Rajasthan Violence ಹಿಂದೂ ಯುವಕನ ಹತ್ಯೆ, ರಾಜಸ್ಥಾನದ ಭಿಲ್ವಾಡಾದಲ್ಲಿ ಉದ್ವಿಗ್ನ ಪರಿಸ್ಥಿತಿ!

By Kannadaprabha NewsFirst Published May 12, 2022, 4:14 AM IST
Highlights
  • 20 ವರ್ಷದ ಹಿಂದೂ ಯುವಕನನ್ನು ಹತ್ಯೆ
  • ಶಾಂತಿ ಕಾಪಾಡಲು ಮೊಬೈಲ್‌ ಇಂಟರ್ನೆಟ್‌ ಸಂಪರ್ಕ ಕಡಿತ
  • ಬಲಪಂಥೀಯ ಸಂಘಟನೆಗಳು ಬಂದ್‌ಗೆ ಕರೆ

ಜೈಪುರ(ಮೇ.12): ಕರೌಲಿ ಹಾಗೂ ಜೋಧಪುರ ಬಳಿ ರಾಜಸ್ಥಾನದ ಭಿಲ್ವಾಡಾದಲ್ಲಿ ಬುಧವಾರ ತ್ವೇಷ ಸ್ಥಿತಿ ನಿರ್ಮಾಣವಾಗಿದೆ. ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಇಬ್ಬರು ವ್ಯಕ್ತಿಗಳು 20 ವರ್ಷದ ಹಿಂದೂ ಯುವಕನನ್ನು ಹತ್ಯೆ ಮಾಡಿದ್ದಾರೆ. ಇದರಿಂದಾಗಿ ಇಡೀ ಪ್ರದೇಶದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಶಾಂತಿ ಕಾಪಾಡಲು ಮೊಬೈಲ್‌ ಇಂಟರ್ನೆಟ್‌ ಸಂಪರ್ಕವನ್ನು ಸ್ಥಗಿತಗೊಳಿಸಲಾಗಿದೆ.

ಶಾಸ್ತ್ರಿ ನಗರದ ಆದರ್ಶ್ ತಾಪ್ದಿಯಾ ಮೃತಪಟ್ಟದುರ್ದೈವಿ. ಭಿಲ್ವಾಡಾದ ಕೋಮು ಸೂಕ್ಷ್ಮ ಪ್ರದೇಶವಾದ ಕೊತ್ವಾಲಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಇದನ್ನು ಪ್ರತಿಭಟಿಸಿ ಕೆಲ ಬಲಪಂಥೀಯ ಸಂಘಟನೆಗಳು ಬಂದ್‌ಗೆ ಕರೆ ಕೊಟ್ಟಿವೆ. ಪರಿಸ್ಥಿತಿ ನಿಯಂತ್ರಣದಲ್ಲಿದೆ ಆರೋಪಿಗಳನ್ನು ಶೀಘ್ರವೇ ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ರಾಜಸ್ಥಾನದ ಕರೌಲಿ, ಜೋಧ್‌ಪುರ್‌ನಲ್ಲಿ ಕೋಮು ಹಿಂಸಾಚಾರಗಳು ನಡೆದ ಬೆನ್ನಲ್ಲೇ ಈ ಘಟನೆಯೂ ನಡೆದಿದೆ.

Latest Videos

ರಂಜಾನ್‌ ವೇಳೆ ಕೇಸರಿ ಧ್ವಜ ತೆಗೆದು ಈದ್‌ ಧ್ವಜ ಹಾಕಿದ್ದಕ್ಕೆ ಕಿಡಿ, ಜೋಧಪುರದಲ್ಲಿ ಕೋಮುಗಲಭೆ!

ರಾಜಸ್ಥಾನ ದೇಗುಲ ಧ್ವಂಸ ಕುರಿತು ತಪ್ಪು ಮಾಹಿತಿ: ಪತ್ರಕರ್ತನ ಬಂಧನಕ್ಕೆ ಸಿದ್ಧತೆ
ಇತ್ತೀಚೆಗೆ ರಾಜಸ್ಥಾನದ ಅಲ್ವರ್‌ನಲ್ಲಿ ಸರ್ಕಾರವು ದೇಗುಲ ಧ್ವಂಸ ಮಾಡಿದ ಘಟನೆ ಕುರಿತು ತಪ್ಪು ಮಾಹಿತಿಯೊಂದಿಗೆ ವರದಿ ಮಾಡಿದ್ದ ಟೀವಿ ವರದಿಗಾರ ಅಮನ್‌ ಚೋಪ್ರಾ ಬಂಧಿಸಲು ರಾಜಸ್ಥಾನ ಪೊಲೀಸರ ತಂಡ ಉತ್ತರಪ್ರದೇಶದ ನೋಯ್ಡಾಕ್ಕೆ ಆಗಮಿಸಿದೆ.

ದೆಹಲಿಯ ಜಹಾಂಗೀರ್‌ಪುರಿಯಲ್ಲಿ ಸರ್ಕಾರ ನಡೆಸಿದ ತೆರವು ಕಾರ್ಯಾಚರಣೆಗೆ ಸೇಡು ತೀರಿಸಿಕೊಳ್ಳಲು ರಾಜಸ್ಥಾನ ಸರ್ಕಾರ ಅಲ್ವಾರ್‌ನಲ್ಲಿ ದೇಗುಲ ಧ್ವಂಸ ಮಾಡಿದೆ ಎಂದು ಅಮನ್‌ ವರದಿ ಮಾಡಿದ್ದರು. ಆದರೆ ಈ ಸುಳ್ಳು ಆರೋಪವು ವಿವಿಧ ಸಮುದಾಯಗಳ ನಡುವಿನ ದ್ವೇಷ ಉತ್ತೇಜಿಸುವ ಜೊತೆಗೆ ಧಾರ್ಮಿಕ ನಂಬಿಕೆಗಳಿಗೆ ಧಕ್ಕೆ ತರುವಂತಿದೆ ಎಂದು ಆರೋಪಿಸಿ ಅಮನ್‌ ವಿರುದ್ಧ ರಾಜಸ್ಥಾನದ ಬುಂಡಿ, ಅಲ್ವಾರ್‌ ಮತ್ತು ಡುಂಗರ್‌ಪುರದಲ್ಲಿ ಕೇಸು ದಾಖಲಾಗಿತ್ತು.

ಈ ಪೈಕಿ ಬುಂಡಿ ಮತ್ತು ಅಲ್ವಾರ್‌ ಪ್ರಕರಣದಲ್ಲಿ ಅಮನ್‌ ಬಂಧನಕ್ಕೆ ಕೋರ್ಚ್‌ ತಡೆ ನೀಡಿದೆ. ಆದರೆ ಡುಂಗರ್‌ಪುರ ಪ್ರಕರಣ ಪ್ರಸ್ತಾಪವಾಗಿಲ್ಲ ಎಂದು ಹೇಳಿ ರಾಜಸ್ಥಾನ ಪೊಲೀಸರು ಅಮನ್‌ ಹುಡುಕೊಂಡು ನೋಯ್ಡಾಕ್ಕೆ ಆಗಮಿಸಿದ್ದಾರೆ.

ಪ್ರೇಯಸಿಯನ್ನು ಭಯಾನಕವಾಗಿ ಕೊಂದ ಪಾಗಲ್ ಪ್ರೇಮಿ, ಕ್ರೈಂ ಸೀನ್ ನೋಡಿ ಬೆಚ್ಚಿ ಬಿದ್ದ ಪೊಲೀಸರು!

ಕೋಮು ಹಿಂಸೆ ನಡೆದ ಜೋಧ್‌ಪುರ ಸಾಮಾನ್ಯ, 141 ಜನರ ಬಂಧನ
ರಂಜಾನ್‌ ವೇಳೆ ನಡೆದ ಕೋಮುಗಲಭೆ ಬಳಿಕ ಉದ್ವಿಗ್ನಗೊಂಡಿದ್ದ ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ತವರಾದ ಜೋಧ್‌ಪುರದಲ್ಲಿ ಬುಧವಾರ ಪರಿಸ್ಥಿತಿ ಶಾಂತಿಯುತವಾಗಿತ್ತು. ಈ ನಡುವೆ ಘಟನೆ ಸಂಬಂಧ 141 ಜನರನ್ನು ಬಂಧಿಸಲಾಗಿದ್ದು, 12 ಎಫ್‌ಐಆರ್‌ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಜೋಧ್‌ಪುರದಲ್ಲಿ ಮಂಗಳವಾರ ರಂಜಾನ್‌ ಮೆರವಣಿಗೆಯ ವೇಳೆ ಕೇಸರಿ ಧ್ವಜವನ್ನು ತೆಗೆದು ಅಲ್ಪಸಂಖ್ಯಾತರು ಈದ್‌ ಧ್ವಜವನ್ನು ಹಾರಿಸಿದ್ದು, ಗಲಭೆಗೆ ಕಾರಣವಾಗಿತ್ತು. ಘರ್ಷಣೆಯಲ್ಲಿ 9 ಪೊಲೀಸರು ಸೇರಿದಂತೆ 20ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದ ಕಾರಣ ಪರಿಸ್ಥಿತಿ ನಿಯಂತ್ರಿಸಲು ಕಫä್ರ್ಯ ಹೇರಲಾಗಿತ್ತು. ಬುಧವಾರವೂ ಕಫä್ರ್ಯ ಮುಂದುವರೆಸಲಾಗಿದೆ.

click me!