ಖಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆ ಪ್ರಕರಣದಲ್ಲಿ ಭಾರತದ ರಾಯಭಾರಿ ಮೇಲೆ ಕೇಸ್ ಹಾಕುವ ವಿಚಾರವಾಗಿ ಕೆನಡಾ ಭಾರತದ ಅನುಮತಿ ಕೇಳಿದ್ದು, ಇದಕ್ಕೆ ಭಾರತ ಖಡಕ್ ತಿರುಗೇಟು ನೀಡಿದೆ.
ದೆಹಲಿ: ಕೆನಡಾ ಪ್ರಧಾನಿ ಜಸ್ಟಿನ್ ಟ್ರೂಡೋ ಮೇಲೆ ಇಂಡಿಯಾ ಗರಂ ಆಗಿದೆ. ವೋಟ್ ಬ್ಯಾಂಕ್‌ಗಾಗಿ ರಾಜಕೀಯ ಮಾಡ್ತಿದ್ದಾರೆ, ಉಗ್ರರಿಗೆ ಬೆಂಬಲ ಕೊಡ್ತಿದ್ದಾರೆ ಅಂತ ಆರೋಪ ಮಾಡಿದೆ. ಖಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆ ಪ್ರಕರಣದಲ್ಲಿ ಭಾರತದ ರಾಯಭಾರಿಯ ಮೇಲೆ ಕೇಸ್ ಹಾಕುವ ಪ್ರಯತ್ನ ನಡೆಯುತ್ತಿದೆ. ಇದಕ್ಕೆ ಖಡಕ್ ತಿರುಗೇಟು ನೀಡಿರುವ ಭಾರತ, ಖಲಿಸ್ತಾನಿಗಳ ಜೊತೆ ಸೇರಿ ಭಾರತದ ವಿರುದ್ಧ ಪಿತೂರಿ ಮಾಡ್ತಿದ್ದಾರೆ ಅಂತ ವಿದೇಶಾಂಗ ವ್ಯವಹಾರಗಳ ಇಲಾಖೆ ಹೇಳಿದೆ. ನಿಜ್ಜರ್ ಹತ್ಯೆ ಪ್ರಕರಣದಲ್ಲಿ ಭಾರತದ ರಾಯಭಾರಿ ಮೇಲೆ ಕೇಸ್ ಹಾಕುವ ವಿಚಾರವಾಗಿ ಕೆನಡಾ ಭಾರತದ ಅನುಮತಿ ಕೇಳಿದ್ದು, ಇದಕ್ಕೆ ಭಾರತ ಖಡಕ್ ತಿರುಗೇಟು ನೀಡಿದೆ. ಹಾಗೇನಾದರೂ ಕೆನಡಾ ಮುಂದುವರಿದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಿದ್ದೇವೆ ಎಂದು ತಿಳಿಸಿದೆ.
ಖಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಿಂದ ಎರಡೂ ದೇಶಗಳ ನಡುವೆ ಸಂಬಂಧ ಹಳಸಿದೆ. ಈ ಕೇಸ್‌ನಲ್ಲಿ ಮೂರು ಜನ ಭಾರತೀಯರನ್ನು ಬಂಧಿಸಲಾಗಿದೆ. ಕರಣ್ ಬ್ರಾರ್, ಕಮಲ್‌ಪ್ರೀತ್ ಸಿಂಗ್, ಕರಣ್‌ಪ್ರೀತ್ ಸಿಂಗ್‌ರನ್ನ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆ ಕೇಸ್‌ನಲ್ಲಿ ಕೆನಡಾ ಪೊಲೀಸರು ಎಡ್ಮಂಟನ್‌ನಲ್ಲಿ ಬಂಧಿಸಿದ್ದಾರೆ,
ಸಿಖ್ ಉಗ್ರನಿಗೆ ಕೆನಡಾ ಸಂಸತ್‌ನಲ್ಲಿ ಶ್ರದ್ಧಾಂಜಲಿ; ಇದೇನು ಭಾರತ ವಿರೋಧಿ ನೀತಿಯೇ?
ಬಂಧಿತರಾದ ಮೂರು ಜನ ಭಾರತೀಯರು. ಕಳೆದ ಮೂರು ನಾಲ್ಕು ವರ್ಷಗಳಿಂದ ಅವರು ಕೆನಡಾದಲ್ಲಿದ್ದಾರೆ ಅಂತ ಕೆನಡಾ ಪೊಲೀಸರು ಹೇಳಿದ್ದಾರೆ. ಆದರೆ, ಅವರಿಗೆ ಇಂಡಿಯಾ ಸರ್ಕಾರದ ಜೊತೆ ಸಂಬಂಧ ಇದೆಯಾ ಅನ್ನೋದರ ಬಗ್ಗೆ ಈಗ ಏನೂ ಹೇಳೋಕೆ ಆಗಲ್ಲ, ತನಿಖೆ ನಡೀತಿದೆ ಅಂತ ಪೊಲೀಸರು ಹೇಳಿದ್ದಾರೆ.
ಹತ ಖಲಿಸ್ತಾನಿ ಉಗ್ರ ನಿಜ್ಜರ್‌ಗೆ ಕೆನಡಾ ಸಂಸತ್ತಲ್ಲಿ ಶ್ರದ್ದಾಂಜಲಿ
ನಾವು ನಿನ್ನೆ ಕೆನಡಾದಿಂದ ರಾಜತಾಂತ್ರಿಕ ಸಂವಹನವನ್ನು ಸ್ವೀಕರಿಸಿದ್ದೇವೆ, ಭಾರತೀಯ ಹೈಕಮಿಷನರ್ ಮತ್ತು ಇತರ ರಾಜತಾಂತ್ರಿಕರು ಆ ದೇಶದಲ್ಲಿನ ತನಿಖೆಗೆ ಸಂಬಂಧಿಸಿದ ವಿಷಯದಲ್ಲಿ 'ಆಸಕ್ತಿಯ ವ್ಯಕ್ತಿಗಳು' ಎಂದು ಸೂಚಿಸಿದ್ದಾರೆ. ಭಾರತ ಸರ್ಕಾರವು ಈ ಅಸಂಬದ್ಧ ಆರೋಪಗಳನ್ನು ಬಲವಾಗಿ ತಿರಸ್ಕರಿಸುತ್ತದೆ ಮತ್ತು ಮತಬ್ಯಾಂಕ್ ರಾಜಕೀಯದ ಸುತ್ತ ಕೇಂದ್ರೀಕೃತವಾಗಿರುವ ಟ್ರೂಡೊ ಸರ್ಕಾರದ ರಾಜಕೀಯ ಕಾರ್ಯಸೂಚಿಗೆ ಅವುಗಳನ್ನು ಆರೋಪಿಸುತ್ತದೆ.
ಸೆಪ್ಟೆಂಬರ್ 2023 ರಲ್ಲಿ ಪ್ರಧಾನ ಮಂತ್ರಿ ಟ್ರುಡೊ ಅವರು ಕೆಲವು ಆರೋಪಗಳನ್ನು ಮಾಡಿದ ನಂತರ, ಕೆನಡಾ ಸರ್ಕಾರವು ನಮ್ಮ ಕಡೆಯಿಂದ ಅನೇಕ ವಿನಂತಿಗಳ ಹೊರತಾಗಿಯೂ ಭಾರತ ಸರ್ಕಾರದೊಂದಿಗೆ ಈವರೆಗೂ ಯಾವುದೇ ಸಾಕ್ಷ್ಯವನ್ನು ಹಂಚಿಕೊಂಡಿಲ್ಲ. ದು ತನಿಖೆಯ ನೆಪದಲ್ಲಿ ರಾಜಕೀಯ ಲಾಭಕ್ಕಾಗಿ ಭಾರತಕ್ಕೆ ಮಸಿ ಬಳಿಯುವ ಉದ್ದೇಶಪೂರ್ವಕ ತಂತ್ರವಿದೆ ಎಂಬುದರಲ್ಲಿ ಸಂದೇಹವಿಲ್ಲ ಎಂದು ಹೇಳಿದೆ.