Morning Gastric: ಬೆಳಗ್ಗೆ ಹೊಟ್ಟೆ ಬಲೂನ್‌ ನಂತೆ ಉಬ್ಬುವುದೇ? ಪರಿಹಾರವೇನು?

By Contributor Asianet  |  First Published Oct 8, 2022, 5:24 PM IST

ಬೆಳಗ್ಗೆ ಹೊಟ್ಟೆಯಲ್ಲಿ ಗ್ಯಾಸ್‌ ಶೇಖರಣೆಯಾಗಿ ಹಿಂಸೆಯಾಗುವುದು ಸಾಮಾನ್ಯ ಸಮಸ್ಯೆ. ಆದರೆ, ದಿನವೂ ಹೀಗಾಗುತ್ತಿದ್ದರೆ ಹಿಂಸೆ ಆಗುವುದು ಸಹಜ. ಈ ಸಮಸ್ಯೆಗೆ ಏನು ಕಾರಣ ಎಂದು ಅರಿತುಕೊಂಡು ಅದನ್ನು ನಿವಾರಿಸಿಕೊಳ್ಳುವುದು ಉತ್ತಮ.
 


ಹೊಟ್ಟೆಯಲ್ಲಿ ಗ್ಯಾಸ್ಟ್ರಿಕ್‌ ಉಂಟಾಗುವುದು ಅತಿ ಸಾಮಾನ್ಯ. ಆದರೆ ಇದು ಸಮಸ್ಯೆಯಾಗಿ ಬದಲಾಗುವುದು ನಮ್ಮ ಜೀವನಶೈಲಿಯನ್ನು ತೋರಿಸಿಕೊಡುತ್ತದೆ. ಅಂದರೆ, ನಮ್ಮ ಲೈಫ್‌ ಸ್ಟೈಲ್‌ ಮತ್ತು ಆಹಾರ-ವಿಹಾರಗಳು ಹೇಗಿವೆ ಎನ್ನುವುದನ್ನು ಗ್ಯಾಸ್ಟ್ರಿಕ್‌ ಸಮಸ್ಯೆ ಹೇಳಬಲ್ಲದು. ಗ್ಯಾಸ್‌ ಉಂಟಾಗುವುದರಿಂದ ಅನೇಕ ಬಾರಿ ಹಲವಾರು ಸಮಸ್ಯೆಗಳಾಗುತ್ತವೆ. ಎದ್ದೇಳಲು ಸಾಧ್ಯವಾಗದಷ್ಟು ದೇಹದ ವಿವಿಧ ಭಾಗಗಳಲ್ಲಿ ನೋವಾಗಬಹುದು. ಎದೆಯಲ್ಲಿ ನೋವಾಗಿ ಭಯ ಹುಟ್ಟಿಸಬಹುದು. ಒಟ್ಟಿನಲ್ಲಿ ಭಾರೀ ಕಿರಿಕಿರಿ ಆಗುತ್ತದೆ. ಕೆಲವರಿಗೆ ಬೆಳಗ್ಗೆ ಏಳುವ ಸಮಯದಲ್ಲಿ ಹೊಟ್ಟೆ ಗ್ಯಾಸ್‌ ನಿಂದ ಭರ್ತಿಯಾಗಿ ತೊಂದರೆ ಅನುಭವಿಸುತ್ತಾರೆ. ಎಲ್ಲೋ ಒಮ್ಮೆ ಹೀಗಾದರೆ ಪರವಾಗಿಲ್ಲ, ಪದೇ ಪದೆ ಹೀಗಾಗುತ್ತಿದ್ದರೆ ಅಥವಾ ಸತತವಾಗಿ ಹೀಗೆಯೇ ಆಗುತ್ತಿದ್ದರೆ ಅದಕ್ಕೆ ಕಾರಣಗಳನ್ನು ಗುರುತಿಸಿಕೊಂಡು ನಿವಾರಣೆ ಮಾಡಿಕೊಳ್ಳಬೇಕು. ಏಕೆಂದರೆ, ಬೆಳಗ್ಗೆ ಬೆಳಗ್ಗೆ ಹೊಟ್ಟೆಯಲ್ಲಿ ಗ್ಯಾಸ್‌ ತುಂಬಿಕೊಂಡಿದ್ದರೆ ದಿನದ ಆರಂಭ ಹಿತವಾಗಿರುವುದಿಲ್ಲ. ಅಲ್ಲದೆ, ಬೇರೆ ಬೇರೆ ಸಮಸ್ಯೆಗಳು ಗಂಟುಬೀಳುತ್ತವೆ. ತಜ್ಞರ ಪ್ರಕಾರ, ಬೆಳಗ್ಗೆ ಹೊಟ್ಟೆಯಲ್ಲಿ ಗ್ಯಾಸ್‌ ತುಂಬಿಕೊಂಡಿರಲು ಹಲವು ಕಾರಣಗಳಿವೆ. ಸಾಮಾನ್ಯವಾಗಿ ಜೀವನಶೈಲಿಯಿಂದಲೇ ಸಮಸ್ಯೆ ಆರಂಭವಾಗಿರುತ್ತದೆ. ಹೀಗಾಗಿ, ಅದನ್ನು ಸರಿಪಡಿಸಿಕೊಳ್ಳಬೇಕಾಗುತ್ತದೆ. 

•    ಹಿಂದಿನ ರಾತ್ರಿಯ ಆಹಾರ (Previous Night Food)
ಬೆಳಗ್ಗೆ ಏಳುವಾಗ ಹೊಟ್ಟೆಯಲ್ಲಿ ಗ್ಯಾಸ್‌ (Gas) ಭರ್ತಿಯಾಗಿದ್ದರೆ ಹಿಂದಿನ ರಾತ್ರಿ ಯಾವ ರೀತಿಯ ಆಹಾರ (Food) ಸೇವನೆ ಮಾಡಿದ್ದೀರಿ ಎಂದು ನೋಡಿಕೊಳ್ಳಿ. ರಾತ್ರಿಯ ಊಟಕ್ಕೆ ಆಲೂಗಡ್ಡೆ (Aloo), ಕಡಲೆ ಮುಂತಾದ ಪದಾರ್ಥಗಳ ಸೇವನೆ ಮಾಡುವುದು ಹಿತವಲ್ಲ. ಇದರಿಂದ ಬ್ಲೋಟಿಂಗ್‌ (Bloating) ಉಂಟಾಗುತ್ತದೆ. ಹಾಗೆಯೇ ರಾತ್ರಿ ಸಮಯದಲ್ಲಿ ಬೀನ್ಸ್‌, ಗೋಬಿ, ಎಲೆಕೋಸುಗಳನ್ನು ಸೇವನೆ ಮಾಡುವುದರಿಂದ ಗ್ಯಾಸ್‌ ಹೆಚ್ಚುತ್ತದೆ. ಇವುಗಳಲ್ಲಿ ಅತಿ ಹೆಚ್ಚು ಪ್ರಮಾಣದಲ್ಲಿ ಕಾರ್ಬೋಹೈಡ್ರೇಟ್‌ ಇರುವುದರಿಂದ ಇವುಗಳ ಪಚನ ಕ್ರಿಯೆ ಸಮಯದಲ್ಲಿ ಮಿಥೇನ್‌, ಸಿಎ2 ಹಾಗೂ ಇತರ ಅನಿಲಗಳ ಉತ್ಪಾದನೆಯಾಗುತ್ತದೆ. ಇದರಿಂದ ಜೀರ್ಣಕ್ರಿಯೆಯೂ (Digestion) ಬಾಧಿತವಾಗುತ್ತದೆ. ಅಧಿಕ ಮಸಾಲೆ (Spicy) ಪದಾರ್ಥ, ಕರಿದ (Fried) ತಿಂಡಿಗಳನ್ನು ಸಹ ರಾತ್ರಿ ವೇಳೆ ತಿನ್ನಬಾರದು.

Tap to resize

Latest Videos

Gastric Headache: ಗ್ಯಾಸ್ಟ್ರಿಕ್‌ ತಲೆನೋವೇ? ಶೀಘ್ರ ಪರಿಹಾರ ಇಲ್ಲಿದೆ

•    ಹೊಟ್ಟೆಯಲ್ಲಿ ಹೆಚ್ಚು ಗಾಳಿ (Air)
ಹೊಟ್ಟೆಯಲ್ಲಿ (Stomach) ಗಾಳಿ ತುಂಬಿಕೊಂಡು ಸಮಸ್ಯೆ ಆಗುತ್ತದೆ. ಗ್ಯಾಸ್ಟ್ರೊಇಂಟೆಸ್ಟೈನಲ್‌ ವ್ಯವಸ್ಥೆಯ ಒಳಕ್ಕೆ ನುಗ್ಗುವ ಗಾಳಿಯಿಂದ ಹೊಟ್ಟೆಯಲ್ಲಿ ಬ್ಲೋಟಿಂಗ್‌ ಮತ್ತು ಇತರ ಸಮಸ್ಯೆಗಳಿಗೆ ಕಾರಣವಾಗಬಹುದು.

•    ಸಾಕಷ್ಟು ನೀರು (Water) ಕುಡಿಯದಿರುವುದು
ಬೆಳಗ್ಗೆ ಹೊಟ್ಟೆಯಲ್ಲಿ ಗ್ಯಾಸ್‌ ತುಂಬಿಕೊಳ್ಳುವ ಸಮಸ್ಯೆ ಇದೆ ಎಂದಾದರೆ ಅದಕ್ಕೆ ಸರಿಯಾದ ಪ್ರಮಾಣದಲ್ಲಿ ನೀರು ಕುಡಿಯದಿರುವುದು ಪ್ರಮುಖ ಕಾರಣ. ಸೂಕ್ತವಾದ ಪ್ರಮಾಣದಲ್ಲಿ ನೀರು ಸಿಗದೇ ಇದ್ದಾಗ ಮಲ ಗಟ್ಟಿಯಾಗುತ್ತದೆ. ಆಗ ಅದು ದೇಹದಿಂದ ಹೊರಗೆ ಹೋಗಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಅದರಿಂದಾಗಿ ಗ್ಯಾಸ್‌ ಉಂಟಾಗುತ್ತದೆ. ಹೊಟ್ಟೆಯಲ್ಲಿ ಆಹಾರ ಪದಾರ್ಥ ಹುದುಗುವುದರಿಂದ (Ferment) ಹೈಡ್ರೋಜನ್‌ (Hydrogen), ಕಾರ್ಬನ್‌ ಡೈ ಆಕ್ಸೈಡ್‌ (Carbon Dioxide) ಹಾಗೂ ಮಿಥೇನ್‌ ಅನಿಲಗಳು ಸೃಷ್ಟಿಯಾಗುತ್ತವೆ. ಇದರಿಂದಾಗಿ ಹೊಟ್ಟೆ ಬಲೂನ್‌ ನಂತೆ ಉಬ್ಬುತ್ತದೆ. ಇದನ್ನು ನಿವಾರಿಸಿಕೊಳ್ಳಲು ದಿನವೂ ಬೆಳಗ್ಗೆ ಎದ್ದಾಕ್ಷಣ ಎರಡು ಲೋಟ ಉಗುರು ಬೆಚ್ಚಗಿನ ನೀರನ್ನು ಕುಡಿಯಬೇಕು.

•     ಮಾಸಿಕ ಋತುಸ್ರಾವ (Periods)
ಮಹಿಳೆಯರಿಗೆ ಮಾಸಿಕ ಋತುಸ್ರಾವದ ಸಮಯದಲ್ಲಿ ಗ್ಯಾಸ್‌ ಸಮಸ್ಯೆ ಉಂಟಾಗುವುದು ಹೆಚ್ಚು. ಹಾರ್ಮೋನ್‌ (Hormones) ಅಸಮತೋಲನದಿಂದಾಗಿ ಕರುಳಿನ ಆರೋಗ್ಯದ (Gut Health) ಮೇಲೆ ಪರಿಣಾಮ ಉಂಟಾಗುತ್ತದೆ. ಆಗ ಜೀರ್ಣಕ್ರಿಯೆಯೂ ನಿಧಾನವಾಗುತ್ತದೆ. ಹೀಗಾಗಿ, ಗ್ಯಾಸ್‌ ಸಮಸ್ಯೆ ಹೆಚ್ಚುತ್ತದೆ.

 

ಗ್ಯಾಸ್ಟ್ರಿಕ್‌ಗೆ ಶುಂಠಿ- ಬೆಳ್ಳುಳ್ಳಿ ಬೆಸ್ಟ್ ಮೆಡಿಸಿನ್

•    ಹೊಟ್ಟೆಯಲ್ಲಿ ಸೋಂಕು (Infection)
ಸೋಂಕಿನಿಂದಲೂ ಹೊಟ್ಟೆಯಲ್ಲಿ ಅಧಿಕ ಗ್ಯಾಸ್‌ ಉಂಟಾಗಬಹುದು. ಎಚ್.ಪೈಲೊರಿ ಎನ್ನುವ ಬ್ಯಾಕ್ಟೀರಿಯಾ ಹೊಟ್ಟೆಯ ಮೇಲೆ ಪರಿಣಾಮ ಬೀರುವುದರಿಂದ ಗ್ಯಾಸ್‌ ಉಂಟಾಗುತ್ತದೆ, ಇದೊಂದು ಅತಿ ಸಾಮಾನ್ಯ ಸಮಸ್ಯೆ. ಹೊಟ್ಟೆಯಲ್ಲಿ ನೋವು, ಹಸಿವಾಗದಿರುವುದು, ತೇಗು ಬರುವುದು ಉಂಟಾಗಬಹುದು. 

•    ವೈದ್ಯಕೀಯ ಸ್ಥಿತಿ (Medical Condition)
ಕೆಲವು ಅನಾರೋಗ್ಯದ ಸಮಯದಲ್ಲೂ ಗ್ಯಾಸ್‌ ಸಮಸ್ಯೆ ಹೆಚ್ಚು. 

click me!