ವಿಶ್ವವಿದ್ಯಾಲಯದ ಬಾಲಕಿಯರ ಹಾಸ್ಟೆಲ್ ಬಳಿ 17 ಅಡಿ ಉದ್ದ, 100 ಕೆಜಿ ತೂಕದ ಹೆಬ್ಬಾವು ಕಾಣಿಸಿಕೊಂಡು ವಿದ್ಯಾರ್ಥಿನಿಯರಲ್ಲಿ ಆತಂಕ ಮೂಡಿಸಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಹಾವನ್ನು ಹಿಡಿದು ಕಾಡಿಗೆ ಬಿಟ್ಟಿದ್ದಾರೆ.
ಸಾಮಾನ್ಯವಾಗಿ ಹಾವುಗಳು ಎಂದರೆ ಬೆಚ್ಚಿ ಬೀಳದವರು ಯಾರೂ ಇಲ್ಲ. ವಿಷದ ಹಾವುಗಳು ಮನುಷ್ಯರನ್ನು ಕಚ್ಚಿ ವಿಷ ದೇಹವನ್ನು ಆವರಿಸಿ ಸತ್ತು ಹೋಗಿಬಿಡುತ್ತಾರೆ ಎನ್ನು ಭಯ ಎಲ್ಲರಿಗೂ ಇದ್ದೇ ಇರುತ್ತದೆ. ಇತ್ತೀಚೆಗೆ ಅಸ್ಸಾಂ ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯರು ತಮ್ಮ ಹಾಸ್ಟೆಲ್ ಹತ್ತಿರ ರಾತ್ರಿ ಬೃಹತ್ ಗಾತ್ರದ ಹೆಬ್ಬಾವು ಬಂದಿರುವುದನ್ನು ನೋಡಿ ಬೆಚ್ಚಿ ಬಿದ್ದಿದ್ದಾರೆ. ಅಸ್ಪಷ್ಟವಾಗಿ ಕಾಣುತ್ತಿದ್ದ ಹಾವನ್ನು ಏನೆಂದು ಹತ್ತಿರ ಹೋಗಿ ಟಾರ್ಚ್ ಹಾಕಿ ನೋಡಿದಾಗ ಕೆಸರಿನಲ್ಲಿ ಮುಳುಗಿ ತೆವಳುತ್ತಾ ಸಾಗುತ್ತಿದ್ದ ಬೃಹತ್ ಗಾತ್ರದ ಹೆಬ್ಬಾವು ಕಣ್ಣಿಗೆ ಬಿದ್ದಿದೆ.
ಹಾಸ್ಟೆಲ್ ಬಳಿ ಕಾಣುತ್ತಿದ್ದ ಹಾವಿನ ಬಳಿ ಪರಿಶೀಲನೆಗೆ ಹೋಗಿದ್ದ ವಿದ್ಯಾರ್ಥಿನಿಯರು ಕೂಡಲೇ ಕಿಟಾರನೇ ಕಿರುಚಿಕೊಂಡಿದ್ದಾರೆ. ತಕ್ಷಣವೇ ಹಾಸ್ಟೆಲ್ ಭದ್ರತಾ ಸಿಬ್ಬಂದಿ ಏನಾಯಿತು ಎಂದು ಬಂದು ನೊಡಿದಾಗ ಬರೋಬ್ಬರಿ 17 ಅಡಿ ಉದ್ದದ ಹಾಗೂ ಸುಮಾರು 100 ಕೆ.ಜಿ. ತೂಕ ಇರುವಂತಹ ಬೃಹತ್ ಗಾತ್ರದ ಹೆಬ್ಬಾವು ನೋಡಿ ಒಂದು ಕ್ಷಣ ತಾವೇ ಶಾಕ್ ಆಗಿದ್ದಾರೆ. ಹಾವು ಇದೆ ಎಂಬ ಮಾಹಿತಿ ತಿಳಿಯುತ್ತಿದ್ದ ನೂರಾರು ವಿದ್ಯಾರ್ಥಿನಿಯರು ಬಂದು ಹಾವನ್ನು ನೋಡುವುದಕ್ಕೆ ಮುಗಿಬಿದ್ದಿದ್ದಾರೆ. ಆದರೆ, ಹೆಚ್ಚು ಜನರು ಸೇರಿದ್ದರಿಂದ ಹಾಗೂ ಗಲಾಟೆ ಮಾಡಿದ್ದರಿಂದ ಗಾಬರಿಗೊಂಡ ಹೆಬ್ಬಾವು ವಿದ್ಯಾರ್ಥಿಗಳ ಜಿಮ್ ಮಾಡುವ ಆವರಣದೊಳಗೆ ಹೋಗಿದೆ.
undefined
ಅಸ್ಸಾಂ ವಿಶ್ವವಿದ್ಯಾಲಯದ ಸಿಲ್ಚಾರ್ ಕ್ಯಾಂಪಸ್‌ನಲ್ಲಿ ಹುಡುಗಿಯರ ಹಾಸ್ಟೆಲ್ ಹತ್ತಿರ ಡಿಸೆಂಬರ್ 18 ರಂದು ರಾತ್ರಿ 10.30ಕ್ಕೆ ಈ ಹೆಬ್ಬಾವು ಕಾಣಿಸಿಕೊಂಡಿದೆ. ವಿದ್ಯಾರ್ಥಿಗಳು ಗಲಾಟೆ ಮಾಡುತ್ತಾ ಅಲ್ಲಿ ಓಡಾಡಿದಾಗ ಈ ಹೆಬ್ಬಾವು ಜಿಮ್ ಕೋಣೆಯ ಆವರಣದೊಳಗೆ ಹೋಗಿದೆ. ಭದ್ರತಾ ಸಿಬ್ಬಂದಿ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಅಧಿಕಾರಿಗಳು ಹಾವನ್ನು ಹಿಡಿದಿದ್ದಾರೆ. ನಂತರ ಅದನ್ನು ಕಾಡಿಗೆ ಬಿಟ್ಟಿದ್ದಾರೆ. ಈ ಹಾವನ್ನು 7 ಜನರು ಸೇರಿ ಎತ್ತಿಕೊಂಡು ಹೋಗಿದ್ದಾರೆ.
ಇದನ್ನೂ ಓದಿ: ಲೋಕಲ್ ಟ್ರೇನ್ ರೀತಿ, ವಿಮಾನದಲ್ಲೂ ಫ್ಲಾಸ್ಕ್ ಹಿಡಿದು ಚಾಹಾ ಮಾರುತ್ತಾ ಬಂದ ಚಾಯ್‌ವಾಲಾ!
ಅಸ್ಸಾಂ ವಿವಿ ಆವರಣದ ಕ್ಯಾಂಪಸ್‌ನಲ್ಲಿ ಹೆಬ್ಬಾವುಗಳು ಕಾಣಿಸುವುದು ಸಾಮಾನ್ಯವಾಗಿವೆ. ಆದರೆ, ಇಷ್ಟೊಂದು ದೊಡ್ಡ ಗಾತ್ರದ ಹೆಬ್ಬಾವನ್ನು ವಿದ್ಯಾರ್ಥಿಗಳು ನೋಡಿರಲಿಲ್ಲ. ಅದರಲ್ಲಿಯೂ ಮುಖ್ಯವಾಗಿ ಆಡು ಮತ್ತು ಇತರ ಸಣ್ಣ ಪ್ರಾಣಿಗಳನ್ನು ತಿನ್ನುವ ಈ ಹೆಬ್ಬಾವುಗಳು ವಿದ್ಯಾರ್ಥಿಗಳು ವಾಸಿಸುವ ಸ್ಥಳದಲ್ಲಿ ಕಾಣಿಸಿಕೊಳ್ಳುತ್ತಿರುವುದು ಸ್ವಲ್ಪ ಆತಂಕಕ್ಕೆ ಕಾರಣವಾಗಿದೆ. ಇನ್ನು ಕಾಡಿನಲ್ಲಿ ಇದಕ್ಕಿಂತ ದೊಡ್ಡ ದೊಡ್ಡ ಹೆಬ್ಬಾವುಗಳಿವೆ. ಆದರೆ, ಅವು ಮನುಷ್ಯರು ಇರುವ ಜನವಸತಿ ಪ್ರದೇಶಕ್ಕೆ ಬರುವುದಿಲ್ಲ ಎಂದು ಹಾವನ್ನು ಹಿಡಿದ ಅರಣ್ಯ ಅಧಿಕಾರಿ ಬಿಶಾಲ್ ಹೇಳಿದ್ದಾರೆ.
| A massive 17-foot-long Burmese python, weighing approximately 100 kilograms, was rescued from the Assam University campus in Silchar late on December 18, 2024. pic.twitter.com/NP1qr9p5jR
— GPlus (@guwahatiplus)ಮನುಷ್ಯರು ವಾಸಿಸುವ ಜನವಸತಿ ಪ್ರದೇಶದಿಂದ ರಕ್ಷಿಸಲಾದ ಬರಾಕ್ ಕಣಿವೆಯ ಇತಿಹಾಸದಲ್ಲೇ ಬರ್ಮೀಸ್ ಹೆಬ್ಬಾವು ಅತ್ಯಂತ ದೊಡ್ಡದು. ಇಂಡಿಯನ್ ರಾಕ್ ಪೈಥಾನ್ ಎಂದೂ ಕರೆಯಲ್ಪಡುವ ಇವುಗಳು, ಪ್ರಪಂಚದ ಮೂರನೇ ಅತಿ ದೊಡ್ಡ ಹಾವುಗಳ ಜಾತಿ ವರ್ಗಕ್ಕೆ ಸೇರಿವೆ. 19 ಅಡಿ ಉದ್ದ ಬೆಳೆಯುವ ಇವುಗಳ ತೂಕ 180 ರಿಂದ 200 ಕೆಜಿ ಇರುತ್ತದೆ. ಇವು ಈಗ ಯುಎಸ್‌ಎಯಲ್ಲಿ ಆಕ್ರಮಣಕಾರಿ ಪ್ರಾಣಿಗಳಾಗಿವೆ. ಆರಂಭದಲ್ಲಿ ಸಾಕುಪ್ರಾಣಿಗಳಾಗಿ ಯುಎಸ್‌ಎಗೆ ಬಂದ ಈ ಹಾವುಗಳ ಈಗ ಅಲ್ಲಿ ಹೆಚ್ಚಾಗಿದ್ದು, ಆಕ್ರಮಣಕಾರಿಯಾಗಿ ಮನುಷ್ಯರನ್ನೇ ಬಲಿ ಪಡೆಯುತ್ತಿವೆ.
ಇದನ್ನೂ ಓದಿ: ಹೆಂಡತಿಯನ್ನು ಓದಿಸಿ ಕೆಲಸಕ್ಕೆ ಕಳುಹಿಸಿದ್ದೇ ತಪ್ಪಾಯ್ತು; ಜೀವ ತೊರೆದ ಬೆಂಗಳೂರು ಲಾರಿ ಉದ್ಯಮಿ!