India@75: ಸಾವರ್ಕರ್‌ ಸೇರಿ ಅಸಂಖ್ಯ ಹೋರಾಟಗಾರರನ್ನು ಕೂಡಿಟ್ಟ ಸ್ಥಳ ಬೆಳಗಾವಿಯ ಹಿಂಡಲಗಾ

ರಾಜ್ಯದಲ್ಲಿ ಸ್ವಾತಂತ್ರ್ಯ ಹೋರಾಟದ ಕಾವು ಹೆಚ್ಚಾದಂತೆಲ್ಲ ಬ್ರಿಟಿಷರಿಗೆ ಹೋರಾಟಗಾರರನ್ನು ಬಂಧಿಸಿಡುವುದೇ ದೊಡ್ಡ ತಲೆನೋವಾಗಿತ್ತು. ಇದಕ್ಕೆ ಪರಿಹಾರ ಕಂಡುಕೊಳ್ಳುವ ಸಲುವಾಗಿ ಕಟ್ಟಿದ್ದ ಬೃಹತ್‌ ಜೈಲುಗಳಲ್ಲಿ ಬೆಳಗಾವಿಯ ಹಿಂಡಲಗಾ ಸಹ ಒಂದು. 


ಬೆಳಗಾವಿ (ಜು. 30): ರಾಜ್ಯದಲ್ಲಿ ಸ್ವಾತಂತ್ರ್ಯ ಹೋರಾಟದ ಕಾವು ಹೆಚ್ಚಾದಂತೆಲ್ಲ ಬ್ರಿಟಿಷರಿಗೆ ಹೋರಾಟಗಾರರನ್ನು ಬಂಧಿಸಿಡುವುದೇ ದೊಡ್ಡ ತಲೆನೋವಾಗಿತ್ತು. ಇದಕ್ಕೆ ಪರಿಹಾರ ಕಂಡುಕೊಳ್ಳುವ ಸಲುವಾಗಿ ಕಟ್ಟಿದ್ದ ಬೃಹತ್‌ ಜೈಲುಗಳಲ್ಲಿ ಬೆಳಗಾವಿಯ ಹಿಂಡಲಗಾ ಸಹ ಒಂದು. ರಾಜ್ಯದ ಅತಿ ದೊಡ್ಡ ಜೈಲು ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಈ ಜೈಲು ಅಂದಾಜು 99 ಎಕರೆ ಇದ್ದು, 1162 ಕೈದಿಗಳನ್ನು ಇಲ್ಲಿ ಇಡಬಹುದಾಗಿದೆ. 1923ರಿಂದ ಇಲ್ಲಿವರೆಗೂ 137 ಮಂದಿಯನ್ನು ಇಲ್ಲಿ ಗಲ್ಲಿಗೇರಿಸಲಾಗಿದೆ. ಇದೀಗ ಈ ಜೈಲು ಶತಮಾನೋತ್ಸವದ ಸಂಭ್ರಮದಲ್ಲಿದೆ.

ಬಂಧನ, ಸೆರೆವಾಸ ಇವು ಭಾರತದ ಸ್ವಾತಂತ್ರ್ಯ ಹೋರಾಟವನ್ನು ನಿಯಂತ್ರಿಸಲು ಬ್ರಿಟಿಷರು ಅನುಸರಿಸಿದ ಅಸ್ತ್ರಗಳು. ದೇಶದಲ್ಲಿ ಆಂಗ್ಲರು ತಮ್ಮ ಅಧಿಪತ್ಯ ವಿಸ್ತರಿಸಬೇಕು ಎಂಬ ಉದ್ದೇಶದಿಂದ ತಮಗೆ ತಿಳಿದಂತೆ ಕಾಯ್ದೆ, ಕಾನೂನುಗಳನ್ನು ಜಾರಿಗೆ ತಂದು ಜನರ ಮೇಲೆ ಹೇರಲು ಆರಂಭಿಸಿದರು. ಹೀಗೆ ಜನರ ಮೇಲೆ ವಿಧಿಸಲ್ಪಟ್ಟಜನವಿರೋಧಿ ನೀತಿಗಳನ್ನು ವಿರೋಧಿಸುತ್ತಿದ್ದ ಸ್ವಾತಂತ್ರ್ಯ ಹೋರಾಟಗಾರರನ್ನು ಬಂಧಿಸಿ ಜೈಲಿಗೆ ಅಟ್ಟಿ, ಅವರಿಗೆ ದಂಡ ವಿಧಿಸುತ್ತಿದ್ದರು.

Latest Videos

India@75:ಸ್ವತಂತ್ರ್ಯ ಹೋರಾಟಗಾರರ ಜನ್ಮಭೂಮಿ ವಿಜಯಪುರದ ಚಡಚಣ

1923 ರಲ್ಲಿ ನಿರ್ಮಾಣ:

ದೇಶದಲ್ಲಿ ಸ್ವಾತಂತ್ರ್ಯ ಹೋರಾಟದ ಕಿಚ್ಚು ದಿನದಿಂದ ದಿನಕ್ಕೆ ಹೆಚ್ಚಾಗ ತೊಡಗಿತ್ತು. ಹೀಗಾಗಿ ಜೈಲಿಗೆ ಸೇರುವವರ ಸಂಖ್ಯೆ ಕೂಡ ಹೆಚ್ಚಾಯಿತು. ಹೀಗಾಗಿ 1923ರಲ್ಲಿ ಬೆಳಗಾವಿಯ ಹಿಂಡಲಗಾದಲ್ಲಿ ಜೈಲು ನಿರ್ಮಾಣ ಮಾಡಲಾಯಿತು. ಈ ಸಮಯದಲ್ಲಿ ಭಾರತದಲ್ಲಿ ಅಸಹಕಾರ ಹಾಗೂ ಉಪ್ಪಿನ ಸತ್ಯಾಗ್ರಹ ಚಳವಳಿಗಳ ಕಾವು ಜೋರಾಗಿತ್ತು.

ಬ್ರಿಟಿಷರ ಸರ್ಕಾರಿ ಕಚೇರಿಗಳ ಲೂಟಿ, ಪಿಕೆಟಿಂಗ್‌, ರೈಲ್ವೆ ಹಳಿಗಳನ್ನು ಕೀಳುವುದು ಹೀಗೆ ನಾನಾ ಬಗೆಯ ಹೋರಾಟಗಳು ನಡೆದಿದ್ದವು. ಈ ಹೋರಾಟಗಳಲ್ಲಿ ಭಾಗಿಯಾಗಿದ್ದ ರಾಜ್ಯದ ಮೈಲಾರ ಮಹಾದೇವಪ್ಪ, ಅಂದಾನೆಪ್ಪ ದೊಡ್ಡಮೇಟಿ, ಮಹಾತ್ಮ ಗಾಂಧೀಜಿ ಅವರ ಕಾರ್ಯದರ್ಶಿಯಾಗಿದ್ದ ಮಹಾದೇವ ದೇಸಾಯಿ, ಕೊಟ್ಟೂರಿನ ಭದ್ರಶೆಟ್ಟಿಸಣ್ಣ ರುದ್ರಪ್ಪ, ಅಡವಿ ಬಸಪ್ಪ, ಅಣ್ಣು ಗುರೂಜಿ, ವೆಂಕೋಸಾ ಭಾಂಡಗೆ, ಹಳೇ ಹಗರಿಬೊಮ್ಮನಹಳ್ಳಿ ಹಾಲ್ದಾಳ್‌ ಕೊಟ್ರಪ್ಪ, ತಮ್ಮಾಜಿ ಮಿರಜಕರ, ವಾಲಿ ಚೆನ್ನಬಸಪ್ಪ ಹೀಗೆ ರಾಜ್ಯದ ಅನೇಕ ಸ್ವಾತಂತ್ರ್ಯ ಹೋರಾಟಗಾರರು ಹಿಂಡಲಗಾ ಕಾರಾಗೃಹದಲ್ಲಿ ಸೆರೆವಾಸ ಅನುಭವಿಸಿದ್ದಾರೆ.

ಸ್ವಾತಂತ್ರ್ಯಾನಂತರ ವೀರ ಸಾರ್ವಕರ್‌ ಅವರನ್ನು ಇದೇ ಜೈಲಿನಲ್ಲಿ ಬಂಧಿಯಾಗಿಸಿದ್ದರು. ಗಲ್ಲು ಶಿಕ್ಷೆ ವಿಧಿಸುವ ರಾಜ್ಯದ ಏಕೈಕ ಜೈಲು ಎಂಬ ಖ್ಯಾತಿಗೆ ಈ ಕಾರಾಗೃಹ ಪಾತ್ರವಾಗಿದೆ.

ತಲುಪುವುದು ಹೇಗೆ?

ಹಿಂಡÇಗಾ ಕಾಗಾಗೃಹ ಬೆಳಗಾವಿ ನಗರದಿಂದ 7 ಕಿ.ಮೀ. ಇದೆ. ಬೆಳಗಾವಿ ಬಸ್‌ ನಿಲ್ದಾಣದಿಂದ ಬಸ್‌ ವ್ಯವಸ್ಥೆ ಇದೆ.

- ಮಂಜುನಾಥ ಗದಗಿನ

click me!