ಯ ಉಡಾವಣೆಯನ್ನು (Launch) ಯಶಸ್ವಿಯಾಗಿ ನಡೆಸಿದೆ. 36 ಬ್ರಾಡ್‌ಬ್ಯಾಂಡ್‌ ಉಪಗ್ರಹಗಳನ್ನು (Satellites) ಹೊತ್ತ ಎಲ್‌ವಿಎಂ3-ಎಂ2 ರಾಕೆಟ್‌ ಆಂಧ್ರಪ್ರದೇಶದ ಶ್ರೀಹರಿಕೋಟಾದ (Sriharikota) ಸತೀಶ್‌ ಧವನ್‌ ಕೇಂದ್ರದಲ್ಲಿರುವ 2ನೇ ಲಾಂಚ್‌ ಪ್ಯಾಡ್‌ನಿಂದ ಶನಿವಾರ ಮಧ್ಯರಾತ್ರಿ 12.07ಕ್ಕೆ ನಭಕ್ಕೆ ಹಾರಿದ ರಾಕೆಟ್‌ 617 ಎತ್ತರದ ಕಕ್ಷೆಗೆ ಯಶಸ್ವಿಯಾಗಿ ಉಪಗ್ರಹಗಳನ್ನು ಕೂರಿಸಿದೆ.

ಭಾರಿ ತೂಕದ ಉಪಗ್ರಹಗಳನ್ನು ಹಾರಿಬಿಡಲೆಂದೇ ತಯಾರಿಸಿರುವ ಈ ರಾಕೆಟ್‌ 8 ಟನ್‌ ಪೇಲೋಡ್‌ ಹೊತ್ತೊಯ್ಯಬಲ್ಲದಾಗಿದೆ. ಇದು 43.5 ಮೀ ಎತ್ತರದ ರಾಕೆಟ್‌ ಆಗಿದೆ. ಶನಿವಾರ ರಾತ್ರಿ ಹಾರಿ ಬಿಡಲಾದ ಎಲ್ಲಾ ಉಪಗ್ರಹಗಳು ಬ್ರಿಟನ್‌ ಸಹಯೋಗದ ಒನ್‌ವೆಬ್‌ (OneWeb) ಕಂಪನಿಯದ್ದಾಗಿವೆ. ಈ ಎಲ್ಲಾ ಉಪಗ್ರಹಗಳು 109 ನಿಮಿಷಕ್ಕೆ ಒಂದು ಬಾರಿ ಭೂಮಿಯನ್ನು 1 ಸುತ್ತು ಹಾಕಲಿವೆ.

ಇದನ್ನು ಓದಿ: 4 ವರ್ಷದ ಬಳಿಕ ಭಾರತದ ಭಾರೀ ರಾಕೆಟ್‌ ಉಡಾವಣೆಗೆ ಸಿದ್ಧತೆ, ಬ್ರಿಟನ್‌ನ 36 ಉಪಗ್ರಹ ಕಕ್ಷೆಗೆ!

ಒಟ್ಟು 5,796 ಕೆಜಿಯ 36 ಉಪಗ್ರಹಗಳನ್ನು ಹೊತ್ತ ರಾಕೆಟ್‌ ಅನ್ನು ಯಶಸ್ವಿಯಾಗಿ ಕಕ್ಷೆಗೆ ರವಾನಿಸಿದೆ. ಈ ಯೋಜನೆಗೆ ಸಹಕಾರ ನೀಡಿದ್ದಕ್ಕಾಗಿ ಇಸ್ರೋ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದ ಅರ್ಪಿಸಿದೆ. ಅಲ್ಲದೇ ಒನ್‌ವೆಬ್‌ ಜೊತೆಗೂಡಿ ಮತ್ತಷ್ಟು ಉಡಾವಣೆ ಮಾಡುವುದಾಗಿ ಇಸ್ರೋ ಘೋಷಿಸಿದೆ. 

36 ರಾಕೆಟ್‌ಗಳನ್ನು ಒಟ್ಟಿಗೆ ಉಡಾವಣೆ ಮಾಡಿದ ಸಂಬಂಧ ಪ್ರತಿಕ್ರಿಯೆ ನೀಡಿದ ಇಸ್ರೋ ಮುಖ್ಯಸ್ಥ ಎಸ್‌. ಸೋಮನಾಥ್‌, ನಾವು ಈಗಾಗಲೇ ದೀಪಾವಳಿ ಆಚರಣೆಯನ್ನು ಪ್ರಾರಂಭಿಸಿದ್ದೇವೆ. ಈಗ ರಾಕೆಟ್ ಅದರ ಉದ್ದೇಶಿತ ಹಾದಿಯಲ್ಲಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ. 

ಅಲ್ಲದೇ ಇದು ಭೂಮಿಯ ಸಮೀಪ ಕಕ್ಷೆಗೆ (1200 ಕಿ.ಮೀ.) ಉಪಗ್ರಹಗಳನ್ನು ಸೇರಿಸುವ ಯೋಜನೆಯೂ ಸಹ ಆಗಿದೆ. ಈ ರಾಕೆಟ್‌ ಚಂದ್ರಯಾನ 2 ಸೇರಿದಂತೆ ಇದಕ್ಕೂ ಮೊದಲು 4 ಯಶಸ್ವಿ ಯೋಜನೆಗಳನ್ನು ಪೂರೈಸಿತ್ತು. ಇದು ಈ ವರ್ಷ ಇಸ್ರೋದ 4ನೇ ಮಿಶನ್‌ ಆಗಿದೆ.

ಇದನ್ನೂ ಓದಿ: NASA ಪ್ರಾಜೆಕ್ಟ್‌ಗೆ ಆಯ್ಕೆಯಾದ ಛತ್ತೀಸ್‌ಗಢದ 16 ವರ್ಷದ ಬುಡಕಟ್ಟು ಬಾಲಕಿ

ಮಿಶನ್‌ ವಿಶೇಷತೆ
- ಇದು 8 ಟನ್‌ ತೂಕ ಹೊತ್ತೊಯ್ಯಬಲ್ಲ ರಾಕೆಟ್‌
- ಇದು ಇಸ್ರೋದ ಮೊದಲ ವಾಣಿಜ್ಯ ಉಡ್ಡಯನ
- ಒನ್‌ವೆಬ್‌ ಕಂಪನಿಗೆ ಸೇರಿದ 36 ಉಪಗ್ರಹಗಳ ಉಡಾವಣೆ
- ಭೂಮಿಯಿಂದ 1,200 ಕಿ.ಮೀ. ದೂರದ ಕಕ್ಷೆಗೆ ಉಪಗ್ರಹಗಳು (ಭೂ ಸರ್ವೇಕ್ಷಣಾ ಉಪಗ್ರಹಗಳ ಕಕ್ಷೆ 42 ಸಾವಿರ ಕಿ.ಮೀ.)
- ಮುಂದಿನ ವಾಣಿಜ್ಯ ಯೋಜನೆಗಳಿಗೆ ಇದರಿಂದ ಬಲ
- ಮುಂದಿನ ವರ್ಷವೂ 36 ಉಪಗ್ರಹಗಳ ಉಡಾವಣೆ

ಇದನ್ನೂ ಓದಿ: ISRO Reusable Rocket ಮರುಬಳಕೆ ಮಾಡಬಹುದಾದ ರಾಕೆಟ್‌ ನಿರ್ಮಾಣ ಮಾಡಲಿರುವ ಇಸ್ರೋ!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮೋದಿ ಅವರೇ ನನ್ನ ಗಂಡ ವಿಕ್ರಂನನ್ನು ಪಾಕಿಸ್ತಾನಕ್ಕೆ ಕಳುಹಿಸಿ: ಪಾಕ್ ಮಹಿಳೆಯ ಮನವಿ
ಕಾರವಾರ ಜೈಲಲ್ಲಿ ಡ್ರಗ್ಸ್‌ಗಾಗಿ ಜೈಲ‌ರ್ ಮೇಲೆ ಕೈದಿಗಳಿಂದ ಹಲ್ಲೆ: ಬೆಂಗಳೂರು ಜೈಲೊಳಗೆ ಸಿಗರೇಟ್ ಸಾಗಿಸಲೆತ್ನಿಸಿ ಸಿಕ್ಕಿಬಿದ್ದ ವಾರ್ಡನ್