Pregnancy Act : ಬಾಲಕಿ ಗರ್ಭವತಿ,  20 ವಾರ ಕಳೆದ ಭ್ರೂಣ ತೆಗೆಯಲು ಹೈಕೋರ್ಟ್ ಸಮ್ಮತಿ

By Suvarna News  |  First Published Dec 28, 2021, 11:21 PM IST

* ಅತ್ಯಾಚಾರಕ್ಕೆ ಒಳಗಾಗಿದ್ದ ಬಾಲಕಿ ಗರ್ಭವತಿ
* ಭ್ರೂಣ ತೆಗೆಯಲು ಅನುಮತಿ ನೀಡಿದ  ಹೈ ಕೋರ್ಟ್
* ಮೂಲಭೂತ ಹಕ್ಕು ರಕ್ಷಣೆ ಎಂದ ನ್ಯಾಯಾಲಯ
* ಬಾಲಕಿ ಅನುಭವಿಸುವ ಯಾತನೆ ನಿಮಗೆ ಏನಾದರೂ ಗೊತ್ತೆ?


ಮುಂಬೈ(ಡಿ. 28)  ಅತ್ಯಾಚಾರ (Rape)ಮತ್ತು ಲೈಂಗಿಕ ದೌರ್ಜನ್ಯಕ್ಕೆ ಒಳಗಾದ 12 ವರ್ಷದ ಬಾಲಕಿ ಪ್ರಕರಣದಲ್ಲಿ ಬಾಂಬೆ (Bombay High Court) ಹೈಕೋರ್ಟ್ ಸೋಮವಾರ  ಮಹತ್ವದ ಆದೇಶ ನೀಡಿದೆ.

ಲೈಂಗಿಕ ದೌರ್ಜನ್ಯದ ಪರಿಣಾಮ ಬಾಲಕಿ ಗರ್ಭವತಿಯಾಗಿದ್ದು ಭ್ರೂಣವನ್ನು ತೆಗೆಯಲು ಅನುಮತಿ ನೀಡಿದೆ. ಗರ್ಭಪಾತಕ್ಕೆ ಅವಕಾಶ ನೀಡಬಹುದಾದ  20 ವಾರಗಳ ಮಿತಿಯನ್ನು ಈ ಪ್ರಕರಣ ಮೀರಿದ್ದರೂ ನ್ಯಾಯಾಲಯ ಆದೇಶ ನೀಡಿದೆ.

Tap to resize

Latest Videos

ನ್ಯಾಯಮೂರ್ತಿಗಳಾದ ಎಸ್‌ಜೆ ಕಥವಲ್ಲಾ ಮತ್ತು ಅಭಯ್ ಅಹುಜಾ  ಪೀಠ ಇಂಥದ್ದೊಂದು ನಿರ್ಧಾರ ನೀಡಿದೆ. ಬಾಲಕಿಯನ್ನು ಹೀಗೆ ಬಿಟ್ಟರೆ  ಆಕೆ ಅನುಭವಿಸುವ ಸಂಕಟ ಮತ್ತು ಯಾತನೆಯ ಲೆಕ್ಕ ಯಾರಿಗೆ ಇದೆ ಎಂದು ಪೀಠ ಪ್ರಶ್ನೆ ಮಾಡಿದೆ.

ಕಳೆದ  2019 ರಲ್ಲಿ ಬಾಂಬೆ ಹೈ ಕೋರ್ಟ್ ನೀಡಿದ್ದ ತೀರ್ಪೊಂದನ್ನು ಉಲ್ಲೇಖಿಸಿರುವ ನ್ಯಾಯಾಲಯ  ಮಾನಸಿಕ ಅಸ್ವಸ್ಥೆಯಾಗಿದ್ದ ಮಹಿಳೆಯೊಬ್ಬಳು ಗರ್ಭ ಧರಿಸಿದ್ದಳು. ಆ ಪ್ರಕರಣದಲ್ಲಿ ಸಹ ಮಹಿಳೆಯ ಯಾತನೆ ನೊಡಲಾಗದೆ ಗರ್ಭಪಾತಕ್ಕೆ ಅವಕಾಶ ಮಾಡಿಕೊಡಲಾಗಿತ್ತು.

ಇಲ್ಲಿಯೂ ಅದೇ ಮಾತನ್ನು ಹೇಳಬೇಕಾಗುತ್ತದೆ.  ಈ ರೀತಿಯ ಗರ್ಭ ದೈಹಿಕ ಮತ್ತು ಮಾನಸಿಕ ಒತ್ತಡಕ್ಕೆ ಕಾರಣವಾಗಬಲ್ಲದು.  ಅನಿವಾರ್ಯ ಸಂದರ್ಭದಲ್ಲಿ ಇಂಥ ತೀರ್ಮಾನ ತೆಗೆದುಕೊಳ್ಳಬೇಕಾಗುತ್ತದೆ ಎಂದು ಪೀಠ ಹೇಳಿದೆ. ಇಲ್ಲಿ ಮೂಲಭೂತ ಹಕ್ಕುಗಳ ಪ್ರಶ್ನೆ ಸಹ ಎದ್ದೇಳುತ್ತದೆ ಎಂದಿದೆ. ಪ್ರಕರಣಕ್ಕೆ ಸಂಬಂಧಿಸಿ ಕೂಡಲೇ ಎಫ್ ಐಆರ್ ದಾಖಲಿಸಿ ಆರೋಪಿಗಳ ಮೇಲೆ ಕ್ರಮ ತೆಗೆದುಕೊಳ್ಳಬೇಕು ಎಂದು ಮಹಾ ಸರ್ಕಾರಕ್ಕೆ ಕೋರ್ಟ್ ನಿರ್ದೇಶನ ನೀಡಿದೆ. 

Live In Relationship : ಎಣ್ಣೆ ಹಾಕಲು ಹಣ ಕೊಡದ ಸಂಗಾತಿ ಮೂಗು ಕತ್ತರಿಸಿದ ಪಟೇಲ!

 22 ವರ್ಷದ ಸೋದರಸಂಬಂಧಿ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿ ಗರ್ಭಿಣಿಯಾಗಿದ್ದ  ಬಾಲಕಿಯ ಗರ್ಭಾವಸ್ಥೆಯ ವೈದ್ಯಕೀಯ ಮುಕ್ತಾಯಕ್ಕೆ ಬಾಂಬೆ ಹೈಕೋರ್ಟ್ ಅನುಮತಿ ನೀಡಿದೆ. ಸೋಮವಾರ, ನ್ಯಾಯಮೂರ್ತಿಗಳಾದ ಎಸ್‌ಜೆ ಕಥವಾಲ್ಲಾ ಮತ್ತು ಅಭಯ್ ಅಹುಜಾ ಅವರ ರಜಾಕಾಲದ ಪೀಠವು ಅನುಮತಿಸಲಾದ 20 ವಾರಗಳ ಮಿತಿಯನ್ನು ಮೀರಿದ ಹೊರತಾಗಿಯೂ ಅಬಾರ್ಶನ್ ಮಾಡಬಹುದು ಎಂದು ತಿಳಿಸಿತು. 

ಗರ್ಭಾವಸ್ಥೆಯು ಮಹಿಳೆಯ ಮಾನಸಿಕ ಆರೋಗ್ಯಕ್ಕೆ ಹಾನಿಯನ್ನುಂಟುಮಾಡಿದರೆ, ಅಂತಹ ಗರ್ಭಧಾರಣೆಯನ್ನು ಮುಂದುವರಿಸಲು ಒತ್ತಾಯಿಸುವುದು ಅವಳ ಮೂಲಭೂತ ಹಕ್ಕಿನ ಉಲ್ಲಂಘನೆಯಾಗುತ್ತದೆ ಎಂದು ಹೈಕೋರ್ಟ್‌ನ ಮತ್ತೊಂದು ಪೀಠವು 2019 ರ ಹಿಂದಿನ ಆದೇಶವನ್ನು ಉಲ್ಲೇಖಿಸಿದೆ.

ಜೆಜೆ ಗ್ರೂಪ್ ಆಫ್ ಹಾಸ್ಪಿಟಲ್‌ನ ವೈದ್ಯಕೀಯ ಮಂಡಳಿಯ ವರದಿಯನ್ನು ಕೋರ್ಟ್‌ ಗಮನಿಸಿ, ವರದಿಯನ್ನು ಎಚ್‌ಸಿ ಗಮನಿಸಿದೆ, ಅಪ್ರಾಪ್ತ ವಯಸ್ಕರಲ್ಲಿ ಗರ್ಭಾವಸ್ಥೆಯ ಮುಂದುವರಿಕೆಯು ರಕ್ತಹೀನತೆ, ಗರ್ಭಾವಸ್ಥೆಯ ಪ್ರೇರಿತ ಅಧಿಕ ರಕ್ತದೊತ್ತಡ ಮತ್ತು ಹೆರಿಗೆಯ ಸಮಯದಲ್ಲಿ ಹೆಚ್ಚಿದ ಆಪರೇಟಿವ್ ಹಸ್ತಕ್ಷೇಪದಂತಹ “ಗರ್ಭಧಾರಣೆಗೆ ಸಂಬಂಧಿಸಿದ ತೊಡಕುಗಳಿಗೆ” ಕಾರಣವಾಗಬಹುದು ಎಂದು ಹೇಳಿದೆ.

ವರದಿಯಲ್ಲಿ ಇದು ಅನಿಶ್ಚಿತ ಭವಿಷ್ಯದೊಂದಿಗೆ ಅಪ್ರಾಪ್ತ ಗರ್ಭಿಣಿ ಮೇಲೆ ಮಾನಸಿಕ ಪ್ರಭಾವವನ್ನು ಬೀರಲಿದೆ. 22 ವಾರಗಳ ಗರ್ಭಾವಸ್ಥೆಯಲ್ಲಿ, ಗರ್ಭಾವಸ್ಥೆಯ ಮುಕ್ತಾಯದ ವೇಳೆಯಲ್ಲಿ ಗರ್ಭಿಣಿ ಅಪ್ರಾಪ್ತ ವಯಸ್ಕರಿಗೆ ಅಪಾಯವನ್ನುಂಟುಮಾಡುತ್ತದೆ, ಗರ್ಭಧಾರಣೆಯ ಮುಂದುವರಿಕೆ ದೈಹಿಕ ಮತ್ತು ಮಾನಸಿಕ ಒತ್ತಡವನ್ನು ಉಂಟು ಮಾಡುತ್ತದೆ ಅಂತ ಹೇಳಿದೆ ಎನ್ನಲಾಗಿದೆ.

ಕರ್ನಾಟಕ ಹೈಕೋರ್ಟ್ ಆದೇಶ:  ಅತ್ಯಾಚಾರಕ್ಕೆ ಗುರಿಯಾಗಿ ಗರ್ಭ ಧರಿಸಿದ್ದ ಅಪ್ರಾಪ್ತೆಯು  ಗರ್ಭಪಾತಕ್ಕೆ (abortion) ಮಾಡಿದ್ದ ಮನವಿ ತಿರಸ್ಕರಿಸಿದ ವೈದ್ಯಾಧಿಕಾರಿಗಳ (Doctors) ನಿರ್ಧಾರ ಒಪ್ಪದ ಕರ್ನಾಟಕ ಹೈಕೋರ್ಟ್ (High court), ಸಂತಾನೋತ್ಪತ್ತಿ ಆಯ್ಕೆಯು ಸಂವಿಧಾನದ ಪರಿಚ್ಛೇದ 21ರ ಅಡಿಯಲ್ಲಿ ಖಾತರಿಪಡಿಸಿರುವ ವೈಯಕ್ತಿಕ ಸ್ವಾತಂತ್ರ್ಯದ ಭಾಗವಾಗಿದ್ದು, ಭ್ರೂಣ (Fetus) ತೆಗೆಯುವಂತೆ ಆದೇಶಿಸಿತ್ತು.

ಅತ್ಯಾಚಾರ ಸಂತ್ರಸ್ತೆಯೊಬ್ಬರು (Rape Victim) ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎನ್.ಎಸ್.ಸಂಜಯ್ ಗೌಡ ಅವರ ಏಕಸದಸ್ಯ ಪೀಠ ಈ ಆದೇಶ ಮಾಡಿತ್ತು.  ಅರ್ಜಿದಾರೆ ಅತ್ಯಾಚಾರಕ್ಕೊಳಗಾಗಿ ಗರ್ಭ (Pregnant) ಧರಿಸಿರುವ 16 ವರ್ಷದ ಅಪ್ರಾಪ್ತೆಯಾಗಿದ್ದಾರೆ. ಗರ್ಭಪಾತಕ್ಕೆ ಆಕೆ ಮಾಡಿದ ಮನವಿ ನಿರಾಕರಿಸಿದ ವೈದ್ಯಕೀಯ ಅಧಿಕಾರಿಗಳು, ಗರ್ಭ ಧರಿಸಿ 24 ವಾರ ಪೂರ್ಣಗೊಂಡಿದ್ದರೆ ಗರ್ಭಪಾತ ಮಾಡಲಾಗದು ಎಂದಿದ್ದರು.

ಅತ್ಯಾಚಾರಕ್ಕೊಳಗಾಗಿ ಗರ್ಭಿಣಿಯಾಗಿರುವ (Pregnant) ಅಪ್ರಾಪ್ತೆಯನ್ನು (Teen Girl) ಬಲವಂತವಾಗಿ ಗರ್ಭ ಹೊರುವಂತೆ ಮಾಡುವುದು ಅಪರಾಧದ ಹೊರೆ ಹೊರಲು ಬಲವಂತ ಪಡಿಸಿದಂತಾಗುತ್ತದೆ ಎಂಬುದನ್ನು ಮನಸ್ಸಿನಲ್ಲಿಟ್ಟು ಕೊಳ್ಳಬೇಕು ಎಂದು ಅಭಿಪ್ರಾಯಪಟ್ಟಿದೆ. ಅಪ್ರಾಪ್ತ ಬಾಲಕಿಯರ ಮೇಲಿನ ಅತ್ಯಾಚಾರ (Rape) ಪ್ರಕರಣಗಳಲ್ಲಿ ವೈದ್ಯಕೀಯ ಗರ್ಭಪಾತ ಕಾಯ್ದೆ-1971ರಲ್ಲಿ ( The Medical Termination Of Pregnancy Act ) ಕೆಲವು ಶಾಸನ ಬದ್ಧ ಮಿತಿಗಳಿವೆ. ಆದರೂ ಅವು ವೈದ್ಯರಿಗೆ (Doctors) ಮಾತ್ರ ಅನ್ವಯಿಸುತ್ತವೆ. ಅಂಥ ಸಂದ ರ್ಭದಲ್ಲಿ ವೈದ್ಯಕೀಯವಾಗಿ ಗರ್ಭಧಾರಣೆಯನ್ನು ಅಂತ್ಯಗೊಳಿಸುವ ಅಗತ್ಯವನ್ನು ನ್ಯಾಯಾಲಯಗಳು ವಿಭಿನ್ನ ರೀತಿಯಲ್ಲಿ ಪರಿಗಣಿಸಬೇಕು ಎಂದು ನ್ಯಾಯಪೀಠ  ಹೇಳಿತ್ತು.

ಮಹಿಳೆ (woman) ಮೇಲೆ ಆಕೆಯ ಅಪೇಕ್ಷೆಗೆ ವಿರುದ್ಧವಾಗಿ ಮಗುವನ್ನು ಹೇರುವುದು ವೈಯಕ್ತಿಕ ಸ್ವಾತಂತ್ರ್ಯದ (Freedom) ಹಕ್ಕಿನ ಉಲ್ಲಂಘನೆ. ಸಂತಾನೋತ್ಪತ್ತಿ ಆಯ್ಕೆಗೆ ವಿರುದ್ಧವಾಗಿ ಮಗುವಿಗೆ ಜನ್ಮ ನೀಡುವಂತೆ ಮಾಡುವುದು ಸರಿಯಲ್ಲ ಎಂದು ಅಭಿಪ್ರಾಯ ಪಟ್ಟ ಹೈಕೋರ್ಟ್, ವೈದ್ಯಕೀಯ ಗರ್ಭಪಾತ ಕಾಯ್ದೆ-1971ರ ನಿಬಂಧನೆಗಳು ಮತ್ತು ವೈದ್ಯಕೀಯ ಮಂಡಳಿಯ ಅಭಿಪ್ರಾಯಕ್ಕೆ ಬದ್ಧವಾಗಿ ಭ್ರೂಣವನ್ನು ತೆಗೆಯಬೇಕು ಎಂದು ಬೆಳಗಾವಿ ಆರೋಗ್ಯಾಧಿಕಾರಿಗೆ ನಿರ್ದೇಶನ ನೀಡಿತ್ತು.

click me!