Union Health Secretary warns: ಕೋವಿಡ್‌ ಸೋಂಕು ಹೆಚ್ಚಿರುವ ರಾಜ್ಯಗಳಿಗೆ ಪತ್ರ ಬರೆದು ಎಚ್ಚರಿಕೆ

By Suvarna NewsFirst Published Dec 12, 2021, 7:05 AM IST
Highlights
  • ಕೇರಳದ ತಿರುವನಂತಪುರ, ಕಲ್ಲಿಕೋಟೆ ಸೇರಿದಂತೆ 3 ರಾಜ್ಯದ 8 ಜಿಲ್ಲೆಗಳಲ್ಲಿ ಶೇ.10 ಪಾಸಿಟಿವಿಟಿ
  • ದೇಶದ 19 ಜಿಲ್ಲೆಗಳಲ್ಲಿ ಶೇ.5ಕ್ಕಿಂತ ಹೆಚ್ಚು ಪಾಸಿಟಿವಿಟಿ. ಸೋಂಕು ತಡೆಗೆ ನಿರ್ಬಂಧ ಹೇರಿ: ಕೇಂದ್ರ
  • ಕೋವಿಡ್‌ ಸೋಂಕು ಹೆಚ್ಚಿರುವ ರಾಜ್ಯಗಳಿಗೆ ಪತ್ರ ಬರೆದು ಎಚ್ಚರಿಸಿದ ಆರೋಗ್ಯ ಸಚಿವಾಲಯ

ನವದೆಹಲಿ: ಕರ್ನಾಟಕಕ್ಕೆ ಹೊಂದಿಕೊಂಡಿರುವ ಕೇರಳ ಸೇರಿದಂತೆ 3 ರಾಜ್ಯಗಳ 8 ಜಿಲ್ಲೆಗಳಲ್ಲಿ, ಕಳೆದ 2 ವಾರಗಳ ಅವಧಿಯಲ್ಲಿ ಆತಂಕಕಾರಿ ಎನ್ನಬಹುದಾದ ಶೇ.10ರಷ್ಟುಕೋವಿಡ್‌ ಪಾಸಿಟಿವಿಟಿ ದರ ದಾಖಲಾಗಿದೆ. 7 ರಾಜ್ಯಗಳ 19 ಜಿಲ್ಲೆಗಳಲ್ಲಿ ಕೊಂಚ ಆತಂಕ ಎನ್ನಬಹುದಾದ ಶೇ.5ರಿಂದ 10ರಷ್ಟು ಪಾಸಿಟಿವಿಟಿ ವರದಿಯಾಗಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಶನಿವಾರ ಈ ರಾಜ್ಯಗಳಿಗೆ ಸೋಂಕು ತಡೆಗೆ ಕಟ್ಟುನಿಟ್ಟಿನ ನಿರ್ಬಂಧ ಕ್ರಮ ಜರುಗಿಸಬೇಕು ಎಂಬ ಎಚ್ಚರಿಕೆ ಸಂದೇಶ ರವಾನಿಸಿದೆ.

ಪಾಸಿಟಿವಿಟಿ ಶೇ.10 ಮೀರಿದರೆ ಅಪಾಯಕಾರಿ ಹಾಗೂ ಶೇ.5ರಿಂದ 10ರಷ್ಟಿದ್ದರೆ ಕೊಂಚ ಅಪಾಯಕಾರಿ ಎನ್ನಲಾಗುತ್ತದೆ. ಶೇ.5ಕ್ಕಿಂತ ಕಮ್ಮಿ ಪಾಸಿಟಿವಿಟಿ ಇದ್ದರೆ ಮಾತ್ರ ಸೋಂಕು ನಿಯಂತ್ರಣದಲ್ಲಿ ಇದ್ದಂತೆ. ಹೀಗಾಗಿ ಪಾಸಿಟಿವಿಟಿ ಶೇ.10 ದಾಟಿರುವ ಹಾಗೂ ಶೇ.5ರಿಂದ 10ರಷ್ಟಿರುವ ಈ ರಾಜ್ಯಗಳ ಜಿಲ್ಲೆಗಳಲ್ಲಿ ಈ ಹಿಂದಿನಂತೆ ಸೋಂಕು ನಿಯಂತ್ರಣ ನಿರ್ಬಂಧ ಕ್ರಮ ಹೇರಬೇಕು. ಜಿಲ್ಲಾ ಮಟ್ಟದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಂಡು, ಕೋವಿಡ್‌ ಪರಿಸ್ಥಿತಿ ಬಗ್ಗೆ ನಿಗಾ ವಹಿಸಬೇಕು ಎಂಬ ಸಂದೇಶವು ಕೇಂದ್ರ ಆರೋಗ್ಯ ಸಚಿವಾಲಯದಿಂದ ಬಂದಿದೆ.

ಇದೇ ವೇಳೆ, ಕರ್ನಾಟಕದ ಗಡಿಗೆ ಹೊಂದಿಕೊಂಡಿರುವ ಕೇರಳದಲ್ಲಿ ಸೋಂಕು ಹೆಚ್ಚಿರುವುದು ಆತಂಕದ ವಿಚಾರ. ತಿರುವನಂತಪುರಂ ಮತ್ತು ಕಲ್ಲಿಕೋಟೆ ಜಿಲ್ಲೆಗಳಲ್ಲಿ ಪಾಸಿಟಿವಿಟಿ ದರ ಶೇ.10ಕ್ಕಿಂತ ಹೆಚ್ಚಿದೆ. ಹಾಗಾಗಿ ಕೇರಳದಿಂದ ಕರ್ನಾಟಕ ಪ್ರವೇಶಿಸುವವರಿಗೆ ಕರ್ನಾಟಕದ ಗಡಿಯಲ್ಲಿ ಇನ್ನಷ್ಟು ಬಿಗಿ ನಿಯಮ ಜಾರಿಗೊಳಿಸಬೇಕು ಎಂಬ ಆಗ್ರಹಗಳು ಕೇಳಿ ಬಂದಿವೆ.

ಆರೋಗ್ಯ ಸಚಿವಾಲಯ ಪತ್ರ:

ಶನಿವಾರ ರಾಜ್ಯಗಳಿಗೆ ಪತ್ರ ರವಾನಿಸಿರುವ ಕೇಂದ್ರ ಆರೋಗ್ಯ ಕಾರ‍್ಯದರ್ಶಿ(Union Health Secretary) ರಾಜೇಶ್‌ ಭೂಷಣ್‌(Rajesh Bhushan) ಅವರು, ಕೇರಳ(Kerala) ಮಿಜೋರಂ, ಅರುಣಾಚಲ ಪ್ರದೇಶ(Arunachal Pradesh), ಪುದುಚೇರಿ, ಮಣಿಪುರ(Manipur) ಪಶ್ಚಿಮ ಬಂಗಾಳ(West Bengal) ಮತ್ತು ನಾಗಾಲ್ಯಾಂಡಿ(Nagaland)ನ 19 ಜಿಲ್ಲೆಗಳಲ್ಲಿ ಕಳೆದ 2 ವಾರಗಳಿಂದ ಪಾಸಿಟಿವಿಟಿ ದರ ಶೇ.5 ಮತ್ತು ಶೇ.10ರಷ್ಟಿದೆ. ಮಿಜೋರಂ, ಕೇರಳ ಮತ್ತು ಸಿಕ್ಕಿಂನ 8 ಜಿಲ್ಲೆಯಲ್ಲಿ ಪಾಸಿಟಿವಿಟಿ ದರ ಶೇ.10ಕ್ಕಿಂತ ಹೆಚ್ಚಿದೆ. ಈ 27 ಜಿಲ್ಲೆಗಳ ಮೇಲೆ ತೀವ್ರ ನಿಗಾ ವಹಿಸಬೇಕಿದೆ ಎಂದು ತಿಳಿಸಿದ್ದಾರೆ.

ಹಾಗೆಯೇ ಪಾಸಿಟಿವಿಟಿ ಹೆಚ್ಚಿರುವ ಜಿಲ್ಲೆಗಳಲ್ಲಿ ಕೋವಿಡ್‌ ಮಾರ್ಗಸೂಚಿ ಪಾಲನೆಯನ್ನು ಕಡ್ಡಾಯವಾಗಿ ಅನುಷ್ಠಾನಗೊಳಿಸಬೇಕು. ಸೋಂಕಿತರ ಪತ್ತೆಯನ್ನು ಚುರುಕುಗೊಳಿಸಬೇಕು. ಹೆಚ್ಚು ಸೋಂಕು ದಾಖಲಾದ ಪ್ರದೇಶಗಳಲ್ಲಿ ಕಟ್ಟುನಿಟ್ಟಿನ ನಿರ್ಬಂಧ ಹೇರಬೇಕು. ಸಮುದಾಯಗಳು ಕೂಡ ಕ್ರಮಗಳನ್ನು ಪಾಲಿಸಬೇಕು ಎಂದು ನಿರ್ದೇಶನ ನೀಡಿದ್ದಾರೆ.

ಇತ್ತ ಕೇರಳ(Kerala) ಸೇರಿದಂತೆ 7 ರಾಜ್ಯಗಳ 19 ಜಿಲ್ಲೆಗಳಲ್ಲಿ 5-10% ಪಾಸಿಟಿವಿಟಿ ದರವಿದ್ದು, ಕೇಂದ್ರ ಸರ್ಕಾರ ಕಳವಳ ವ್ಯಕ್ತಪಡಿಸಿದೆ. ಇದು ಕರ್ನಾಟಕಕ್ಕೂ  ಎಚ್ಚರಿಕೆಯ ಕರೆಗಂಟೆಯಾಗಿದೆ. ಪಾಸಿಟಿವಿಟಿ ಹೆಚ್ಚಾದರೆ ಮುಂದೆ ಬಿಗಿ ನಿರ್ಬಂಧ ಅನಿವಾರ‍್ಯವಾಗಲಿದೆ. 

ರಾಜ್ಯದಲ್ಲಿ 8 ಕೋಟಿ ಡೋಸ್‌ ಲಸಿಕೆ ನೀಡಿಕೆ

ಇತ್ತ ರಾಜ್ಯದಲ್ಲಿ ರಾಜ್ಯದಲ್ಲಿ ಕೊರೋನಾ ಲಸಿಕೆ ವಿತರಣೆಯು 8 ಕೋಟಿ ಡೋಸ್‌ ಗಡಿ ದಾಟಿದೆ. ಪ್ರಮುಖ ರಾಜ್ಯಗಳ ಪೈಕಿ ಮೊದಲ ಡೋಸ್‌ ಗುರಿ ಸಾಧನೆಯಲ್ಲಿ ಮೊದಲ ಸ್ಥಾನ, ಎರಡನೇ ಡೋಸ್‌ ವಿತರಣೆಯಲ್ಲಿ ಮೂರನೇ ಸ್ಥಾನದಲ್ಲಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ(Minister of Medical Education) ಡಾ. ಕೆ.ಸುಧಾಕರ್‌(K. Sudhakar) ತಿಳಿಸಿದ್ದಾರೆ.


ಈ ನಡುವೆ ದೇಶದಲ್ಲಿ ಇಲ್ಲಿಯವರೆಗೆ ಒಟ್ಟು 30ಕ್ಕೂ ಹೆಚ್ಚು ಒಮಿಕ್ರೋನ್‌ (Omicron Cases in India) ಪ್ರಕರಣಗಳು ದಾಖಲಾಗಿದೆ. ಆದರೆ ಎಲ್ಲಾ ಪ್ರಕರಣಗಳಲ್ಲೂ ರೋಗಲಕ್ಷಣಗಳು ಸೌಮ್ಯವಾಗಿವೆ. ಆದರೂ ಎಚ್ಚರ ವಹಿಸುವುದು ಅಗತ್ಯ ಎಂದು ಕೇಂದ್ರ ಸರ್ಕಾರ ಶುಕ್ರವಾರ ಹೇಳಿದೆ. ಜನರು ಮಾಸ್ಕ್‌ (Mask) ಧರಿಸಲು ನಿರ್ಲಕ್ಷ್ಯ ತೋರುತ್ತಿರುವ ಹಾಗೂ ಕೋವಿಡ್‌ ಮಾರ್ಗಸೂಚಿಗಳನ್ನು ಪಾಲಿಸದೇ ಇರುವುದರ ಬಗ್ಗೆ ಕೂಡ ಸರ್ಕಾರ (Uninon Governmnet) ಎಚ್ಚರಿಕೆ ನೀಡಿದೆ. 

click me!