ಎಕ್ಸ್‌ರೇ ನೋಡಿ ಸೋಂಕು ಪತ್ತೆ: ಸಿ.ಟಿ.ಸ್ಕ್ಯಾನ್‌ಗಿಂತ ಅಗ್ಗ, ಹೆಚ್ಚು ಪರಿಣಾಮಕಾರಿ!

By Kannadaprabha News  |  First Published May 12, 2021, 7:42 AM IST

* ಡಿಆರ್‌ಡಿಒದಿಂದ ಹೊಸ ತಂತ್ರಜ್ಞಾನ ಅಭಿವೃದ್ಧಿ

* ಕೇವಲ ಎಕ್ಸ್‌ರೇ ನೋಡಿ ಕೋವಿಡ್‌ ಸೋಂಕು ಪತ್ತೆ

* ಸಿ.ಟಿ.ಸ್ಕ್ಯಾನ್‌ಗಿಂತ ಅಗ್ಗ, ಹೆಚ್ಚು ಪರಿಣಾಮಕಾರಿ!


ನವದೆಹಲಿ(ಮೇ.12): ಕೊರೋನಾ ಸೋಂಕಿತರಿಗೆ ರಾಮಬಾಣ ಎನ್ನಲಾಗುತ್ತಿರುವ 2-ಜಿಡಿ ಔಷಧವನ್ನು ಅಭಿವೃದ್ಧಿಪಡಿಸಿರುವ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ), ಇದೀಗ ಎದೆ ಭಾಗದ ಎಕ್ಸ್‌ರೇ ಶೀಟ್‌ ಅನ್ನು ಕೃತಕ ಬುದ್ಧಿಮತ್ತೆ (ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌) ತಂತ್ರಜ್ಞಾನಕ್ಕೆ ಒಳಪಡಿಸಿ ಕೊರೋನಾ ಸೋಂಕು ಪತ್ತೆ ಮಾಡುವ ತಂತ್ರಜ್ಞಾನವೊಂದನ್ನು ಅಭಿವೃದ್ಧಿಪಡಿಸಿದೆ. ಇದಕ್ಕೆ ಅಟ್‌ಮ್ಯಾನ್‌ ಐ ಎಂದು ಹೆಸರಿಡಲಾಗಿದೆ.

ಇದು ಗ್ರಾಮೀಣ ಭಾಗದಲ್ಲಿ ಸಿ.ಟಿ.ಸ್ಕ್ಯಾನ್‌ ವ್ಯವಸ್ಥೆ ಇಲ್ಲದೆ ತೊಂದರೆ ಎದುರಿಸುತ್ತಿರುವ ರೋಗಿಗಳಿಗೆ ಭಾರೀ ಪ್ರಮಾಣದಲ್ಲಿ ನೆರವಾಗಲಿದೆ. ಜೊತೆಗೆ ಕೋವಿಡ್‌ ಹೆಚ್ಚಾದ ಬಳಿಕ ರೋಗ ಪತ್ತೆ ಕೇಂದ್ರಗಳ ಮೇಲೆ ಹೆಚ್ಚಿರುವ ಒತ್ತಡವನ್ನು ಕಡಿಮೆ ಮಾಡಲಿದೆ. ಸಿ.ಟಿ.ಸ್ಕ್ಯಾನ್‌ಗೆ ಹೋಲಿಸಿದರೆ ಇದು ಅಗ್ಗ ಮತ್ತು ಹೆಚ್ಚು ಪರಿಣಾಮಕಾರಿ ಎಂದು ಸಾಬೀತಾಗಿದೆ. ಅಲ್ಲದೆ ರೇಡಿಯೋಲಾಜಿಸ್ಟ್‌ಗಳ ಮೇಲಿನ ಹೊರೆಯನ್ನೂ ಕಡಿಮೆ ಮಾಡಲಿದೆ.

Latest Videos

undefined

"

ಡಿಆರ್‌ಡಿಒದ ಸೆಂಟರ್‌ ಫಾರ್‌ ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌ ಆ್ಯಂಡ್‌ ರೋಬಾಟಿಕ್ಸ್‌ ವಿಭಾಗವು 5ಸಿ ನೆಟ್‌ವರ್ಕ್ ಮತ್ತು ಎಚ್‌ಸಿಜಿ ಅಕಾಡೆಮಿಕ್ಸ್‌ ಸಹಯೋಗದಲ್ಲಿ ಈ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದೆ.

ಡಿಆರ್‌ಡಿಒ ಕೋವಿಡ್‌ ಔಷಧಿ ಯಾವಾಗ ಬಿಡುಗಡೆ? ಸಿಕ್ತು ಗುಡ್‌ ನ್ಯೂಸ್‌!!

ಈ ತಂತ್ರಜ್ಞಾನವನ್ನು ಬಳಸಿಕೊಂಡು, ಯಾವುದೇ ವ್ಯಕ್ತಿಯ ಎದೆ ಭಾಗದ ಎಕ್ಸ್‌ರೇ ಶೀಟ್‌ ಅನ್ನು ಅಧ್ಯಯನ ಮಾಡಿ ಕೆಲವೇ ಸೆಕೆಂಡರ್‌ಗಳಲ್ಲಿ, ವ್ಯಕ್ತಿಯ ಶ್ವಾಸಕೋಶವು ಕೊರೋನಾ ವೈರಸ್‌ ದಾಳಿಗೆ ತುತ್ತಾಗಿದೆಯೇ ಇಲ್ಲವೇ ಎಂಬುದನ್ನು ಪತ್ತೆಹಚ್ಚುತ್ತದೆ. ಅಧ್ಯಯನದ ವೇಳೆ ತಂತ್ರಜ್ಞಾನವು ಶೇ.96.73ರಷ್ಟುಯಶಸ್ವಿ ಎಂದು ಸಾಬೀತಾಗಿದೆ.

ಉಳಿದಂತೆ 8 ಜಿಲ್ಲೆಯಲ್ಲಿ ಎರಡಂಕಿಯಲ್ಲಿ ಕೋವಿಡ್‌ ಸಾವು ವರದಿಯಾಗಿದೆ. ರಾಜ್ಯದಲ್ಲಿ ಕಳೆದ ನಾಲ್ಕು ದಿನಗಳಿಂದ ಶೇ.1 ಮೀರಿದ ಸಾವಿನ ದರ ದಾಖಲಾಗುತ್ತಿದೆ.

ಕೇಂದ್ರ, ರಾಜ್ಯ ಸರ್ಕಾರಕ್ಕೆ ಆತಂಕ ಕೊಟ್ಟಿದೆ 533 ಜಿಲ್ಲೆಗಳ ವರದಿ!

ಈ ಮಧ್ಯೆ ಮೇ 2ರ ಬಳಿಕ ಹೊಸ ಸೋಂಕಿನ ಪ್ರಕರಣ 40 ಸಾವಿರದ ಗಡಿಯೊಳಗೆ ಬಂದಿದೆ. ಆದರೆ ಕೋವಿಡ್‌ ಪರೀಕ್ಷೆಯ ಪ್ರಮಾಣ ಕೂಡ ಸುಮಾರು 30 ರಿಂದ 40 ಸಾವಿರದಷ್ಟುಕಡಿಮೆ ಆಗಿದೆ. ಸೋಮವಾರ 1.24 ಲಕ್ಷ ಕೋವಿಡ್‌ ಪರೀಕ್ಷೆ ನಡೆದಿದೆ. ರಾಜ್ಯದಲ್ಲಿ ಈವರೆಗೆ 19.73 ಲಕ್ಷ ಕೋವಿಡ್‌ ಪ್ರಕರಣ ದಾಖಲಾಗಿದ್ದು 13.83 ಲಕ್ಷ ಮಂದಿ ಗುಣಮುಖರಾಗಿದ್ದಾರೆ. ಒಟ್ಟು 19,372 ಮಂದಿ ಮರಣವನ್ನಪ್ಪಿದ್ದಾರೆ. ಈವರೆಗೆ ಒಟ್ಟು 2.71 ಕೋಟಿ ಕೋವಿಡ್‌ ಪರೀಕ್ಷೆ ನಡೆದಿದೆ.

"

5ಸಿ ನೆಟ್‌ವರ್ಕ್ ದೇಶಾದ್ಯಂತ 1000ಕ್ಕೂ ಹೆಚ್ಚು ಆಸ್ಪತ್ರೆಗಳ ಜೊತೆ ಸಂಪರ್ಕ ಹೊಂದಿದ್ದು, ಅಲ್ಲಿ ಹೊಸ ಸೇವೆ ಲಭ್ಯವಾಗುವ ನಿರೀಕ್ಷೆ ಇದೆ. ಜೊತೆಗೆ ಶೀಘ್ರವೇ ತನ್ನ ಜಾಲವನ್ನು ಇನ್ನಷ್ಟುಸರ್ಕಾರಿ ಮತ್ತು ಖಾಸಗಿ ಆಸ್ಪತೆಗೆ ವಿಸ್ತರಿಸುವುದಾಗಿ ಅದು ಹೇಳಿಕೊಂಡಿದೆ.

ಪರೀಕ್ಷೆ ಹೇಗೆ?

ವ್ಯಕ್ತಿಯ ಎದೆ ಭಾಗದ ಎಕ್ಸ್‌ ರೇ ತೆಗೆದು, ಅದನ್ನು ಕೃತಕ ಬುದ್ಧಿಮತ್ತೆ ಮೂಲಕ ಪರೀಕ್ಷಿಸಲಾಗುತ್ತದೆ. ಆಗ ಕೆಲವೇ ಸೆಕೆಂಡ್‌ನಲ್ಲಿ ಕೊರೋನಾ ಸೋಂಕು ಇದೆಯೇ ಇಲ್ಲವೇ ಎಂಬುದು ಶೇ.97ರಷ್ಟುಖಚಿತವಾಗಿ ತಿಳಿಯುತ್ತದೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

click me!