21 ದಿನದ ಲಾಕ್ ಡೌನ್ ಅವಧಿ ಮುಗಿಯುತ್ತಾ ಬಂತು ಆದರೆ ಕರೋನಾ ಸೋಂಕಿತರ ಸಂಖ್ಯೆ ನೋಡಿದರೆ ಲಾಕ್ ಡೌನ್ ಮುಂದುವರೆಸದೆ ವಿಧಿಯಿಲ್ಲ.ಹೀಗಿರುವಾಗ ಪ್ರಧಾನಿ ಮೋದಿ ಸಾಹೇಬರಿಗೆ ಖಜಾನೆ ಚಿಂತೆಯೂ ಶುರುವಾಗಿದೆ.
21 ದಿನದ ಲಾಕ್ ಡೌನ್ ಅವಧಿ ಮುಗಿಯುತ್ತಾ ಬಂತು ಆದರೆ ಕರೋನಾ ಸೋಂಕಿತರ ಸಂಖ್ಯೆ ನೋಡಿದರೆ ಲಾಕ್ ಡೌನ್ ಮುಂದುವರೆಸದೆ ವಿಧಿಯಿಲ್ಲ.ಹೀಗಿರುವಾಗ ಪ್ರಧಾನಿ ಮೋದಿ ಸಾಹೇಬರಿಗೆ ಖಜಾನೆ ಚಿಂತೆಯೂ ಶುರುವಾಗಿದೆ.
ಹಣಕಾಸು ಇಲಾಖೆ ಮೂಲಗಳ ಪ್ರಕಾರ ದಿಲ್ಲಿ ಮುಂಬೈ ಬೆಂಗಳೂರು ಹೈದರಾಬಾದ್ ಚೆನ್ನೈ ಅಹಮದಾಬಾದ್ ಪುಣೆ ನಗರಗಳು ಲಾಕ್ ಡೌನ್ ಮುಕ್ತವಾಗ ಬೇಕಾದರೆ ಕನಿಷ್ಠ ಜೂನ್ ಅಂತ್ಯದ ವರೆಗೆ ಸಮಯ ಬೇಕು. ಜೊತೆಗೆ ವ್ಯಾಪಾರ ಸರಿದಾರಿಗೆ ಬರಬೇಕಾದರೆ 7 ರಿಂದ 8 ತಿಂಗಳು ಕಾಯಬೇಕು. ಅಲ್ಲಿಯವರೆಗೆ ಜಿಎಸ್ಟಿ ತೆರಿಗೆ ಸಂಗ್ರಹದ ಗತಿ ದೇವರಿಗೆ ಪ್ರೀತಿ. ಇನ್ನು ಆಮದು ರಫ್ತು ಚಟುವಟಿಕೆ ನಿಂತಿರುವುದರಿಂದ ಸುಂಕದ ಆದಾಯ ಕೂಡ ಕುಸಿದು ಹೋಗಿದೆ. ರಾಜ್ಯಗಳು ಹಣ ಇಲ್ಲದೇ ಒದ್ದಾಡುತ್ತಿದ್ದು ಮಾತೆತ್ತಿದರೆ ಕೇಂದ್ರದಿಂದ ಹಣ ಕೇಳುತ್ತಿವೆ.ವಿಶ್ವ ಅರ್ಥಿಕತೆಯೇ ನಿಂತು ಹೋಗುವ ಭಯದಲ್ಲಿರುವಾಗ ಹೊರಗಿನಿಂದ ಸಾಲ ತರುವುದು ಕೂಡ ಸುಲಭ ವೇನಲ್ಲ.ಹೀಗಿರುವಾಗ ಹಣಕಾಸು ನಿರ್ವಹಣೆ ಮೋದಿ ಸಾಹೇಬರಿಗೆ ಒಂದು ದೊಡ್ಡ ಪರೀಕ್ಷೆಯೇ ಸರಿ.
ವಿತ್ತ ಸಚಿವೆ ನಿರ್ಮಲಾ ಜಾಗಕ್ಕೆ ಬರ್ತಾರಾ ಆರ್‌ಬಿಐ ಗೌರ್ನರ್?
ನೋಟು ಪ್ರಿಂಟ್ ಮಾಡಿದರೆ ?
ಹೀಗೊಂದು ಸಲಹೆ ಕೆಲ ಅರ್ಥ ಪರಿಣಿತರಿಂದ ಬರುತ್ತಿದೆ.ವಿಶ್ವವೇ ಆರ್ಥಿಕ ಹಿಂಜರಿತ ಅನುಭವಿಸುತ್ತಿರುವಾಗ ವಿತ್ತೀಯ ಕೊರತೆ ಬಗ್ಗೆ ಬಹಳ ತಲೆಕೆಡಿಸಿಕೊಳ್ಳೋದು ಬೇಡ. ಇದು ಶತಮಾನಕ್ಕೆ ಒಮ್ಮೆ ಬರುವ ಸಮಸ್ಯೆ ಸರ್ಕಾರ ನೋಟು ಪ್ರಿಂಟ್ ಮಾಡಿ ಹಂಚಲಿ ಎಂದು ಕೆಲವರು ಸಲಹೆ ಏನೋ ನೀಡುತ್ತಿದ್ದಾರೆ.ಆದರೆ ನೋಟು ಪ್ರಿಂಟ್ ನ ಬೆನ್ನೇರಿ ಬರುವ ಹಣದುಬ್ಬರಕ್ಕೆ ಉತ್ತರ ಏನು ಎಂಬುದು ಯಾರಿಗೂ ಗೊತ್ತಿಲ್ಲ .
ಎರಡನೇ ವಿಶ್ವ ಮಹಾಯುದ್ಧದ ನಂತರ ಯುರೋಪಿಯನ್ ದೇಶಗಳು ಇಂಥದ್ದೇ ಪ್ರಯೋಗ ಮಾಡಲು ಹೋಗಿ ಪೆಟ್ಟು ತಿಂದಿದ್ದವು. ಅದರಲ್ಲೂ ಜರ್ಮನಿ ಮತ್ತು ಜಿಂಬಾಂಬ್ವೆಗಳು ಪುಷ್ಕಳ ನೋಟು ಪ್ರಿಂಟ್ ಅಂದ ಹಾಗೆ ಬಂಡವಾಳಶಾಹಿ ಅಮೆರಿಕ ತನ್ನ ಒಟ್ಟು ಜಿಡಿಪಿ ಯ 10 ಪ್ರತಿಶತ ಹಣವನ್ನು ಬಡವರಿಗೆ ಕರೋನಾ ಕಾಲದಲ್ಲಿ ಹಂಚುತ್ತಿದ್ದರೆ ಭಾರತ ಸರ್ಕಾರ ಕೊಡುತ್ತಿರುವುದು ತನ್ನ ಜಿಡಿಪಿಯ 0.8 ಪ್ರತಿಶತ ಮಾತ್ರ. ಕೆಲ ಪರಿಣಿತರು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಿಂದ ಹೆಚ್ಚು ಹೆಚ್ಚು ನೋಟು ಪ್ರಿಂಟ್ ಮಾಡಿಸಿ ಬೆಲೆ ಏರಿಕೆ ಬಿಸಿ ಆಮೇಲೆ ತಣ್ಣಗೆ ಮಾಡೋಣ ಎನ್ನುತ್ತಿದ್ದಾರೆ. ಆದರೆ ಇಂಥದ್ದಕ್ಕೆ ವ್ಯಾಪಾರಿ ಗುಜರಾತಿನಲ್ಲೇ ಹುಟ್ಟಿ ಬೆಳೆದ ಮೋದಿ ಒಪ್ಪುವ ಸಾಧ್ಯತೆ ಕಡಿಮೆ ಬಿಡಿ.
- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ
ಇಂಡಿಯಾ ಗೇಟ್, ದೆಹಲಿಯಿಂದ ಕಂಡ ರಾಜಕಾರಣ