ಭಾರತ ಅಮೆರಿಕಾಗೆ ಕೇವಲ ಮಿತ್ರನಲ್ಲ, ಬದಲಿಗೆ ಪ್ರಬಲ ಶಕ್ತಿ: ಶ್ವೇತ ಭವನ

By Suvarna News  |  First Published Dec 12, 2022, 7:02 PM IST

ಮಿಲಿಟರಿ ಮತ್ತು ರಾಜಕೀಯ ನಿಯತಾಂಕಗಳ ವಿಚಾರಕ್ಕೆ ಬಂದರೆ, ಭಾರತ ಜಗತ್ತಿನ ಅಗ್ರ ಐದು ರಾಷ್ಟ್ರಗಳ ಸಾಲಿನಲ್ಲಿದೆ. ಭಾರತದ ಬಳಿ ಕೇವಲ 130-140 ಅಣ್ವಸ್ತ್ರಗಳ ಪೂರೈಕೆಯಿದ್ದು, ಅಣ್ವಸ್ತ್ರಗಳ ವಿಚಾರದಲ್ಲಿ ಭಾರತದ ಸಾಮರ್ಥ್ಯ ಸಾಧಾರಣ ಎನ್ನಬಹುದು. 
 


ಗಿರೀಶ್ ಲಿಂಗಣ್ಣ, ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ

ಅಮೆರಿಕಾದ ಶ್ವೇತ ಭವನ ಇತ್ತೀಚೆಗೆ ಚೀನಾಗೆ ಖುಷಿಯಾಗದಂತಹ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದೆ. ಶ್ವೇತಭವನದ ಏಷ್ಯಾ ಸಂಯೋಜಕ ಕರ್ಟ್ ಕ್ಯಾಂಪ್‌ಬೆಲ್ ಅವರು ಭಾರತದ ಕುರಿತು ಮಾತನಾಡುತ್ತಾ, ಭಾರತ ಕೇವಲ ಅಮೆರಿಕಾದ ಮಿತ್ರರಾಷ್ಟ್ರವಷ್ಟೇ ಅಲ್ಲ, ಜಾಗತಿಕ ಶಕ್ತಿಯಾಗಲಿದೆ ಎಂದಿದ್ದರು. "ಭಾರತದ ಬಳಿ ಒಂದು ತನ್ನದೇ ಕಾರ್ಯತಂತ್ರದ ವೈಶಿಷ್ಟ್ಯವಿದೆ. ಭಾರತ ಕೇವಲ ಅಮೆರಿಕಾದ ಮಿತ್ರರಾಷ್ಟ್ರವಾಗಿರುವುದಿಲ್ಲ. ಭಾರತಕ್ಕೆ ತಾನೊಂದು ಸಂಪೂರ್ಣ ಸ್ವತಂತ್ರ, ಶಕ್ತಿಶಾಲಿ ರಾಷ್ಟ್ರವಾಗಬೇಕೆಂಬ ಮಹತ್ವಾಕಾಂಕ್ಷೆ ಹೊಂದಿದೆ. ಅದರಂತೆ ಭಾರತ ಮುಂದೆ ಪ್ರಬಲ ಶಕ್ತಿಯಾಗಿ ಹೊರಹೊಮ್ಮಲಿದೆ" ಎಂದು ಕರ್ಟ್ ಕ್ಯಾಂಪ್‌ಬೆಲ್ ವಾಷಿಂಗ್ಟನ್ ನಲ್ಲಿನ ಆ್ಯಸ್ಪೆನ್ ಸೆಕ್ಯುರಿಟಿ ಫೋರಮ್‌ನಲ್ಲಿ ಹೇಳಿದ್ದರು. ಭಾರತ ಮತ್ತು ಅಮೆರಿಕಾ ಮಧ್ಯ ಕಾರ್ಯತಂತ್ರದ ಸಂಬಂಧ ಬಹುತೇಕ ಎಲ್ಲ ದಿಕ್ಕಿನಲ್ಲೂ ಅಭಿವೃದ್ಧಿ ಹೊಂದುತ್ತಿದೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

Tap to resize

Latest Videos

ಇದೇ ಸಂದರ್ಭದಲ್ಲಿ ಕ್ಯಾಂಪ್‌ಬೆಲ್ ಅವರು 2023ರಲ್ಲಿ ನಡೆಯಲಿರುವ ಕ್ವಾಡ್ ಸಭೆಯ ಕುರಿತೂ ಜ್ಞಾಪಿಸಿಕೊಂಡರು. ಕ್ವಾಡ್ ಸಮಿತಿಯಲ್ಲಿ ಭಾರತದೊಡನೆ ಅಮೆರಿಕಾ, ಆಸ್ಟ್ರೇಲಿಯಾ, ಹಾಗೂ ಜಪಾನ್‌ಗಳು ಸದಸ್ಯರಾಗಿವೆ. ಈ ನಾಲ್ಕೂ ರಾಷ್ಟ್ರಗಳೂ ಈಗ ಚೀನಾದ ಪಾಲಿಗೆ ಬಹಿರಂಗವಾಗಿ ಖಳನಾಯಕರಂತಾಗಿವೆ. ಚೀನಾದೊಡನೆ ದ್ವಿಪಕ್ಷೀಯ ವ್ಯವಹಾರಗಳಲ್ಲಿನ ಭಾರತದ ಸಾಮರ್ಥ್ಯದ ಕೊರತೆಯನ್ನು ಸರಿದೂಗಿಸುವ ಅಗತ್ಯವಿದೆ. ಅದರೊಡನೆ ಚೀನಾದ ಸಾಮರ್ಥ್ಯ ಮತ್ತೆ ಮತ್ತೆ ಏರುತ್ತಲೇ ಇರುವುದರಿಂದ ಈ ಅಗತ್ಯತೆಗೆ ಹೆಚ್ಚಿನ ಒತ್ತು ನೀಡಬೇಕಿದೆ. ಪ್ರಸ್ತುತ ಸಂದರ್ಭದಲ್ಲಿ ಅಮೆರಿಕಾ ಸಂಯುಕ್ತ ಸಂಸ್ಥಾನ ಈ ಕೆಲಸ ನಿರ್ವಹಿಸುತ್ತಿದೆ. ಇದೇ ಸಂದರ್ಭದಲ್ಲಿ ಭಾರತ ತನ್ನದೇ ಆದ ಗುರಿಗಳನ್ನು ಸಾಧಿಸುವ ಉದ್ದೇಶ ಹೊಂದಿದ್ದು, ಅಮೆರಿಕಾದ ಆಸಕ್ತಿಗಳಿಗೆ ಅನುಗುಣವಾಗಿ ನಡೆದುಕೊಳ್ಳುವ ಕುರಿತು ಆಸಕ್ತಿ ಹೊಂದಿಲ್ಲ. ಅದರೊಡನೆ, ಅಮೆರಿಕಾದೊಡನೆ ಮಿಲಿಟರಿ ಬಾಂಧವ್ಯ ಹೊಂದುವುದೆಂದರೆ ಅದು ವಾಷಿಂಗ್ಟನ್‌ ಹೇಳಿದಂತೆ ಕೇಳುವ ಸ್ಥಿತಿ ಎನ್ನಲಾಗುತ್ತದೆ. ಅಂತಹ ಸಂದರ್ಭದಲ್ಲಿ ಎರಡೂ ರಾಷ್ಟ್ರಗಳ ಮಧ್ಯ ಸಮಾನತೆ ಸಾಧಿಸಲು ಸಾಧ್ಯವಿಲ್ಲ.

ಇಂತಹ ಪರಿಸ್ಥಿತಿಯಲ್ಲಿ ಗಮನಿಸಿದಾಗ, ಕ್ಯಾಂಪ್‌ಬೆಲ್ ಅವರು ಆಡಿರುವ ಮಾತುಗಳು, "ಭಾರತ ಅಮೆರಿಕಾದ ಸಹಯೋಗಿಯಾಗಿರುವುದಿಲ್ಲ. ಬದಲಿಗೆ ಭಾರತವೂ ಒಂದು ಜಾಗತಿಕ ಶಕ್ತಿಯಾಗಲಿದೆ" ಎಂಬುದು ಭಾರತದ ನೈಜ ಉದ್ದೇಶಗಳು ಹಾಗೂ ನಡವಳಿಕೆಯೆಡೆಗೆ ಬೆಳಕು ಚೆಲ್ಲುತ್ತವೆ. ಇದೇ ಸಂದರ್ಭದಲ್ಲಿ, ಶ್ವೇತಭವನದ ಏಷ್ಯಾ ಸಮನ್ವಯಕಾರ ಕ್ಯಾಂಪ್‌ಬೆಲ್ ಭಾರತ ಮತ್ತು ಅಮೆರಿಕಾಗಳ ನಡುವಿನ ಸಂಬಂಧ ಅವೆರಡರ ಚೀನಾ ವಿರೋಧಿ ನೀತಿಯಿಂದ ಉಂಟಾಗಿದ್ದು ಎನ್ನುವ ವಾಸ್ತವ ವಿಚಾರವನ್ನು ಒಪ್ಪಿಕೊಳ್ಳುವುದಿಲ್ಲ.‌ ಒಂದು ವೇಳೆ ಈ ವಿಚಾರದಲ್ಲಿ ಏನಾದರೂ ತಪ್ಪು ಹೆಜ್ಜೆ ಇಟ್ಟರೆ, ಅಮೆರಿಕಾವೇ ಹೆಚ್ಚಿನ ತೊಂದರೆಗೆ ಸಿಲುಕುವ ಸಾಧ್ಯತೆಗಳಿವೆ.

ಅದೂ ಅಲ್ಲದೆ, ಚೀನಾವನ್ನು ಎದುರಿಸಲು ಅಮೆರಿಕಾಗೆ ಒಂದು ಸಮರ್ಥ ಸಹಯೋಗಿಯ ಅಗತ್ಯವಿದೆ. ಆದ್ದರಿಂದ ಭಾರತ ಚೀನಾದೊಡನೆ ಗಡಿಯನ್ನು ಹಂಚಿಕೊಳ್ಳುವುದು, ಚೀನಾದಂತೆ ಭಾರತವೂ ಅಣ್ವಸ್ತ್ರ ಹೊಂದಿರುವುದು ಹಾಗೂ ಭಾರತವೂ ಚೀನಾಗೆ ಸರಿಸಮಾನವಾಗಿ ಜನಸಂಖ್ಯೆ ಹೊಂದಿರುವುದು ಭಾರತವನ್ನು ಅಮೆರಿಕಾಗೆ ಸೂಕ್ತ ಸಹಯೋಗಿಯಾಗುವಂತೆ ಮಾಡುತ್ತದೆ. ಅಮೆರಿಕಾ ಹಾಗೂ ಇತರ ಮುಂದುವರಿದ ರಾಷ್ಟ್ರಗಳು ಅತ್ಯಂತ ಕ್ಷಿಪ್ರವಾಗಿ ಕ್ವಾಡ್ ವೇದಿಕೆಯನ್ನು ಅತ್ಯಂತ ತ್ವರಿತವಾಗಿ ಸ್ಥಾಪಿಸಿದ್ದು, ಅದನ್ನು ಭಾರತದಲ್ಲಿ ಬಳಸಲು ಉದ್ದೇಶಿಸಿವೆ. ಇದೇ ಸಂದರ್ಭದಲ್ಲಿ ಗಮನಿಸಬೇಕಾದ ಇನ್ನೊಂದು ಮಹತ್ವದ ಅಂಶವೆಂದರೆ, ಕ್ವಾಡ್ ವೇದಿಕೆಯನ್ನು ಒಂದು ಚೀನಾ ವಿರೋಧಿ ಮಿಲಿಟರಿ ಹಾಗೂ ರಾಜಕೀಯ ಗುಂಪನ್ನಾಗಿ ಪರಿವರ್ತಿಸುವುದಕ್ಕೆ ಭಾರತ ಇಂದಿಗೂ ವಿರೋಧ ವ್ಯಕ್ತಪಡಿಸುತ್ತಿದೆ. ಆದರೆ ಭಾರತದ ಸ್ಥಿತಿಗತಿ, ಸಾಮರ್ಥ್ಯವನ್ನು ಗಮನಿಸಿದಾಗ, ಭಾರತ ಚೀನಾಗೆ ಪ್ರತಿಸವಾಲು ಹಾಕುವ ಪಾತ್ರಕ್ಕೆ ಅತ್ಯಂತ ಸೂಕ್ತ ಎನಿಸುತ್ತದೆ.

 ಪಾಶ್ಚಾತ್ಯ ಪ್ರವಚನಗಳ ವಿರುದ್ಧ: ಭಾರತವನ್ನು ಒಂದು ಪ್ರಬಲ ಜಾಗತಿಕ ಶಕ್ತಿ ಎಂದು ಪರಿಗಣಿಸುವುದಕ್ಕೆ, ಹಾಗೂ ಭಾರತ ಎರಡನೇ ಶ್ರೇಣಿಯಲ್ಲಿರುವ ರಾಷ್ಟ್ರ ಎನ್ನುವುದಕ್ಕೆ ಸಾಕಷ್ಟು ಭಿನ್ನಾಭಿಪ್ರಾಯಗಳು ಕೇಳಿ ಬಂದಿವೆ. ಅದರಲ್ಲೂ ಪ್ರಮುಖವಾಗಿ ಇಂತಹ ಅಭಿಪ್ರಾಯಗಳು ಪಾಶ್ಚಾತ್ಯ ರಾಷ್ಟ್ರಗಳ ಮಾತುಗಳಲ್ಲಿ ಕೇಳಿ ಬರುತ್ತವೆ. ಇದರ ಮೂಲ ಎಲ್ಲಿ ಎಂದು ಅವಲೋಕಿಸಿದರೆ, ಜಾಗತಿಕ ಶಕ್ತಿ ಎಂಬ ಕಲ್ಪನೆ 19ನಶ ಶತಮಾನದಲ್ಲಿ ಪಾಶ್ಚಾತ್ಯ ಜಗತ್ತಿನಲ್ಲಿ ಆರಂಭಗೊಂಡಿತು. ಆ ಸಂದರ್ಭದಲ್ಲಿ ಏಷ್ಯಾದ ರಾಷ್ಟ್ರಗಳನ್ನು ಜಾಗತಿಕ ಶಕ್ತಿ ಎಂದು ಪರಿಗಣಿಸುತ್ತಿರಲಿಲ್ಲ, ಮತ್ತು ಅವುಗಳಿಗೆ ಜಾಗತಿಕ ಶಕ್ತಿ ಎನಿಸಿಕೊಳ್ಳುವ ಸಾಮರ್ಥ್ಯವಿಲ್ಲ ಎನ್ನಲಾಗಿತ್ತು. ಇಂದು ಪಾಶ್ಚಾತ್ಯ ಜಗತ್ತು ಭಾರತ ಜಾಗತಿಕ ಶಕ್ತಿ ಎನ್ನುವುದನ್ನು ವಿರೋಧಿಸಲು ಇದೇ ಪ್ರಮುಖ ಕಾರಣವಾಗಿದೆ.

ಆದಾಗ್ಯೂ, ಪ್ರಸ್ತುತ ಸನ್ನಿವೇಶದಲ್ಲಿ, ಏಷ್ಯಾದ ಎರಡು ರಾಷ್ಟ್ರಗಳು, ಚೀನಾ ಹಾಗೂ ಭಾರತ, ಜಾಗತಿಕ ಶಕ್ತಿ ಎನಿಸಿಕೊಳ್ಳುವ ಎಲ್ಲ ಲಕ್ಷಣಗಳನ್ನೂ ಹೊಂದಿವೆ. ಎರಡನೆಯದಾಗಿ, ರಾಷ್ಟ್ರವೊಂದರ ಸಾಮಾಜಿಕ-ಆರ್ಥಿಕ ಸೂಚ್ಯಂಕಗಳೂ ಸಹ ಪರಿಗಣನೆಗೆ ಬರುತ್ತವೆ. ಆದರೆ ಪ್ರಸ್ತುತ ಸನ್ನಿವೇಶದಲ್ಲಿ ಭಾರತದ ಜನಸಂಖ್ಯೆಯ 21% ಬಡತನ ರೇಖೆಗಿಂತ ಕೆಳಗೆ ಜೀವಿಸುತ್ತಿದ್ದಾರೆ. ಆದರೂ ಭಾರತದಲ್ಲಿ ಸಾಮಾಜಿಕ ಶ್ರೇಣಿಗಳ ನಡುವಿನ ಅಂತರ ಅಮೆರಿಕಾದಷ್ಟು ಬೃಹತ್ತಾಗಿಲ್ಲ.

2011ರಲ್ಲಿ, ಜಾಗತಿಕವಾಗಿ ಭಾರತದ ಆರ್ಥಿಕತೆ ಜಗತ್ತಿನ ಇತರ ರಾಷ್ಟ್ರಗಳ ಆರ್ಥಿಕತೆಯಲ್ಲಿ ಮೂರನೇ ಸ್ಥಾನದಲ್ಲಿತ್ತು. 2019ರಲ್ಲಿ ಭಾರತದ ಜಿಡಿಪಿ ಮೂರು ಟ್ರಿಲಿಯನ್ ಅಮೆರಿಕನ್ ಡಾಲರ್ ತಲುಪಿತ್ತು. ಈ ಕಾರಣದಿಂದಲೇ ಭಾರತ ಆರ್ಥಿಕವಾಗಿ ಜಗತ್ತಿನ ರಾಷ್ಟ್ರಗಳಲ್ಲಿ ಪ್ರಮುಖವಾದದ್ದು ಎಂದು ಪರಿಗಣಿಸಲ್ಪಟ್ಟಿದೆ. ಈ ಹಾದಿಯಲ್ಲಿ ಭಾರತ ಈಗಾಗಲೇ ಫ್ರಾನ್ಸ್ ಹಾಗೂ ಇಂಗ್ಲೆಂಡ್ ಗಳನ್ನು ಮೀರಿ ಬೆಳೆದಿದೆ. ಕೋವಿಡ್-19 ಸಾಂಕ್ರಾಮಿಕದ ಬಳಿಕ ತಜ್ಞರ ಅಭಿಪ್ರಾಯಗಳ ಪ್ರಕಾರ, ಕೋವಿಡ್-19 ಹೊಡೆತದ ಬಳಿಕವೂ ಭಾರತ ಕನಿಷ್ಠ ಪ್ರಮಾಣದ ಆರ್ಥಿಕ ನಷ್ಟವನ್ನು ಅನುಭವಿಸಿದೆ. ಆ ಬಳಿಕವೂ ಭಾರತ ತನ್ನ ಆರ್ಥಿಕ ಅಭಿವೃದ್ಧಿಯ ದರವನ್ನು ಕಾಪಾಡಿಕೊಳ್ಳಲು ಸಾಧ್ಯವಿದೆ.

ಭಾರತದ ರಾಜಕೀಯ ವ್ಯವಸ್ಥೆ ಪಾಶ್ಚಾತ್ಯವಲ್ಲದಿದ್ದರೂ, ಅದು ಪಾಶ್ಚಾತ್ಯ ರಾಜಕೀಯ ವ್ಯವಸ್ಥೆಗೆ ಸಮಾನವಾಗಿದೆ. ಅದೂ ಅಲ್ಲದೆ ಭಾರತ ಏಷ್ಯಾದ ಮಹತ್ವದ ಪ್ರಜಾಸತ್ತಾತ್ಮಕ ರಾಷ್ಟ್ರ ಎನಿಸಿದೆ. ಕೆಲವು ದಶಕಗಳ ಹಿಂದೆ ಜನರು ಪೌರ್ವಾತ್ಯ ರಾಷ್ಟ್ರಗಳು ಹಿಂದುಳಿದಿವೆ ಎಂದು ಭಾವಿಸಿದ್ದರು. ಅವರ ಬಳಿ ಈಗ ಭಾರತ ಮುಂದುವರಿದಿದೆ ಎಂದರೂ ಅವರು ಅದನ್ನು ನಂಬಲು ಸಿದ್ಧವಿರುವುದಿಲ್ಲ. ಆದರೆ ಪ್ರಸ್ತುತ ಸನ್ನಿವೇಶದಲ್ಲಿ ರಾಷ್ಟ್ರಗಳ ಅಭಿವೃದ್ಧಿಯಲ್ಲಿ ಬೃಹತ್ ಅಂತರ ಎದುರಾಗಿದ್ದು, ಬೆಳೆಯುತ್ತಿರುವ ರಾಷ್ಟ್ರಗಳ ಗುಂಪನ್ನು ಭಾರತವೇ ಮುನ್ನಡೆಸುತ್ತಿದೆ.

ವಿಶ್ವದ ಅತೀದೊಡ್ಡ ಮುಸ್ಲಿಂ ದೇಶದಿಂದ ಪ್ರಧಾನಿ ಮೋದಿಗೆ ವಿಶೇಷ ಮನವಿ!

ಈ ವಿಚಾರದಲ್ಲಿ ಇನ್ನೊಂದು ಮಹತ್ವದ ಅಂಶವೆಂದರೆ ಕಾರ್ಯತಂತ್ರದ ಸಂಸ್ಕೃತಿ. ಇದು ಮಿಲಿಟರಿ ವಲಯದಲ್ಲಿ ಅತ್ಯಂತ ಮಹತ್ವದ ಪಾತ್ರ ವಹಿಸುತ್ತದೆ. ಈ ವಿಚಾರದಲ್ಲಿ ಭಾರತ ಯುರೋಪಿಯನ್ ಒಕ್ಕೂಟ ಹಾಗೂ ಜಪಾನ್‌ಗಳಿಂದ ಉತ್ತಮವಾಗಿದೆ.

Travel Tips : ಭಾರತದಲ್ಲಿವೆ ಅಪಾಯಕಾರಿ ರಸ್ತೆಗಳು! ಜೀವ ಕೈಯ್ಯಲ್ಲಿಟ್ಕೊಂಡೇ ಟ್ರಾವೆಲ್ ಮಾಡ್ಬೇಕಿಲ್ಲಿ

ಮಿಲಿಟರಿ ಮತ್ತು ರಾಜಕೀಯ ನಿಯತಾಂಕಗಳ ವಿಚಾರಕ್ಕೆ ಬಂದರೆ, ಭಾರತ ಜಗತ್ತಿನ ಅಗ್ರ ಐದು ರಾಷ್ಟ್ರಗಳ ಸಾಲಿನಲ್ಲಿದೆ. ಭಾರತದ ಬಳಿ ಕೇವಲ 130-140 ಅಣ್ವಸ್ತ್ರಗಳ ಪೂರೈಕೆಯಿದ್ದು, ಅಣ್ವಸ್ತ್ರಗಳ ವಿಚಾರದಲ್ಲಿ ಭಾರತದ ಸಾಮರ್ಥ್ಯ ಸಾಧಾರಣ ಎನ್ನಬಹುದು. ಆದರೂ ಭಾರತದ ಮಿಲಿಟರಿ ಸಾಮರ್ಥ್ಯಕ್ಕೆ ಇದೇನು ಧಕ್ಕೆಯಾಗುವುದಿಲ್ಲ. ಮಿಲಿಟರಿ ಬಜೆಟ್ ವಿಚಾರಕ್ಕೆ ಬಂದರೆ ಭಾರತ ಜಗತ್ತಿನ ಮೂರನೆ ಅತಿದೊಡ್ಡ ರಾಷ್ಟ್ರವಾಗಿದ್ದು, ಕೇವಲ ಅಮೆರಿಕಾ ಮತ್ತು ಚೀನಾಗಳು ಮಾತ್ರ ಭಾರತಕ್ಕಿಂತ ಹೆಚ್ಚಿನ ರಕ್ಷಣಾ ಬಜೆಟ್ ಹೊಂದಿವೆ.

click me!