ಅಯೋಧ್ಯೆಯ ರಾಮ ಮಂದಿರ: ಉತ್ತರ ಪ್ರದೇಶ ಚುನಾವಣೆ ದಿಕ್ಕನ್ನೇ ಬದಲಾಯಿಸುತ್ತಾ?

By Suvarna News  |  First Published Aug 18, 2021, 7:18 PM IST

* ಉತ್ತರ ಪ್ರದೆಶ ಚುನಾವಣೆಯಲ್ಲಿ ಯಾವ ಸಮಸ್ಯೆ ಸದ್ದು ಮಾಡಬಹುದು?

* ರಾಮ ಮಂದಿರ ಚುನಾವಣೆ ಮೇಲೆ ಪ್ರಭಾವ ಬೀರುತ್ತಾ?

* ಏಷ್ಯಾನೆಟ್ ಸುವರ್ಣನ್ಯೂಸ್ -ಜನ್ ಕಿ ಬಾತ್ ಸಮೀಕ್ಷೆ 2021


ಲಕ್ನೋ(ಆ.18) ಉತ್ತರ ಪ್ರದೇಶದ 2022ರ ಚುನಾವಣೆಗೆ ಇನ್ನು ಕೆಲವೇ ತಿಂಗಳುಗಳು ಉಳಿದಿವೆ. ಹೀಗಿರುವಾಗ ಉತ್ತರ ಪ್ರದೇಶಕ್ಕೆ ಒಬ್ಬರಾದ ಬಳಿಕ ಮತ್ತೊಂಬ್ಬರಂತೆ ರಾಜಕೀಯ ನಾಯಕರ ಪ್ರವಾಸ ಸದ್ದಿಲ್ಲದೇ ಆರಂಭವಾಗಿದೆ. ಈ ಮೂಲಕ ಮತದಾರರನ್ನು ತಮ್ಮತ್ತ ಸೆಳೆಯುವ ಯತ್ನ ಆರಂಭವಾಗಿದೆ. ಹೀಗಿರುವಾಗ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ರಾಮ ಮಂದಿರ ನಿರ್ಮಾಣ ವಿಚಾರ ಬಹಳಷ್ಟು ಪರಿಣಾಮ ಬೀರಲಿದೆ ಎಂಬುವುದು ದೇಶಾದ್ಯಂತ ಕೇಳಿ ಬರುತ್ತಿರುವ ಮಾತು. ಆದರೆ ಅಮೀಕ್ಷೆ ವೇಳೆ ಉತ್ತರ ಪ್ರದೇಶದ ಜನರಿಂದ ಸಿಕ್ಕ ಅಭಿಪ್ರಾಯ ಮಾತ್ರ ಬೇರೆಯೇ ಕಥೆ ಹೇಳುತ್ತಿದೆ. ಇಡೀ ದೇಶದ ಹಿಂದೂಗಳ ಭಾವನೆಗೆ ಸಂಬಂಧಿಸಿದ ಈ ರಾಮ ಮಂದಿರ ನಿರ್ಮಾಣ, ಉತ್ತರ ಪ್ರೇದಶ ವಿಧಾನಸಭಾ ಚುನಾವಣೆ ಮೇಲೆ ಅದೆಷ್ಟು ಪ್ರಭಾವ ಬೀರುತ್ತೆ ಎನ್ನುವುದು ಎಲ್ಲರಲ್ಲೂ ಕುತೂಹಲ ಮೂಡಿಸಿರುವ ವಿಷ್ಯ.

"

Tap to resize

Latest Videos

undefined

#UP22WithAsianetNews: ಯೋಗಿ, ಅಖಿಲೇಶ್ ನಡುವೆ ಬಿಗ್‌ ಫೈಟ್!

ಹೌದು  ಏಷ್ಯಾನೆಟ್‌- ಜನ್ ಕಿ ಬಾತ್ ಒಟ್ಟಾಗಿ ಉತ್ತರ ಪ್ರದೇಶ ಚುನಾವಣೆಗೂ ಮುನ್ನ ಜನಾಭಿಪ್ರಾಯ ಸಂಘ್ರಹಿಸಿದೆ. ಒಟ್ಟು 14 ಪ್ರಶ್ನೆಗಳನ್ನು ಮೂಲವಾಗಿಟ್ಟುಕೊಂಡು ಈ ಸಮೀಕ್ಷೆ ನಡೆಸಲಾಗಿದೆ. ಇದರಲ್ಲಿ ರಾಮ ಮಂದಿರ ಎಷ್ಟು ಮಹತ್ವ ವಹಿಸುತ್ತದೆ ಎಂಬ ಪ್ರಶ್ನೆಯನ್ನೂ ನಾಗರಿಕರ ಬಳಿ ಕೇಳಲಾಗಿದ್ದು, ಜನರ ಅಭಿಪ್ರಾಯದಿಂದ ಉತ್ತರ ಪ್ರದೇಶ ಚುನಾವಣೆ ಮೇಲೆ ಈ ವಿಚಾರ ಭಾರೀ ಪರಿಣಾಮ ಬೀರುವುದಿಲ್ಲ ಎಂಬುವುದು ಸ್ಪಷ್ಟವಾಗಿದೆ. ಇದಕ್ಕೂ ಮಿಗಿಲಾಗಿ ಬೇರೆ ವಿಚಾರಗಳು ರಾಜ್ಯದ ಜನರ ಪಾಲಿಗೆ ಹೆಚ್ಚಿನ ಮಹತ್ವ ಪಡೆದಿದೆ. ಅಷ್ಟಕ್ಕೂ ಸಮೀಕ್ಷೆಯಲ್ಲಿ ಕೆಳಿದ ಪ್ರಶ್ನೆ ಏನು?

1. ಮುಂದಿನ ಚುನಾವಣೆಯಲ್ಲಿ ವಿದ್ಯುತ್ ಸಮಸ್ಯೆ, ವಿದ್ಯುತ್ ಬಿಲ್ ವಿಚಾರ ಮಹತ್ವ ಪಡೆಯುತ್ತದಾ?

ಜನಾಭಿಪ್ರಾಯ: ಈ ಪ್ರಶ್ನೆಗೆ ಶೇ. 45ರಷ್ಟು ಮಂದಿ ಹೌದು ಎಂದಿದ್ದರೆ, ಶೇ. 55ರಷ್ಟು ಮಂದಿ ಇಲ್ಲ, ಬೇರೆ ವಿಚಾರಗಳೂ ಮಹತ್ವ ಹೊಂದಿವೆ ಎಂದಿದ್ದಾರೆ.

ಪ್ರದೇಶವಾರು ಜನಾಭಿಪ್ರಾಯ

  ಗೋರಖ್‌ ಬ್ರಿಜ್ ಪಶ್ಚಿಮ ಅವಧ್ ಕಾಶಿ ಬುಂದೇಲ್‌ಖಂಡ್
ಹೌದು 40% 28% 63% 30% 28% 31%
ಇಲ್ಲ 50% 72% 27% 70% 72% 53%

ಉತ್ತರ ಪ್ರದೇಶಕ್ಕೆ ಮತ್ತೊಮ್ಮೆ ಯೋಗಿ? ಅಚ್ಚರಿ ಕೊಟ್ಟ ಏಷ್ಯಾನೆಟ್‌ ಸಮೀಕ್ಷೆ ವರದಿ!

2. ವಿಧಾನಸಭಾ ಚುನಾವಣೆಯಲ್ಲಿ ರಾಮ ಮಂದಿರ ವಿಚಾರ ನಿಮಗೆಷ್ಟು ಮಹತ್ವದ್ದು?

ಜನಾಭಿಪ್ರಾಯ: ಶೇ. 33ರಷ್ಟು ಮಂದಿ ರಾಮ ಮಂದಿರ ವಿಚಾರ ಮುಂದಿನ ಚುನಾವಣೆಯಲ್ಲಿ ಬಹಳಷ್ಟು ಪ್ರಮುಖ ಪಾತ್ರ ವಹಿಸುತ್ತದೆ ಎಂದರೆ, ಶೇ. 22ರಷ್ಟು ಮಂದಿ ಸಾಮಾನ್ಯ ಎಂದಿದ್ದಾರೆ. ಇನ್ನು ಶೇ. 32ರಷ್ಟು ಜನರು ಈ ವಿಚಾರ ಹೆಚ್ಚೇನೂ ಮಹತ್ವದ್ದಲ್ಲ ಎಂದರೆ, ಶೇ. 13ರಷ್ಟು ಮಂದಿ ಬಹಳ ಕಡಿಮೆ ಎಂದಿದ್ದಾರೆ.

ಪ್ರದೇಶವಾರು ಜನಾಭಿಪ್ರಾಯ

  ಗೋರಖ್‌ ಬ್ರಿಜ್ ಪಶ್ಚಿಮ ಅವಧ್ ಕಾಶಿ ಬುಂದೇಲ್‌ಖಂಡ್
ಬಹಳಷ್ಟು 25% 38% 14% 30% 30% 50%
ಸರಾಸರಿ 10% 11% 3% 10% 19% 25%
ಕಡಿಮೆ 32% 41% 64% 45% 33% 22%
ಅತ್ಯಂತ ಕಡಿಮೆ 28% 6% 17% 15% 15% 21%

ಮುಂದಿನ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡೇ ರಾಮ ಮಂದಿರ ನಿರ್ಮಾಣ ಕಾರ್ಯ ಆರಂಭವಾಗಿದೆ ಎಂಬ ಮಾತು ಪದೇ ಪದೇ ಸದ್ದು ಮಾಡುತ್ತದೆ. ಹೀಗಿರುವಾಗ ಸಮೀಕ್ಷೆ ಮಾತ್ರ ಇದು ಸತ್ಯಕ್ಕೆ ದೂರವಾದ ಸಂಗತಿ ಎಂಬುವುದನ್ನು ತೋರಿಸಿಕೊಟ್ಟಿದೆ. ರಾಮ ಮಂದಿರಕ್ಕೆ ಅಡಿಗಲ್ಲು ಹಾಕಿದ್ದಾರೆ, ನಿರ್ಮಾಣ ಕಾರ್ಯ ಆರಂಭಿಸಿದ್ದಾರೆ ಎಂಬ ಒಂದೇ ಕಾರಣಕ್ಕೆ ಯೋಗಿ ಆದಿತ್ಯನಾಥ್‌ಗೆ ಮತ ಹಾಕುವುದು ಸುಳ್ಳು ಎಂದು ಸಮೀಕ್ಷೆ ಬಹಿರಂಗಪಡಿಸಿದೆ. ಅಲ್ಲದೇ ವಿಧಾನಸಭಾ ಚುನಾವಣೆ ರೇಸ್‌ನಲ್ಲಿ ಈ ಬಾರಿ ಅಖಿಲೇಶ್‌ ಕೂಡಾ ಬಿಜೆಪಿಗೆ ಕಠಿಣ ಸವಾಲೊಡ್ಡುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ. 

ಒಟ್ಟಾರೆಯಾಗಿ ಸಮೀಕ್ಷೆಯಲ್ಲಿ ಕಂಡು ಬಂದ ಅಂಶ:

* ಯೋಗಿ ಹಾಗೂ ಅಖಿಲೇಶ್ ಯಾದವ್ ನಡುವಿನ ಪೈಪೋಟಿಯನ್ನು ಗಮನಿಸಿದರೆ ಮಾಜಿ ಸಿಎಂಗಿಂತ ಹಾಲಿ ಸಿಎಂ ಹೆಚ್ಚಿನ ಅಂಕ ಗಳಿಸಿದ್ದಾರೆ. 

* ಆರು ಪ್ರದೇಶದ ಸುಮಾರು ಶೇ. 40ರಷ್ಟು ನಾಗರಿಕರು ಜಾತಿ, ಪ್ರಾದೇಶಿಕ, ಸ್ಥಳೀಯ ನಾಯಕರಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿದ್ದಾರೆ. ಅದರಲ್ಲೂ ಹಾಲಿ ಶಾಸಕರನ್ನು ಮತ್ತೆ ಕಣಕ್ಕಿಳಿಸುವುದು ಕೊಂಚ ದುಬಾರಿಯಾಗಬಹುದು.

* ಕಾನೂನು ಸುವ್ಯವಸ್ಥೆ ಹೆಚ್ಚಿನ ಮಹತ್ವ ಪಡೆದರೂ, ಹಣದುಬ್ಬರ ಸಮಸ್ಯೆ ಜನರನ್ನು ಬೆಂಬಿಡದೆ ಕಾಡುತ್ತಿದೆ. ಇದೇ ಮುಂದಿನ ಚುನಾವಣೆಗೆ ಹೆಚ್ಚಿನ ಪ್ರಭಾವ ಬೀರುವುದರಲ್ಲಿ ಅನುಮಾನವೇ ಇಲ್ಲ.

* ಪಶ್ಚಿಮ ಭಾಗದಲ್ಲಿ ಜಿದ್ದಾಜಿದ್ದಿನ ಸ್ಪರ್ಧೆ ಕಂಡುಬರಲಿದೆ.

* ಬಿಜೆಪಿ ಸರ್ಕಾರ ಜಾರಿಗೊಳಿಸಿದ ಪಡಿತರ ನೀತಿ, ಕಲ್ಯಾಣ ಯೋಜನೆಗಳು ಪ. ಜಾತಿ/ಪಂಗಡಗಳ ಒಲವು ಗಿಟ್ಟಿಸಿಕೊಳ್ಳುವಲ್ಲಿ ಸಹಾಯಕವಾದರೂ, ಮಾಯಾವತಿ ನೇತೃತ್ವದ BSP ಹಾಗೂ ಅಖಿಲೇಶ್ ನೇತೃತ್ವದ ಸಮಾಜವಾದಿ ಪಕ್ಷ ಈ ವಿಚಾರದಲ್ಲಿ ಬಿಜೆಪಿಗೆ ದುಬಾರಿಯಾಗಬಹುದು.

* ಇನ್ನು ಭ್ರಷ್ಟಾಚಾರ ವಿಚಾರದಲ್ಲಿ ಯೋಗಿ ಪ್ರಾಮಾಣಿಕರಾಗಿದ್ದರೂ, ಅಧಿಕಾರಿಗಳು ಲಂಚ ಪಡೆಯುವುದು ಜನರ ಅಸಮಾಧಾನಕ್ಕೆ ಕಾರಣವಾಗಿದೆ. ಆದರೆ, ಯೋಗಿ ಸರಕಾರ ಅಖಿಲೇಶ್ ಸರಕಾರಕ್ಕೆ ಹೋಲಿಸಿದಲ್ಲಿ ಈ ವಿಷಯದಲ್ಲಿ ಬೆಸ್ಟ್ ಎನ್ನೋದು ಬಹಜನರ ಅಭಿಪ್ರಾಯ.

* ಹಿಂದುತ್ವ ಅಜೆಂಡಾವಿಲ್ಲದೇ 2022ರ ಚುನಾವಣೆ ಗೆಲ್ಲೋದು ಕಷ್ಟ. ಆದರೆ ಕೇವಲ ಹಿಂದುತ್ವವನ್ನೇ ಮುಂದಿಟ್ಟುಕೊಂಡು ಗೆಲ್ಲುವುದೂ ಸುಲಭವಲ್ಲ. ಇದರೊಂದಿಗೆ ಬೆಲೆ ಏರಿಕೆ ಬಿಸಿ ಇಳಿಸಲು ಸರಕಾರ ಆದಷ್ಟು ಬೇಗೆ ಏನಾದರೂ ಕ್ರಮ ಕೈಗೊಂಡರೆ ಮಾತ್ರ, ಯೋಗಿಯ ಗೆಲುವಿನ ಹಾದಿ ಮತ್ತಷ್ಟು ಸುಲಭವಾಗಲಿದೆ. 

* ಸಣ್ಣ, ಪ್ರಾದೇಶಿಕ ಪಕ್ಷಗಳು ಮುಸಲ್ಮಾನರ ಮತ ವಿಭಜಿಸುವ ಸಾಧ್ಯತೆ ಬಹಳ ಕಡಿಮೆ.

* ಪಶ್ಚಿಮ ಭಾಗ ಹಾಗೂ ಬ್ರಿಜ್‌ನ ಕೆಲ ಭಾಗಗಳಲ್ಲಿ ರೈತ ಆಂದೋಲನದ ಪರಿಣಾಮ ಹೆಚ್ಚಿದೆ. ಪಶ್ಚಿಮ ಪ್ರದೇಶ ಹೊರತುಪಡಿಸಿ ಉಳಿದ ಭಾಗದ ಶೇ. 50ಕ್ಕಿಂತ ಹೆಚ್ಚು ಮಂದಿಗೆ ಕೃಷಿ ಬಿಲ್ ಬಗ್ಗೆ ಹೆಚ್ಚು ಮಾಹಿತಿಯೇ ಇಲ್ಲ. ಹೀಗಾಗಿ ಇದೊಂದು ಚುನಾವಣಾ ವಿಚಾರ ಎಂದು ಪರಿಗಣಿಸಿಲ್ಲ. 

click me!