ಚಂದ್ರಯಾನ, ಸೂರ್ಯಯಾನ ಬಳಿಕ ಸಮುದ್ರಯಾನ: ಮತ್ಸ್ಯದಿಂದ ಆಳ ಸಮುದ್ರದಲ್ಲಿ ಸಂಶೋಧನೆ

By Kannadaprabha News  |  First Published Sep 12, 2023, 7:26 AM IST

ಬಾಹ್ಯಾಕಾಶದ ಕುತೂಹಲ ತಣಿಸಲು ಯಶಸ್ವಿ ಚಂದ್ರಯಾನ 3, ಸೂರ್ಯಯಾನ ಕೈಗೊಂಡ ಬೆನ್ನಲ್ಲೇ, ಇದೀಗ ಸಮುದ್ರದಾಳದ ಕುತೂಹಲ ತಣಿಸುವ ಸಲುವಾಗಿ ಆಳಸಮುದ್ರಯಾನದತ್ತ ಭಾರತ ಹೆಜ್ಜೆ ಇಟ್ಟಿದೆ.


ನವದೆಹಲಿ: ಬಾಹ್ಯಾಕಾಶದ ಕುತೂಹಲ ತಣಿಸಲು ಯಶಸ್ವಿ ಚಂದ್ರಯಾನ 3, ಸೂರ್ಯಯಾನ ಕೈಗೊಂಡ ಬೆನ್ನಲ್ಲೇ, ಇದೀಗ ಸಮುದ್ರದಾಳದ ಕುತೂಹಲ ತಣಿಸುವ ಸಲುವಾಗಿ ಆಳಸಮುದ್ರಯಾನದತ್ತ ಭಾರತ ಹೆಜ್ಜೆ ಇಟ್ಟಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಸಮುದ್ರದಲ್ಲಿ 500 ಮೀಟರ್‌ ಆಳಕ್ಕೆ ‘ಮತ್ಸ್ಯ 6000’ ನೌಕೆಯನ್ನು ಕೊಂಡೊಯ್ಯುವ ಪ್ರಯೋಗವೊಂದು 2024ರ ಮೊದಲ ಭಾಗದಲ್ಲಿ ನಡೆಸಲು ಉದ್ದೇಶಿಸಲಾಗಿದೆ. ಇಡೀ ಯೋಜನೆಗೆ ಅಂದಾಜು 4000 ಕೋಟಿ ರು. ವೆಚ್ಚ ಮಾಡಲಾಗುತ್ತಿದೆ.

ಬಾಹ್ಯಾಕಾಶದಂತೆ ಸಮುದ್ರದಾಳ ಕೂಡಾ ಇನ್ನು ಮಾನವನ ಪೂರ್ಣ ಎಣಿಕೆಗೆ ಸಿಗದ ಸಂಗತಿ. ಅಲ್ಲಿ ಅಪರೂಪದ ಲೋಹ ಇರಬಹುದು ಎಂಬುದು ವಿಜ್ಞಾನಿಗಳ ಲೆಕ್ಕಾಚಾರ. ಹೀಗಾಗಿಯೇ ಬಂಗಾಳ ಕೊಲ್ಲಿಯ ಸಮುದ್ರದ 6000 ಮೀಟರ್‌ ಆಳದಲ್ಲಿ ಅಪರೂಪದ ಲೋಹಗಳಾದ (rare metal) ಕೋಬಾಲ್ಟ್‌ (cobalt), ನಿಕಲ್‌ (nickel) ಮತ್ತು ಮ್ಯಾಂಗನೀಸ್‌ ಅದಿರಿನ ಸಂಶೋಧನೆ ನಡೆಸಲು ವಿಜ್ಞಾನಿಗಳು ಮುಂದಾಗಿದ್ದಾರೆ.

Tap to resize

Latest Videos

undefined

ಅಲಸ್ಕನ ಆಳ ಸಮುದ್ರದಲ್ಲಿ ಬಂಗಾರ ಮೊಟ್ಟೆ ಪತ್ತೆ; ವಿಚಿತ್ರ ವಸ್ತುವಿನ ಬಗ್ಗೆ ಸಂಶೋಧಕರಿಗೇ ಅಚ್ಚರಿ!

ಮತ್ಸ್ಯ 6000:

ಇಂಥದ್ದೊಂದು ಸಂಶೋಧನೆಗಾಗಿ ಕೇಂದ್ರ ಸರ್ಕಾರದ ಅಧೀನದ ‘ರಾಷ್ಟ್ರೀಯ ಸಾಗರ ತಂತ್ರಜ್ಞಾನ ಸಂಸ್ಥೆ’ (NIOT) ವಿಜ್ಞಾನಿಗಳ ತಂಡವು ‘ಮತ್ಸ್ಯ6000’ (Matsya 6000)ಎಂಬ ನೌಕೆಯನ್ನು ಸಿದ್ಧಪಡಿಸಿದೆ. 2.1 ಮೀಟರ್‌ ಸುತ್ತಳತೆ ಹೊಂದಿರುವ ಇದು ಸಮುದ್ರದ 6000 ಮೀಟರ್‌ ಆಳಕ್ಕೆ ಮೂವರನ್ನು ಕೊಂಡೊಯ್ಯುವ ಸಾಮರ್ಥ್ಯ ಹೊಂದಿರುತ್ತದೆ. ನೌಕೆ ಒಮ್ಮೆ ಯಾನ ಆರಂಭಿಸಿದರೆ ಕನಿಷ್ಠ 12-16 ಗಂಟೆಗಳಷ್ಟು ಕಾಲ ಸಮುದ್ರದಲ್ಲಿ ಇರುವ ಸಾಮರ್ಥ್ಯ ಹೊಂದಿರುತ್ತದೆ. ನೌಕೆಯ ಒಳಗೆ ಮೂವರು ವ್ಯಕ್ತಿಗಳಿಗೆ 96 ಗಂಟೆಗಳಿಗೆ ಬೇಕಾಗುವಷ್ಟುಆಮ್ಲಜನಕ ವ್ಯವಸ್ಥೆ ಅಳವಡಿಸಲಾಗುತ್ತದೆ. ಈ ನೌಕೆಯ ಮೊದಲ ಹಂತದ ಮಾನವ ರಹಿತ ಮತ್ತು ಮಾನವ ಸಹಿತ ಪ್ರಯೋಗವನ್ನು 2024ರ ಮೊದಲ ಭಾಗದಲ್ಲಿ ನಡೆಸಲು ಉದ್ದೇಶಿಸಲಾಗಿದೆ. ಮೊದಲ ಹಂತದಲ್ಲಿ ನೌಕೆಯನ್ನು 500 ಮೀಟರ್‌ ಆಳಕ್ಕೆ ಮಾತ್ರವೇ ಕೊಂಡೊಯ್ದು ಅದರ ಸಾಮರ್ಥ್ಯವನ್ನು ಪರಿಶೀಲಿಸಲಾಗುತ್ತದೆ.

ಭಾರೀ ಮುನ್ನೆಚ್ಚರಿಕೆ:

ಅಮೆರಿಕದ ಖಾಸಗಿ ಕಂಪನಿಯೊಂದು ಟೈಟನ್‌ ಎಂಬ ಇಂಥದ್ದೇ ನೌಕೆಯಲ್ಲಿ ಪ್ರವಾಸೋದ್ಯಮ ನಡೆಸುತ್ತಿದೆ. ಆದರೆ ಕಳೆದ ಜೂನ್‌ನಲ್ಲಿ ಅದು ಆಳಸಮುದ್ರಕ್ಕೆ ತೆರಳಿದ ವೇಳೆ ಸಮುದ್ರದ ಒತ್ತಡ ತಾಳಲಾಗದೇ ಒಳಸ್ಫೋಟಕ್ಕೆ ತುತ್ತಾಗಿ ಅದರಲ್ಲಿ ತೆರಳಿದ್ದ 5 ಜನರು ಸಾವನ್ನಪ್ಪಿದ್ದರು. ಹೀಗಾಗಿ ಅಂಥ ಯಾವುದೇ ಘಟನೆಗಳು ಸಂಭವಿಸದಂತೆ ಮುನ್ನೆಚ್ಚರಿಕೆ ವಹಿಸಿರುವ ಭಾರತೀಯ ವಿಜ್ಞಾನಿಗಳ ನೌಕೆಯನ್ನು ಹಲವು ಹಂತದಲ್ಲಿ ನಾನಾ ರೀತಿಯ ಪರೀಕ್ಷೆಗೆ ಒಳಪಡಿಸಿದೆ.

Deep Ocean Mission:  ಸೃಷ್ಟಿಯ ರಹಸ್ಯ ಶೋಧನೆಗೆ ಆಳ ಸಮುದ್ರ ಅಧ್ಯಯನ

ನೌಕೆ ಹೇಗಿದೆ?:

80 ಮಿ.ಮೀ ದಪ್ಪನಾದ ಟೈಟಾನಿಯಂ ಅಲೋಯ್‌ ಬಳಸಿ ನೌಕೆಯ ವಿನ್ಯಾಸ ಮಾಡಲಾಗಿದೆ. ಇದು ಸಮುದ್ರದ ಒತ್ತಡ 600 ಪಟ್ಟು ಹೆಚ್ಚು ಒತ್ತಡ ತಡೆದುಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ. ಇತ್ತೀಚೆಗೆ ವಿಜ್ಞಾನಿಗಳ ತಂಡ ಈ ನೌಕೆಯ ವಿನ್ಯಾಸ, ಅದಕ್ಕೆ ಬಳಸಲಾದ ವಸ್ತುಗಳು, ಪ್ರಮಾಣಪತ್ರ, ಬದಲಾದ ಕಾಲಕ್ಕನುಗುಣವಾದ ಅವಶ್ಯತೆ ಎಲ್ಲವನ್ನೂ ಪರಿಶೀಲಿಸಿದೆ.

ಸಾಧನೆ:

ಹಾಲಿ ಅಮೆರಿಕ (USA), ರಷ್ಯಾ (Russia), ಜಪಾನ್‌ (Japan), ಫ್ರಾನ್ಸ್‌ ( France)ಮತ್ತು ಚೀನಾ ದೇಶಗಳು ಮಾತ್ರವೇ ಇಂಥ ಆಳ ಸಮುದ್ರಯಾನ ನೌಕೆಯನ್ನು ಯಶಸ್ವಿಯಾಗಿ ಪ್ರಯೋಗಿಸಿವೆ. ಒಂದು ವೇಳೆ ಭಾರತವೂ ಯಶಸ್ವಿಯಾದರೆ ಇಂಥ ತಂತ್ರಜ್ಞಾನ ಹೊಂದಿದ ವಿಶ್ವದ 6ನೇ ದೇಶ ಎಂಬ ಹಿರಿಮೆಗೆ ಪಾತ್ರವಾಗಲಿದೆ.

ಏನೇನು ಸಂಶೋಧನೆ?:

ಸಮುದ್ರದಾಳಲ್ಲಿ ಕೋಬಾಲ್ಟ್‌, ನಿಕಲ್‌, ಮ್ಯಾಂಗನೀಸ್‌, ಹೈಡ್ರೋಥರ್ಮಲ್‌ ಸಲ್ಪೈಡ್‌, ಗ್ಯಾಸ್‌ ಹೈಡ್ರೇಟ್ಸ್‌ ಪತ್ತೆ. ಜೊತೆಗೆ ಹೈಡ್ರೋಥರ್ಮಲ್‌ ವೆಂಟ್‌ಗಳಲ್ಲಿ ಕೆಮೋಸಿಂಥೆಟಕ್‌ ಜೈವಿಕ ವೈವಿಧ್ಯ ಪತ್ತೆ ಮಾಡುವ ಉದ್ದೇಶ ಹೊಂದಿದೆ.

click me!