ಖುಷಿಯಾಗಿರೋದಿಕೆ ಕಾರಣ ಬೇಕಿಲ್ಲ. ಬಂಗಲೆ, ಐಷಾರಾಮಿ ಕಾರು, ಮನಸ್ಸಿಗೆ ಹಿಡಿಸುವ ರುಚಿ ರುಚಿ ಭೋಜನ ಸದಾ ನಿಮ್ಮನ್ನು ಖುಷಿಯಾಗಿಡುತ್ತೆ ಅಂತ ಹೇಳಲಾಗದು. ಹಾಗೆಯೇ ಗುಡಿಸಲಿನ ಮನೆಯಲ್ಲಿ ಬಡತನದ ಬದುಕಿನಲ್ಲಿ ನೆಮ್ಮದಿ ಖುಷಿಯೇ ಇಲ್ಲ ಎಂದು ನೀವು ಊಹೆ ಮಾಡಲಾಗದು. ಖುಷಿ ಎಂಬುದು ನಮ್ಮ ಮನಸ್ಥಿತಿಯ ಮೇಲೆ ಅವಲಂಬಿತವಾಗಿದೆ. ಸಣ್ಣ ಸಣ್ಣ ವಿಚಾರಗಳು ನಮಗೆ ಅಗಾಧವಾದ ಖುಷಿ ನೀಡಬಲ್ಲದು. ಹಾಗೆಯೇ ಇಲ್ಲೊಂದು ವಿಡಿಯೋ ಖುಷಿ ನಮ್ಮ ಮನಸ್ಸಿಗೆ ನಮ್ಮ ಯೋಚನಾ ಲಹರಿಗೆ ಸಂಬಂಧಿಸಿದ್ದು ಎಂಬುದನ್ನು ಸಾಬೀತುಪಡಿಸಿದೆ.
ಮನೆಯೊಂದಕ್ಕೆ ಅಪ್ಪ ಸೆಕೆಂಡ್ ಹ್ಯಾಂಡ್ ಸೈಕಲ್ಲೊಂದನ್ನು ತೆಗೆದುಕೊಂಡು ಬರುತ್ತಾರೆ. ಆದರೆ ಈ ವೇಳೆ ಮಗುವಿನ ಖುಷಿ ಮಾತ್ರ ಮರ್ಸಿಡಿಸ್ ಬೆಂಜ್ ಕಾರು ಮನೆಗೆ ಬಂದಂತಿದೆ. ಅಂದರೆ ಖುಷಿಗೆ ಬೆಲೆ ಕಟ್ಟಲಾಗದು ಅವರವರ ಖುಷಿ ಅವರವರಿಗೆ ಶ್ರೀಮಂತನಿಗೆ ಮರ್ಸಿಡಿಸ್ ಬೆಂಜ್ ಕಾರು ತಂದಾಗ ಆಗುವ ಖುಷಿಗಿಂತಲೂ ಹೆಚ್ಚಿನ ಖುಷಿಯನ್ನು ಈ ಪುಟ್ಟ ಮಗು ಅಪ್ಪ ಸೆಕೆಂಡ್ ಹ್ಯಾಂಡ್ ಸೈಕಲ್ ತಂದಾಗ ವ್ಯಕ್ತಪಡಿಸಿದೆ.
It’s just a second-hand bicycle. Look at the joy on their faces. Their expression says, they have bought a New Mercedes Benz.❤️ pic.twitter.com/e6PUVjLLZW
— Awanish Sharan (@AwanishSharan)ವಿಡಿಯೋದಲ್ಲಿ ಕಾಣಿಸುವಂತೆ ಗುಡಿಸಲೊಂದರ ಮುಂದೆ ಅಪ್ಪ ಮಗಳು ಸೈಕಲ್ಲೊಂದಕ್ಕೆ ಪೂಜೆ ಮಾಡುತ್ತಿರುತ್ತಾರೆ. ಮನೆಗೆ ಬಂದ ಹೊಸ ಅತಿಥಿಯನ್ನು ನೋಡಿದ ಮಗಳು ತುಂಬಾ ಖುಷಿಯಿಂದ ಸಂತಸದಿಂದ ಕುಣಿದು ಕುಪ್ಪಳಿಸಿ ಸಂತಸ ವ್ಯಕ್ತಪಡಿಸುತ್ತಾಳೆ. ಈ ವಿಡಿಯೋವನ್ನು ಭಾರತೀಯ ಆಡಳಿತ ಸೇವೆ ಅಧಿಕಾರಿ ಅವನೀಶ್ ಶರನ್ ಎಂಬುವವರು ತಮ್ಮ ಟ್ವಿಟ್ಟರ್ ಖಾತೆಯಿಂದ ಪೋಸ್ಟ್ ಮಾಡಿದ್ದಾರೆ. ಇದೊಂದು ಸೆಕೆಂಡ್ ಹ್ಯಾಂಡ್ ಸೈಕಲ್, ಅವರ ಮುಖದಲ್ಲಿನ ಖುಷಿ ನೋಡಿ, ಅವರ ಅಭಿವ್ಯಕ್ತಿಯನ್ನು ನೋಡಿದರೆ ಅವರು ಹೊಸ ಮರ್ಸಿಡಿಸ್ ಕಾರು ತಂದರೇನೋ ಎಂಬಂತಿದೆ ಎಂದು ಅವರು ಈ ವಿಡಿಯೋ ಪೋಸ್ಟ್ ಮಾಡುವ ಮೊದಲು ಬರೆದಿದ್ದಾರೆ.
International Dance Day: ಟೆನ್ಶನ್ ಬಿಡಿ..ಡ್ಯಾನ್ಸ್ ಮಾಡಿ, ಆರೋಗ್ಯ ಸಮಸ್ಯೆ ಹತ್ರನೂ ಬರಲ್ಲ
ಪುಟ್ಟು ಮಗುವಿನ ಈ ವಿಡಿಯೋ ವೈರಲ್ ಆಗಿದ್ದು, ಮೂರು ಲಕ್ಷಕ್ಕೂ ಅಧಿಕ ಜನ ಈ ವಿಡಿಯೋವನ್ನು ವೀಕ್ಷಿಸಿದ್ದಾರೆ. ಇದು ಬಡತನದಲ್ಲೂ ಖುಷಿಯಾಗಿರೋದು, ಕಷ್ಟದಲ್ಲೂ ಸುಖ ಕಾಣುವುದು ಹೇಗೆ ಎಂಬುದಕ್ಕೆ ಒಂದು ಪುಟ್ಟ ಉದಾಹರಣೆಯಷ್ಟೇ. ನಮ್ಮಲ್ಲಿ ಬಹುತೇಕರ ಹಿಂದಿನ ತಲೆಮಾರುಗಳು ತಿನ್ನುವ ಊಟಕ್ಕೂ ಕಷ್ಟ ಪಡುತ್ತಿದ್ದಂತಹ ದಿನಗಳನ್ನು ಕಳೆದು ಮುಂದೆ ಬಂದವರು. ನಮ್ಮ ಕಷ್ಟ ನಮ್ಮ ಮಕ್ಕಳಿಗೆ ಬರಬಾರದು ಎಂದು ನಮ್ಮನ್ನು ಸುಖವಾಗಿ ಇಡಲು ಬಯಸಿದವರು ನಮ್ಮ ಪೋಷಕರು. ಅವರು ಹೇಳುವ ಮಾತುಗಳನ್ನು ನಾವು ಕೇಳಿರಬಹುದು. ನಾವು ಶಾಲೆಗೆ ಹೋಗ್ಬೇಕಾದ್ರೆ ಇಷ್ಟೊಂದು ಸೌಕರ್ಯ ಇರಲಿಲ್ಲ, ಇದ್ದದ್ದು ಎರಡೇ ಜೋಡಿ ಡ್ರೆಸ್. ಶಾಲಾ ಯುನಿಫಾರಂ ಬಿಟ್ಟರೆ ಮದುವೆಗೆ ಹೋಗಲಿಕ್ಕೆ ಅಂತಾ ಇನ್ನೊಂದು ಜೊತೆ ಬಟ್ಟೆ. ಆದರೆ ಇಂದು ಸಾವಿರಾರು ಬಟ್ಟೆಗಳಿವೆ ಆದರೂ ಮದುವೆ ಸಮಾರಂಭಗಳಿಗೆ ಹೋಗಬೇಕೆಂದರೆ ಯಾವ ಡ್ರೆಸ್ ಹಾಕಲಿ ಚೆನ್ನಾಗಿರೋ ಒಂದು ಬಟ್ಟೆಯೂ ಇಲ್ಲ ಎಂಬ ಅಳಲು ನಮ್ಮಂತಹ ಅನೇಕರದ್ದು.
Kerala: ದಿನಗೂಲಿ ನೌಕರನ 3 ಮಕ್ಕಳೂ ಎಂಬಿಬಿಎಸ್‌ಗೆ: ಬಡತನದಲ್ಲೂ ಮಕ್ಕಳಿಗೆ ಉನ್ನತ ಶಿಕ್ಷಣ
ಅಂದು ಬಡತನವಿತ್ತು ನಮ್ಮ ಪೋಷಕರು ಹೇಳುವಂತೆ ಆ ಬಡತನದಲ್ಲೂ ಒಂದು ಸುಖವಿತ್ತು. ಹಿರಿಯಕ್ಕನ ಬಟ್ಟೆಯನ್ನು ನಂತರ ಹುಟ್ಟಿದ ತಂಗಿಯರು ಹಾಕಿ ಅದರಲ್ಲೇ ಖುಷಿ ಪಡುವ ಸಮಯವಿತ್ತು. ಆದರೆ ನಮ್ಮದೇ ಬಟ್ಟೆ ಇಂದು ನಮ್ಮಗಿದ್ದರೂ ಅದರಲ್ಲೂ ಸಂತಸವಿಲ್ಲ. ಹೀಗಾಗಿ ಸುಖ ನೆಮ್ಮದಿ ಎಂಬುದು ನಮ್ಮ ಯೋಚನಾ ಲಹಿರಿಯಲ್ಲಿರುವುದು. ಅದನ್ಯಾರೂ ಅಂಗಡಿಯಿಂದ ಕಾಸು ಕೊಟ್ಟು ಪಡೆಯಲಾಗದು. ಹಾಗಾಗಿ ಇದ್ದಿದ್ದರಲ್ಲಿ ಖುಷಿ ಪಡಲು ಪ್ರಯತ್ನಿಸೋಣ ಅಲ್ಲವೇ?