Omicron Test Kit ವಾರಗಟ್ಟಲೇ ಕಾಯಬೇಕಿಲ್ಲ 2 ಗಂಟೆಯಲ್ಲಿ ರಿಸಲ್ಟ್, ICMR ಅಭಿವೃದ್ಧಿ ಪಡಿಸಿದ ಟೆಸ್ಟ್ ಕಿಟ್!

By Suvarna News  |  First Published Dec 11, 2021, 9:23 PM IST
  • ದೇಶದಲ್ಲಿ ಓಮಿಕ್ರಾನ್ ಪ್ರಕರಣ ಪತ್ತೆಗೆ ICMR ವಿಶೇಷ ಕಿಟ್
  • ಸದ್ಯ ಓಮಿಕ್ರಾನ್ ಪತ್ತೆಗೆ 4 ರಿಂದ 5 ದಿನಗಳ ಅವಶ್ಯಕತೆ ಇದೆ
  • ICMR ಟೆಸ್ಟ್ ಕಿಟ್‌ನಿಂದ ಕೇವಲ 2 ಗಂಟೆಯಲ್ಲಿ ಓಮಿಕ್ರಾನ್ ರಿಸಲ್ಟ್

ನವದೆಹಲಿ(ಡಿ.11): ಭಾರತದಲ್ಲಿ ಓಮಿಕ್ರಾನ್ ಪ್ರಕರಣ ಸಂಖ್ಯೆ ಹೆಚ್ಚಾಗುತ್ತಿದೆ. ಇದುವರೆಗೆ 33 ಓಮಿಕ್ರಾನ್ ಪ್ರಕರಣ ಪತ್ತೆಯಾಗಿದೆ. ಹಲವು ಮಾದರಿಗಳನ್ನು ಜಿನೋಮ್ ಸೀಕ್ವೆನ್ಸಿಂಗ್ ಪರೀಕ್ಷೆಗೆ ಕಳುಹಿಸಲಾಗಿದೆ. ಇವುಗಳ ವರದಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕಾಯುತ್ತಿದೆ. ಇದೀಗ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್( ICMR)ಅಸ್ಸಾಂ, ಹೊಸ ಪರೀಕ್ಷಾ ಕಿಟ್ ಅಭಿವೃದ್ಧಿ ಪಡಿಸಿದೆ. ಈ ಕಿಟ್ ಮೂಲಕ ಕೇವಲ 2 ಗಂಟೆಯಲ್ಲಿ ಓಮಿಕ್ರಾನ್ ಪ್ರಕರಣ ಪತ್ತೆ ಹಚ್ಚಲು ಸಾಧ್ಯವಿದೆ.

ಓಮಿಕ್ರಾನ್ ಪ್ರಕರಣ ಅತೀ ವೇಗವಾಗಿ ಹರಡುತ್ತಿದೆ. ಆದರೆ ಅಪಾಯಕಾರಿ ಅಲ್ಲ. ಎಚ್ಚರವಹಿಸುವುದು ಅಗತ್ಯ ಎಂದು ತಜ್ಞರು ಹೇಳಿದ್ದಾರೆ. ಆದರೆ ಓಮಿಕ್ರಾನ್ ಪ್ರಕರಣ ಪತ್ತೆಯೇ ಭಾರತಕ್ಕೆ ಸವಾಲಾಗಿತ್ತು. ಕಾರಣ ಓಮಿಕ್ರಾನ್ ಪರೀಕ್ಷೆ ಜೆನೋಮ್ ಸೀಕ್ವೆನ್ಸಿಂಗ್ ಪರೀಕ್ಷೆ ಮಾಡಬೇಕು. ಸಂಗ್ರಹಿಸಿದ ಮಾದರಿಗಳನ್ನು ಓಮಿಕ್ರಾನ್ ಪತ್ತೆಗಾಗಿ ಜೆನೋಮ್ ಸೀಕ್ವೆನ್ಸ್ ಪರೀಕ್ಷಾ ವರದಿಗೆ ಕನಿಷ್ಠ 36 ಗಂಟೆ ಅಥವಾ 4 ರಿಂದ 5 ದಿನಗಳ ಅವಶ್ಯಕತೆ ಇದೆ. ಇದರಿಂದ ದೇಶದಲ್ಲಿನ ಓಮಿಕ್ರಾನ್ ಪ್ರಕರಣ ಸಂಖ್ಯೆ ಸ್ಪಷ್ಟವಾಗಿ ಹೇಳಲು ಸಾಧ್ಯವಾಗುತ್ತಿರಲಿಲ್ಲ. ಒಂದು ವಾರದ ಹಿಂದಿನ ವರದಿ ಮೇಲೆ ಸರ್ಕಾರ ನಿರ್ಧಾರ ಕೈಗೊಳ್ಳುತ್ತಿದೆ. ಇದೀಗ ಈ ಸಮಸ್ಯೆಗೆ  ICMR ಉತ್ತರ ನೀಡಿದೆ.

Tap to resize

Latest Videos

undefined

Omicron case ಮೂರು ವರ್ಷದ ಕಂದಮ್ಮಗೆ ಅಂಟಿಕೊಂಡ ರೂಪಾಂತರಿ ತಳಿ, ದೇಶದಲ್ಲಿ 25 ಪ್ರಕರಣ!

ವೈದ್ಯ ಬಿಸ್ವಜ್ಯೋತಿ ಬರ್ಕಾಕೋಟಿ ಅಭಿವೃದ್ಧಿಪಡಿಸಿದ ಈ ಕಿಟ್ ದೇಶದಲ್ಲಿ ಪ್ರಕರಣ ಪತ್ತೆ ಹಚ್ಚಿ ಸೂಕ್ತ ಚಿಕಿತ್ಸೆ ನೀಡಲು ಹಾಗೂ ಪ್ರಕರಣ ಹರಡದಂತೆ ತಡೆಯಲು ನೆರವಾಗಲಿದೆ. 

ನಿನ್ನೆ(ಡಿ.10) ಮಹಾರಾಷ್ಟ್ರದಲ್ಲಿ 7 ಪ್ರಕರಣಗಳು ಪತ್ತೆಯಾಗಿತ್ತು. ಇಂದು ದೆಹಲಿಯಲ್ಲಿ ಮತ್ತೊಂದು ಪ್ರಕರಣ ಪತ್ತೆಯಾಗಿದೆ. ಸೌತ್ ಆಫ್ರಿಕಾ ಮೂಲಕ ಜಿಂಬಾಬ್ವೆ ಭಾರತ ರಾಜಧಾನಿ ದೆಹಲಿಗೆ ಆಗಮಿಸಿದ ವ್ಯಕ್ಕಿಯಲ್ಲಿ ಓಮಿಕ್ರಾನ್ ಪತ್ತೆಯಾಗಿದೆ. ಈ ವ್ಯಕ್ತಿ ಎರಡು ಡೋಸ್ ಲಸಿಕೆ ಪಡೆದುಕೊಂಡಿದ್ದಾರೆ.  ಇದಕ್ಕೂ ಮೊದಲು ತಾಂಜಾನಿಯಾದಿಂದ ದೆಹಲಿಗೆ ಆಗಮಿಸಿದ 37 ವರ್ಷದ ವ್ಯಕ್ತಿಗೆ ಓಮಿಕ್ರಾನ್ ಖಚಿತಗೊಂಡಿತ್ತು.

Omicron Threat: ಶಾಲೆಗಳನ್ನು ಮುಚ್ಚುವುದಿಲ್ಲ: ಶಿಕ್ಷಣ ಸಚಿವ ನಾಗೇಶ್‌

ದೇಶದಲ್ಲಿ ಇದೀಗ ಓಮಿಕ್ರಾನ್ ಪ್ರಕರಣ ಸಂಖ್ಯೆ 33ಕ್ಕೆ ಏರಿಕೆಯಾಗಿದೆ. ಇದರಲ್ಲಿ 17 ಪ್ರಕರಣಗಳು ಮಹಾರಾಷ್ಟ್ರದಲ್ಲಿ ಪತ್ತೆಯಾಗಿದೆ. ಮಹಾರಾಷ್ಟ್ರದಲ್ಲಿ ಪ್ರಕರಣ ಸಂಖ್ಯೆ ಹೆಚ್ಚಾಗುತ್ತಿರುವ ಕಾರಣ ವೀಕೆಂಡ್ ಕರ್ಪ್ಯೂ ಹೇರಲಾಗಿದೆ. ಓಮಿಕ್ರಾನ್ ಪ್ರಕರಣದಿಂದ ಕಟ್ಟು ನಿಟ್ಟಿನ ಮಾರ್ಗಸೂಚಿ ಜಾರಿಗೊಳಿಸಲಾಗಿದೆ. ರಾಜಸ್ಥಾನದಲ್ಲಿ 9 ಓಮಿಕ್ರಾನ್ ಪ್ರಕರಣ ವರದಿಯಾಗಿದೆ. ಗುಜರಾತ್‌ನಲ್ಲಿ 3 ಪ್ರಕರಣ ವರದಿಯಾಗಿದೆ.

ದೇಶದಲ್ಲಿ ಓಮಿಕ್ರಾನ್ ಪ್ರಕರಣ ಕರ್ನಾಟಕದ ಮೂಲಕ ಎಂಟ್ರಿಕೊಟ್ಟಿತ್ತು. ಸೌತ್ ಆಫ್ರಿಕಾದಿಂದ ಬೆಂಗೂರಿಗೆ ಆಗಮಿಸಿದ ವ್ಯಕ್ತಿ ಹಾಗೂ ಬೆಂಗಳೂರಲ್ಲೇ ಇದ್ದ ವೈದ್ಯರೊಬ್ಬರಿಗೆ ಓಮಿಕ್ರಾನ್ ಕಾಣಿಸಿಕೊಂಡಿತ್ತು. ಎರಡು ಪ್ರಕರಣ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಕರ್ನಾಟಕ ಮೂಲಕ ಆರಂಭಗೊಂಡ ಓಮಿಕ್ರಾನ್ ಹರಡುವಿಕೆ ಇದೀಗ 33ಕ್ಕೆ ಏರಿಕೆಯಾಾಗಿದೆ. ಹಲವು ವರದಿಗಳ ಫಲಿತಾಂಶ ಬಾಕಿ ಇದ್ದು ಪ್ರಕರಣ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ಕರ್ನಾಟದಲ್ಲೂ ಕಠಿಣ ನಿಯಮ ಜಾರಿಗೊಳಿಸಲಾಗಿದೆ. ಆಸ್ಪತ್ರೆಯಿಂದ ಬಿಡುಗಡೆಯಾಗುವ ಮಾರ್ಗಸೂಚಿಯಲ್ಲಿ ಬದಲಾವಣೆ ತರಲಾಗಿದೆ. ವಿಮಾನ ನಿಲ್ದಾಣಗಳಲ್ಲಿ ಕಟ್ಟುನಿಟ್ಟಿನ ಪರೀಕ್ಷೆ, ಕ್ವಾರಂಟೈನ್ ಮಾಡಲಾಗುತ್ತಿದೆ. ಈ ಮೂಲಕ ಓಮಿಕ್ರಾನ್ ಹರಡದಂತೆ ತಡೆಯಲು ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದೆ.

ದೇಶದಲ್ಲಿ ಓಮಿಕ್ರಾನ್ ವೈರಸ್ ಕಾಣಿಸಿಕೊಂಡ ಹೆಚ್ಚಿನವರಲ್ಲಿ ಮೈಲ್ಡ್ ರೋಗಲಕ್ಷಣಗಳು ಕಾಣಿಸಿಕೊಂಡಿದೆ. ಹಲವರಲ್ಲಿ ಯಾವುದೇ ರೋಗಲಕ್ಷಣ ಕಾಣಿಸಿಕೊಂಡಿಲ್ಲ. ಹೀಗಾಗಿ ಆತಂಕ ಪಡುವ ಅಗತ್ಯವಿಲ್ಲ. ಕೋವಿಡ್ ಮಾರ್ಗಸೂಚಿ ಪಾಲಿಸಿದರೆ ಓಮಿಕ್ರಾನ್‌ನಿಂದ ದೂರವಿರಬಹುದು ಎಂದು ತಜ್ಞರು ಸೂಚಿಸಿದ್ದಾರೆ. ಹೀಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಕೋವಿಡ್ ಮಾರ್ಗಸೂಚಿಗಳನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಮುಂದಾಗಿದೆ
 

click me!