ಭಾರತದ ಭಯೋತ್ಪಾದಕರ ಪಟ್ಟಿಯಲ್ಲಿದ್ದ ಹರ್ದೀಪ್ ಸಿಂಗ್ ನಿಜ್ಜರ್ ಸಾವಿಗೆ ಕೆನಡಾ ಹೌಸ ಆಫ್ ಕಾಮನ್ಸ್ ಪಾರ್ಲಿಮೆಂಟ್‌ನಲ್ಲಿ ಒಂದು ನಿಮಿಷಗಳ ಕಾಲ ಮೌನಾಚರಣೆ ಶ್ರದ್ಧಾಂಜಲಿ ಸಲ್ಲಿಸಿ ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದೆ.
ವರದಿ - ಪ್ರಕಾಶಗೌಡ ಪಾಟೀಲ್, ಏಷ್ಯಾನೆಟ್ ಸುವರ್ಣ ನ್ಯೂಸ್
ದೆಹಲಿ (ಜೂ.22): ಭಾರತ ವಿರೋಧಿ ನೀತಿಗಳಿಂದಲೇ ಸುದ್ದಿಯಲ್ಲಿದ್ದ ಕೆನಡಾ.. ಮತ್ತೊಂದು ಎಡವಟ್ಟು ಮಾಡಿಕೊಂಡಿದೆ.. ಭಾರತದ ಭಯೋತ್ಪಾದಕರ ಪಟ್ಟಿಯಲ್ಲಿದ್ದ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಗೆ ಒಂದು ವರ್ಷವಾಗಿದೆ. ಅದಕ್ಕೆ ಕೆನಡಾ ಹೌಸ ಆಫ್ ಕಾಮನ್ಸ್ ಪಾರ್ಲಿಮೆಂಟ್‌ನಲ್ಲಿ ಒಂದು ನಿಮಿಷಗಳ ಕಾಲ ಮೌನಾಚರಣೆ ಸಲ್ಲಿಸಲಾಗಿದೆ. ಇದು ಭಾರತೀಯರ ಕೋಪಕ್ಕೆ ಕಾರಣವಾಗಿದೆ.
ನಿಜ್ಜರ್ ಸಾವಿಗೆ ವರ್ಷವಾದ ಹಿನ್ನೆಲೆ ಕೆನಡಾ ಪಾರ್ಲಿಮೆಂಟಿನ ಸದಸ್ಯರೆಲ್ಲರೂ ಸೇರಿಕೊಂಡು ಮೌನಾಚರಣೆ ಮಾಡಿದ್ರು. ಇದಕ್ಕೆ ಭಾರತದ ರಾಯಭಾರ ಕಛೇರಿ ಟ್ವೀಟ್ ತಿರುಗೇಟು ನೀಡಿದೆ. ನೀವು ಮೊದಲು ಕನಿಷ್ಕಾ ವಿಮಾನ ದುರಂತವನ್ನು ನೆನಪಿಕೊಳ್ಳಿ ಎಂದು ತಿರುಗೇಟು ನೀಡಿದೆ. ಭಾರತ ಯಾವಾಗಲೂ ಭಯೋತ್ಪಾದನೆ ವಿರುದ್ಧ ಹೋರಾಡುತ್ತದೆ.. ಅದಕ್ಕಾಗಿ ಅನೇಕ ದೇಶಗಳ ಜೊತೆ ತಮ್ಮ ಉಗ್ರವಾದದ ವಿರುದ್ಧದ ಹೋರಾಟವನ್ನ ಮುಂದುವರೆಸುತ್ತದೆ ಎಂದು ಟ್ವೀಟ್ ಮೂಲಕ ತಿಳಿಸಿದೆ.
undefined
ಕೆನಡಾದಲ್ಲಿ ನಿಜ್ಜರ್ ಹತ್ಯೆಗೆ ಸಂಸತ್‌ನಲ್ಲಿ ಮೌನಾಚರಣೆ..!
ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯ ವಾರ್ಷಿಕೋತ್ಸವವನ್ನು ಕೆನಡಾದಲ್ಲಿನ ಖಲಿಸ್ತಾನಿ ಪ್ರತ್ಯೇಕತಾವಾದಿಗಳು ಪ್ರಧಾನಿ ಮೋದಿ ಕಟೌಟ್ನ ಜೈಲಿನಲ್ಲಿರುವಂತೆ ಬಿಂಬಿಸಿ.. ಭಾರತ ಹಾಗೂ ಮೋದಿ ವಿರೋಧಿ ಘೋಷಣೆಗಳನ್ನ ಕೂಗಿದ್ದಾರೆ. ಅಷ್ಟೇ ಅಲ್ಲದೆ ಮೆರವಣಿಗೆಯಲ್ಲಿ ಮೋದಿ ಭಾವಚಿತ್ರದ ಮೇಲೆ ನಾನು ನಿಜ್ಜರ್ನನ್ನು ಕೊಂದಿದ್ದೇನೆ ಹಾಗೂ ಸಿಖ್ ವರ್ಸಸ್ ಮೋದಿ ಎಂದು ಬರೆದು ಆಕ್ರೋಶ ಹೊರಹಾಕಿದ್ದಾರೆ.
ಪ್ರದೀಪ್ ಈಶ್ವರ್‌ನನ್ನು ಮೊದಲ ಬಾರಗೆ ನೋಡಿ ಯಾರೋ ಹುಚ್ಚ ಅನ್ಕೊಂಡಿದ್ದೆ; ಡಿಸಿಎಂ ಡಿ.ಕೆ. ಶಿವಕುಮಾರ್
ಕಳೆದ ವರ್ಷ ಕೆನಡಾದಲ್ಲಿ ನಡೆದಿದ್ದಾರೂ ಏನು?
ಕಳೆದ ವರ್ಷ ಜೂನ್ 18, 2023ರಲ್ಲಿ ಬ್ರಿಟಿಷ್ ಕೊಲಂಬಿಯಾದ ಸರ್ರೆ ಗುರುದ್ವಾರ ಬಳಿ ಅಪರಿಚಿತ ಬಂದೂದು ದಾರಿಗಳು ಹರ್ದೀಪ್ ಸಿಂಗ್ ನಿಜ್ಜರ್ನನ್ನು ಗುಂಡಿಕ್ಕಿ ಹತ್ಯೆಮಾಡಿದ್ರು. ಸಿಖ್ ಉಗ್ರವಾದಿಯಾಗಿ ಗುರುತಿಸಿಕೊಂಡಿದ್ದ ಹರ್ದೀಪ್ ಸಿಂಗ್ ನಿಜ್ಜರ್.. ಭಾರತ ವಿರೋಧಿ ಪ್ರತಿಭಟನೆ ಹಾಗೂ ಭಾರತ ವಿರೋಧಿ ಹೇಳಿಕೆಗಳ ಮೂಲಕ ಕುಖ್ಯಾತನಾಗಿದ್ದ.. ಭಾರತ ವಿರೋಧಿ ಸಿಖ್ಖರನ್ನ ಸಂಘಟಿಸುವಲ್ಲಿ ಈತ ಪ್ರಮುಖ ಪಾತ್ರವಹಿಸಿದ್ದ..
ಕನಿಷ್ಕಾ ಬಾಂಬ್ ಸ್ಫೋಟ... ಖಲಿಸ್ತಾನಿಗಳ ಕೈವಾಡ..!
1985ರಲ್ಲಿ ಕೆನಡಾದಿಂದ ಲಂಡನ್ ಮೂಲಕ ಭಾರತಕ್ಕೆ ಬರ್ತಿದ್ದ ಏರ್ ಇಂಡಿಯಾ ಕನಿಷ್ಕಾ ವಿಮಾನವನ್ನ ಖಲಿಸ್ತಾನಿ ಉಗ್ರರು ಬಾಂಬ್ ಇಟ್ಟು ಸ್ಫೋಟಿಸಿದ್ರು. ಆಗಸದಲ್ಲಿ ಬರುವಾಗಲೇ ಅಟ್ಲಾಂಟಿಕ್ ಸಾಗರದ ಮೇಲೆ ಏರ್ಇಂಡಿಯಾದ ಕಾನಿಷ್ಕ ಸ್ಪೋಟಗೊಂಡು ಪತನವಾಗಿತ್ತು. ಈ ದುರಂತದಲ್ಲಿ 307 ಪ್ರಯಾಣಿಕರು ಸೇರಿದಂತೆ ಒಟ್ಟು 329 ಜನರು ಸಾವನ್ನಪ್ಪಿದ್ರು. ಈ ಪೈಕಿ 268 ಮಂದಿ ಕೆನಡಿಯನ್ನರಾಗಿದ್ರೆ 24 ಮಂದಿ ಭಾರತೀಯರು ಹಾಗೂ 27 ಮಂದಿ ಬ್ರಿಟಿಷರು ಬಲಿಯಾಗಿದ್ರು.. ಕನಿಷ್ಕಾ ವಿಮಾನ ದುರಂತದ ಹಿಂದೆ ಖಲಿಸ್ತಾನಿ ಮಾಸ್ಟರ್‌ಮೈಂಡ್ ಇಂದರ್‌ಜಿತ್ ಸಿಂಗ್ ಕೈವಾಡವಿತ್ತು ಎಂದು ತನಿಖಾ ಸಂಸ್ಥೆಗಳು ಪತ್ತೆ ಮಾಡಿದ್ವು. ಈ ದುರಂತಕ್ಕೆ ನಾಳೆಗೆ 39 ವರ್ಷಗಳು ತುಂಬಲಿದ್ದು.. ಇದಕ್ಕೆ ಮೌನಾಚರಣೆ ಮಾಡಿ ಎಂದು ಭಾರತೀಯ ರಾಯಭಾರ ಕಚೇರಿ ಕೌಂಟರ್ ನೀಡಿದೆ.
ಬೈ ಎಲೆಕ್ಷನ್ ಟಿಕೆಟ್‌ಗೆ ಬಿಜೆಪಿಯಲ್ಲಿ ಭರ್ಜರಿ ಫೈಟ್; ಯೋಗೇಶ್ವರ್, ಶ್ರೀರಾಮುಲು ಹಾಗೂ ಬೊಮ್ಮಾಯಿ ಪುತ್ರನಿಂದ ಲಾಬಿ?
‘ಭಾರತ ಭಯೋತ್ಪಾದನೆ ಎದುರಿಸುವಲ್ಲಿ ಮುಂಚೂಣಿಯಲ್ಲಿದೆ. ಜಾಗತಿಕ ಬೆದರಿಕೆ ನಿಭಾಯಿಸಲು ಎಲ್ಲಾ ದೇಶಗಳ ಜೊತೆ ಕಾರ್ಯನಿರ್ವಹಿಸುತ್ತದೆ. ಭಾರತದ ವಿಮಾನದ ಮೇಲಿನ ದಾಳಿ ಹೇಡಿತನವನ್ನು ಸೂಚಿಸುತ್ತದೆ. ಭಯೋತ್ಪಾದಕ ಬಾಂಬ್ ಸ್ಫೋಟಕ್ಕೆ 39 ವರ್ಷಗಳಾಗಿದ್ದು. ಈ ದುರ್ಘಟನೆಯಲ್ಲಿ 86 ಮಕ್ಕಳು 329 ಮುಗ್ಧರು ಬಲಿಪಶುಗಳಾಗಿದ್ದಾರೆ. ಇದು ನಾಗರಿಕ ಸಮಾಜದ ಇತಿಹಾಸದಲ್ಲಿ ಅತ್ಯಂತ ಘೋರ ಭಯೋತ್ಪಾದನಾ ಕೃತ್ಯವಾಗಿದೆ. ಜೂನ್ 23, 2024ಕ್ಕೆ ಬ್ರಿಟಿಷ್ ಕೊಲಂಬಿಯಾದಲ್ಲಿನ ಸ್ಮಾರಕಕ್ಕೆ ಭಾರತದಿಂದ ಗೌರವ ಸಲ್ಲಿಸಲಾಗುತ್ತದೆ’ ಎಂದು ಟ್ವೀಟ್ ಮೂಲಕ ತಿಳಿಸಿದೆ.
Canada's Parliament marked the one-year anniversary of the killing of Khalistani terrorist Hardeep Singh Nijjar by holding a moment of silence in the House of Commons on Tuesday
(Video Source - Canadian Parliament Official Website) pic.twitter.com/SGkovpiWXc