ಇಷ್ಟದ ವ್ಯಕ್ತಿಯನ್ನು ಮದುವೆಯಾಗುವ ಹಕ್ಕು ಪ್ರಾಚೀನ ಕಾಲದಿಂದಲೂ ಇದೆ. ರಾಮಾಯಣ, ಮಹಾಭಾರತದಲ್ಲಿ ಸ್ವಯಂವರ ಎಂದು ಉಲ್ಲೇಖಿಸಲಾಗಿದೆ. ಭಾರತದ ಸಂವಿಧಾನದ 21 ನೇ ವಿಧಿ ಈ ಹಕ್ಕನ್ನು ಪ್ರತಿಪಾದಿಸುತ್ತದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಬೆಂಗಳೂರು (ಫೆ.25): ಇಷ್ಟದ ವ್ಯಕ್ತಿಯನ್ನು ಮದುವೆಯಾಗುವ ಹಕ್ಕು ಪ್ರಾಚೀನ ಕಾಲದಿಂದಲೂ ಇದೆ. ರಾಮಾಯಣ, ಮಹಾಭಾರತದಲ್ಲಿ ಸ್ವಯಂವರ ಎಂದು ಉಲ್ಲೇಖಿಸಲಾಗಿದೆ. ಭಾರತದ ಸಂವಿಧಾನದ 21 ನೇ ವಿಧಿ ಈ ಹಕ್ಕನ್ನು ಪ್ರತಿಪಾದಿಸುತ್ತದೆ ಎಂದು ಪಂಜಾಬ್, ಹರಿಯಾಣ ಹೈಕೋರ್ಟ್‌ನ ನ್ಯಾಯಮೂರ್ತಿ ಜಗಮೋಹನ್ ಬನ್ಸಾಲ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ತೇಕ್ ಚಂದ್ ವಿರುದ್ಧದ ವಿವಾಹಕ್ಕೆ ಸಂಬಂಧಿಸಿದ ಪ್ರಕರಣ ಹರಿಯಾಣದ ಹೈಕೋರ್ಟ್‌ನಲ್ಲಿ ವಿಚಾರಣೆಯಲ್ಲಿದೆ. 2019 ರಲ್ಲಿ ತೇಕ್ ಚಂದ್ ಪ್ರೇಮ ವಿವಾಹವಾದರು. ಈ ಸಂಬಂಧ ಬಾಲಕಿಯ ತಂದೆ ತೇಕ್ ಚಂದ್ ವಿರುದ್ಧ ಪೊಲೀಸ್ ದೂರು ದಾಖಲಿಸಿದ್ದರು. ಮದುವೆ ಆಮಿಷ ಒಡ್ಡಿ ಬಾಲಕಿಯನ್ನು ಅಪಹರಿಸಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ದೂರಿನ ಆಧಾರದ ಮೇಲೆ ತೇಕ್ ಚಂದ್ ವಿರುದ್ಧ ಸೆಕ್ಷನ್ 363 ಮತ್ತು ಸೆಕ್ಷನ್ 366ಎ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇದರ ವಿರುದ್ಧ ತೇಕ್ ಚಂದ್ ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದರು. "ನಾನು ಮತ್ತು ಈ ಹುಡುಗಿ ಪ್ರೀತಿಸುತ್ತಿದ್ದೇವೆ ಮತ್ತು ನಾವು ಮದುವೆಯಾಗಿದ್ದೇವೆ" ಎಂದು ತೇಕ್ ಚಂದ್ ಹೈಕೋರ್ಟ್‌ಗೆ ಸಲ್ಲಿಸಿದ ಅರ್ಜಿಯಲ್ಲಿ ತಿಳಿಸಿದ್ದಾರೆ. ಈ ಪ್ರಕರಣದಲ್ಲಿ ತೇಕ್ ಚಂದ್ ಮತ್ತು ಅವರ ಪತ್ನಿ ಭದ್ರತೆ ಕೋರಿದ್ದರು. ಸದ್ಯ ತೇಕ್ ಚಂದ್ ಅವರಿಗೆ ಇಬ್ಬರು ಮಕ್ಕಳಿದ್ದಾರೆ. ನ್ಯಾಯಮೂರ್ತಿ ಬನ್ಸಾಲ್ ಅವರು ತೇಕ್ ಚಂದ್ ಅವರ ಮನವಿಯನ್ನು ಸ್ವೀಕರಿಸಿದರು ಮತ್ತು ಅವರ ವಿರುದ್ಧದ ಪ್ರಕರಣವನ್ನು ರದ್ದುಗೊಳಿಸುವಂತೆ ಪೊಲೀಸ್ ಠಾಣೆಗೆ ಆದೇಶಿಸಿದರು.
ಗುದದ್ವಾರದ ಸಂಭೋಗದ ಬಲವಂತ: ಅಪರಾಧವೆಂದ ಕೋಲ್ಕತ ಹೈಕೋರ್ಟ್
ರಾಜ್ಯಕ್ಕೆ ಮಧ್ಯ ಪ್ರವೇಶಿಸುವ ಹಕ್ಕು ಇಲ್ಲ:
ಈ ವೇಳೆ ಜಾಗೃತ ಪುರುಷ ಮತ್ತು ಮಹಿಳೆ ಸ್ವಯಂಪ್ರೇರಣೆಯಿಂದ ವಿವಾಹವಾಗಿದ್ದಾರೆ. ಅವರ ಮದುವೆಗೆ ಪೋಷಕರು ವಿರೋಧ ವ್ಯಕ್ತಪಡಿಸುತ್ತಾರೆ. ಆದರೆ ಅವರು ಸಂತೋಷದಿಂದ ಬದುಕುತ್ತಿದ್ದಾರೆ, ಅವರ ಜೀವನದಲ್ಲಿ ಹಸ್ತಕ್ಷೇಪ ಮಾಡುವ ಹಕ್ಕು ನ್ಯಾಯಾಲಯ, ಪೊಲೀಸರು ಮತ್ತು ಬೇರೆ ಯಾರಿಗೂ ಇಲ್ಲ ಎಂದು ಬನ್ಸಾಲ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ವೃದ್ಧನ ಶಿಕ್ಷೆಯನ್ನು ಕಡಿತಗೊಳಿಸಿ, ಅಂಗನವಾಡಿಯಲ್ಲಿ ಉಚಿತ ಸೇವೆ ಸಲ್ಲಿಸುವಂತೆ ವಿಭಿನ್ನ ಶಿಕ್ಷೆ ನೀಡಿದ ಹೈಕೋರ್ಟ್!
ದಂಪತಿಗಳು ತಮ್ಮ ಜೀವನವನ್ನು ಅವರು ಬಯಸಿದಂತೆ ಬದುಕುವ ಎಲ್ಲ ಹಕ್ಕನ್ನು ಹೊಂದಿದ್ದಾರೆ. ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಆದರೆ ಕ್ರಿಮಿನಲ್ ಆರೋಪವನ್ನು ತಲೆಯ ಮೇಲೆ ಹೊತ್ತುಕೊಂಡು ಯಾರೂ ನೆಮ್ಮದಿಯಿಂದ ಬದುಕಲು ಸಾಧ್ಯವಿಲ್ಲ. ಕಾನೂನುಬದ್ಧವಾಗಿ ವಿವಾಹವಾದ ದಂಪತಿಗಳ ಜೀವನದಲ್ಲಿ ಮಧ್ಯಪ್ರವೇಶಿಸಲು ರಾಜ್ಯಕ್ಕೆ ಕೂಡ ಯಾವುದೇ ಹಕ್ಕಿಲ್ಲ ಎಂದು ನ್ಯಾಯದೀಶರು ಅಭಿಪ್ರಾಯಪಟ್ಟರು. ಭಾರತೀಯ ಸಂಸ್ಕೃತಿಯಲ್ಲಿ ಮದುವೆ ಎನ್ನುವುದು ಒಪ್ಪಂದವಾಗಲಿ, ರಾಜಿಯಾಗಲಿ ಅಲ್ಲ, ಎರಡು ಕುಟುಂಬಗಳ ನಡುವಿನ ಪವಿತ್ರ ಸಂಬಂಧವಾಗಿದೆ ಎಂದರು.