ಮಕ್ಕಳು ಪದೇ ಪದೇ ಶೀತ, ಕೆಮ್ಮು, ಜ್ವರದಂತಹ ಖಾಯಿಲೆಗೆ ತುತ್ತಾಗುತ್ತಾರೆ. ಈ ಸಂದರ್ಭದಲ್ಲಿ ಮಕ್ಕಳ ಮೂಗು ಕಟ್ಟಿಕೊಳ್ಳುತ್ತದೆ. ಇದು ಅವರ ಉಸಿರಾಟ ಕ್ರಿಯೆಯಲ್ಲಿ ಏರುಪೇರು ಮಾಡುತ್ತದೆ. ಮಕ್ಕಳ ಉಸಿರಾಟ ಕ್ರಿಯೆ ಸುಗಮಗೊಳಿಸಲು ನೆಬ್ಯುಲೈಸರ್ ಬಳಕೆ ಮಾಡಲಾಗುತ್ತದೆ. ನೆಬ್ಯುಲೈಸರ್ ಬಳಸುವ ಮುನ್ನ ಅದ್ರ ಬಗ್ಗೆ ಸ್ವಲ್ಪ ತಿಳಿದಿರಿ.
ನೆಗಡಿಯಾಗ್ತಿದ್ದಂತೆ ಮೂಗು ಕಟ್ಟಿಕೊಳ್ಳುತ್ತದೆ. ಇದ್ರಿಂದ ಉಸಿರಾಟ ಕಷ್ಟವಾಗುತ್ತದೆ. ಮಕ್ಕಳಿಗೆ ಕೂಡ ಮೂಗು ಕಟ್ಟುವ ಸಮಸ್ಯೆ ಕಾಡುತ್ತದೆ. ಅನೇಕ ಪಾಲಕರು ಮಕ್ಕಳಿಗೆ ನೆಗಡಿಯಾಗಿದೆ ಎಂದ ತಕ್ಷಣ ನೆಬ್ಯುಲೈಸರ್ ಸಹಾಯ ಪಡೆಯುತ್ತಾರೆ. ನೆಬ್ಯುಲೈಸರ್ ಬರೀ ನೆಗಡಿಗೆ ಬಳಸುವ ಚಿಕಿತ್ಸೆಯಲ್ಲ. ಮಕ್ಕಳಿಗೆ ಇನ್ನೂ ಬೇರೆ ಬೇರೆ ಕಾರಣಕ್ಕೆ ಇದನ್ನು ನೀಡಲಾಗುತ್ತದೆ. ಹಾಗೆಯೇ ಇದ್ರಲ್ಲಿ ಸಣ್ಣಪುಟ್ಟ ಅಡ್ಡಪರಿಣಾಮ ಕೂಡ ಇದೆ. ನಾವಿಂದು ಇದ್ರ ಬಗ್ಗೆ ನಿಮಗೆ ಮಾಹಿತಿ ನೀಡ್ತೇವೆ.
ನೆಬ್ಯುಲೈಸರ್ (Nebulizer) ಅಂದ್ರೇನು? : ನೆಬ್ಯುಲೈಸರ್ ಸರಿಯಾಗಿ ಉಸಿರಾಡಲು ಸಹಾಯ ಮಾಡುವ ಒಂದು ಚಿಕಿತ್ಸೆ (Treatment) . ನೆಬ್ಯುಲೈಸರ್ ನಲ್ಲಿ ಮೆಡಿಸಿನ್ ಹಾಕಿ ಮಕ್ಕಳ ಮೂಗಿಗೆ ಹಿಡಿಯಲಾಗುತ್ತದೆ. ಇದು ಉಸಿರಾಟ (Breathing) ಕ್ರಿಯೆಯನ್ನು ಸುಲಭಗೊಳಿಸುತ್ತದೆ. ನೆಬ್ಯುಲೈಸರ್ ಮೂಲಕ ಔಷಧ ದೇಹವನ್ನು ಸುಲಭವಾಗಿ ತಲುಪಿಸಲಾಗುತ್ತದೆ. ಈ ಚಿಕಿತ್ಸೆಯು ಇನ್ಹಲೇಷನ್ ಮೂಲಕ ನೇರವಾಗಿ ಶ್ವಾಸಕೋಶಗಳಿಗೆ ಔಷಧಿಗಳನ್ನು ತಲುಪಿಸಲು ಪರಿಣಾಮಕಾರಿ ಮತ್ತು ಸುಧಾರಿತ ಮಾರ್ಗವಾಗಿದೆ. ಅಸ್ತಮಾ (Asthma) ದಿಂದ ಬಳಲುತ್ತಿರುವ ಮಕ್ಕಳಿಗೆ ಇದನ್ನು ಹೆಚ್ಚಾಗಿ ಬಳಕೆ ಮಾಡಲಾಗುತ್ತದೆ. ದೀರ್ಘಕಾಲದ ಪ್ರತಿರೋಧಕ ಶ್ವಾಸಕೋಶದ ಕಾಯಿಲೆ, ಬ್ರಾಂಕೈಟಿಸ್, ನ್ಯುಮೋನಿಯಾ ಸೇರಿದಂತೆ ಉಸಿರಾಟದ ಸಮಸ್ಯೆಯನ್ನು ಹೊಂದಿದ್ದರೆ ಅದಕ್ಕೂ ನೆಬ್ಯುಲೈಸರ್ ಬಳಕೆ ಮಾಡಲಾಗುತ್ತದೆ.
ಮಕ್ಕಳಿಗೆ ದಿನಕ್ಕೆ ಎಷ್ಟು ಬಾರಿ ನೀಡಬೇಕು ನೈಬ್ಯುಲೈಸರ್ ? : ಮಕ್ಕಳಿಗೆ ನೆಬ್ಯುಲೈಸರನ್ನು ಅಗತ್ಯವಾಗಿ ನೀಡಬಹುದು. ಆದ್ರೆ ವೈದ್ಯರ ಸಲಹೆ ಇಲ್ಲದೆ ಈ ಚಿಕಿತ್ಸೆ ನೀಡುವುದು ಸೂಕ್ತವಲ್ಲ. ಮಕ್ಕಳಿಗೆ ನೆಬ್ಯುಲೈಸರ್ ಬಳಸುವ ವೇಳೆ ಎಚ್ಚರಿಕೆ ಅಗತ್ಯ. ದಿನಕ್ಕೆ 3 ರಿಂದ 4 ಬಾರಿ ಮಾತ್ರ ನೀವು ನೆಬ್ಯುಲೈಸರ್ ಮೂಲಕ ಔಷಧವನ್ನು ನೀಡಬಹುದು ಎನ್ನುತ್ತಾರೆ ವೈದ್ಯರು. ಅದಾಗ್ಯೂ ಮಗುವಿನ ಸ್ಥಿತಿ ಹೇಗಿದೆ ಎನ್ನುವುದರ ಮೇಲೆ ಚಿಕಿತ್ಸೆ ಅವಲಂಬಿಸಿದೆ. ಕೆಲವರಿಗೆ ದಿನದಲ್ಲಿ ಒಂದು ಬಾರಿ ಮಾತ್ರ ನೆಬ್ಯುಲೈಸರ್ ಅಗತ್ಯವಿರುತ್ತದೆ. ಮತ್ತೆ ಕೆಲ ಮಕ್ಕಳಿಗೆ ದಿನಕ್ಕೆ ಐದಾರು ಬಾರಿ ನೀಡಬೇಕಾಗುತ್ತದೆ. ಮಕ್ಕಳ ಆರೋಗ್ಯ ಸ್ಥಿತಿ ಗಮನಿಸಿ ವೈದ್ಯರು ಈ ಬಗ್ಗೆ ಸಲಹೆ ನೀಡ್ತಾರೆ.
ಮಕ್ಕಳ ನೆಬ್ಯುಲೈಸರ್ ಗೆ ಹಾಕುವ ಔಷಧಿಗಳ ವಿಧ :
ಔಷಧೀಯವಲ್ಲದ ದ್ರವ : ಮಗುವಿನ ಮೂಗು ಒಣಗಿದಾಗ ಮತ್ತು ಲೋಳೆಯ ಪೊರೆಗಳಿಗೆ ತೇವಾಂಶದ ಅಗತ್ಯವಿರುವಾಗ ಔಷಧದ ಬದಲಿಗೆ ಸರಳವಾದ ಲವಣಯುಕ್ತ ದ್ರವವನ್ನು ಬಳಸಿಕೊಂಡು ನೆಬ್ಯುಲೈಸೇಶನ್ ಮಾಡಲಾಗುತ್ತದೆ. ಇದು ಪೊರೆಯನ್ನು ತೇವಗೊಳಿಸುತ್ತದೆ ಮತ್ತು ಶುಷ್ಕತೆಯನ್ನು ಕಡಿಮೆ ಮಾಡುತ್ತದೆ.
ರೂಮಿಗೆ ಹೋಗ್ತೀರಿ, ಆದ್ರೆ ಯಾಕೆ ಹೋದೆ ಅಂತಾನೆ ನೆನಪಿರಲ್ಲ… ನಿಮಗೂ ಹೀಗಾಗುತ್ತಾ?
ಔಷಧೀಯ ದ್ರವ : ರಿನಿಟಿಸ್, ಆಸ್ತಮಾ ಅಥವಾ ಯಾವುದೇ ರೀತಿಯ ಕಾಯಿಲೆಯಿಂದ ಬಳಲುತ್ತಿರುವ ಮಕ್ಕಳಿಗೆ ರಾಸಾಯನಿಕಗಳನ್ನು ಹೊಂದಿರುವ ಔಷಧೀಯ ದ್ರವವನ್ನು ನೀಡಲಾಗುತ್ತದೆ. ತೀವ್ರವಾದ ಆಸ್ತಮಾದ ಪ್ರಕರಣಗಳಲ್ಲಿ ಔಷಧೀಯ ದ್ರವದಲ್ಲಿ ಕಾರ್ಟಿಕೊಸ್ಟೆರಾಯ್ಡ್ ಗಳು ಅಥವಾ ಬ್ರಾಂಕೋಡಿಲೇಟರ್ ಗಳ ಸಂಯೋಜನೆಯನ್ನು ಬಳಸಿಕೊಂಡು ನೆಬ್ಯುಲೈಸೇಶನ್ ನೀಡಲಾಗುತ್ತದೆ.
ನೆಗಡಿ – ಕೆಮ್ಮಿಗೆ ನೆಬ್ಯುಲೈಸರ್ : ಸಾಮಾನ್ಯ ಕೆಮ್ಮು ಮತ್ತು ಶೀತದಿಂದಾಗಿ ಮೂಗು ಒಳಗಿನಿಂದ ಒಣಗುತ್ತದೆ. ಮೂಗು ಕಟ್ಟಿಕೊಳ್ಳುತ್ತದೆ. ಆಗ ಮಗು ಬಾಯಿಯ ಮೂಲಕ ಉಸಿರಾಡಲು ಪ್ರಾರಂಭಿಸುತ್ತದೆ. ಇಂಥ ಸಂದರ್ಭದಲ್ಲಿ ನೀವು ಮಕ್ಕಳಿಗೆ ನೆಬ್ಯುಲೈಸರ್ ನೀಡಿದ್ರೆ ಮೂಗಿನ ಒಳಗಿನ ಪೊರೆ ತೇವ ಪಡೆಯುತ್ತದೆ. ಮೂಗಿನಲ್ಲಿ ಸಿಕ್ಕಿರುವ ಲೋಳೆ ಸಡಿಲವಾಗುತ್ತದೆ. ಮಕ್ಕಳ ಉಸಿರಾಟ ಸುಲಭವಾಗುತ್ತದೆ. ನಿಮ್ಮ ಮಗುವಿಗೆ ಆಗಾಗ ನೆಬ್ಯುಲೈಸರ್ ನೀಡಬೇಕು ಎಂದಾದ್ರೆ ನೀವು ಮಾರುಕಟ್ಟೆಯಲ್ಲಿ ಸಿಗುವ ನೆಬ್ಯುಲೈಸರ್ ಖರೀದಿ ಮಾಡಬಹುದು. ನೆಬ್ಯುಲೈಸರ್ ನಲ್ಲಿ, ಸ್ಟೇಷನರಿ ನೆಬ್ಯುಲೈಸರ್, ಮೊಬೈಲ್ ನೆಬ್ಯುಲೈಸರ್, ಅಲ್ಟ್ರಾಸಾನಿಕ್ ನೆಬ್ಯುಲೈಸರ್, ಜೆಟ್ ನೆಬ್ಯುಲೈಸರ್, ಮೆಶ್ ನೆಬ್ಯುಲೈಸರ್ ಇದ್ದು, ವೈದ್ಯರ ಸಲಹೆ ಮೇರೆಗೆ ನೀವು ಖರೀದಿ ಮಾಡಬೇಕಾಗುತ್ತದೆ.
Kids Health: ಆಟಿಕೆಯಿಂದ ಕಾಯಿಲೆ ಹರಡುತ್ತೆ, ಟಾಯ್ಸ್ ಕ್ಲೀನ್ ಮಾಡೋದ್ ಹೇಗೆ ಗೊತ್ತಿರಲಿ
ನೆಬ್ಯುಲೈಸರ್ ನಿಂದಾಗುವ ಅಡ್ಡ ಪರಿಣಾಮ : ಗಂಟಲಿನ ಶುಷ್ಕತೆ , ಬಾಯಿ ರುಚಿ ಬದಲಾಗುವುದು ವಾಕರಿಕೆ, ಎದೆಯುರಿ, ಮೂಗು ಮತ್ತು ಕಿಬ್ಬೊಟ್ಟೆ ನೋವು, ತಲೆತಿರುಗುವಿಕೆ,ರಕ್ತಸ್ರಾವದಂತ ಸಮಸ್ಯೆ ಕಾಣಿಸಿಕೊಳ್ಳುತ್ತದೆ.