World Heart Day: ಸ್ತಂಭನವಾಗದಂತೆ ಇರಿ ಜೋಪಾನ

By Suvarna News  |  First Published Sep 29, 2022, 9:57 AM IST

ಇತ್ತೀಚೆಗೆ ಹೃದಯಾಘಾತಗಳು ಹೆಚ್ಚಾಗುತ್ತಿವೆ. ಹಾಗೂ ಸರಿಯಾದ ಸಮಯಕ್ಕೆ ಚಿಕಿತ್ಸೆ ದೊರೆಯದೇ ಸಾವು ಸಂಭವಿಸುತ್ತದೆ. ನಮ್ಮ ಹೃದಯದ ಕಾಳಜಿ ಅತಿ ಮುಖ್ಯವಾಗಿದ್ದು, ಮುಂಜಾಗೃತೆ ಅವಶ್ಯವಾಗಿದೆ.


ಇಂದು ವಿಶ್ವ ಹೃದಯ ದಿನ. ಹೃದಯದ ಕಾಳಜಿಯ ಕುರಿತು ಜಾಗೃತಿ ಮೂಡಿಸಲು ಈ ದಿನವನ್ನು ಆಚರಿಸಲಾಗುತ್ತದೆ. ಇತ್ತೀಚಿನ ಜೀವನ ಶೈಲಿ ಗಮನಿಸಿದರೆ ನಮ್ಮ ಹೃದಯವನ್ನು ಕಾಪಾಡಿಕೊಳ್ಳುವುದು ಹಿಂದೆಂದಿಗಿಂತಲೂ ಈಗ ಹೆಚ್ಚು ಮುಖ್ಯ. ಇಂದಿನ ಯಾಂತ್ರಿಕ ಬದುಕು ಹಾಗೂ ಆಹಾರ ಕ್ರಮದಿಂದಾಗಿ ಹೃದಯ ಸಂಬಂಧಿ ಕಾಯಿಲೆಗಳು ಸಣ್ಣ ವಯಸ್ಸಿನವರಿಂದ ಹಿಡಿದು ವಯಸ್ಸಾದವರ ತನಕ ಪ್ರತಿಯೊಬ್ಬರನ್ನೂ ಕಾಡಲು ಶುರು ಮಾಡಿವೆ. ಆದ್ದರಿಂದ ನಮ್ಮ ಎಡಗೈ ಮುಷ್ಟಿಯಷ್ಟಿರುವ ಹೃದಯವನ್ನು ಕಾಪಾಡಿಕೊಳ್ಳುವುದು ಅತಿ ಮುಖ್ಯವಾಗಿದೆ.  ಆದರೆ ನಮ್ಮ ದೈನಂದಿನ ಒತ್ತಡದಿಂದ ಹೃದಯದ ಮೇಲೆ ಅತಿಯಾದ ಒತ್ತಡ ಬೀಳುತ್ತಿದೆ. ಹೃದಯಾಘಾತ ಎಂದರೇನು? ಅದರ ಮುನ್ಸೂಚನೆ ಹಾಗೂ ಪ್ರಥಮ ಚಿಕಿತ್ಸೆಯ ಮಾಹಿತಿ ಇಲ್ಲಿದೆ.

ಹೃದಯಾಘಾತ ಹೇಗೆ ಬರುತ್ತದೆ?
ಹೃದಯವು (Heart) ನಮ್ಮ ದೇಹದಲ್ಲಿ ರಕ್ತ ಸಂಚಾರವನ್ನು ಪ್ರತಿಯೊಂದು ಅಂಗಾಂಗಗಳಿಗೆ ಕಳುಹಿಸಿ ಕೊಡುವ ಕೆಲಸ  ಮಾಡುತ್ತದೆ. ಈ ವೇಳೆ ಹೃದಯದ ಪರಿಧಮನಿ ಅಪಧಮನಿಗಳಲ್ಲಿ ಅಡಚಣೆ ಉಂಟಾದಾಗ ಹೃದಯಾಘಾತ ಸಂಭವಿಸುತ್ತದೆ. ಇದು ಹೆಚ್ಚಾಗಿ ರಕ್ತ ಹೆಪ್ಪುಗಟ್ಟುವಿಕೆಯಿಂದ ಬರುತ್ತದೆ. ಹೃದಯಕ್ಕೆ ರಕ್ತ ಸಂಚಲನೆ (blood circulation) ಆಗದೆ ಬ್ಲಾಕ್ ಆದಾಗ ಹೃದಯಾಘಾತವಾಗುತ್ತದೆ. ರಕ್ತ ಪೂರೈಕೆ ನಿಂತಾಗ ಹೃದಯವು ಬಡಿಯುವುದನ್ನು ನಿಲ್ಲಿಸುತ್ತದೆ. ಇದರಿಂದ ಕೆಲವೊಮ್ಮೆ ಮೆದುಳಿಗೆ ಕೂಡ ರಕ್ತ ಪೂರೈಕೆ ಆಗುವುದೇ ನಿಂತು ಹೋಗಿ ಬ್ರೇನ್ ಡೆಡ್ ಆಗುವ ಸಾಧ್ಯತೆ ಹೆಚ್ಚಿರುತ್ತದೆ. ಇತ್ತೀಚೆಗೆ ಹೃದಯ ಸ್ತಂಭನ ಹೆಚ್ಚಳವಾಗುತ್ತಿರುವುದು ಆತಂಕದ ಸಂಗತಿಯಾಗಿದೆ.

ಉದ್ಯೋಗಸ್ಥರು ಹೃದಯದ ಆರೋಗ್ಯ ಕಾಪಾಡಿಕೊಳ್ಳಲು ಇಲ್ಲಿವೆ ಕೆಲವು ಟಿಪ್ಸ್‌

Tap to resize

Latest Videos

ಹೃದಯ ಸ್ತಂಭನ ಮುನ್ಸೂಚನೆ ಏನು?
ಹೃದಯಾಘಾತವು (heart attack) ಒಮ್ಮೆಲೆ ಬರುವುದಿಲ್ಲ. ಅದು ಬರುವ ಮುನ್ನ ದೇಹದಲ್ಲಿ ಕೆಲವೊಂದು ಲಕ್ಷಣಗಳು ಕಂಡು ಬರುತ್ತವೆ. ಕೆಲವೊಮ್ಮೆ ಇದ್ದಕ್ಕಿಂದಂತೆ ತುಂಬಾ ಸುಸ್ತು ಎನಿಸಲು ಶುರುವಾಗುತ್ತದೆ. ಎದ್ದು ಸ್ವಲ್ಪ ದೂರ ನಡೆದರೆ ಸುಸ್ತು ಅನಿಸುತ್ತಿರುತ್ತದೆ. ಅದಕ್ಕೆ ಕಾರಣವು ತಿಳಿಯುವುದಿಲ್ಲ. ಇದ್ದಕ್ಕಿದ್ದಂತೆ ಹೃದಯದ ಬಡಿತವು (Heart beat) ತೀವ್ರವಾಗುತ್ತದೆ. ಇದರಿಂದ ಉಸಿರಾಡಲು ತುಂಬಾ ಕಷ್ಟವಾಗುವುದು. ಜೊತೆಗೆ ತಲೆಸುತ್ತು, ಮೈ ಬೆವರುವುದು ಪ್ರಾರಂಭವಾಗುತ್ತವೆ. ಎದೆಯಲ್ಲಿ ಭಾರೀ ನೋವು, ಬೆವರುವುದು, ಹೆದರಿಕೆ, ಅನೇಕ ಜನರು ವಾಂತಿ ಕೂಡ ಮಾಡಬಹುದು. ಇದ್ದಕ್ಕಿದ್ದಂತೆ ಉಸಿರಾಟದ ತೊಂದರೆ ಪ್ರಾರಂಭವಾಗುತ್ತದೆ. ಅಂತಹ ರೋಗಲಕ್ಷಣಗಳು ಸಂಭವಿಸಿದಾಗ ಮತ್ತು 10 ರಿಂದ 15 ನಿಮಿಷಗಳಲ್ಲಿ ಇದು ಸುಧಾರಿಸದಿದ್ದರೆ, ಇದು ಹೃದಯಾಘಾತದ ದೊಡ್ಡ ಲಕ್ಷಣವಾಗಿದೆ ಎಂದರ್ಥ. ಕೂಡಲೇ ಆಸ್ಪತ್ರೆಗೆ ಹೋಗಿ ಇಸಿಜಿ ಮಾಡಿಸಿ ಸೂಕ್ತ ಚಿಕಿತ್ಸೆ ನಾವು ಇವುಗಳನ್ನು ನಿರ್ಲಕ್ಷ್ಯ ಮಾಡಿರುತ್ತೇವೆ. ಇದರಿಂದಾಗಿ ಅಪಾಯ ಉಂಟಾಗುವ ಸಾಧ್ಯತೆ ಹೆಚ್ಚು.

ಪ್ರಥಮ ಚಿಕಿತ್ಸೆ ಹೇಗಿರಬೇಕು?
ಎದೆಯಲ್ಲಿ ನೋವು ಕಾಣಿಸಿ, ಮೈ ಬೆವರಿದರೆ ಹೆದರಿಕೊಳ್ಳಬೇಡಿ. ಈ ವೇಳೆ ಜೋರಾಗಿ ಕೆಮ್ಮಬೇಕು. ಅದು ಆಸ್ಪತ್ರೆಗೆ ಹೋಗುವವರೆಗೆ ಕೆಮ್ಮನ್ನು ನಿಲ್ಲಿಸಬಾರದು. ಸಾಮಾನ್ಯವಾಗಿ ಯಾರಿಗಾದರೂ ಹೃದಯಾಘಾತವಾದರೆ ಆಂಬ್ಯೂಲೆನ್ಸ್‌ಗೆ (Ambulance) ಕರೆ ಮಾಡಿ ಅದು ಬರುವವರೆಗೆ ಕಾಯುತ್ತಾರೆ. ಆದರೆ ಇಲ್ಲಿ ಒಂದೊಂದು ಕ್ಷಣವೂ ಅಮೂಲ್ಯವಾಗಿರುತ್ತದೆ. ಹೃದಯಾಘಾತದ ಮೊದಲ ಗಂಟೆಯನ್ನು ಗೋಲ್ಡನ್ ಅವರ್ ಎಂದು ಕರೆಯಲಾಗುತ್ತದೆ. ಒಂದು ವೇಳೆ ಹೃದಯಾಘಾತವಾಗಿ ವ್ಯಕ್ತಿ ನೆಲಕ್ಕೆ ಕುಸಿದರೆ ಕೂಡಲೇ ಆಂಬ್ಯುಲೆನ್ಸ್‌ಗೆ ಕರೆ ಮಾಡಿ ನಂತರ, ಆ ವ್ಯಕ್ತಿಯ ಎದೆಯನ್ನು ಜೋರಾಗಿ ಅದುಮಬೇಕು, ಜೋರಾಗಿ ಗುದ್ದಿದರೂ ಪರ್ವಾಗಿಲ್ಲ. ಸಾಧ್ಯವಾದರೆ ಅವರ ಬಾಯಿಗೆ ನಿಮ್ಮ ಬಾಯಿ ಇಟ್ಟು ಊದಿ. ಈ ರೀತಿ ಮಾಡುವುದರಿಂದ ಬದುಕುಳಿಯುವ ಸಾಧ್ಯತೆ ಹೆಚ್ಚು. ನಂತರ ಒಂದು ಕ್ಷಣವೂ ವ್ಯರ್ಥ ಮಾಡದೆ ತಕ್ಷಣವೇ ಸಮೀಪದ ಆಸ್ಪತ್ರೆಗೆ (Hospital) ಕೊಂಡೊಯ್ಯಬೇಕು.

ಸಿಕ್ಕಾಪಟ್ಟೆ ಎಮೋಷನಲ್ ಆಗ್ಬೇಡಿ, ಹೃದಯದ ಆರೋಗ್ಯಕ್ಕೆ ಡೇಂಜರ್ !

click me!