ಕೆನಡಾದಲ್ಲಿ ಅಡಗಿದ್ದ ಭಾರತದ ಮೋಸ್ಟ್ ವಾಟೆಂಡ್, ಖಲಿಸ್ತಾನಿ ಉಗ್ರ ಸುಖ್‌ದೋಲ್ ಸಿಂಗ್ ಅಲಿಯಾಸ್ ಸುಖಾ ದುನೆಕೆ ಹತ್ಯೆ ಹೊಣೆಯನ್ನು ಭಾರತದ ಜೈಲಿನಲ್ಲಿರುವ ಲಾರೆನ್ಸ್ ಬಿಷ್ಣೋಯ್ ಹೊತ್ತುಕೊಂಡಿದ್ದಾರೆ.
ದೆಹಲಿ(ಸೆ.21) ಖಲಿಸ್ತಾನಿ ಉಗ್ರರಿಗೆ ಬೆಂಬಲ ನೀಡುತ್ತಿರುವ ಕೆನಾಡ ತಪ್ಪು ಹೆಜ್ಜೆಗಳನ್ನಿಡುತ್ತಿದೆ. ಭಾರತದ ಖಡಕ್ ಎಚ್ಚರಿಕೆಯನ್ನು ಕಡೆಗಣಿಸಿರುವ ಕೆನಾಡ , ಭಾರತದ ವಿರುದ್ಧೇ ತಿರುಗಿ ಬಿದ್ದಿದೆ. ಇದರಿಂದ ಉಭಯ ದೇಶಗಳ ನಡುವೆ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಈ ಬೆಳವಣಿಗೆ ನಡುವೆ ಕೆನಾಡದಲ್ಲಿ ಅಡಗಿದ್ದ ಖಲಿಸ್ತಾನಿ ಉಗ್ರ ಸುಖ್‌ದೋಲ್ ಸಿಂಗ್ ಅಲಿಯಾಸ್ ಸುಖಾ ದುನೆಕೆ ಹತ್ಯೆಯಾಗಿದೆ. ಕೆನಾಡದಲ್ಲಿ ನಡೆದ ಗ್ಯಾಂಗ್‌ವಾರ್‌ನಲ್ಲಿ ಸುಖಾ ದುನೆಕೆ ಹತ್ಯೆಯಾಗಿದೆ. ಇದೀಗ ಮತ್ತೊಂದು ಸ್ಪೋಟಕ ಮಾಹಿತಿ ಬಹಿರಂಗವಾಗಿದೆ. ಸುಖ್‌ದೋಲ್ ಸಿಂಗ್ ಹತ್ಯೆ ಹೊಣೆಯನ್ನು ಭಾರತದ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ಹೊತ್ತುಕೊಂಡಿದ್ದಾನೆ.
ಕೆನಾಡದಲ್ಲಿನ ಖಲಿಸ್ತಾನ ಹೋರಾಟದಲ್ಲಿ ಪ್ರಮುಖವಾಗಿ ಗುರುತಿಸಿಕೊಂಡಿದ್ದ ಉಗ್ರ ಸುಖಾ ದುನೆಕೆ ಭಾರತದ ಮೋಸ್ಟ್ ವಾಟೆಂಡ್ ಉಗ್ರರ ಪಟ್ಟಿಯಲ್ಲಿ ಸ್ಥಾನಪಡೆದಿದ್ದಾನೆ. 2017ರಲ್ಲಿ ಭಾರತದಿಂದ ನಕಲಿ ಪಾಸ್‌ಪೋರ್ಟ್ ಮೂಲಕ ಕೆನಾಡಗೆ ಹಾರಿದ ಸುಖಾ ದುನೆಕೆ ಹಲವು ದಿನಗಳ ಕಾಲ ತಲೆಮರೆಸಿಕೊಂಡಿದ್ದ. ಖಲಿಸ್ತಾನ ಹೋರಾಟದ ಪ್ರಮುಖ ನಾಯಕನಾಗಿ ಗುರುತಿಸಿಕೊಂಡಿದ್ದ ಗ್ಯಾಂಗ್‌ಸ್ಟರ್ ಅರ್ಶದೀಪ್ ದಲ್ಲಾ ಜೊತೆ ಗುರುತಿಸಿಕೊಂಡಿದ್ದ ಸುಖಾ ದುನೆಕೆ ಕಳೆದ ರಾತ್ರಿ ಎರಡು ಗುಂಪಿನ ನಡುವೆ ನಡೆದ ಗ್ಯಾಂಗ್‌ವಾರ್‌ನಲ್ಲಿ ಹತ್ಯೆಯಾಗಿದ್ದಾನೆ.
ಕೆನಾಡದಲ್ಲಿನ ಖಲಿಸ್ತಾನಿ ಉಗ್ರ ಸುಖಾ ದುನೆಕೆ ಹತ್ಯೆ, ಬಿಗಡಾಯಿಸಿದ ಸಂಬಂಧ!
ಸುಖಾ ಹತ್ಯೆ ಹೊಣೆ ಹೊತ್ತುಕೊಂಡಿರುವ ಲಾರೆನ್ಸ್ ಬಿಷ್ಣೋಯ್ ದೊಡ್ಡ ಸಂದೇಶ ಹರಿಬಿಟ್ಟಿದ್ದಾನೆ. ಉಗ್ರ ಸುಖಾ ದುನೆಕೆ ಒರ್ವ ಡ್ರಗ್ ವ್ಯಸನಿ ಹಾಗೂ ಡ್ರಗ್ ಪೆಡ್ಲರ್ ಆಗಿದ್ದ. ಗ್ಯಾಂಗ್‌ಸ್ಟರ್ ಗುರ್ಲಾಲ್ ಬ್ರಾರ್ ಹಾಗೂ ವಿಕ್ಕಿ ಮುದ್ದುಖೇರಾ ಹತ್ಯೆ ಮಾಡಿ ಕೆನಾಡಾಗೆ ಪರಾರಿಯಾಗಿದ್ದಾನೆ. ಆತ ಎಲ್ಲೇ ಹೋದರು ನಮ್ಮ ಹುಡುಗರು ಬಿಡುವುದಿಲ್ಲ. ಇದೀಗ ಸುಖಾ ದುನೆಕೆ ಕತೆ ಮುಗಿದಿದೆ ಎಂದು ಬಿಷ್ಣೋಯ್ ಹೇಳಿದ್ದಾನೆ.
ಲಾರೆನ್ಸ್ ಬಿಷ್ಣೋಯ್ ಸದ್ಯ ಭಾರತದ ಎನ್ಐಎ ವಶದಲ್ಲಿದ್ದಾನೆ. ಅಹಮ್ಮದಾಬಾದ್ ಡ್ರಗ್ ಸ್ಮಗ್ಲಿಂಗ್ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಲಾರೆನ್ಸ್ ಬಿಷ್ಣೋಯ್, ಸಿಧು ಮೂಸೆವಾಲ ಹತ್ಯೆ ಪ್ರಕರಣದಲ್ಲೂ ಆರೋಪಿಯಾಗಿದ್ದಾನೆ. ಹೀಗಾಗಿ ಎನ್ಐಎ ತನಿಖೆ ನಡೆಸುತ್ತಿದೆ. ಇದೀಗ ಸುಖಾ ದುನೆಕೆ ಹತ್ಯೆ ಹೊಣೆಯನ್ನು ಹೊತ್ತಿಕೊಂಡಿರುವ ಕಾರಣ ಭಾರತದ ತಲೆನೋವು ಹೆಚ್ಚಾಗಿದೆ.
ಖಲಿಸ್ತಾನ ಹೋರಾಟ ಬೆಂಬಲಿಸಿದ ಶುಭನೀತ್ ಸಿಂಗ್ ಹಾಡು ಕಿತ್ತೆಸೆದ ಮೋಜ್ ಆ್ಯಪ್!
ಖಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ ಸಾವಿನ ಹಿಂದೆ ಭಾರತದ ಕೈವಾಡವಿದೆ ಅನ್ನೋ ಪ್ರಧಾನಿ ಜಸ್ಟಿನ್ ಟ್ರಡೊ ಹೇಳಿಕೆಯಿಂದ ಭಾರತ ಹಾಗೂ ಜಪಾನ್ ನಡುವಿನ ಕಂದಕ ದೊಡ್ಡದಾಗಿದೆ. ಇದೀಗ ಸುಖಾ ದುನೆಕೆ ಹತ್ಯೆ ಹಿಂದೆ ಬಿಷ್ಣೋಯ್ ಇದ್ದಾನೆ ಅನ್ನೋ ಮಾಹಿತಿ ಕೆನಾಡಾ ಆರೋಪಗಳಿಗೆ ಮತ್ತಷ್ಟು ಪುಷ್ಠಿ ನೀಡುವ ಸಾಧ್ಯತೆಗಳಿವೆ.