ಶೇಖ್‌ ಹಸೀನಾ ಗಡಿಪಾರಿಗೆ ಇಂಟರ್‌ಪೋಲ್‌ಗೆ ಮೊರೆ: ಬಾಂಗ್ಲಾ ಸರ್ಕಾರ ನಿರ್ಧಾರ

By Kannadaprabha News  |  First Published Nov 11, 2024, 10:47 AM IST

ಭಾರತದಲ್ಲಿ ಆಶ್ರಯ ಪಡೆದಿರುವ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರನ್ನು ಗಡಿಪಾರು ಮಾಡಲು ಬಾಂಗ್ಲಾದೇಶ ಸರ್ಕಾರ ಇಂಟರ್‌ಪೋಲ್‌ಗೆ ಮನವಿ ಸಲ್ಲಿಸಲು ನಿರ್ಧರಿಸಿದೆ. 


ಶೇಖ್‌ ಹಸೀನಾ ಗಡಿಪಾರಿಗೆ ಇಂಟರ್‌ಪೋಲ್‌ಗೆ ಮೊರೆ: ಬಾಂಗ್ಲಾ ಸರ್ಕಾರ ನಿರ್ಧಾರ

ಢಾಕಾ: ಸದ್ಯ ಭಾರತದಲ್ಲಿ ಆಶ್ರಯ ಪಡೆದಿರುವ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ ಗಡಿಪಾರು ಸಂಬಂಧ ಇಂಟರ್‌ಪೋಲ್‌ಗೆ ಮನವಿ ಮಾಡಲು ಬಾಂಗ್ಲಾದೇಶದ ಮೊಹ ಮ್ಮದ್ ಯೂನಸ್ ನೇತೃತ್ವದ ಸರ್ಕಾರ ತೀರ್ಮಾನಿಸಿದೆ. ಬಾಂಗ್ಲಾದಲ್ಲಿ ನಡೆದ ಮೀಸಲು ವಿರೋಧಿ ದಂಗೆಯ ವೇಳೆ ವಿದ್ಯಾ ರ್ಥಿಗಳನ್ನು ಕ್ರೂರ ವಾಗಿ ಹತ್ತಿಕ್ಕಿ ಮಾನವೀಯತೆಯ ವಿರುದ್ಧ ಅಪರಾಧವನ್ನು ಎಸಗಿ ನರಮೇಧಕ್ಕೆ ಕಾರಣವಾಗಿದ್ದಾರೆ ಎಂದು ಆರೋಪಿಸಿ ಹಸೀನಾ ಹಾಗೂ ಅವರ ಅವಾಮಿ ಲೀಗ್ ಪಕ್ಷದ ನಾಯಕರ ವಿರುದ್ಧ 60ಕ್ಕೂ ಅಧಿಕ ದೂರುಗಳು ದಾಖಲಾಗಿದ್ದು, ಅವುಗಳ ವಿಚಾರಣೆಗೆ ಹಸೀನಾ ಹಾಗೂ ಲೀಗ್ ನಾಯಕರನ್ನು ನ್ಯಾಯಾಲಯದ ಎದುರು ಹಾಜರುಪಡಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ.

Tap to resize

Latest Videos

undefined

ಸಂವಿಧಾನ ಪ್ರತಿಯನ್ನು ನಗರ ನಕ್ಸಲಿಸಂ ಹೋಲಿಕೆಗೆ ಖರ್ಗೆ ಕಿಡಿ

ಮುಂಬೈ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತಮ್ಮ ರಾಲಿಗಳಲ್ಲಿ ಪ್ರದರ್ಶಿಸುವ ಕೆಂಪು ಮುಖಪುಟದ ಸಂವಿಧಾನದ ಪ್ರತಿಯನ್ನು ನಗರ ನಕ್ಸಲಿಸಂಗೆ ಹೋಲಿಸಿ ಪ್ರಧಾನಿ ನರೇಂದ್ರ ಮೋದಿ ನೀಡಿದ್ದ ಹೇಳಿಕೆಯನ್ನು ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತೀವ್ರವಾಗಿ ಖಂಡಿಸಿದ್ದಾರೆ. ಮಹಾ ವಿಕಾಸ್ ಅಘಾಡಿಯ ಪ್ರಣಾಳಿಕೆ ಬಿಡುಗಡೆಗೊಳಿಸಿ ಮಾತನಾಡಿದ ಖರ್ಗೆ, 'ಅದು ಇಡೀ ಸಂವಿಧಾನವಲ್ಲ, ಬದಲಿಗೆ ಕೇವಲ ಅದರ ಪ್ರತಿಯಾಗಿದ್ದು, ಸಾಂಕೇತಿಕವಾಗಿ ಬಳಸಲಾಗುತ್ತಿದೆ. ಮೋದಿ ಹಾಗೂ ಬಿಜೆಪಿ ಹೇಳಿದಂತೆ ಅದು ಖಾಲಿ ಪುಸ್ತಕವಲ್ಲ' ಎಂದು ಸ್ಪಷ್ಟನೆ ನೀಡುತ್ತಾ, ಮೋದಿಯನ್ನು ಪ್ರಾಥಮಿಕ ಶಾಲೆಗೆ ಸೇರಿಸಬೇಕಿದೆ ಎಂದು ವ್ಯಂಗ್ಯವಾಡಿದ್ದಾರೆ. ಜೊತೆಗೆ, ಮೋದಿ ಕೂಡ 2017ರಲ್ಲಿ ಅಂತಹ ಪ್ರತಿಯನ್ನು ಆಗಿನ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ನೀಡಿದ್ದನ್ನು ನೆನಪಿಸಿದ್ದಾರೆ. ರಾಹುಲ್‌ ಕೆಂಪು ಸಂವಿಧಾನದ ಸಹಾಯದಿಂದ ನಗರ ನಕ್ಸಲರ ಬೆಂಬಲ ಪಡೆಯಲು ಪ್ರಯತ್ನಿಸುತ್ತಿದ್ದಾರೆ ಎಂದು ಡಿಸಿಎಂ ದೇವೇಂದ್ರ ಫಡ್ನವಿಸ್ ಆರೋಪಿಸಿದ್ದರು.

ನೇಪಾಳಕ್ಕೆ ಪರಾರಿ ಯತ್ನದ ವೇಳೆ ಬಾಬಾ ಸಿದ್ದಿಕಿ ಹತ್ಯೆಗೈದವ ಸೆರೆ

ಲಖನೌ: ಮಹಾರಾಷ್ಟ್ರದ ಮಾಜಿ ಸಚಿವ, ಎನ್‌ಸಿಪಿ ನಾಯಕ ಬಾಬಾ ಸಿದ್ದಿಕಿ ಮೇಲೆ ಗುಂಡು ಹಾರಿಸಿ ಹತ್ಯೆ ಮಾಡಿದ್ದ ಪ್ರಮುಖ ಆರೋಪಿ ಶಿವಕುಮಾರ್‌ ಕೊನೆಗೂ ಸೆರೆ ಸಿಕ್ಕಿದ್ದಾನೆ. ಉತ್ತರಪ್ರದೇಶದಿಂದ ನೇಪಾಳಕ್ಕೆ ಪರಾರಿಯಾಗಲು ಯತ್ನಿಸುತ್ತಿದ್ದ ವೇಳೆ ಮುಂಬೈ ಅಪರಾಧ ವಿಭಾಗ ಮತ್ತು ಉತ್ತರ ಪ್ರದೇಶದ ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಭಾನುವಾರ ಶಿವಕುಮಾರ್ ಸಿಕ್ಕಿಬಿದ್ದಿದ್ದಾನೆ. ಇದರೊಂದಿಗೆ ಪ್ರಕರಣದಲ್ಲಿ ಬಂಧಿತರ ಸಂಖ್ಯೆ 23ಕ್ಕೇರಿದೆ.

ಬಂಧನದ ಬೆನ್ನಲ್ಲೇ ತಾನು ಲಾರೆನ್ಸ್ ಬಿಷ್ಟೋಯಿ ಗ್ಯಾಂಗ್‌ನವ ಎಂದು ಶಿವಕುಮಾ‌ರ್ ಒಪ್ಪಿದ್ದಾನೆ ಎನ್ನಲಾಗಿದೆ. ಅ.12ರಂದು ಮುಂಬೈನಲ್ಲಿ ಬಾಬಾ ಸಿದ್ದಿಕಿ ಅವರು ತಮ್ಮ ಪುತ್ರ ಜೀಶನ್‌ರ ಕಚೇರಿಯಿಂದ ಹೊರಬರುವ ವೇಳೆ ಮೂವರ ಗುಂಪು ಗುಂಡಿನ ದಾಳಿ ನಡೆಸಿ ಬಾಬಾ ಸಿದ್ದಿಕಿ ಅವರನ್ನು ಹತ್ಯೆ ಮಾಡಿತ್ತು. ಕೃಷ್ಣಮೃಗ ಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿರುವ ಸಲ್ಮಾನ್ ಖಾನ್‌ಗೆ ಬಾಬಾ ಸಿದ್ದಿಕಿ ಆಪ್ತ ಎಂಬ ಕಾರಣಕ್ಕೆ ಅವರನ್ನು ಹತ್ಯೆ ಮಾಡಲಾಗಿತ್ತು. ಬಿಷ್ಟೋಯಿ ಸಮುದಾಯದ ನಾಯಕ ಲಾರೆನ್ಸ್‌ನ ಸೋದರ ಅನ್ನೋಲ್ ಸೂಚನೆ ಮೇರೆಗೆ ಶಿವಕುಮಾ‌ರ್ ಈ ಕೃತ್ಯ ಎಸಗಿದ್ದ.

click me!