ಕೊಲೆ ಅಪರಾಧದಲ್ಲಿ ಜೈಲನಲ್ಲಿ ಜೀವಾವಧಿ ಶಿಕ್ಷೆಯನ್ನು ಅನುಭವಿಸುತ್ತಿರುವ ವ್ಯಕ್ತಿಗೆ ಕೋರ್ಟ್ 90 ದಿನಗಳ ಪೆರೋಲ್ ಮೇಲೆ ರಿಲೀಸ್ ಮಾಡಿದೆ. ಅದಕ್ಕೆ ಕಾರಣ ಆತನ ಪತ್ನಿ ಕೋರ್ಟ್‌ಗೆ ಹಾಕಿದ್ದ ಒಂದೇ ಒಂದು ಅರ್ಜಿ
ಪಾಟ್ನಾ (ಮೇ.28): ಅಸಾಧಾರಣ ಪ್ರಕರಣದಲ್ಲಿ ಕೊಲೆ ಅಪರಾಧದಲ್ಲಿ ಕಳೆದ ಏಳು ವರ್ಷಗಳಿಂದ ಜೈಲಿನಲ್ಲಿರುವ ವ್ಯಕ್ತಿಯನ್ನು ಪಾಟ್ನಾ ಹೈಕೋರ್ಟ್ 90 ದಿನಗಳ ಪೇರೋಲ್‌ನಲ್ಲಿ ಬಿಡುಗಡೆ ಮಾಡುವಂತೆ ಕೋರ್ಟ್ ಆದೇಶ ನೀಡಿದೆ. ಅದಕ್ಕೆ ಕಾರಣ ಆತನ ಪತ್ನಿ ಹಾಕಿದ್ದ ಒಂದೇ ಒಂದು ಅರ್ಜಿ. ಹಾಗೇನಾದರೂ ನನ್ನ ಪತಿ ಜೀವಮಾನ ಪೂರ್ತಿ ಕೋರ್ಟ್‌ನಲ್ಲಿಯೇ ಇದ್ದರೆ, ನಾನು ಬಂಜೆಯಾಗಿಯೇ ಇರಲಿದ್ದೇನೆ. ಗರ್ಭ ಧರಿಸುವ ಅವಕಾಶ ನೀಡಿ ನನ್ನ ಪತಿಯನ್ನು ರಿಲೀಸ್ ಮಾಡುವಂತೆ ಆಕೆ ಮನವಿ ಸಲ್ಲಿಸಿದ್ದಳು. ಕೈದಿ ವಿಕ್ಕಿ ಆನಂದ್ ಪಟೇಲ್ ಅವರ ಪತ್ನಿ ರಂಜೀತಾ ಪಟೇಲ್ ಸಲ್ಲಿಸಿದ ಮನವಿಯ ಮೇರೆಗೆ ನ್ಯಾಯಮೂರ್ತಿ ರಾಜೀವ್ ರಂಜನ್ ಸಿಂಗ್ ಶನಿವಾರ ಪೆರೋಲ್ ನೀಡಿದ್ದಾರೆ. ವಿಕ್ಕಿ ಆನಂದ್ ಪಟೇಲ್ ಏಳು ವರ್ಷಗಳ ಹಿಂದೆ ನಳಂದಾದಲ್ಲಿ ವ್ಯಕ್ತಿಯೊಬ್ಬನನ್ನು ಥಳಿಸಿದ್ದರು. ತೀವ್ರವಾಗಿ ಗಾಯಗೊಂಡಿದ್ದ ವ್ಯಕ್ತಿ, 16 ದಿನಗಳ ಬಳಿಕ ಆಸ್ಪತ್ರೆಯಲ್ಲಿ ಸಾವು ಕಂಡಿದ್ದ. ವಿಕ್ಕಿ ಆನಂದ್ ಪಟೇಲ್ ವಿರುದ್ಧ 307, 341, 342, 120B ಮತ್ತು 34 ರ ಐಪಿಸಿ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ವ್ಯಕ್ತಿಯ ಸಾವಿನ ಬಳಿಕ ಎಫ್‌ಐಆರ್‌ನಲ್ಲಿ ಸೆಕ್ಷನ್ 302 ಅನ್ನು ಸೇರಿಸಲಾಗಿತ್ತು. ಬಳಿಕ ವಿಕ್ಕಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು.
ವಿಕ್ಕಿ ಆನಂದ್, ರಂಜಿತಾಳನ್ನು ಮದುವೆಯಾದ ಐದು ತಿಂಗಳ ಬಳಿಕ ಈ ಘಟನೆ ನಡೆದಿತ್ತು. ಇಲ್ಲಿಯವರೆಗೂ ವಿಕ್ಕಿ ಆನಂದ್ ಏಳು ವರ್ಷ ಜೈಲು ಶಿಕ್ಷೆ ಅನುಭವಿಸಿದ್ದಾರೆ. ರಂಜಿತಾ ಅವರು ನ್ಯಾಯಾಲಯದ ಮುಂದೆ ಸಲ್ಲಿಸಿದ ಮನವಿಯಲ್ಲಿ ತಮ್ಮ ಮದುವೆ ಕಾನೂನುಬದ್ಧವಾಗಿದೆ ಮತ್ತು ಪತಿ ಜೈಲಿನಲ್ಲಿ ಇರುವುದರಿಂದ, ಇಲ್ಲಿಯವರೆಗೂ ತಾನು ಬಂಜೆಯಾಗಿಯೇ ದಿನ ಕಳೆದಿದ್ದೇನೆ ಎಂದಿದ್ದಾರೆ, "ನಮ್ಮ ಮದುವೆಯಾದ ಕೇವಲ ಐದು ತಿಂಗಳ ನಂತರ ನನ್ನ ಪತಿಗೆ ಶಿಕ್ಷೆ ವಿಧಿಸಲಾಗಿದೆ ಮತ್ತು ಜೈಲಿಗೆ ಕಳುಹಿಸಲಾಗಿದೆ. ಇನ್ನೂ ಅವರು ಜೈಲಿನಲ್ಲಿದ್ದರೆ, ನಾನು ಬಂಜೆಯಾಗಿಯೇ ಉಳಿಯಬೇಕಾಗಬಹುದು. ಅವರು ಏಳು ವರ್ಷಗಳ ಕಾಲ ಜೈಲಿನಲ್ಲಿದ್ದಾರೆ. ನಮ್ಮ ಮದುವೆ ಕಾನೂನುಬದ್ಧವಾಗಿದೆ ಮತ್ತು ಆದ್ದರಿಂದ ಮಾನವೀಯತೆಯ ಆಧಾರದ ಮೇಲೆ ನಮ್ಮ ಸಮಸ್ಯೆಯನ್ನು ಪರಿಶೀಲಿಸುವಂತೆ ನಾನು ನ್ಯಾಯಾಲಯವನ್ನು ಕೋರುತ್ತೇನೆ' ಎಂದು ಮನವಿ ಸಲ್ಲಿಸಿದ್ದರು.
ನನ್ನ ಪತಿಗೆ ನ್ಯಾಯಾಲಯ 90 ದಿನಗಳ ಪೆರೋಲ್ ನೀಡಿದ್ದು, ಮತ್ತೊಮ್ಮೆ ಅವರೊಂದಿಗೆ ಬದುಕು ಆರಂಭಿಸುತ್ತಿರೋದಕ್ಕೆ ಸಂತಸವಾಗಿದೆ ಎಂದು ರಂಜಿತಾ ಹೇಳಿದ್ದಾರೆ. ಜೈಲುನ ಮಾರ್ಗಸೂಚಿಯ ಪ್ರಕಾರ, ಗರ್ಭಿಣಿ ಮಹಿಳೆ ಅಪರಾಧ ಮಾಡಿದರೆ ಆಕೆಯನ್ನು ಜೈಲಿಗೆ ಕಳುಹಿಸಲಾಗುವುದಿಲ್ಲ, ಏಕೆಂದರೆ ಅಪರಾಧವನ್ನು ಮಹಿಳೆ ಮಾಡಿದ್ದಾಳೆ ಹೊರತು ಆಕೆಯ ಹೊಟ್ಟೆಯಲ್ಲಿರುವ ಮಗು ಅಲ್ಲ. ಅದೇ ರೀತಿ, ರಂಜಿತಾ ಮತ್ತು ವಿಕ್ಕಿಯ ವಿವಾಹವು ಕಾನೂನುಬದ್ಧವಾಗಿದೆ ಮತ್ತು ಪತಿ ಮಾಡಿದ ಅಪರಾಧಕ್ಕಾಗಿ ಆಕೆಯನ್ನು ಶಿಕ್ಷಿಸಲಾಗುವುದಿಲ್ಲ ಎಂದು ನ್ಯಾಯಾಲಯವು ಗಮನಿಸಿದೆ.
ಕೊಲೆ ಆರೋಪಿಗಳಿಗೆ ಮದುವೆಗೆ ಹಾಜರಾಗಲು ಪೆರೋಲ್ ಅಥವಾ ಫರ್ಲೋ ನೀಡಬಹುದು, ಕುಟುಂಬದಲ್ಲಿ ಯಾರಾದರೂ ಅನಾರೋಗ್ಯಕ್ಕೆ ಒಳಗಾಗಿದ್ದರೆ, ಪರೀಕ್ಷೆಗಳಿಗೆ ಹಾಜರಾಗಲು, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಹಾಜರಾಗಲು, ಜೈಲು ಶಿಕ್ಷೆಯ ಸಮಯದಲ್ಲಿ ಯಾವುದೇ ಕೈದಿ ಪುಸ್ತಕಗಳನ್ನು ಬರೆದರೆ, ನ್ಯಾಯಾಲಯವು ಪೆರೋಲ್ ನೀಡುತ್ತದೆ ಎಂಬ ಅರ್ಜಿದಾರರ ಅಂಶವನ್ನು ನ್ಯಾಯಾಲಯ ಒಪ್ಪಿಕೊಂಡಿದೆ. ಆದಾಗ್ಯೂ, ಜೈಲು ಕಾನೂನಿನಲ್ಲಿ ಕೈದಿಗಳಿಗೆ ದಾಂಪತ್ಯ ಜೀವನ ನಡೆಸಲು ಹಕ್ಕುಗಳನ್ನು ಒದಗಿಸಲು ಯಾವುದೇ ಅವಕಾಶವಿಲ್ಲ.
ಕುರಿ ಮಾಂಸದ ಅಂಗಡೀಲಿ ಗೋಮಾಂಸ ಕೇಸ್: ಖರೀದಿಸಿದವರಿಗೆ ಜಾಮೀನು ಸಿಕ್ಕ ಹಿನ್ನೆಲೆ ಮಾರಿದವರಿಗೂ ಜಾಮೀನು
ಭಾರತೀಯ ಸಂವಿಧಾನದ 21 ನೇ ವಿಧಿಯು ವ್ಯಕ್ತಿಯು ಸ್ವಾತಂತ್ರ್ಯದೊಂದಿಗೆ ಬದುಕುವ ಹಕ್ಕಿದೆ ಎಂದು ಹೇಳುತ್ತದೆ ಎಂದು ಪಾಟ್ನಾ ಹೈಕೋರ್ಟ್ ಗಮನಿಸಿದೆ. ನ್ಯಾಯಮೂರ್ತಿ ರಾಜೀವ್ ರಂಜನ್ ಸಿಂಗ್ ಅವರು ಅಪರಾಧದಲ್ಲಿ ಭಾಗಿಯಾಗದ ಆದರೆ ಅದರೊಂದಿಗೆ ಬಾಧಿತ ವ್ಯಕ್ತಿಗೆ ನೀಡಬಹುದು ಎಂದು ಗಮನಿಸಿದರು. ಹೀಗಾಗಿ, ಸುಧಾರಣಾ ಕ್ರಮಗಳನ್ನು ಕೈಗೊಳ್ಳಲು ಮತ್ತು ಅದರ ಪ್ರಕಾರ ಜೈಲು ಕೈಪಿಡಿಯನ್ನು 30 ದಿನಗಳಲ್ಲಿ ತಿದ್ದುಪಡಿ ಮಾಡಲು ಬಿಹಾರ ಸರ್ಕಾರಕ್ಕೆ ನ್ಯಾಯಾಲಯ ಸೂಚಿಸಿದೆ. ಡೆನ್ಮಾರ್ಕ್‌ನಂತಹ ಹಲವಾರು ದೇಶಗಳಲ್ಲಿ ಐದು ತಿಂಗಳ ಕಾಲ ಜೈಲಿನಲ್ಲಿದ್ದ ಕೈದಿಗಳಿಗೆ ವಾರದಲ್ಲಿ ಒಂದು ದಿನ ರಜೆ ನೀಡಲಾಗುತ್ತಿದೆ. ಅಂತೆಯೇ, ಬ್ರೆಜಿಲ್, ಫ್ರಾನ್ಸ್, ಯುಎಸ್ ಮತ್ತು ಇತರ ದೇಶಗಳು ಸಹ ಕೈದಿಗಳು ತಮ್ಮ ಕುಟುಂಬಗಳೊಂದಿಗೆ ವಾರದಲ್ಲಿ ಒಂದು ದಿನ ವೈವಾಹಿಕ ಹಕ್ಕುಗಳ ಅಡಿಯಲ್ಲಿ ವಾಸಿಸಲು ಅವಕಾಶ ಮಾಡಿಕೊಡುತ್ತವೆ.
ಸಹೋದರನಿಂದ ಗರ್ಭಿಣಿಯಾಗಿದ್ದ ಅಪ್ರಾಪ್ತೆಯ ಮಗು ತೆಗೆಸೋದು ಸರಿಯಲ್ಲ: ಅದು ದೇವರ ಕೊಡುಗೆ ಎಂದು ಮೇಲ್ಮನವಿ ಸಲ್ಲಿಕೆ
"ನನ್ನ ಪತಿಗೆ 90 ದಿನಗಳ ಪೆರೋಲ್ ನೀಡುವಂತೆ ನಾನು ನ್ಯಾಯಾಲಯಕ್ಕೆ ಮನವಿ ಮಾಡಿದ್ದೇನೆ, ಇಲ್ಲದಿದ್ದರೆ ನನ್ನನ್ನು ಜೈಲಿಗೆ ಹಾಕಬೇಕು, ಅದಕ್ಕೆ ಜೈಲು ಕೈಪಿಡಿಯಲ್ಲಿ ಯಾವುದೇ ಅವಕಾಶವಿಲ್ಲ ಎಂದು ನ್ಯಾಯಾಲಯ ಹೇಳಿದೆ. ಜೈಲು ಕೈಪಿಡಿಯಲ್ಲಿ ಐವಿಎಫ್ ಅನ್ನು ಸಹ ಒದಗಿಸಲಾಗಿಲ್ಲ. , ನ್ಯಾಯಾಲಯವು ನನ್ನ ಪತಿಗೆ 90 ದಿನಗಳ ಪೆರೋಲ್ ಅನ್ನು ನೀಡಲು ಒಪ್ಪಿಕೊಂಡಿದೆ ' ಎಂದು ರಂಜಿತಾ ಹೇಳಿದ್ದಾರೆ. ಪೆರೋಲ್ ಅನ್ನು ಸಾಮಾನ್ಯವಾಗಿ ಕೈದಿಗಳಿಗೆ ಗರಿಷ್ಠ 30 ದಿನಗಳವರೆಗೆ ನೀಡಲಾಗುತ್ತದೆ ಮತ್ತು ಫರ್ಲೋ ಅನ್ನು ಗರಿಷ್ಠ 14 ದಿನಗಳವರೆಗೆ ನೀಡಲಾಗುತ್ತದೆ.