ಕೋಲ್ಕತಾ: ‘ ಮುಂದಿನ ವರ್ಷ ಪಶ್ಚಿಮ ಬಂಗಾಳದಲ್ಲಿ ನಡೆಯಲಿರುವ ವಿಧಾನದಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದರೆ ಬಾಂಗ್ಲಾದೇಶದ ಗಡಿ ಬೇಲಿಯನ್ನು ತೆಗೆದು ಹಾಕುತ್ತೇವೆ’ ಎಂದು ಬಿಜೆಪಿ ಸಂಸದ ಜಗನ್ನಾಥ್ ಸರ್ಕಾರ್ ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿದ್ದಾರೆ. ಸರ್ಕಾರ್ ಅವರ ಹೇಳಿಕೆಗೆ ಟಿಎಂಸಿ ಸಂಸದ ಅಭಿಷೇಕ್ ಬ್ಯಾನರ್ಜಿ ಕಿಡಿಕಾರಿದ್ದು, ‘ಬಿಜೆಪಿ ನಾಯಕರು ಬೂಟಾಟಿಕೆಯ ಹೊಸ ಆಳಕ್ಕೆ ಇಳಿದಿದ್ದಾರೆ.ಅಧಿಕಾರಕ್ಕೆ ಬಂದರೆ ಭಾರತ- ಬಾಂಗ್ಲಾ ನಡುವೆ ಯಾವುದೇ ಗಡಿ ಇರುವುದಿಲ್ಲ.ಎರಡು ದೇಶಗಳು ಒಂದಾಗುತ್ತದೆ ಎಂದು ಘೋಷಿಸುತ್ತಾರೆ. ಕೇಂದ್ರ ಸಚಿವ ಅಮಿತ್ ಶಾ ಅವರು, ತಮ್ಮದೇ ಸಂಸದರು ತೆಗೆದು ಹಾಕಲು ಬಯಸುವ ಗಡಿ ಬೇಲಿಗೆ ಜಾಗ ನೀಡಿದ್ದಕ್ಕೆ ಪಶ್ಚಿಮ ಬಂಗಾಳ ಸರ್ಕಾರವನ್ನು ದೂಷಿಸುತ್ತಾರೆ. ಸರ್ಕಾರ್ ಅವರ ಹೇಳಿಕೆ ರಾಷ್ಟ್ರೀಯತೆ ಅಲ್ಲ, ವಂಚನೆ’ ಎಂದು ಕಿಡಿ ಕಾರಿದರು.

10:53 PM (IST) Nov 02
ಟೂರ್ನಿ ಮುಗಿಸಿ ರೈಲಿನಲ್ಲಿ ಮರಳುವಾಗ ದುರಂತ, 8 ಚಿನ್ನದ ಪದಕ ಗೆದ್ದ ರಾಷ್ಟ್ರೀಯ ಆರ್ಚರ್ ಪಟು ಸಾವು, ಇತರರು ರೈಲು ನಿಲ್ಲುವ ಮೊದಲೇ ತುರ್ತಾಗಿ ಇಳಿಯಲು ಪ್ರಯತ್ನಿಸಿದ ಕಾರಣ ನೂಕು ನುಗ್ಗಲಿನಲ್ಲಿ ಕ್ರೀಡಾಪಟು ರೈಲಿನಿಂದ ಬಿದ್ದು ಮೃತಪಟ್ಟ ದುರಂತ ಘಟನೆ ನಡೆದಿದೆ.
09:15 PM (IST) Nov 02
Breaking News ದೇವಸ್ಥಾನದಿಂದ ಮರಳುತ್ತಿದ್ದ ಭಕ್ತರ ಬಸ್ ಅಪಘಾತ, 18 ಮಂದಿ ಸಾವು, ಮೂವರು ಭಕ್ತರು ಗಂಭೀರವಾಗಿ ಗಾಯಗೊಂಡಿದ್ದಾರೆ. ನಿಂತಿದ್ದ ವಾಹನಕ್ಕೆ ಬಸ್ ಡಿಕ್ಕಿಯಾಗಿದೆ. ಬಸ್ ಬಹುತೇಕ ನಜ್ಜು ಗುಜ್ಜಾಗಿದೆ.
08:29 PM (IST) Nov 02
ಮಹಿಳಾ ವಿಶ್ವಕಪ್ ಫೈನಲ್‌ನಲ್ಲಿ ದಾಖಲೆ ಬರೆದ ಭಾರತ, ಸೌತ್ ಆಫ್ರಿಕಾಗೆ 299 ರನ್ ಟಾರ್ಗೆಟ್, ಸ್ಫೋಟಕ ಬ್ಯಾಟಿಂಗ್ ಮೂಲಕ ಶೆಫಾಲಿ ವರ್ಮಾ ದಾಖಲೆ ಬರೆದರೆ, ಇತ್ತ ಭಾರತ 298 ರನ್ ಸಿಡಿಸುವಲ್ಲಿ ಯಶಸ್ವಿಯಾಗಿದೆ.
07:13 PM (IST) Nov 02
ಬಿಹಾರ ಚುನಾವಣೆ ಕಸರತ್ತು, ಮೀನುಗಾರರ ಜೊತೆ ಕೆರೆಗೆ ಜಿಗಿದು ಮೀನು ಹಿಡಿದ ರಾಹುಲ್ ಗಾಂಧಿ, ಬೋಟಿನಲ್ಲಿದ್ದ ರಾಹುಲ್ ಗಾಂಧಿ ದಿಢೀರ್ ಕೆರೆಗೆ ಜಿಗಿದಿದ್ದಾರೆ. ಬಳಿಕ ಮೀನುಗಾರರ ಜೊತೆ ಬಲೆ ಹಾಕಿ ಮೀನು ಹಿಡಿದಿದ್ದಾರೆ. ಇದೇ ವೇಳೆ ಮೀನುಗಾರರ ಸಮಸ್ಯೆಗಳ ಕುರಿತು ಮಾತನಾಡಿದ್ದಾರೆ.
06:57 PM (IST) Nov 02
Vikarabad crime news: ವ್ಯಕ್ತಿಯೊಬ್ಬ ತನ್ನ ಪತ್ನಿ, ಕಿರಿಯ ಮಗಳು ಮತ್ತು ಅತ್ತಿಗೆಯನ್ನು ಕುಡುಗೋಲಿನಿಂದ ಕೊಂದು, ನಂತರ ತಾನೂ ನೇಣಿಗೆ ಶರಣಾಗಿದ್ದಾನೆ. ಈ ದಾಳಿಯಿಂದ ಹಿರಿಯ ಮಗಳು ಗಾಯಗೊಂಡು ಬದುಕುಳಿದಿದ್ದು, ಕೌಟುಂಬಿಕ ಕಲಹವೇ ಈ ದುರಂತಕ್ಕೆ ಕಾರಣ ಎಂದು ಪೊಲೀಸರು ಶಂಕಿಸಿದ್ದಾರೆ.
06:38 PM (IST) Nov 02
06:22 PM (IST) Nov 02
ಜಾನ್ ಸೀನಾ ವಿರುದ್ಧ ಸೆಣಸಾಡಿದ್ದ WWE ಸ್ಟಾರ್ ಈಗ ಪ್ರೇಮಾನಂದ್ ಜಿ ಬಳಿ ನೆಲ ಗುಡಿಸುತ್ತಿರುವುದೇಕೆ? ಅಮೇರಿಕನ್ ಬೇಸ್ ಬಾಲ್ ತಂಡದಲ್ಲಿ ಆಡಿದ್ದ ಈ ಸ್ಟಾರ್, ಐಷರಾಮಿ ಬದುಕಿನಿಂದ ಆಶ್ರಮದಲ್ಲಿ ಸನ್ಯಾಸಿಯಾಗಿ ಬದುಕುತ್ತಿರವುದೇಕೆ?
06:10 PM (IST) Nov 02
Celebration Ends: ಕೇರಳದ ಕೊಟ್ಟಾಯಂನಲ್ಲಿ, ಗ್ರಾಹಕರ ಸೋಗಿನಲ್ಲಿ ಕಾರ್ಯಾಚರಣೆ ನಡೆಸಿದ ಅಬಕಾರಿ ಪೊಲೀಸರು ಅಕ್ರಮ ಮದ್ಯ ಮಾರಾಟದ ಕಿಂಗ್‌ಪಿನ್ 'ಸೆಲೆಬ್ರೇಷನ್ ಸಾಬು' ಅಲಿಯಾಸ್ ಚಾರ್ಲಿ ಥಾಮಸ್‌ನನ್ನು ಬಂಧಿಸಿದ್ದಾರೆ.
06:06 PM (IST) Nov 02
ತಮ್ಮ 60ನೇ ಹುಟ್ಟುಹಬ್ಬದ ಪ್ರಯುಕ್ತ ಶಾರುಖ್ ಖಾನ್ 'ಆಸ್ಕ್ ಮಿ ಎನಿಥಿಂಗ್' ಸೆಷನ್ ನಡೆಸಿದರು. ಈ ವೇಳೆ, ತಮ್ಮ ಪ್ರತಿಭೆ ಮತ್ತು ಸೌಂದರ್ಯವನ್ನು ಪ್ರಶ್ನಿಸಿದ ನೆಟ್ಟಿಗನಿಗೆ ಚಾಕಚಕ್ಯತೆಯಿಂದ ಉತ್ತರಿಸಿದರು. ಅಲ್ಲದೆ, ಮಗ ಆರ್ಯನ್ ಖಾನ್ ನಿರ್ದೇಶಿಸುವ ಸಾಧ್ಯತೆಯ ಬಗ್ಗೆಯೂ ಹಾಸ್ಯಮಯವಾಗಿ ಮಾತನಾಡಿದರು.
05:54 PM (IST) Nov 02
05:41 PM (IST) Nov 02
ಎಲೆಕ್ಟ್ರಾನಿಕ್ ಸಿಟಿ ಅಲ್ಲಾವುದ್ದೀನ್ ಮ್ಯಾಜಿಕ್‌ಗೆ ಬೆಂಗಳೂರು ತುಂಬಾ ಬಾಂಗ್ಲಾದೇಶಿಗಳು, ಕೋರ್ಟ್ ಗರಂ, ನಮ್ಮ ಅಣ್ಣ, ನಮ್ಮ ಅಕ್ಕ, ಚಿಕ್ಕಪ್ಪನ ಮಗ, ಎಂದು 400 ಮಂದಿಯನ್ನು ಬಾಂಗ್ಲಾದೇಶದಿಂದ ಅಕ್ರಮವಾಗಿ ಬೆಂಗಳೂರಿಗೆ ಕರೆತಂದು ಇಲ್ಲೇ ಕೆಲಸ ಕೊಡಿಸಿ ಮದುವೆಯಾಗಿ ಸೆಟ್ಲ್ ಆಗುವಂತೆ ಮಾಡಿದ್ದಾನೆ.
04:41 PM (IST) Nov 02
2025ರ ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಮುಖಾಮುಖಿಯಾಗಿವೆ. ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದು, ಮಳೆಯಿಂದಾಗಿ ತಡವಾಗಿ ಪಂದ್ಯ ಆರಂಭವಾದರೂ, ಉಭಯ ತಂಡಗಳು ಚೊಚ್ಚಲ ವಿಶ್ವಕಪ್ ಪ್ರಶಸ್ತಿಗಾಗಿ ಕಾದಾಡಲಿವೆ.
04:31 PM (IST) Nov 02
ಪಿಂಚಣಿ ಪಡೆಯಲು ಲೈಫ್ ಸರ್ಟಿಫಿಕೇಟ್ ಕಡ್ಡಾಯ, ಆನ್‌ಲೈನ್-ಆಫ್‌ಲೈನ್ ಮೂಲಕ ಸಲ್ಲಿಕೆ ಹೇಗೆ? ಜೀವನ್ ಪ್ರಮಾಣ ಪತ್ರ ಸಲ್ಲಿಸದಿದ್ದರೆ ಪಿಂಚಣಿ ಪಡೆಯಲು ಸಮಸ್ಯೆಗಳು ಎದುರಾಗಲಿದೆ. ಸುಲಭವಾಗಿ ಈ ಪ್ರಕ್ರಿಯೆ ಮುಗಿಸುವುದು ಹೇಗೆ?
04:26 PM (IST) Nov 02
ನವಿ ಮುಂಬೈ: 2025ರ ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಆತಿಥೇಯ ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಮುಖಾಮುಖಿಯಾಗಿವೆ.ಈ ಪಂದ್ಯಕ್ಕೆ ಮಳೆ ಅಡ್ಡಿಯಾಗಿದ್ದು, ಟಾಸ್ ಯಾವಾಗ ಎಂದು ಕುತೂಹಲದಿಂದ ಕಾಯುತ್ತಿದ್ದ ಅಭಿಮಾನಿಗಳಿಗೆ ಗುಡ್ ನ್ಯೂಸ್ ಸಿಕ್ಕಿದೆ.
04:03 PM (IST) Nov 02
21 crore buffalo death: ರಾಜಸ್ತಾನದ ಪ್ರಸಿದ್ಧ ಪುಷ್ಕರ್ ಮೇಳದಲ್ಲಿ, 21 ಕೋಟಿ ಮೌಲ್ಯದ ಕೋಣವೊಂದು ಕುಸಿದು ಬಿದ್ದು ಸಾವನ್ನಪ್ಪಿದೆ. ಈ ಘಟನೆಯು ಪ್ರಾಣಿಪ್ರಿಯರ ಆಕ್ರೋಶಕ್ಕೆ ಕಾರಣವಾಗಿದ್ದು, ನಿರ್ಲಕ್ಷ್ಯ ಮತ್ತು ಕೊಲೆ ಆರೋಪಗಳು ಸಾಮಾಜಿಕ ಜಾಲತಾಣದಲ್ಲಿ ಕೇಳಿಬರುತ್ತಿವೆ.
04:03 PM (IST) Nov 02
ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮಹಿಳಾ ಏಕದಿನ ವಿಶ್ವಕಪ್ ಫೈನಲ್ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದೆ. ಪಂದ್ಯಕ್ಕೆ ಮೀಸಲು ದಿನವಿದ್ದು, ಎರಡೂ ದಿನ ಆಟ ಸಾಧ್ಯವಾಗದಿದ್ದರೆ ತಂಡಗಳನ್ನು ಜಂಟಿ ವಿಜೇತರೆಂದು ಘೋಷಿಸುವ ನಿಯಮವಿದೆ.
03:33 PM (IST) Nov 02
ಮಹಾಕುಂಭ ಮೇಳ ಯೂಸ್‌ಲೆಸ್ ಎಂದ ಲಾಲೂ ಯಾದವ್ ಅಸಲಿ ಮುಖ ಬಹಿರಂಗಪಡಿಸಿದ ಬಿಜೆಪಿ, ಹಿಂದೂಗಳ ಪವಿತ್ರ ಹಬ್ಬ ಅನವಶ್ಯಕ ಎಂದಿರುವ ಲಾಲೂ ಪ್ರಸಾದ್ ಯಾದವ್‌ಗೆ, ಯಾವುದೋ ದೇಶದಲ್ಲಿ ಆಚರಿಸುವ ಕ್ರೈಸ್ತರ ಹ್ಯಾಲೋವಿನ್ ಪವಿತ್ರವಾಯಿತೇ? ಎಂದು ಬಿಜೆಪಿ ವಿಡಿಯೋ ಸಮೇತ ತಿರುಗೇಟು ನೀಡಿದೆ.
03:27 PM (IST) Nov 02
ಮೂರನೇ ಟಿ20 ಪಂದ್ಯದಲ್ಲಿ, ಆರಂಭಿಕ ಕುಸಿತದ ಹೊರತಾಗಿಯೂ ಟಿಮ್ ಡೇವಿಡ್ (74) ಮತ್ತು ಮಾರ್ಕಸ್ ಸ್ಟೋನಿಸ್ (64) ಅವರ ಸ್ಪೋಟಕ ಅರ್ಧಶತಕಗಳ ನೆರವಿನಿಂದ ಆಸ್ಟ್ರೇಲಿಯಾ ಚೇತರಿಸಿಕೊಂಡಿತು. ಅಂತಿಮವಾಗಿ, ಆಸ್ಟ್ರೇಲಿಯಾ ತಂಡವು 20 ಓವರ್‌ಗಳಲ್ಲಿ 6 ವಿಕೆಟ್‌ಗೆ 186 ರನ್‌ಗಳ ಬೃಹತ್ ಮೊತ್ತವನ್ನು ಕಲೆಹಾಕಿದೆ.
03:12 PM (IST) Nov 02
Tuition Teacher: ಥಾಣೆಯಲ್ಲಿ, ಟ್ಯೂಷನ್ ಸಮಯದಲ್ಲಿ ಮೂವರು ಅಪ್ರಾಪ್ತ ಬಾಲಕಿಯರಿಗೆ ಲೈಂ*ಗಿಕ ಕಿರುಕುಳ ನೀಡಿದ 35 ವರ್ಷದ ಶಿಕ್ಷಕನಿಗೆ ಪೋಕ್ಸೋ ನ್ಯಾಯಾಲಯವು 3 ವರ್ಷಗಳ ಕಠಿಣ ಶಿಕ್ಷೆ ವಿಧಿಸಿದೆ.
02:52 PM (IST) Nov 02
ದಕ್ಷಿಣ ಆಫ್ರಿಕಾ ಎ ವಿರುದ್ಧದ ಮೊದಲ ಚತುರ್ದಿನ ಟೆಸ್ಟ್‌ನಲ್ಲಿ ಭಾರತ ಎ ತಂಡ 3 ವಿಕೆಟ್‌ಗಳ ರೋಚಕ ಜಯ ಸಾಧಿಸಿದೆ. ನಾಯಕ ರಿಷಭ್ ಪಂತ್ ಅವರ 90 ರನ್‌ಗಳ ಹೋರಾಟದ ನಂತರ, ಬಾಲಂಗೋಚಿಗಳಾದ ಅಂಶುಲ್ ಕಂಬೋಜ್ ಮತ್ತು ಮಾನವ್ ಸುತಾರ್ ಅವರ ಅಜೇಯ ಜೊತೆಯಾಟದಿಂದ ಭಾರತಕ್ಕೆ ಗೆಲುವು ದಕ್ಕಿತು.
02:38 PM (IST) Nov 02
U19 ವಿಶ್ವಕಪ್‌ನಲ್ಲಿ ಟೀಂ ಇಂಡಿಯಾ ಪ್ರತಿನಿಧಿಸಿದ ಕ್ರಿಕೆಟಿಗ ಭೀಕರ ರಸ್ತೆ ಅಪಘಾತದಲ್ಲಿ ಸಾವು , ಘಟನೆಗೆ ಆಘಾತ ವ್ಯಕ್ತಪಡಿಸಿರುವ ಕ್ರಿಕೆಟ್ ಸಂಸ್ಥೆ ತೀವ್ರ ಸಂತಾಪ ಸೂಚಿಸಿದೆ. ಕಾರು ಅಪಘಾತದಲ್ಲಿ ಮೃತಪಟ್ಟ ಕ್ರಿಕೆಟಿಗನ ಕುಟುಂಬಕ್ಕೆ ಹಲವರು ಸಂತಾಪ ಸೂಚಿಸಿದ್ದಾರೆ.
02:28 PM (IST) Nov 02
ದುಲಾರ್‌ಚಂದ್ ಯಾದವ್ ಹ*ತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊಕಾಮಾ ಕ್ಷೇತ್ರದ ಜೆಡಿಯು ಅಭ್ಯರ್ಥಿ ಅನಂತ್ ಸಿಂಗ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಈ ಬಂಧನವು ಬಿಹಾರ ಚುನಾವಣಾ ರಾಜಕೀಯದಲ್ಲಿ ತೀವ್ರ ಸಂಚಲನ ಸೃಷ್ಟಿಸಿದೆ.
01:34 PM (IST) Nov 02
01:20 PM (IST) Nov 02
ಪ್ರಧಾನ ಮಂತ್ರಿ ಆವಾಸ್ ಯೋಜನೆಯು ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಅರ್ಹರಿಗೆ ಪಕ್ಕಾ ಮನೆಗಳನ್ನು ಒದಗಿಸುವ ಗುರಿ ಹೊಂದಿದೆ. ಈ ಯೋಜನೆಯಡಿ ಫಲಾನುಭವಿಗಳಿಗೆ ಆರ್ಥಿಕ ನೆರವು ನೀಡಲಾಗುತ್ತದೆ. ಇದೀಗ 2025ರ ಹೊಸ ಫಲಾನುಭವಿಗಳ ಪಟ್ಟಿ ಬಿಡುಗಡೆಯಾಗಿದ್ದು, ನಿಮ್ಮ ಹೆಸರನ್ನು ಪರಿಶೀಲಿಸಬಹುದು.
12:44 PM (IST) Nov 02
12:05 PM (IST) Nov 02
ನವಿ ಮುಂಬೈ: 2025ರ ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಫೈನಲ್‌ಗೆ ಕ್ಷಣಗಣನೆ ಆರಂಭವಾಗಿದೆ. ಇಂದು ನಡೆಯಲಿರುವ ಫೈನಲ್‌ಗೂ ಮುನ್ನ ದಕ್ಷಿಣ ಆಫ್ರಿಕಾ ಮೈಂಡ್ ಗೇಮ್ ಆರಂಭಿಸಿದ್ದು, ಭಾರತಕ್ಕೆ ವಾರ್ನಿಂಗ್ ನೀಡಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.
11:50 AM (IST) Nov 02
Jaipur school girl death: 4ನೇ ತರಗತಿ ವಿದ್ಯಾರ್ಥಿನಿಯೊಬ್ಬಳು ಶಾಲಾ ಕಟ್ಟಡದಿಂದಲೇ ಕೆಳಗೆ ಹಾರಿ ಸಾವನ್ನಪ್ಪಿದ್ದಾಳೆ. ಈ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಆದರೆ ಸಾವಿನ ನಂತರ ಶಾಲಾ ಆಡಳಿತ ಮಂಡಳಿ ಸ್ಥಳದಲ್ಲಿ ರಕ್ತದ ಕಲೆಗಳನ್ನು ಪೊಲೀಸರು ಬರುವ ಮೊದಲೇ ಕ್ಲೀನ್ ಮಾಡಿ ಸಾಕ್ಷಿನಾಶ ಮಾಡಿದ್ದಾರೆ.
11:00 AM (IST) Nov 02
ನವಿ ಮುಂಬೈ: 13ನೇ ಆವೃತ್ತಿಯ ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಫೈನಲ್ ಪಂದ್ಯಕ್ಕೆ ಕ್ಷಣಗಣನೆ ಶುರುವಾಗಿದೆ. ಪ್ರಶಸ್ತಿಗಾಗಿ ಭಾರತ ಹಾಗೂ ದಕ್ಷಿಣ ಆಫ್ರಿಕಾ ಮಹಿಳಾ ತಂಡಗಳು ಕಾದಾಡಲಿವೆ. ಈ ಪಂದ್ಯಕ್ಕೆ ವರುಣ ಅಡ್ಡಿಪಡಿಸಿದ್ರೆ ಏನಾಗಲಿದೆ ಎನ್ನುವ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.
09:25 AM (IST) Nov 02
09:24 AM (IST) Nov 02
Rekha Gupta Excise Policy : ಹೊಸ ಅಬಕಾರಿ ನೀತಿಯನ್ನು ಜಾರಿಗೆ ತರಲು ಸಿದ್ಧತೆ ನಡೆಸಿದೆ. ಈ ನೀತಿಯು ಮದ್ಯದಂಗಡಿಗಳನ್ನು ಆಧುನೀಕರಿಸುವುದು, ಮಾಲ್‌ಗಳಲ್ಲಿ ಮಾರಾಟಕ್ಕೆ ಅವಕಾಶ ನೀಡುವುದು ಮತ್ತು ಪ್ರೀಮಿಯಂ ಬ್ರ್ಯಾಂಡ್‌ಗಳ ಲಭ್ಯತೆಯನ್ನು ಹೆಚ್ಚಿಸುವ ಗುರಿ ಹೊಂದಿದೆ.
08:55 AM (IST) Nov 02