* ಪಂಜಾಬ್‌ನಲ್ಲಿ ರಂಗೇರಿದ ಚುನಾವಣಾ ಕಣ
* ಚುನಾವಣೆ ಸಂದರ್ಭದಲ್ಲಿ ಬಯಲಾಯ್ತು ಶಾಕಿಂಗ್ ವರದಿ
* ರಾಜ್ಯದ ಪ್ರತೀ ಏಳನೇ ವ್ಯಕ್ತಿ ಡ್ರಗ್ಸ್ ವ್ಯಸನಿ
ಚಂಡೀಗಢ(ಮಾ.01): ಡ್ರಗ್ಸ್ ಸಮಸ್ಯೆ ಎದುರಿಸುತ್ತಿರುವ ಪಂಜಾಬ್ ನಲ್ಲಿ ಆಘಾತಕಾರಿ ಅಂಕಿ ಅಂಶಗಳು ಬೆಳಕಿಗೆ ಬಂದಿವೆ. ಇತ್ತೀಚಿನ ಅಧ್ಯಯನದಲ್ಲಿ, ರಾಜ್ಯದಲ್ಲಿ ಪ್ರತಿ 7ನೇ ವ್ಯಕ್ತಿ ಡ್ರಗ್ಸ್ ಸೇವಿಸುತ್ತಿದ್ದಾರೆ ಎಂದು ಕಂಡುಬಂದಿದೆ. ಈ ಸಮಸ್ಯೆಯನ್ನು ನಿವಾರಿಸಲು ಪೂರೈಕೆಯ ವಿರುದ್ಧ ತಂತ್ರವನ್ನು ಮಾಡಲು ತಜ್ಞರು ಒತ್ತು ನೀಡುತ್ತಿದ್ದಾರೆ. ವಿಶೇಷವೆಂದರೆ ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಡ್ರಗ್ಸ್ ವಿಚಾರ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಆದರೆ, ಮಾದಕ ವಸ್ತುಗಳ ಸೇವನೆಯಿಂದ ರಾಜ್ಯದಲ್ಲಿ ಅಮಲು ಮಾತ್ರವಲ್ಲದೆ ಎಚ್ ಐವಿಯಂತಹ ಗಂಭೀರ ಕಾಯಿಲೆಗಳ ಅಪಾಯ ಹೆಚ್ಚಿದೆ.
ಇಂಡಿಯಾ ಟುಡೇ ವರದಿಯ ಪ್ರಕಾರ, ಚಂಡೀಗಢ ಮೂಲದ ದಿ ಪೋಸ್ಟ್ ಗ್ರಾಜುಯೇಟ್ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಎಜುಕೇಶನ್ ಅಂಡ್ ರಿಸರ್ಚ್ (ಪಿಜಿಐಎಂಇಆರ್) ನಡೆಸಿದ ಅಧ್ಯಯನವು ಪಂಜಾಬ್‌ನಲ್ಲಿ ಪ್ರತಿ 7 ನೇ ವ್ಯಕ್ತಿಯೂ ಒಂದಲ್ಲ ಒಂದು ರೀತಿಯ ಡ್ರಗ್ಸ್ ಸೇವಿಸುತ್ತಿದ್ದಾರೆ ಎಂದು ಬಹಿರಂಗಪಡಿಸಿದೆ. ಈ ಅರ್ಥದಲ್ಲಿ, ಇದು ರಾಜ್ಯದ ಜನಸಂಖ್ಯೆಯ ಶೇಕಡಾ 15.4 ರಷ್ಟಿದೆ. ಪಿಜಿಐನ ಕಮ್ಯುನಿಟಿ ಮೆಡಿಸಿನ್ ವಿಭಾಗವು ಈ ಅಧ್ಯಯನವನ್ನು ನಡೆಸಿದೆ.
ನೀವು ಯಾವಾಗಲೂ ಸೇವಿಸುವ ಆಹಾರ ಡಿಮೆನ್ಷಿಯಾಕ್ಕೆ ಕಾರಣವಾದೀತು!
ಕಳೆದ 5 ವರ್ಷಗಳಲ್ಲಿ 30 ಲಕ್ಷಕ್ಕೂ ಹೆಚ್ಚು ಜನರು ಪಂಜಾಬ್‌ನಲ್ಲಿ ಕೆಲವು ರೀತಿಯ ಮಾದಕ ದ್ರವ್ಯಗಳನ್ನು ಸೇವಿಸುತ್ತಿರುವುದು ಕಂಡುಬಂದಿದೆ ಎಂದು ಪ್ರೊಫೆಸರ್ ಜೆಎಸ್ ಠಾಕೂರ್ ವಾಹಿನಿಯೊಂದಿಗಿನ ಸಂವಾದದಲ್ಲಿ ಹೇಳುತ್ತಾರೆ. ರಾಜ್ಯದಲ್ಲಿ 20 ಲಕ್ಷಕ್ಕೂ ಹೆಚ್ಚು ಮಂದಿ ಮದ್ಯ ಸೇವಿಸುತ್ತಿದ್ದಾರೆ. ಅದೇ ರೀತಿ 15 ಲಕ್ಷಕ್ಕೂ ಹೆಚ್ಚು ಮಂದಿ ತಂಬಾಕು ಸೇವನೆ ಮಾಡುತ್ತಾರೆ. ಆದರೆ, 17 ಲಕ್ಷ ಜನರು ಡ್ರಗ್ಸ್ ಬಳಸುತ್ತಿದ್ದಾರೆ. ಹೆಚ್.ಐ.ವಿ (ಶೇ.19.5) ಅಧಿಕವಾಗಿರುವ ರಾಜ್ಯದಲ್ಲಿ ಇಂಜೆಕ್ಷನ್ ಮೂಲಕ ಔಷಧ ಸೇವಿಸುವವರ ಸಂಖ್ಯೆ ಅತಿ ಹೆಚ್ಚಿರುವುದು ಆತಂಕಕಾರಿ ಸಂಗತಿ ಎಂದು ಡಾ.ಠಾಕೂರ್ ಹೇಳಿದರು.
ಪೂರೈಕೆ, ಬೇಡಿಕೆ ಮತ್ತು ನಷ್ಟವನ್ನು ಕಡಿಮೆ ಮಾಡುವ ಕಾರ್ಯತಂತ್ರ ಇರಬೇಕು ಎಂದು ಅವರು ಹೇಳಿದರು. ಸರಬರಾಜು-ಕಡಿತ ತಂತ್ರಗಳು ಎಂದರೆ ಈ ಔಷಧಿಗಳನ್ನು ವಿತರಿಸುವುದು ಮತ್ತು ಪೂರೈಕೆ ಸರಪಳಿಯನ್ನು ಅಡ್ಡಿಪಡಿಸುವುದು ಸೇರಿದಂತೆ ಅಕ್ರಮ ಔಷಧಿಗಳನ್ನು ಗುರಿಯಾಗಿಸುವುದು. ಇದಲ್ಲದೆ, ಅಕ್ರಮ ಔಷಧಿಗಳ ಬಯಕೆಯನ್ನು ಕಡಿಮೆ ಮಾಡುವ ಮೂಲಕ ಬೇಡಿಕೆಯನ್ನು ಕಡಿಮೆ ಮಾಡಲು ಇದು ಸಹಾಯಕವಾಗಬಹುದು ಎಂದಿದ್ದಾರೆ.
ಡ್ರಗ್ಸ್ ಸೇವನೆ ಹೇಗೆ ಮೆದುಳು ಮತ್ತು ನರವ್ಯೂಹ ಕೊಲ್ಲುತ್ತದೆ?
ಈದಿನಗಳಲ್ಲಿ ಗಾಂಜಾ, ಅಫೀಮಿನಂತಹ ಡ್ರಗ್ ಸೇವನೆ ಹೆಚ್ಚಳವಾಗುತ್ತಿದೆ. ಅದರಲ್ಲೂ ಈಗಿನ ಕಾಲದ ಯುವಕರೇ ಇದಕ್ಕೆ ಟಾರ್ಗೆಟ್ .. ಡ್ರಗ್ ಸೇವನೆಯಿಂದ ಆಗುವ ದುಷ್ಟಪರಿಣಾಮಗಳು ನಿಮಗೆ ಗೊತ್ತೇ? ಅದರಲ್ಲೂ ಮೆದುಳಿನ ಮೇಲೆ ಯಾವೆಲ್ಲಾ ಅಲ್ಪಾವಧಿ ಹಾಗೂ ದೀರ್ಘಾವಧಿ ದುಷ್ಪಪರಿಣಾಮ ಬೀರಲಿದೆ ಎಂದು ತಿಳಿದರೆ ಮತ್ತೆಂದೂ ಡ್ರಗ್ ಸೇವನೆಯ ಚಿಂತೆಯೂ ಮಾಡುವುದಿಲ್ಲ. ಭಾರತದಲ್ಲಿ ಡ್ರಗ್ ಸೇವನೆ ಹಾಗೂ ಮಾರಾಟ ಎರಡೂ ಕಾನೂನು ಬಾಹಿರ ಆದಾಗ್ಯೂ, ಕಳ್ಳದಾರಿಯಿಂದ ಡ್ರಗ್ ಸರಬರಾಜಾಗುತ್ತಿದೆ. ಡ್ರಗ್ ಸೇವನೆಯ ಪ್ರತಿ ನಾಲ್ಕು ಜನರಲ್ಲಿ ಒಬ್ಬರು ಸಾವಿಗೀಡಾಗುತ್ತಿದ್ದಾರೆ. ಪ್ರತಿ ವರ್ಷ 7 ದಶಲಕ್ಷಕ್ಕೂ ಹೆಚ್ಚು ಜನರು ಈ ಸೇವನೆಯಿಂದ ಸಾವನ್ನಪ್ಪುತ್ತಿದ್ದಾರೆ ಎಂದು ಅಧ್ಯಯನದಿಂದ ದೃಢಪಟ್ಟಿದೆ.
ಡ್ರಗ್ಸ್ ಪ್ರಕರಣದಲ್ಲಿ ಸಿಕ್ಕಿಬಿದ್ದ ಬಾಲಿವುಡ್ ತಾರೆಗಳು
ಡ್ರಗ್ ಸೇವನೆ ಮೆದುಳಿಗೆ ಮಾರಕ: ಡ್ರಗ್ ಸೇವನೆಯಿಂದ ಮನಸ್ಸು ನಿಯಂತ್ರಣ ಕಳೆದುಕೊಂಡು ಯಾವುದೋ ಪ್ರಪಂಚದಲ್ಲಿ ತೇಲಾಡುವ ಅನುಭವ ನೀಡುತ್ತದೆ. ಇದಕ್ಕೆ ಕಾರಣ ಮೆದುಳಿನಲ್ಲಿ ಡೋಪಮೈನ್ ಎನ್ನುವ ಸಂವಾಹಕ ಬಿಡುಗಡೆಯಾಗುತ್ತದೆ. ಇದರಿಂದ ಮೆದುಳು ತನ್ನ ನಿತ್ಯದ ಕ್ರಿಯೆಯನ್ನು ಮರೆತು, ಸಂತೋಷದತ್ತ ವಾಲುತ್ತದೆ. ಯಾವುದೋ ಲೋಕದಲ್ಲಿ ತೇಲಿದ ಅನುಭವ ಡೋಪಮೈನ್ ಬಿಡುಗಡೆಯಿಂದ ಆಗುತ್ತದೆ. ಹೀಗಾಗಿ ಮೆದುಳಿನ ಇತರೆ ನರಗಳು ಕ್ರಿಯಾಶೀಲತೆ ಕಳೆದುಕೊಳ್ಳುತ್ತಾ, ಡ್ರಗ್ ಸೇವನೆಯನ್ನು ವ್ಯಸವನ್ನಾಗಿಸಲು ಪ್ರೇರೇಪಿಸುತ್ತವೆ. ಕಾಲ ಕ್ರಮೇಣ, ಇದು ನಿತ್ಯದ ಚಟುವಟಿಕೆ ಮೇಲೆ ಪ್ರಭಾವ ಬೀರುತ್ತಾ, ಕತ್ತಲ ಕೂಪಕ್ಕೆ ತಳ್ಳುತ್ತದೆ, ನಂತರ ಅದರಿಂದ ಹೊರ ಬರಬೇಕೆಂದು ಬಯಸಿದರೂ ಸಾಧ್ಯವಾಗುವುದಿಲ್ಲ.
ಅಪಾಯಕಾರಿ ಡ್ರಗ್ಸ್ ಇವು: ಮೆಥಾಂಫೆಟೈನ್ ಡ್ರಗ್ಸ್ ಅತಿ ಹೆಚ್ಚು ಅಪಾಯಕಾರಿ. ಕೊಕೇನ್‌ನಿಂದ ಮೆದುಳಿಗೆ ಹೆಚ್ಚು ಅಪಾಯ ಉಂಟು ಮಾಡುತ್ತದೆ. ಕೊಕೇನ್‌ನ ದೀರ್ಘಾವಧಿಯ ಬಳಕೆಯಿಂದ ಹೃದಯದಲ್ಲಿ ರಕ್ತದೊತ್ತಡ ಹೆಚ್ಚಿಸುವ ಜೊತೆಗೆ, ಮೆದುಳಿನಲ್ಲಿ ಡೋಪಮೈನ್ ರಾಸಾಯನಿಕ ಬಿಡುಗಡೆ ಮಾಡುತ್ತದೆ. ಇದರಿಂದ ಅಂಗಾಂಗ ವೈಫಲ್ಯ ಅಥವಾ ಸ್ಟ್ರೋಕ್ ಹೊಡೆಯುವ ಸಾಧ್ಯತೆ ಹೆಚ್ಚು.
ಗೆಳತಿಯೊಂದಿಗೆ ಸೆಕ್ಸ್.. ಕಾಂಡೋಮ್ ಸಿಕ್ಕಿಲ್ಲವೆಂದು ಗಮ್ ಸವರಿಕೊಂಡು ಪ್ರಾಣ ಬಿಟ್ಟ!
ಡ್ರಗ್ ಸೇವನೆಯ ಅಡ್ಡ ಪರಿಣಾಮವೇನು?: ಡ್ರಗ್ ಸೇವನೆಯಿಂದ ಮೊದಲು ದೈಹಿಕ ಹಾಗೂ ಮಾನಸಿಕ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತಿದೆ.
* ಮಾನಸಿಕ ಸ್ಥಿಮಿತ ಕಳೆದುಕೊಳ್ಳುವುದು
* ಕ್ರಿಯಾಶೀಲತೆ ಕಳೆದುಕೊಳ್ಳುವುದು
* ರೋಗನಿರೋಧಕ ಶಕ್ತಿ ಕಡಿಮೆಯಾಗುವುದು
* ವಾಕರಿಕೆ, ಕಿಬ್ಬೊಟ್ಟೆ ನೋವು, ಕಡಿಮೆ ಹಸಿವು, ತೂಕ ನಷ್ಟ
* ಮೆದುಳಿನ ನರಗಳು ದುರ್ಬಲವಾಗುವುದು, ಪಾರ್ಶ್ವವಾಯು ಹೊಡೆಯುವ ಸಾಧ್ಯತೆ
* ಹೃದಯದಲ್ಲಿ ಬೊಜ್ಜು ಬೆಳವಣಿಗೆ ಹಾಗೂ ರಕ್ತನಾಳಗಳು ಸರಾಗವಾಗಿ ರಕ್ತ ಪಂಪ್ ಮಾಡದೇ ಇರುವುದು
* ಹೆಪಟೋಸೆಲ್ಯುಲಾರ್ ಒತ್ತಡದಿಂದ ಯಕೃತ್ತಿನ ಹಾನಿ ಅಥವಾ ವೈಫಲ್ಯ
* ನೆನಪಿನ ಶಕ್ತಿ ಕಳೆದುಕೊಳ್ಳುವುದು
* ಪುರುಷರಲ್ಲಿ ಸ್ತನ ಬೆಳವಣಿಗೆ, ದೇಹದ ಉಷ್ಣತೆಯಲ್ಲಿ ಏರಿಕೆ.
ಡ್ರಗ್ ವ್ಯಸನ ನಿಯಂತ್ರಿಸಲು ಚಿಕಿತ್ಸೆ: ಡ್ರಗ್ ಸೇವನೆಯಿಂದ ಈಗಾಗಲೇ ಮೆದುಳಿನ ಮೇಲೆ ಪರಿಣಾಮ ಬೀರಿದ್ದರೆ, ಅಂಥವರಿಗೆ ಚಿಕಿತ್ಸೆ ಪಡೆಯುವುದು ಅವಶ್ಯಕ. ಬಯೋಫೀಡ್ ಥೆರಪಿ ಮೂಲಕ ಈಗಾಗಲೇ ಜೆಡ್ಡು ಹಿಡಿದಿರುವ ನರಗಳನ್ನು ಸ್ಥಿರಗೊಳಿಸಬಹುದು. ಈ ಥೆರಪಿಯಿಂದ ಕಾಲಕ್ರಮೇಣ ಮೆದುಳನ್ನು ಮೊದಲಿನ ರೀತಿಯಲ್ಲಿ ಕ್ರಿಯಾಶೀಲತೆಗೆ ತರಲು ಸಹಕಾರಿಯಾಗುತ್ತದೆ. ಮೆದುಳಿನ ಬಯೋ ಮತ್ತು ಯೂರೋ ಕ್ರಿಯೆಗಳು ಸಾಮಾನ್ಯ ಸ್ಥಿತಿಗೆ ಮರಳುತ್ತದೆ. ಒತೆಗೆ, ಧ್ಯಾನ, ಧನಾತ್ಮಕ ವಿಷಯಗಳ ಮೂಲಕ ಅವನ್ನು ಮೊದಲಿನಂತೆ ಮಾಡಲಾಗುತ್ತದೆ. ಈ ಚಿಕಿತ್ಸೆ ನಿರಂತರವಾಗಿ ಸಾಗಬೇಕು, ಇಲ್ಲವಾದರೆ, ಆ ವ್ಯಕ್ತಿ ಮತ್ತದೇ ವ್ಯಸನಕ್ಕೆ ಒಳಗಾಗುವ ಸಾಧ್ಯತೆ ಹೆಚ್ಚು.