Bath and Life: ಬಾತ್‌ಟಬ್‌ನಲ್ಲಿ ಸ್ನಾನ ಮಾಡೋದಕ್ಕೂ ಆಯುಷ್ಯಕ್ಕೂ ಸಂಬಂಧವಿದೆ!

By Contributor Asianet  |  First Published Feb 19, 2022, 4:40 PM IST

ನೀವು ಪ್ರತಿದಿನಾ ಬಾತ್‌ಟಬ್‌ನಲ್ಲಿ ಬಿಸಿನೀರಿನ ಸ್ನಾನ ಮಾಡ್ತೀರಾ? ಹಾಗಿದ್ರೆ ನಿಮ್ಮ ಆರೋಗ್ಯ ದೀರ್ಘಕಾಲಿಕವಾಗಿ ಚೆನ್ನಾಗಿರುತ್ತೆ. ಹಾಗಂತ ಸಂಶೋಧನೆಯೊಂದು ಹೇಳ್ತಿದೆ..
 


ವಾರದಲ್ಲಿ ಕನಿಷ್ಠ ಎರಡು ಬಾರಿ ಹೆಚ್ಚು ಟಬ್ ಸ್ನಾನ (Bath tub) ಮಾಡದ ಜನರಿಗೆ ಹೋಲಿಸಿದರೆ, ಪ್ರತಿನಿತ್ಯ ಬೆಚ್ಚಗಿನ ಅಥವಾ ಬಿಸಿನೀರಿನ ಸ್ನಾನ ಮಾಡುವ ಜನರಿಗೆ ಹೃದಯ ರಕ್ತನಾಳದ (Heart problem) ಕಾಯಿಲೆಯ ರಿಸ್ಕ್‌ನಲ್ಲಿ 28%ನಷ್ಟು ಕಡಿಮೆ ಮತ್ತು ಪಾರ್ಶ್ವವಾಯು (Stroke) ಸಾಧ್ಯತೆಯಲ್ಲಿ 26% ಕಡಿಮೆಯಾಗಿದೆ ಅಂತ ಜಪಾನಿನ (Japan) ಸಂಶೋಧನೆಯೊಂದು ಹೇಳಿದೆ.

ಒಬ್ಬ ವ್ಯಕ್ತಿ ವಾರದಲ್ಲಿ ಎಷ್ಟು ಬಾರಿ ಸ್ನಾನ ಮಾಡಬೇಕು ಎಂಬುದಕ್ಕೆ ಸೂಕ್ತವಾದ ಉತ್ತರವಿಲ್ಲ. ಚಳಿ (Winter) ಪ್ರದೇಶದಲ್ಲಿ ಇರುವವರು ನಿತ್ಯವೂ ಸ್ನಾನ ಮಾಡುವುದಿಲ್ಲ. ತುಂಬಾ ಬಿಸಿಲಿನ ಪ್ರದೇಶದಲ್ಲಿ ಇರುವವರು ನೀರಿನ ಲಭ್ಯತೆಯಿಲ್ಲದಿದ್ದಲ್ಲಿ ಒದ್ದೆ ಬಟ್ಟೆಯಿಂದ ಮೈ ಉಜ್ಜಿಕೊಳ್ಳುತ್ತಾರೆ. ಸೌಲಭ್ಯವಿರುವವರು ಹಾಗೂ ನೀರಿನ ಲಭ್ಯತೆ ಇರುವವರು ಮಾತ್ರ ಪ್ರತಿನಿತ್ಯ ಸ್ನಾನ ಮಾಡುತ್ತಾರೆ. ಆದರೆ ಬಾತ್‌ಟಬ್‌ನಲ್ಲಿ ಎಲ್ಲರೂ ಸ್ನಾನ ಮಾಡೋಲ್ಲ. ತಜ್ಞರ ಪ್ರಕಾರ ವಾರಕ್ಕೆ ಹಲವಾರು ಬಾರಿ ಸ್ನಾನ ಮಾಡುವುದು ಸೂಕ್ತ (ಅತಿಯಾದ ಬೆವರುವಿಕೆ ಅಥವಾ ಪದೇ ಪದೇ ಸ್ನಾನಕ್ಕೆ ಇತರ ಕಾರಣ ಹೊಂದಿಲ್ಲದೇ ಇದ್ದರೆ). ತೋಳ ಸಂದಿಗಳು ಮತ್ತು ತೊಡೆಸಂದುಗಳ ಮೇಲೆ ಕೇಂದ್ರೀಕರಿಸಿ ಮೂರು ಅಥವಾ ನಾಲ್ಕು ನಿಮಿಷಗಳ ಕಾಲ ಶವರ್‌ ತೆಗೆದುಕೊಳ್ಳುವುದು ಸಾಕಾಗಬಹುದು.

Tap to resize

Latest Videos

undefined

No Plastic Please: ಬಿದಿರಿನ ಬ್ರಷ್ ಬಳಸಿ, ಪರಿಸರ ಉಳಿಸಿ

ಪ್ರತಿದಿನ ಸ್ನಾನ ಮಾಡಬೇಕೆ?

ಆಷ್ಟನ್ ಕಚ್ಚರ್ ಮತ್ತು ಮಿಲಾ ಕುನಿಸ್ ಅವರು ಜುಲೈ 2021ರಲ್ಲಿ ಪಾಡ್‌ಕ್ಯಾಸ್ಟ್ ಒಂದರಲ್ಲಿ ಕಾಣಿಸಿಕೊಂಡ ವೇಳೆ ಸೆಲೆಬ್ರಿಟಿಗಳ ನೈರ್ಮಲ್ಯದ ಕುರಿತು ಸಾರ್ವಜನಿಕ ಸಂವಾದ ನಡೆಸಿದ್ದರು. ಈ ವೇಳೆ, ಆರ್ಮ್‌ಚೇರ್ ಎಕ್ಸ್‌ಪರ್ಟ್ ಹೋಸ್ಟ್ ಆಗಿದ್ದ ಡಾಕ್ಸ್ ಶೆಫರ್ಡ್‌ಗೆ ಆಷ್ಟನ್ ಅವರು, "ನಾನು ನನ್ನ ತೋಳು ಮತ್ತು ತೊಡೆಸಂದುವನ್ನು ಪ್ರತಿದಿನ ತೊಳೆಯುತ್ತೇನೆ ಅಷ್ಟೇ ಬೇರೇನೂ ಮಾಡೋದಿಲ್ಲ," ಎಂದಿದ್ದರು. ಹಾರ್ವರ್ಡ್ ವೈದ್ಯ ರಾಬರ್ಟ್ ಎಚ್ ಶ್ಮರ್ಲಿಂಗ್ ಅವರು ಹೀಗೆ ಬರೆದಿದ್ದಾರೆ: "ಸುಮಾರು ಮೂರನೇ ಎರಡರಷ್ಟು ಅಮೆರಿಕನ್ನರು ಪ್ರತಿದಿನ ಸ್ನಾನ ಮಾಡುತ್ತಾರೆ. ಆಸ್ಟ್ರೇಲಿಯಾದಲ್ಲಿ ಇದು 80 ಪ್ರತಿಶತಕ್ಕಿಂತ ಹೆಚ್ಚು. ಆದರೆ ಚೀನಾದಲ್ಲಿ, ಅರ್ಧದಷ್ಟು ಜನರು ವಾರಕ್ಕೆ ಎರಡು ಬಾರಿ ಮಾತ್ರ ಸ್ನಾನ ಮಾಡುತ್ತಾರೆ."

ಪ್ರತಿದಿನ ಸ್ನಾನ ಮಾಡುವುದನ್ನು ಭಾರತೀಯ ಸಂಪ್ರದಾಯಗಳಲ್ಲಿ ವಿವರಿಸಲಾಗಿದೆ ಮತ್ತು ಒಂದು ದಿನ ಸ್ನಾನ ಮಾಡದಿದ್ದರೆ ಪೂಜೆ ಮಾಡುವುದು, ಅಡಿಗೆ ಮನೆ, ದೇವಾಲಯಗಳಿಗೆ ಪ್ರವೇಶಿಸುವುದು ಇತ್ಯಾದಿಗಳನ್ನು ನಿರ್ಬಂಧಿಸಲಾಗಿದೆ. ಹಲವಾರು ಸೆಲೆಬ್ರಿಟಿಗಳು ಅಷ್ಟೇನೂ ಕಟ್ಟುನಿಟ್ಟಿನ ಸ್ನಾನದ ಅಭ್ಯಾಸ ಹೊಂದಿಲ್ಲ. ಆದರೆ ದೈನಂದಿನ ಸ್ನಾನ ತಪ್ಪಿಸುವುದರಿಂದ ಚರ್ಮದ ಸೋಂಕುಗಳು (Skin allergy) ಮತ್ತು 'ಜನನಾಂಗದ ಕೆಟ್ಟ ವಾಸನೆ'ಗೆ ಕಾರಣವಾಗಬಹುದು.

ಬಿಸಿ ನೀರಿನ ಶವರ್ ಅಥವಾ ತಣ್ಣನೆಯ ಶವರ್?

ಈಗ ಚರ್ಚೆ ಎಂದರೆ ನೀವು ಬಿಸಿ ನೀರಿನಿಂದ (Hot water) ಸ್ನಾನ ಮಾಡಬೇಕೇ ಅಥವಾ ತಣ್ಣೀರಿನಿಂದ (Cold water) ಸ್ನಾನ ಮಾಡಬೇಕೆ ಎಂಬ ಬಗ್ಗೆ. "ಬಿಸಿ ನೀರಿನ ಸ್ನಾನ ನಿಮ್ಮ ಹೃದಯವನ್ನು ರಕ್ಷಿಸಬಹುದೇ?" ಎಂಬ ಕುರಿತು ಹಾರ್ವರ್ಡ್ ವರದಿ ಬೆಳಕು ಚೆಲ್ಲಿದೆ.

ನಿಯಮಿತವಾದ ಟಬ್ ಸ್ನಾನವು ಹೃದ್ರೋಗ ಮತ್ತು ಪಾರ್ಶ್ವವಾಯು ಸಂಬಂಧಿ ಸಾವಿನ ಸಾಧ್ಯತೆಯನ್ನು ಕಡಿಮೆ ಮಾಡಬಲ್ಲದು ಎಂದು ಸುದೀರ್ಘಾವಧಿ ಅಧ್ಯಯನವೊಂದು ತೋರಿದ್ದು, ಆನ್ಲೈನ್‌ನ ಹಾರ್ಟ್ ಜರ್ನಲ್‌ನಲ್ಲಿ ಪ್ರಕಟವಾಗಿದೆ. ನಿಯಮಿತವಾದ ಟಬ್‌ ಸ್ನಾನವು ಹೃದಯರಕ್ತನಾಳದ ಕಾಯಿಲೆಯಿಂದ ಸಾವಿನ ಸಾಧ್ಯತೆ ಕಡಿಮೆ ಮಾಡುತ್ತದೆ ಎಂದು ಕಂಡುಬಂದಿದೆ. ಒಂದು ವಾರದ ಅವಧಿಯಲ್ಲಿ ಬಿಸಿನೀರಿನ ಸ್ನಾನದ ವಿಚಾರದಲ್ಲಿ, "ಪ್ರತಿನಿತ್ಯ ಬಿಸಿನೀರಿನ ಸ್ನಾನವು ವಾರಕ್ಕೆ ಒಂದರಿಂದ ಎರಡು ಬಾರಿ ಸ್ನಾನ ಮಾಡುವುದಕ್ಕಿಂತ ಹೆಚ್ಚು ಪರಿಣಾಮಕಾರಿಯಾಗಿದೆ," ಎಂದು ತಿಳಿದುಬಂದಿದೆ.

ಜಪಾನ್‌ನ ಒಸಾಕಾ ಯೂನಿವರ್ಸಿಟಿ ಗ್ರಾಜುಯೇಟ್ ಸ್ಕೂಲ್ ಆಫ್ ಮೆಡಿಸಿನ್‌ನ ಸಂಶೋಧಕರ ತಂಡವು ನಡೆಸಿದ "ಹ್ಯಾಬಿಚುಯಲ್ ಟಬ್ ಬಾತಿಂಗ್ ಅಂಡ್ ಇನ್ಸಿಡೆಂಟ್ ಕರೋನರಿ ಹಾರ್ಟ್ ಡಿಸೀಸ್ ಅಂಡ್ ಸ್ಟ್ರೋಕ್" ಎಂಬ ಶೀರ್ಷಿಕೆಯ ಅಧ್ಯಯನವೊಂದು ಪ್ರಸಿದ್ಧ ವೈದ್ಯಕೀಯ ಜರ್ನಲ್ ಬಿಎಂಜೆನಲ್ಲಿ ಪ್ರಕಟಿಸಲಾಗಿದೆ.

ಹೃದಯರಕ್ತನಾಳದ ಕಾಯಿಲೆಯು (ಸಿವಿಡಿ) ವಿಶ್ವದಾದ್ಯಂತ ಅಕಾಲಿಕ ಮರಣಕ್ಕೆ ಪ್ರಮುಖ ಕಾರಣ. ಧೂಮಪಾನ, ದೈಹಿಕ ವ್ಯಾಯಾಮದ ಕೊರತೆ, ಮದ್ಯಪಾನಗಳಂಥ ವೈಯಕ್ತಿಕ ಜೀವನಶೈಲಿ ನಡವಳಿಕೆಗಳೊಂದಿಗೆ ಸಂಬಂಧಿಸಿದೆ ಎಂದು ಸಂಶೋಧಕರು ಹೇಳಿದ್ದಾರೆ. ಸ್ನಾನ ಮಾಡುವುದು ಜೀವನಶೈಲಿಯ ಮತ್ತೊಂದು ನಡವಳಿಕೆಯಾಗಿದೆ, ಮತ್ತು ಜನರು ಸ್ನಾನ ಮಾಡುವ ವಿಧಾನಗಳು ದೇಶಗಳು ಮತ್ತು ಸಂಸ್ಕೃತಿಗಳ ಅನುಸಾರ ವ್ಯಾಪಕವಾಗಿ ಭಿನ್ನವಾಗಿರುತ್ತದೆ.

1990ರಿಂದ 2009ರವರೆಗಿನ ಅವಧಿಯಲ್ಲಿ 40-59 ವರ್ಷ ವಯಸ್ಸಿನ ಒಟ್ಟು 30,076 ಮಂದಿಯನ್ನು ಅಧ್ಯಯನಕ್ಕೆ ಒಳಪಡಿಸಲಾಯಿತು. ಈ ಮಂದಿಯ ಸ್ನಾನದ ಅಭ್ಯಾಸಗಳನ್ನು ಗಮನಿಸಿದ್ದು; ವಾರದಲ್ಲಿ ಎರಡು ಬಾರಿ, ಮೂರರಿಂದ ನಾಲ್ಕು ಬಾರಿ/ವಾರ ಮತ್ತು ಬಹುತೇಕ ಪ್ರತಿನಿತ್ಯ ಸ್ನಾನ ಮಾಡುವವರನ್ನಾಗಿ ಪ್ರತ್ಯೇಕಿಸಲಾಗಿತ್ತು. ಟಬ್‌ನಲ್ಲಿ ಪ್ರತಿದಿನ ಬಿಸಿನೀರು ಸ್ನಾನ ಮಾಡುವವರಿಗೆ ಕಡಿಮೆ ಕ್ಯಾನ್ಸರ್, ಕಡಿಮೆ ಹೃದಯ ರೋಗ ಕಂಡುಬಂದಿದೆ. ಕಡಿಮೆ ಬಾರಿ ಸ್ನಾನ ಮಾಡಿದ ಮಂದಿಯ ಪೈಕಿ ಧೂಮಪಾನಿಗಳು, ದೈಹಿಕ ಕೆಲಸ ಮಾಡುವವರು, ಉದ್ಯೋಗವಿಲ್ಲದವರು, ದೀರ್ಘ ನಿದ್ರೆಯ ಅವಧಿ ಮತ್ತು ಮಧುಮೇಹ ಇತಿಹಾಸವನ್ನು ಹೊಂದಿರುವವರು ಇದ್ದರು.

ಹೇಗೆ ಸ್ನಾನ ಮಾಡಬೇಕು?

ವಿಪರೀತ ಬಿಸಿ ನೀರಿನಲ್ಲಿ ಸ್ನಾನ ಮಾಡುವುದು ಸಲ್ಲದು. ಅದು ಚರ್ಮದ ಕಾಯಿಲೆಗೆ ಕಾರಣವಾದೀತು. ಉಗುರು ಬೆಚ್ಚಗಿನ ನೀರು ಒಳ್ಳೆಯದು. ತುಂಬಾ ಬಿಸಿನೀರು ಉಸಿರುಗಟ್ಟಿಸಲೂ ಕಾರಣವಾಗಬಹುದು.

Health Care : ಸ್ನಾನದ ವಿಷಯದಲ್ಲಿ ನೀವು 100% ಮಾಡ್ತಿರೋ ಮಿಸ್ಟೇಕಿದು..

 

click me!