ಕೊರೋನಾ ಬಗ್ಗೆ ಮಾಧ್ಯಮ ಹೆಚ್ಚು ರಂಜನೆ ಮಾಡುತ್ತಿವೆ ಎನ್ನಲಾಗುತ್ತಿದೆ. ಆದರೆ ನೈಜ ಪರಿಸ್ಥಿತಿಯೇ ಅತ್ಯಂತ ಭಯಾನಕವಾಗಿದೆ. ಇದರ ನಿರ್ಲಕ್ಷ್ಯ ಅತ್ಯಂತ ಹೆಚ್ಚು ಬೆಲೆ ತೆರಬೇಕಾಗುತ್ತದೆ.
ರೋಮ್ (ಮಾ.16): ‘ಕೊರೋನಾ ವೈರಾಣು ಬಗ್ಗೆ ಮಾಧ್ಯಮಗಳು ಅತಿರಂಜಿತ ವರದಿ ಮಾಡುತ್ತಿವೆ’ ಎಂಬುದು ಹಲವರ ವಾದ. ‘ಏನೂ ಆಗೇ ಇಲ್ಲ, ಮುಂದೆ ಆಗೋದೂ ಇಲ್ಲ’ ಎಂಬಂತೆ ಸರ್ಕಾರದ ಸಲಹೆಗಳನ್ನು ಕಡೆಗಣಿಸಿ ಆರಾಮವಾಗಿ ಹೊರಗಡೆ ಸುತ್ತಾಡುವುದು, ಹೋಟೆಲ್, ಬಾರ್, ಸಭೆ- ಸಮಾರಂಭ ಗಳಿಗೆ ನಿರಾತಂಕವಾಗಿ ಹೋಗಿ ನಿರ್ಲಕ್ಷ್ಯದ ಪರ ಮಾವಧಿ ತೋರುತ್ತಿದ್ದಾರೆ.
ಆದರೆ ಇಂಥದ್ದೇ ಉಡಾಫೆ ಮಾಡಿ ಇಟಲಿ ಹೇಗೆ ಭಾರಿ ಬೆಲೆ ತೆತ್ತಿದೆ ಎಂಬು ದನ್ನು ವಿವರಿಸುವ ಉದ್ದೇಶದಿಂದ, ಕೊರೋನಾ ತಾರಕಕ್ಕೇರಿರುವ ಇಟಲಿಯಲ್ಲಿ ವ್ಯಕ್ತಿಯೊಬ್ಬರು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ಈ ಅನುಭವ ಕೇಳಿದರೆ ಕೊರೋನಾದ ನೈಜ ‘ತಾಂಡವ ನೃತ್ಯ’ದ ಅರಿವಾಗುತ್ತದೆ.
ಕೊರೋನಾ ತಡೆಯಲು ಸಾಕಷ್ಟು ಮುಂಜಾಗರೂಕತಾ ಕ್ರಮಗಳನ್ನು ಜರುಗಿಸುವುದು ಅಗತ್ಯವಿದೆ ಎಂದು ಈ ಕೆಳಗಿನ ಅನುಭವವನನ್ನು ಅವರದ್ದೇ ಮಾತಿನಲ್ಲಿ ಓದಿದರೆ ತಿಳಿಯುತ್ತದೆ. ಈ ವ್ಯಕ್ತಿಯ ಅನುಭವಗಳನ್ನು ಟ್ವೀಟರ್‌ನಲ್ಲಿ ಯಾನೋ ಎಂಬುವರು ಹಂಚಿಕೊಂಡಿದ್ದಾರೆ. ಇಟಲಿ ವ್ಯಕ್ತಿಯ ಅನುಭವ ಹೀಗಿದೆ... ಕೊರೋನಾ ವೈರಸ್‌ನಿಂದಾಗಿ ಇಟಲಿ ಇಂದು ವಿಶ್ವದಿಂದಲೇ ತನ್ನನ್ನು ತಾನು ಪ್ರತ್ಯೇಕಿಸಿಕೊಂಡು, ರೋಗ ನಿಯಂತ್ರಣಕ್ಕೆ ಹೋರಾಡುತ್ತಿದೆ.
ಕಲಬುರಗಿಯಲ್ಲಿ ಮತ್ತೊಂದು ಕೊರೋನಾ: ಜನತೆಗೆ ಶ್ರೀರಾಮುಲು ವಿಶೇಷ ಮನವಿ...
ಇಟಲಿಯಲ್ಲಿ ಪರಿಸ್ಥಿತಿ ತುಂಬಾ ಗಂಭೀರವಾಗಿದೆ. ವಿಶ್ವದ ಇತರ ಭಾಗವು ತನಗೇನೂ ಆಗಲ್ಲ ಬಿಡು ಎಂಬಂತೆ ವರ್ತಿಸುತ್ತಿದೆ. ನಾವು ಕೂಡ ನಿಮ್ಮಂತೆಯೇ ಭಾವಿಸಿ ಸುಮ್ಮನೇ ಕೂತಿದ್ದೆವು. ಆದರೆ ನಮ್ಮಲ್ಲಿ ಹೇಗೆ ರೋಗ ಉಲ್ಬಣಿಸಿತು ಎಂಬುದನ್ನು ಹಂತ ಹಂತವಾಗಿ ವಿವರಿಸುವೆ. ಹಂತ 1 ನಮ್ಮಲ್ಲೂ ಮೊದಲ ಹಂತದಲ್ಲಿ ಕೊರೋ ನಾ ಕಾಣಿಸಿಕೊಂಡಿತು. ಆಗ ಅನೇಕರು ಇದು ಒಂದು ಸಾಮಾನ್ಯ ಜ್ವರ ಬಿಡಿ. ನಾನೇನೂ 75 ವರ್ಷಕ್ಕಿಂತ ವಯಸ್ಸಾದವನಲ್ಲ.
ನನಗೇನಾಗುತ್ತೆ? ನಾನು ಸುರಕ್ಷಿತ. ಎಲ್ಲರೂ ಉತ್ಪ್ರೇಕ್ಷೆ ಮಾಡುತ್ತಿದ್ದಾರೆ. ಸಾಮಾನ್ಯನಂತೆ ನಾನು ಜೀವಿಸುವೆ ಎಂದು ಉಡಾಫೆ ಮಾಡಿದರು. ‘ಟಾಯ್ಲೆಟ್ ಪೇಪರ್, ಮಾಸ್ಕ್ ಏಕೆ ಬೇಕು’ ಎಂದು ಕೇಳಿದರು. ಹಂತ ೨ ಕೊರೋನಾ ಪ್ರಕರಣಗಳು ಹೆಚ್ಚಾಗತೊಡಗಿದವು. ಫೆಬ್ರವರಿ 22 ರ ಸುಮಾರಿಗೆ ಸೋಂಕು ಪ್ರಕರಣಗಳು ಹೆಚ್ಚಾದಾಗ 1- 2 ನಗರಗಳನ್ನು ‘ಕೆಂಪು ವಲಯ’ಗಳೆಂದು ಘೋಷಿಸಲಾಯಿತು. ಆದರೂ ಹೆಚ್ಚು ಆತಂಕ ಬೇಡ ಎಂದು ತಿಳಿಸಲಾ ಯಿತು. ಕೆಲವರು ಸಾವನ್ನಪ್ಪಿದರೂ, ‘ಅವರು ವಯಸ್ಸಾ ದವರು. ಮಾಧ್ಯಮ ಅತಿರಂಜಿತವಾಗಿ ವರದಿ ಮಾಡುತ್ತಿದೆ’ ಎಂದು ಭಾವಿಸಲಾಯಿತು. ಜನರು ಸಾಮಾನ್ಯ ಜೀವನ ಮುಂದುವರಿಸಿದರು. ಹೊರಗೆ ಹೋಗುವುದನ್ನು, ಸ್ನೇಹಿತರ ಭೇಟಿಯನ್ನು ನಿಲ್ಲಸಲ್ಲ ಎಂದು ಜನ ಹೇಳಿದರು.
ಹಂತ ೩ ಕೊರೋನಾ ಪ್ರಕರಣಗಳು ಅಂದುಕೊಂಡಿದ್ದಕ್ಕಿಂತ ಹೆಚ್ಚಾದವು. ಒಂದೇ ದಿನದಲ್ಲಿ ದುಪ್ಪಟ್ಟಾದವು. ಸಾವು ಕೂಡ ಅಧಿಕವಾಗತೊಡಗಿದವು. ಹೆಚ್ಚು ಪ್ರಕರಣಗಳು ದಾಖಲಾದ 4 ವಲಯಗಳನ್ನು ಕೆಂಪು ವಲಯ ಎಂದು ಘೋಷಿಸಿ ಅವನ್ನು ದೇಶದ ಇತರ ಭಾಗಗಳ ಸಂಪರ್ಕದಿಂದ ಪ್ರತ್ಯೇಕವಾಗಿಡಲಾಯಿತು. ಶೇ.25 ರಷ್ಟು ಇಟಲಿಯು ದೇಶದ ಇತರ ಭಾಗಗಳಿಂದ ಪ್ರತ್ಯೇಕಗೊಂಡಿತು. ಶಾಲೆ, ಕಾಲೇಜು ಗಳು ಬಂದ್ ಆದವು. ಆದರೆ ಬಾರ್, ಕಚೇರಿಗಳು, ರೆಸ್ಟೋರೆಂಟ್‌ಗಳು ತೆರೆದೇ ಇದ್ದವು. ಕೆಂಪು ವಲಯ ದಲ್ಲಿನ ಸುಮಾರು 10 ಸಾವಿರ ಜನರು ತಮ್ಮ ಹುಟ್ಟೂರುಗಳಿಗೆ ‘ಪರಾರಿ’ಯಾದರು. ಆದರೆ ದೇಶದ ಇತರ ಶೇ.75 ಭಾಗವು ತನಗೇನೂ ಆಗೇ ಇಲ್ಲ ಎಂಬಂತೆ ಇತ್ತು. ಪರಿಸ್ಥಿತಿಯ ಗಂಭೀರತೆ ಅರ್ಥ ಮಾಡಿಕೊಳ್ಳಲಿಲ್ಲ. ಸ್ವಚ್ಛತೆ ಬಗ್ಗೆ, ಜನರು ಹೊರಹೋಗಬಾರದು ಎಂಬ ಕೋರಿಕೆಗಳಿಗೆ ಜನರು ಬೆಲೆ ಕೊಡಲಿಲ್ಲ.
ಹಂತ ೪ ವೈರಸ್ ಕಾಡ್ಗಿಚ್ಚಿನಂತೆ ವ್ಯಾಪಿಸಿ ಪ್ರಕರಣ ಗಳ ಸಂಖ್ಯೆ ಊಹೆಗೂ ನಿಲುಕದಷ್ಟು ಹೆಚ್ಚಿತು. ಒಂದು ತಿಂಗಳು ಶಾಲೆ ಹಾಗೂ ವಿವಿಗಳಿಗೆ ರಜೆ ಸಾರಲಾಯಿತು. ರಾಷ್ಟ್ರೀಯ ಆರೋಗ್ಯ ತುರ್ತುಸ್ಥಿತಿ ಘೋಷಿಸಲಾಯಿತು. ಆಸ್ಪತ್ರೆಯ ಇತರ ಭಾಗಗಳನ್ನು ಕೊರೋನಾ ಪೀಡಿತರಿಗೆ ಬಿಟ್ಟುಕೊಡಲು ಸೂಚಿಸಲಾ ಯಿತು. ನರ್ಸ್‌ಗಳು, ವೈದ್ಯರ ಸಂಖ್ಯೆ ಸಾಲದಾ ಯಿತು. ನಿವೃತ್ತ ವೈದ್ಯರನ್ನು ಮರಳಿ ಕೆಲಸಕ್ಕೆ ತರಲಾ ಯಿತು. ಇನ್ನೂ ವೈದ್ಯಕೀಯ ಕಾಲೇಜುಗಳಲ್ಲಿ ಕಲಿ ಯುತ್ತಿರುವವರನ್ನೂ ಕೆಲಸಕ್ಕೆ ನಿಯೋಜಿಸಲಾಯಿತು.
ಯಾವುದೇ ಶಿಫ್ಟ್‌ಗಳಿಲ್ಲದೇ ವೈದ್ಯರು, ನರ್ಸ್‌ಗಳು 24 ತಾಸೂ ಕೆಲಸ ಮಾಡಲಾರಂಭಿಸಿದರು. ಅವರಲ್ಲೂ ಅನೇಕರಿಗೆ ಸೋಂಕು ತಾಗಿತು. ಆಸ್ಪತ್ರೆಗಳಲ್ಲಿ ಹಾಸಿಗೆಗಳ ಸಂಖ್ಯೆ ಸಾಲದಾಯಿತು. ಕೊರೋನಾ ರೋಗಿಗಳನ್ನಷ್ಟೇ ಆಸ್ಪತ್ರೆಗೆ ದಾಖಲಿಸಿಕೊಳ್ಳುವುದು, ಇತರ ವ್ಯಾಧಿಗಳ ರೋಗಿಗಳನ್ನು ದಾಖಲಿಸಿಕೊಳ್ಳದೇ ಇರುವುದು ಆರಂಭವಾಯಿತು. ಆಸ್ಪತ್ರೆಯಲ್ಲಿ ಜಾಗ ಸಿಗದ ಕಾರಣ ಚಿಕಿತ್ಸೆ ದೊರಕದೆ ಅನೇಕರು ಸಾವನ್ನಪ್ಪಿದರು. ನನ್ನ ವೈದ್ಯನೊಬ್ಬ ನನಗೆ ಫೋನು ಮಾಡಿ, ‘ಚಿಕಿತ್ಸೆ ದೊರಕದೆ ನನ್ನ ಮುಂದೆ 3 ಜನ ಸತ್ತರು’ ಎಂದು ಗೋಳಿಟ್ಟ. ಜನರನ್ನು ಬದುಕಿಸಲಾಗದೇ ನರ್ಸ್‌ಗಳು ಅಳುತ್ತಿದ್ದಾರೆ. ಚಿಕಿತ್ಸೆ ದೊರಕದೆ ನನ್ನ ಸ್ನೇಹಿತನ ಬಂಧುವೊಬ್ಬರು ನಿನ್ನೆ ಅಸುನೀಗಿದರು. ವ್ಯವಸ್ಥೆ ಕುಸಿದುಬೀಳತೊಡಗಿದೆ.
ನನ್ನ ಅಂತಿಮ ಮಾತು: ಈಗ ಮಾರ್ಚ್12 ನಾನು ಈವರೆಗೆ ಹೇಳಿದ್ದೆಲ್ಲ ಘಟಿಸಿದ್ದು ಕೇವಲ 2 ವಾರಗಳಲ್ಲಿ. ನಾನು 3 ನೇ ಹಂತದಲ್ಲಿ ವಿವರಿಸಿದ್ದು ಕಳೆದ 5 ದಿನಗಳಲ್ಲಿ ಆಗಿ ಹೋಗಿದೆ. ಚೀನಾ, ಇಟಲಿ ಹಾಗೂ ಕೊರಿಯಾ ಹೊರತುಪಡಿಸಿದರೆ ಮಿಕ್ಕ ದೇಶಗಳು ಈ ಹಂತಗಳನ್ನು ಪ್ರವೇಶಿಸುತ್ತಿವೆ. ಮುಂದೇನಾಗುತ್ತದೆ ಎಂಬುದು ಆ ದೇಶಗಳಿಗೆ ಅರಿವಿಲ್ಲ. ಏಕೆಂದರೆ 2 ವಾರದ ಹಿಂದೆ ನಾನೇ ಇಷ್ಟು ಪರಿಸ್ಥಿತಿ ಹದಗೆಡುತ್ತದೆ ಎಂದು ಊಹಿಸಿರಲಿಲ್ಲ. ಆದರೆ ಇಂದು ಆಗಿ ಹೋಗಿದೆ. ಇತರ ದೇಶಗಳು ‘ನಮ್ಮಲ್ಲೇನೂ ಈ ರೀತಿ ಆಗಲ್ಲ ಬಿಡಿ’ ಎಂಬ ಭಾವನೆಯಲ್ಲಿವೆ. ಮುಂಜಾಗರೂಕತಾ ಕ್ರಮ ಕೈಗೊಳ್ಳುತ್ತಿಲ್ಲ ಎಂಬುದನ್ನು ನೋಡಿ ದುಃ ಖವಾಗುತ್ತಿದೆ. ಆದರೆ ನಾನು ಇಂದು ಬರೆದಿದ್ದನ್ನು ನೋಡಿಯಾದರೂ ಜಾಗೃತರಾಗಿ. ನಿಮ್ಮ ದೇಶದ ಜನರ ಒಳಿತಿಗೆ ಕ್ರಮ ಕೈಗೊಳ್ಳಿ.