ಹೈದರಾಬಾದ್ ಎನ್‌ಕೌಂಟರ್: ಎಲ್ಲೆಲ್ಲೂ ಸಂಭ್ರಮಾಚರಣೆ, ಪೊಲೀಸರ ಮೇಲೆ ಹೂಮಳೆ!

By Suvarna News  |  First Published Dec 6, 2019, 11:02 AM IST

ಹೈದರಾಬಾದ್ ಎನ್‌ಕೌಂಟರ್| ದೇಶದೆಲ್ಲೆಡೆ ಸಿಹಿ ತಿಂಡಿ ಹಂಚಿ, ಪಟಾಕಿ ಸಿಡಿಸಿ ಸಂಭ್ರಮಾಚರಣೆ| ಪೊಲೀಸರ ನಡೆ ಸಮರ್ಥಿಸಿದ ಜನರು


ಹೈದರಾಬಾದ್[ಡಿ.06]: ಹೈದರಾಬಾದ್‌ನಲ್ಲಿ ವೈದ್ಯೆ ಮೇಲೆ ನಡೆದ ರೇಪ್ ಹಾಗೂ ಕೊಲೆ ಪ್ರಕರಣದ ಆರೋಪಿಗಳ ಎನ್‌ಕೌಂಟರ್ ನಡೆದ ಬೆನ್ನಲ್ಲೇ, ದೇಶದಾದ್ಯಂತ ಜನರು ಪಟಾಕಿ ಸಿಡಿ, ಸಿಹಿ ಹಂಚಿ ಸಂಭ್ರಮಾಚರಣೆ ನಡೆಸುತ್ತಿದ್ದಾರೆ. ಸೋಶಿಯಲ್ ಮೀಡಿಯಾ ಸೇರಿದಂತೆ ಎಲ್ಲೆಡೆ ಜನರು ಎನ್‌ಕೌಂಟರ್ ನಡೆಸಿದ ವಿ. ಸಿ,. ಸಜ್ಜನರ್ ನೇತೃತ್ವದ ಪೊಲೀಸ್ ತಂಡಕ್ಕೆ ಅಭಿನಂದನೆ ಸಲ್ಲಿಸಿದ್ದು, ಹೈದರಾಬಾದ್ ಪೊಲೀಸರು ಕಾಣಲು ಸಿಕ್ಕಲ್ಲೆಲ್ಲಾ ಹೂವಿನ ಮಳೆ ಸುರಿಸುತ್ತಿದ್ದಾರೆ.

Hyderabad: Locals had showered rose petals on Police personnel at the spot where accused in the rape and murder of the woman veterinarian were killed in an encounter earlier today pic.twitter.com/66pOxK1C2b

— ANI (@ANI)

Hyderabad: Neigbours of the woman veterinarian, celebrate and offer sweets to Police personnel after the four accused were killed in an encounter earlier today pic.twitter.com/MPuEtAJ1Jn

— ANI (@ANI)

ವೈದ್ಯೆ ಮೇಲಿನ ರೇಪ್ ಹಾಗೂ ಕೊಲೆ ಪ್ರಕರಣದ ಆರೋಪಿಗಳಿಗೆ ಶೀಘ್ರ ಗಲ್ಲುಶಿಕ್ಷೆ ವಿಧಿಸಬೇಕೆಂಬ ಕೂಗು ದೇಶದಾದ್ಯಂತ ಎದ್ದಿತ್ತು. ಈ ಸಂಬಂಧ ಪ್ರತಿಭಟನೆಗಳೂ ಜೋರಾಗಿದ್ದವು. ಹೀಗಿರುವಾಗಲೇ ಶುಕ್ರವಾರ ಬೆಳಗ್ಗಿನ ಜಾವ ಕೋರ್ಟ್ ಆದೇಶದ ಮೇರೆಗೆ ಪೊಲೀಸರು ಪ್ರಕರಣದ ನಾಲ್ವರು ಆರೋಪಿಗಳನ್ನು ಮಹಜರು ಮಾಡಲು ಘಟನಾ ಸ್ಥಳಕ್ಕೆ ಕರೆದೊಯ್ದಿದ್ದರು. ಆದರೆ ಈ ಸಂದರ್ಭದಲ್ಲಿ ಆರೋಪಿಗಳು ತಪ್ಪಿಸಿಕೊಳ್ಳಲು ಯತ್ನಿಸಿದ್ದು, ಪೊಲೀಸರು ಎನ್‌ಕೌಂಟರ್ ಮಾಡಿದ್ದಾರೆ. 

Hyderabad: People celebrate and cheer for police at the encounter site where the four accused were killed in an encounter earlier today. pic.twitter.com/PREKFnRZCi

— ANI (@ANI)

Hyderabad: People celebrate and cheer for police at the encounter site where the four accused were killed in an encounter earlier today. pic.twitter.com/WZjPi0Y3nw

— ANI (@ANI)

Tap to resize

Latest Videos

ಸಿಹಿತಿಂಡಿ ಹಂಚಿ, ಹೂವಿನ ಮಳೆ, ಪಟಾಕಿ ಸಿಡಿಸುವುದು ಮಾತ್ರವಲ್ಲದೇ ಪೊಲೀಸರಿಗೆ ರಾಖಿ ಕಟ್ಟುವ ಮೂಲಕ ಜನರು ಪೊಲೀಸರ ಈ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ. ಅಲ್ಲದೇ ಎನ್‌ಕೌಂಟರ್‌ ನಡೆದ ಸ್ಥಳದಲ್ಲಿ ಸೇರಿದ ಸಾರ್ವಜನಿಕರು ಪೊಲೀಸರ ಪರ ಘೋಷಣೆ ಕೂಗಿದ್ದಾರೆ.

Hyderabad: Neigbours of the woman veterinarian, tie rakhi to Police personnel after the four accused were killed in an encounter earlier today pic.twitter.com/ltNsBLOPO6

— ANI (@ANI)

Hyderabad: 'DCP Zindabad, ACP Zindabad' slogans raised near the spot where where accused in the rape and murder of the woman veterinarian were killed in an encounter by Police earlier today. pic.twitter.com/2alNad6iOt

— ANI (@ANI)

ಪೊಲೀಸರು ಮಾಡಿದ್ದು ಸರಿಯೋ ತಪ್ಪೋ... ಆದರೆ ಇಡೀ ದೇಶವೇ ಪೊಲೀಸರ ಈ ನಡೆಯನ್ನು ಶ್ಲಾಘಿಸಿದೆ. ಟಾಲಿವುಡ್, ಸ್ಯಾಂಡಲ್‌ವುಡ್ ನಟರೂ ಟ್ವೀಟ್ ಮೂಲಕ ಪೊಲೀಸ್ ತಂಡಕ್ಕೆ ಸಲಾಂ ಎಂದಿದ್ದಾರೆ. ಈ ಮೂಲಕ ದೇಶವೇ ಒಂದಾಗಿ ವೈದ್ಯೆ ಮೇಲೆ ನಡೆದಿದ್ದ ಅಮಾನವೀಯ ಕೃತ್ಯಕ್ಕೆ ನ್ಯಾಯ ೊದಗಿಸಿರುವ ಪೊಲೀಸರಿಗೆ ಸಲಾಂ ಎಂದಿದ್ದಾರೆ.

ಡಿಸೆಂಬರ್ 6ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

click me!