ಇಸ್ರೋ ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆಯ ಪ್ರೋಬಾ-3 ನೌಕೆಯನ್ನು ಯಶಸ್ವಿಯಾಗಿ ಉಡಾವಣೆ ಮಾಡಿದೆ. ಈ ಮಿಷನ್ ಸೂರ್ಯನ ಹೊರಗಿನ ವಾತಾವರಣವನ್ನು ಅಧ್ಯಯನ ಮಾಡಲಿದೆ.
ಶ್ರೀಹರಿಕೋಟಾ (ಡಿ.5): ಜಾಗತಿಕ ಬಾಹ್ಯಾಕಾಶ ಆವಿಷ್ಕಾರ ಹಾಗೂ ಸಹಯೋಗಕ್ಕೆ ಕೈಜೋಡಿಸಿರುವ ಭಾರತದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ -ಇಸ್ರೋ, ಗುರುವಾರ ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆಯ(ಇಎಸ್‌ಎ) ಪ್ರೋಬಾ-3 ನೌಕೆಯನ್ನು ಯಶಸ್ವಿಯಾಗಿ ನಭಕ್ಕೆ ಹಾರಿಸಿದೆ. ಇದು ಇಸ್ರೋದ ವಾಣಿಜ್ಯ ಬಾಹ್ಯಾಕಾಶ ಮಿಷನ್ ಆಗಿದ್ದು ಸಂಜೆ 4 ಗಂಟೆ 4 ನಿಮಿಷಕ್ಕೆ ಯಶಸ್ವಿ ಉಡ್ಡಯನ ನಡೆದಿದೆ. 550 ಕೆಜಿ ತೂಕದ ಪ್ರೋಬಾ 3 ಮಿಷನ್ ಅನ್ನು ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಬಾಹ್ಯಾಕಾಶ ನಿಲ್ದಾಣದಿಂದ ಪಿಎಸ್‌ಎಲ್‌ವಿ ಸಿ59 ರಾಕೆಟ್ ಮೂಲಕ ನಭಕ್ಕೆ ಹಾರಿಸಲಾಗಿದೆ. ಇಸ್ರೋದ ವಾಣಿಜ್ಯ ವಿಭಾಗವಾದ ನ್ಯೂಸ್ಪೇಸ್ ಇಂಡಿಯಾ ಲಿಮಿಟೆಡ್ ಇದನ್ನು ನಿರ್ವಹಣೆ ಮಾಡಲಿದೆ. ಈ ಕಾರ್ಯಾಚರಣೆಯನ್ನು ಆರಂಭದಲ್ಲಿ ಡಿಸೆಂಬರ್ 4 ರಂದು ಸಂಜೆ 4:08 ಕ್ಕೆ ಉಡಾವಣೆ ಮಾಡಬೇಕಿತ್ತು ಆದರೆ ಉಪಗ್ರಹ ಪ್ರೊಪಲ್ಷನ್ ಸಿಸ್ಟಮ್‌ನಲ್ಲಿ ಅಸಂಗತತೆ ಪತ್ತೆಯಾದ ಕಾರಣಕ್ಕೆ ಇಎಸ್‌ಎ ಇದನ್ನು ಮುಂದೂಡಿಕೆ ಮಾಡುವ ನಿರ್ಧಾರ ಮಾಡಿತ್ತು.
ಚಂದ್ರಯಾನ-4ಗೆ ಕ್ಯಾಬಿನೆಟ್ ಗ್ರೀನ್ ಸಿಗ್ನಲ್, 2040ರ ವೇಳೆಗ ಚಂದ್ರನ ಮೇಲೆ ಭಾರತೀಯ ಲ್ಯಾಂಡ್!
"ಪ್ರಯತ್ನಿಸೋಣ" ಎಂಬರ್ಥದ ಲ್ಯಾಟಿನ್ ಪದದ ನಂತರ ಪ್ರೋಬಾ (ಆನ್‌ಬೋರ್ಡ್ ಅನ್ಯಾಟಮಿ ಯೋಜನೆ) ಎಂದು ಹೆಸರಿಸಲಾಗಿದೆ. ಅಂದಾಜು 9.2 ಕೋಟಿ ರೂಪಾಯಿ ವೆಚ್ಚದಲ್ಲಿ ಈ ನೌಕೆಯನ್ನು ಯುರೋಪಿಯನ್ ಸ್ಪೇಸ್ ಏಜೆನ್ಸಿ ನಿರ್ಮಾಣ ಮಾಡಿದೆ. ಇದು ಎರಡು ವರ್ಷಗಳ ಕಾಲ ಸೂರ್ಯ ಅಧ್ಯಯನ ಮಾಡಲಿದೆ. ಈ ಎರಡು ವರ್ಷದ ಅವಧಿಯಲ್ಲಿ ಸರಿಸುಮಾರು 6 ಗಂಟೆಗಳ ಕಾಲ ಕೃತಕ ಸೂರ್ಯಗ್ರಹಣವನ್ನು ಈ ನೌಕೆ ಉಂಟು ಮಾಡಲಿದೆ. ಈ ನೌಕೆಯು ಭೂಮಿಯ ಸುತ್ತಲೂ ದೀರ್ಘಾಕಾರದ ವೃತ್ತದಲ್ಲಿ ಇರಿಸಲಾಗುತ್ತದೆ. ಭೂಮಿಗೆ ಅತ್ಯಂತ ಸನಿಹದ ಬಿಂದುವಿನಲ್ಲಿ ಅಂದರೆ ಪೆರಿಜೀ, ಭೂಮಿಯಿಂದ 600 ಕಿ.ಮೀ ದೂರದಲ್ಲಿದ್ದರೆ, ಭೂಮಿಯಿಂದ ಅತ್ಯಂತ ದೂರದ ಬಿಂದು ಅಂದರೆ ಅಪೋಜಿ 60, 530 ಕಿಲೋಮೀಟರ್ ದೂರದಲ್ಲಿರಲಿದೆ. ಕಳೆದ 10 ವರ್ಷಕ್ಕಿಂತ ಹೆಚ್ಚಿನ ಕಾಲ ಈ ನೌಕೆಗಾಗಿ ಯುರೋಪ್‌ನ 40ಕ್ಕೂ ಅಧಿಕ ಕಂಪನಿಗಳು ಕೆಲಸ ಮಾಡಿವೆ. ಇಎಸ್‌ಎನಲ್ಲಿರುವ 13 ರಾಷ್ಟ್ರಗಳು ಇದಕ್ಕೆ ವೆಚ್ಚ ಮಾಡಿವೆ.
8 ವರ್ಷಗಳ ಹಿಂದೆ 104 ಸ್ಯಾಟಲೈಟ್‌ಅನ್ನು ಬಾಹ್ಯಾಕಾಶಕ್ಕೆ ಹೊತ್ತೊಯ್ದಿದ್ದ PSLV-C37 ನೌಕೆಯ ಭಾಗ ಭೂಮಿಗೆ ವಾಪಸ್!
ಪ್ರೋಬಾ-3 ರಾಕೆಟ್ 5 ವಿಭಾಗಗಳನ್ನು ಒಳಗೊಂಡಿದೆ, ಪ್ರತಿಯೊಂದೂ ಸುಮಾರು 30 ಟನ್ ತೂಕವನ್ನು ಹೊಂದಿದೆ ಎಂದು ಇಸ್ರೋ ಅಧಿಕಾರಿಯೊಬ್ಬರು ಬಾಹ್ಯಾಕಾಶ ನೌಕೆಯ ಉಡಾವಣೆಗೆ ಮುಂಚಿತವಾಗಿ ತಿಳಿಸಿದ್ದರು. ಮೋಟಾರುಗಳ ಮೇಲೆ ಸ್ಟ್ರಾಪ್ ಅನ್ನು ಜೋಡಿಸಲಾಗಿದೆ, ಅವುಗಳು 1 ಮೀಟರ್ ವ್ಯಾಸವನ್ನು ಹೊಂದಿರುತ್ತವೆ, ಅವುಗಳಲ್ಲಿ ಪ್ರತಿಯೊಂದರಲ್ಲೂ ಸುಮಾರು 12 ಟನ್ಗಳಷ್ಟು ಪ್ರೊಪೆಲ್ಲಂಟ್ ಇರುತ್ತದೆ.
ಪ್ರಮುಖ ಅಂಶಗಳು:
✅ Mission Success!
The PSLV-C59/PROBA-3 Mission has successfully achieved its launch objectives, deploying ESA’s satellites into their designated orbit with precision.
🌌 A testament to the trusted performance of PSLV, the collaboration of NSIL and ISRO, and ESA’s innovative…