ಚಾಕೋಲೇಟ್ (Chocolate) ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ ? ಪುಟ್ಟ ಮಕ್ಕಳಿಂದ ಹಿರಿಯರವರೆಗೂ ಎಲ್ಲರಿಗೂ ಚಾಕೋಲೆಟ್ ಅಂದ್ರೆ ಇಷ್ಟದ ಸಿಹಿ ತಿನಿಸು. ಇವತ್ತು ಎಲ್ಲರ ನೆಚ್ಚಿನ ಚಾಕೋಲೇಟ್ ಡೇ. ಹೀಗಾಗಿ ಚಾಕೋಲೇಟ್ ಮೊದ್ಲು ಆರಂಭವಾಗಿದ್ದು ಯಾವಾಗ ? ಚಾಕೋಲೇಟ್ ತಿನ್ನೋದ್ರಿಂದ ಆರೋಗ್ಯ (Health)ಕ್ಕೇನು ಪ್ರಯೋಜನವಿದೆ ತಿಳ್ಕೊಳ್ಳೋಣ.
ಪ್ರತಿ ವರ್ಷ ಜುಲೈ 7ರಂದು ವಿಶ್ವ ಚಾಕೋಲೆಟ್ ದಿನ (International Chocolate Day)ವನ್ನು ಆಚರಣೆ ಮಾಡಲಾಗುತ್ತದೆ. 1550ರಲ್ಲಿ ಜುಲೈ 7 ರಂದು ಯುರೋಪ್ ಚಾಕೋಲೆಟ್ ಎಂಬ ಅದ್ಭುತ ತಿನಿಸನ್ನು ಪರಿಚಯಿಸಿತು. ಆ ಬಳಿಕ ಜಗತ್ತಿನ ಇತರ ದೇಶಗಳಲ್ಲೂ ವೆರೈಟಿ ಚಾಕೋಲೇಟ್‌ಗಳನ್ನು ತಯಾರಿಸಲಾಯಿತು. ಜುಲೈ 7ರಂದು ಯುರೋಪ್ ನವರು ವೆರೈಟಿ ಚಾಕೋಲೆಟ್ ರೆಸಿಪಿ (Recipe)ಗಳನ್ನು ತಯಾರಿಸಿ ಸೇವಿಸುತ್ತಾರೆ. ಯುನೈಟೆಡ್ ಸ್ಟೇಟ್‌ನಲ್ಲಿ ಮಾತ್ರ ಅಕ್ಟೋಬರ್ 28ರಂದು ಚಾಕೋಲೆಟ್ ಡೇಯನ್ನು ಆಚರಿಸಲಾಗುತ್ತದೆ.
ಆರೋಗ್ಯಕ್ಕೆ ಒಳ್ಳೆಯದಲ್ಲ ಅನ್ನೋ ಕಾರಣಕ್ಕೆ ಪೋಷಕರು, ಮಕ್ಕಳು ಚಾಕೋಲೇಟ್ ತಿನ್ನುವುದನ್ನು ತಡೆಯುತ್ತಾರೆ. ಆದ್ರೆ ಚಾಕೋಲೇಟ್ಸ್ ತಿನ್ನೋಂದ್ರಿದಲೂ ಆರೋಗ್ಯಕ್ಕೆ ಹಲವಾರು ಪ್ರಯೋಜನಗಳಿವೆ. ಸಾಮಾನ್ಯವಾಗಿ ಎಲ್ಲರೂ ಡಾರ್ಕ್ ಚಾಕೊಲೇಟ್ಸ್ ಹೆಚ್ಚಾಗಿ ತಿನ್ನುತ್ತಾರೆ. ಆದ್ರೆ ಕೇವಲ ಡಾರ್ಕ್ ಚಾಕೋಲೇಟ್ ಮಾತ್ರವಲ್ಲ ವೈಟ್ ಚಾಕೊಲೇಟ್ (White Chocolate) ತಿನ್ನೋದ್ರಿಂದಾನೂ ಆರೋಗ್ಯ (Health)ಕ್ಕೆ ಅದೆಷ್ಟು ಪ್ರಯೋಜನವಿದೆ ಗೊತ್ತಾ ?
Healthy Food : ಕೆಲವೇ ಕೆಲವರು ಕೇಳೋ ಪ್ರಶ್ನೆ, ತೂಕ ಹೆಚ್ಚಾಗ್ಬೇಕೆಂದ್ರೆ ಏನು ತಿನ್ಬೇಕು?
ಡಾರ್ಕ್ ಚಾಕೊಲೇಟ್ ಎಂಬ ಮ್ಯಾಜಿಕಲ್ ಪವರ್ ಇರುವ ಸಿಹಿ ಔಷಧ
ಒತ್ತಡ ನಿವಾರಕ: ಡಾರ್ಕ್ ಚಾಕಲೇಟ್ ನಲ್ಲಿ ಕಂಡುಬರುವ ಒಂದು ಘಟಕವೆಂದರೆ ತೆಯೋಬ್ರೊಮೈನ್. ತೆಯೋಬ್ರೊಮೈನ್ ಕೆಫೀನ್ ನಂತೆಯೇ ಇದೆ. ಈ ಚಾಕಲೇಟ್ ಸೇವನೆ ಮಾಡುವುದರಿಂದ ಸ್ಟ್ರೆಸ್ ಕಡಿಮೆಯಾಗುತ್ತದೆ. ಮನಸ್ಸಿನಿಂದ ಒತ್ತಡ ಕಡಿಮೆಯಾಗುವ ಕಾರಣ ಯಾವಾಗಲೂ ಖುಷಿಯಾಗಿರಲು ಸಾಧ್ಯವಾಗುತ್ತದೆ.
ಚರ್ಮ ಹೊಳೆಯುತ್ತೆ: ಸೂರ್ಯನ ಆಲ್ಟ್ರಾ ವಯಲೆಟ್ ಕಿರಣಗಳಿಂದ ಸ್ಕಿನ್ ಡ್ಯಾಮೇಜ್ ಆಗುವುದನ್ನು ರಕ್ಷಿಸಲು ಡಾರ್ಕ್ ಚಾಕಲೇಟ್ ಸಹಾಯ ಮಾಡುತ್ತದೆ. ನಿರಂತರವಾಗಿ ಚಾಕೋಲೇಟ್ ಸೇವಿಸುವುದರಿಂದ ಚರ್ಮ ಫಳಫಳ ಹೊಳೆಯುತ್ತದೆ. ಯಾವಾಗಲೂ ಕಾಂತಿಯುತವಾಗಿ ಕಂಗೊಳಿಸುತ್ತದೆ.
ನೆಗಡಿಗೆ ಔಷಧಿ: ನೆಗಡಿ ಇದ್ದರೆ ಚಾಕಲೇಟ್ ಆಧಾರಿತ ಔಷಧಿ ಸೇವನೆ ಮಾಡಿದರೆ, ಎರಡು ದಿನದಲ್ಲಿ ನೆಗಡಿ ಕಡಿಮೆಯಾಗುತ್ತದೆ. ಹೀಗಾಗಿ ಆಗಾಗ ಚಾಕೋಲೇಟ್ ತಿನ್ನುವ ಅಭ್ಯಾಸವಿದ್ದರೆ ಒಳ್ಳೆಯದು.
ರಕ್ತ ಹೆಪ್ಪುಗಟ್ಟುವಿಕೆ ತಡೆಯುತ್ತದೆ: ಡಾರ್ಕ್ ಚಾಕಲೇಟ್ ತಿನ್ನುವುದರಿಂದ ರಕ್ತದ ಒತ್ತಡ ಕಡಿಮೆಯಾಗುತ್ತದೆ. ಡಾರ್ಕ್ ಚಾಕೊಲೇಟ್ ರಕ್ತದ ಹರಿವನ್ನು ಸುಗಮಗೊಳಿಸುತ್ತದೆ ಮತ್ತು ರಕ್ತ ಹೆಪ್ಪುಗಟ್ಟುವಿಕೆಯನ್ನು ತಡೆಯುತ್ತದೆ.
ಕ್ಯಾನ್ಸರ್ ರೋಗಿಗಳಿಗೆ ಒಳ್ಳೆಯದು: ಡಾರ್ಕ್ ಚಾಕಲೇಟ್ ನಲ್ಲಿ ಪ್ರಬಲ ಆಂಟಿ ಆಕ್ಸಿಡೆಂಟುಗಳು ಅಧಿಕ ಪ್ರಮಾಣದಲ್ಲಿವೆ. ಇವು ಕ್ಯಾನ್ಸರ್ ರೋಗಿಗಳ ಆರೋಗ್ಯ ಮಟ್ಟ ಸುಧಾರಿಸಲು ಸಹಾಯ ಮಾಡುತ್ತವೆ.
ಮೆದುಳು ಚುರುಕಾಗುತ್ತದೆ: ಡಾರ್ಕ್ ಚಾಕಲೇಟ್ ಮೆದುಳಿಗೆ ಮತ್ತು ಹೃದಯಕ್ಕೆ ರಕ್ತದ ಹರಿವನ್ನು ಹೆಚ್ಚಿಸುತ್ತದೆ. ಇದರಿಂದ ಮೆದುಳು ಚುರುಕಾಗುತ್ತದೆ. ಜೊತೆಗೆ ಇದು ಪಾರ್ಶ್ವವಾಯು ಬರುವುದನ್ನು ತಡೆಯುವ ಗುಣವನ್ನು ಹೊಂದಿದೆ. ಕೊಕೊದ ಅಂಶ ಡಾರ್ಕ್ ಚಾಕಲೇಟ್ ಗಳಲ್ಲಿ ಹೆಚ್ಚಾಗಿರುವುದರಿಂದ ಮನಸಿನ ಮೇಲೆ ಧನಾತ್ಮಕ ಪರಿಣಾಮ ಬೀರುತ್ತದೆ.
Chocolate Benefits: ಬಿಳಿ ಚಾಕೋಲೇಟ್ ತಿಂದ್ರೆ ಆರೋಗ್ಯಕ್ಕೆಷ್ಟು ಲಾಭವಿದೆ ಗೊತ್ತಾ ?
ಹೃದಯ ಸಂಬಂಧಿ ಕಾಯಿಲೆಯ ಭಯವಿಲ್ಲ: ಕೊಕೊವನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ಹೃದಯ ಸಂಬಂಧಿ ಕಾಯಿಲೆಯ ವಿರುದ್ಧ ಹೋರಾಡುವಲ್ಲಿ ಧನಾತ್ಮಕ ಪರಿಣಾಮ ಬೀರಬಹುದು ಎಂದು ಸಣ್ಣ ಪ್ರಮಾಣದ ಅಧ್ಯಯನಗಳು ಸೂಚಿಸುತ್ತವೆ.
ಚಾಕೊಲೇಟ್ ದಿನ ಆರಂಭವಾಗಿದ್ದು ಹೇಗೆ ?
ಯೂರೋಪ್ನಲ್ಲಿ 1,550ರಲ್ಲಿ ಚಾಕೊಲೇಟ್ನ್ನು ಕಂಡುಕೊಳ್ಳಲಾಯಿತು. ಕ್ರಿಸ್ತಪೂರ್ವ 450ರ ಆರಂಭದಲ್ಲಿ ಚಾಕೊಲೇಟ್ ಒಂದು ಕಹಿ ಪಾನೀಯವಾಗಿ ಮಾತ್ರ ಬಳಕೆಯಲ್ಲಿತ್ತು. 16 ಶತಮಾನದಲ್ಲಿ ಯೂರೋಪ್ನಲ್ಲಿ ಚಾಕೊಲೇಟ್ಗೆ ಸಕ್ಕರೆಯನ್ನು ಸೇರ್ಪಡೆ ಮಾಡಿದ ಬಳಿಕ ಮತ್ತಷ್ಟು ಜನಪ್ರಿಯವಾಯಿತು. 20 ನೇ ಶತಮಾನದಲ್ಲಿ ಅಮೇರಿಕಾ ಸೈನ್ಯ ಅಗತ್ಯ ವಸ್ತುಗಳೊಂದಿಗೆ ಚಾಕೊಲೇಟ್ನ್ನು ಸೇರ್ಪಡೆ ಮಾಡಲಾಯಿತು. ಯುದ್ಧದ ಸಂದರ್ಭಗಳಲ್ಲಿ ಸೈನಿಕರಿಗೆ ಚಾಕೊಲೇಟ್ ನೀಡಲಾಗುತ್ತಿತ್ತು.
ಚಾಕೊಲೇಟ್ ತಯಾರಿಸುವುದು ಹೇಗೆ ?
ಕೋಕೋ ಬೀನ್ಸ್ ಆರಂಭದಲ್ಲಿ ಕಹಿ ರುಚಿಯನ್ನು ಹೊಂದಿದ್ದು, ಮರದಿಂದ ತೆಗೆದ ನಂತರ ಅದನ್ನು ಹುರಿಯುವುದು, ಶೆಲ್ ತೆಗೆಯುವುದು ಮತ್ತು ಬಿಸಿಮಾಡುವುದು ಸೇರಿದಂತೆ ವಿವಿಧ ಪ್ರಕ್ರಿಯೆಗಳ ಮೂಲಕ ಹಾದು ಹೋಗಿ ಅದು ಅಂತಿಮವಾಗಿ ಚಾಕೊಲೇಟ್ ಆಗುತ್ತದೆ. ರುಬ್ಬುವ ಮೂಲಕ ಬೀನ್ಸ್ನ್ನು ಕೋಕೋ ಸಾರವಾಗಿ ಪರಿವರ್ತಿಸಲಾಗುತ್ತದೆ. ಮದ್ಯವನ್ನು ನಂತರ ಸಕ್ಕರೆ ಮತ್ತು ಕೋಕೋ ಬೆಣ್ಣೆಯೊಂದಿಗೆ ಬೆರೆಸಿ ಅಂತಿಮ ಉತ್ಪನ್ನವಾಗಿ ಚಾಕೊಲೇಟ್ ಹೊರ ಬರುತ್ತದೆ.