13  ತಿಂಗಳ ನಂತರ ಅಂತ್ಯಸಂಸ್ಕಾರ, ಶರೀರ ಹುಡುಕಲು ಪ್ರತಿ ದಿನ ಹೋರಾಡುತ್ತಿದ್ದ ತಂದೆ!

By Suvarna NewsFirst Published Sep 24, 2021, 12:33 AM IST
Highlights

* 13 ತಿಂಗಳ ನಂತರ ಪತ್ತೆಯಾದ ಯೋಧನ ಶರೀರ
* ಈದ್ ಹಬ್ಬ ಆಚರಿಸಲು ಬಂದ ಯೋಧನ ಕಿಡ್ನಾಪ್ ಮಾಡಲಾಗಿತ್ತು
* ಮಗನಿಗಾಗಿ ಪ್ರತಿದಿನ ಪರ್ವತ ಅಲೆಯುತ್ತಿದ್ದ ತಂದೆ

ಶ್ರೀನಗರ(ಸೆ. 24)  ರೈಫಲ್ ಮ್ಯಾನ್ ಶಕೀರ್ ಮನ್ಜೂರ್ ಹತ್ಯೆಯಾಗಿ ಹದಿಮೂರು ತಿಂಗಳ ಮೇಲೆ 21 ದಿನಗಳು ಕಳೆದಿವೆ. ಕೊನೆಗೂ ವೀರ ಸೇನಾನಿಗೆ ಸಕಲ ಗೌರವಗಳೊಂದಿಗೆ ಅಂತಿಮ ನಮನ ಸಿಕ್ಕಿದೆ.

ಯೋಧನ ತಂದೆ  ಮಂಜೂರ್ ಅಹ್ಮದ್ ವಾಗೇ ಮಗನ ಅಂತ್ಯಕ್ರಿಯೆ ನೆರವೇರಿದ್ದರೆ. ನಾಪತ್ತೆಯಾಗಿದ್ದ ಯೋಧನ ಶರೀರ ಒಂದು ವರ್ಷದ ನಂತರ ಸಿಕ್ಕಿತ್ತು. ಸಾವಿರಾರು ಜನರು ಅಂತಿಮ ವಿಧಿಯಲ್ಲಿ ಪಾಲ್ಗೊಂಡು ಯೋಧನಿಗೆ ನಮನ ಸಲ್ಲಿಸಿದರು. ತವರಿಗೆ ಯೋಧನ ಪಾರ್ಥಿವ ಶರೀರ ತೆಗೆದುಕೊಂಡು ಹೋದಾಗ ಇಡೀ ಊರೆ ಕಣ್ಣೀರಾಗಿತ್ತು.. ಪುಷ್ಪಗಳ ಸುರಿಮಳೆ ಸುರಿಸಲಾಯಿತು. 

ಮಗ ಕಾಣೆಯಾದ ದಿನದಿಂದ ತಂದೆ ಮಗನ ಶರೀರ ಹುಡುಕಾಟ ನಡೆಸುತ್ತಲೇ ಇದ್ದರು. ಪ್ರತಿದಿನ ಪರ್ವತಗಳನ್ನು ಅಲೆದು ಭಾರವಾದ ಹೃದಯದೊಂದಿಗೆ ಮನೆಗೆ ಹೋಗುತ್ತಿದ್ದರು. ಬುಧವಾರ ಜಮ್ಮು ಕಾಶ್ಮೀರದ ಕುಲ್ಗಂ ಏರಿಯಾದಲ್ಲಿ ಸ್ಥಳೀಯರು ಶರೀರವೊಂದನ್ನು ಗುರುತಿಸಿದ್ದಾರೆ.  ತಂದೆಗೆ ವಿಚಾರ ತಿಳಿಸಿದ್ದು ಮಗನ ಗುರುತು ಪತ್ತೆ ಮಾಡಿದ್ದಾರೆ.

ಸೇನಾ ವಾಹನವನ್ನೇ ಒದ್ದಳು.. ಮದ್ಯದ ನಶೆಯಲ್ಲಿ ಮಾನಿನಿ ಬೀದಿ ರಂಪ

ಕಳೆದ ವರ್ಷ ಆಗಸ್ಟ್ ಎರಡರಂದು ಉಗ್ರಗಾಮಿಗಳು ಯೋಧನ ಅಪಹರಣ ಮಾಡಿ ಹತ್ಯೆ   ನಡೆಸಿದ್ದರು.  ನನ್ನ ಮಗ ದೇಶಕ್ಕೆ  ಪ್ರಾಣ ಕೊಟ್ಟಿದ್ದಕ್ಕೆ ಹೆಮ್ಮೆ ಇದೆ. ಕೊನೆಗೂ ಮಗನಿಗೆ ಅಂತ್ಯ ಸಂಸ್ಕಾರ ನೆರವೇರಿಸಿದ ಭಾವ ಮೂಡಿದೆ. ಮಗ ಸಿಗುತ್ತಾನೆ ಎಂದರೆ ಒಬ್ಬರು ನನ್ನ ಮಾತು ಕೇಳುತ್ತಿರಲಿಲ್ಲ.

56  ವರ್ಷದ ತಂದೆ ಮಗನ ಹುಡುಕಾಟವನ್ನು ಮಾತ್ರ ನಿಲ್ಲಿಸಿರಲೇ ಇಲ್ಲ. ನನಗೆ  ಗೊತ್ತು ಸೇನಾ ಮಾಹಿತಿಯನ್ನು ಬಿಟ್ಟುಕೊಡದ್ದಕ್ಕೆ ಉಗ್ರರು ನನ್ನ ಮಗನ ಹತ್ಯೆ ಮಾಡಿದ್ದಾರೆ ಎಂದು ಮಾತನಾಡುತ್ತ ಹೋಗುತ್ತಾರೆ.

ಈದ್ ಆಚರಣೆಗೆ ಎಂದು ಬಂದ ಯೋಧನನ್ನು ಕಿಡ್ನಾಪ್ ಮಾಡಲಾಗಿತ್ತು. ನಂತರ ಯಾವ ಸುಳಿವು ಸಿಕ್ಕಿರಲಿಲ್ಲ. ಕೆಲ ತಿಂಗಳುಗಳ ನಂತರ ಸೇನೆ ಎನ್ ಕೌಂಟರ್ ನಲ್ಲಿ ಉಗ್ರಗಾಮಿಗಳನ್ನು ಕೊಂದು ಹಾಕಿತ್ತು. ಆದರೆ ಸೈನಿಕನ ಶರೀರ ಪತ್ತೆಯಾಗಿರಲಿಲ್ಲ. 

 

 

Same heart-breaking story💔

A grieving father being consoled by an Army man!

Decomposed body of Army Jawan Shakir Manzoor Wagay who went missing a year ago, found in Kulgam. Another family destroyed coz of P@kistan sponsored terr0r!sm pic.twitter.com/HHIoOFSy8D

— Rabyanoor (@rabyanoor1)
click me!