Holi 2022: ಹಬ್ಬದ ನಂತ್ರ ಆರೋಗ್ಯ ರಕ್ಷಣೆ ಹೀಗಿರಲಿ

By Suvarna News  |  First Published Mar 14, 2022, 2:30 PM IST

ಹಬ್ಬದ ಖುಷಿಯಲ್ಲಿ ಏನೇನೋ ತಿಂದು ಬಿಡ್ತೇವೆ. ನಂತ್ರ ಅದನ್ನು ಜೀರ್ಣಿಸಿಕೊಳ್ಳುವುದು ಕಷ್ಟವಾಗುತ್ತದೆ. ಕೆಲವರು ಹಾಸಿಗೆ ಹಿಡಿಯುವ ಸ್ಥಿತಿ ನಿರ್ಮಾಣವಾಗುತ್ತದೆ. ಹೋಳಿ ನಂತ್ರ ದೇಹ ಫಿಟ್ ಆಗಿರ್ಬೇಕೆಂದ್ರೆ ಏನು ಮಾಡ್ಬೇಕು ಗೊತ್ತಾ?
 


ಹೋಳಿ (Holi) ಒಂದು ವರ್ಣಮಯ, ರೋಮಾಂಚಕ ಹಬ್ಬ (Festival) ವೆಂದ್ರೆ ತಪ್ಪಾಗಲಾರದು. ಹೋಳಿ ಬಂತೆಂದ್ರೆ ವಾರದಿಂದಲೇ ತಯಾರಿ ಶುರುವಾಗಿರುತ್ತದೆ. ಬಣ್ಣದ ಜೊತೆ ನಾನಾ ಬಗೆಯ ಭಕ್ಷ್ಯಗಳು ಇರಲೇಬೇಕು. ಜನರು ಸಮೋಸಾ, ಪಕೋಡಾ, ಖೀರ್, ಕುಲ್ಫಿ ಹೀಗೆ ಬಗೆ ಬಗೆ ತಿಂಡಿಗಳನ್ನು ಸೇವನೆ ಮಾಡ್ತಾರೆ. ಈಗಾಗಲೇ ಬೇಸಿಗೆ ಶುರುವಾಗಿದ್ದು, ಡಯಟ್ (Diet) ಬಗ್ಗೆ ಕಾಳಜಿ ವಹಿಸುತ್ತಿರುವವರಿಗೆ ಇದನ್ನು ಸೇವನೆ ಮಾಡಲಾಗದೆ ಬಿಡಲೂ ಆಗದೆ ಕಷ್ಟಪಡ್ತಾರೆ. ಅನೇಕರು ಹೋಳಿ ಖುಷಿಯಲ್ಲಿ ಇದನ್ನೇನೋ ತಿಂದು ಬಿಡ್ತಾರೆ. ಆದ್ರೆ ನಂತ್ರ ಅಜೀರ್ಣ, ಮಲಬದ್ಧತೆ, ನಿರ್ಜಲೀಕರಣ, ತೂಕ ಏರಿಕೆ ಹೀಗೆ ಅನೇಕ ಸಮಸ್ಯೆಗಳನ್ನು ಎದುರಿಸುತ್ತಾರೆ. ಹೋಳಿ ನಂತ್ರವೂ ನೀವು ನಿಮ್ಮ ದೇಹವನ್ನು ಡಿಟಾಕ್ಸ್ ಮಾಡಬೇಕೆಂದ್ರೆ ಕೆಲ ಟಿಪ್ಸ್ ಪಾಲನೆ ಮಾಡ್ಬೇಕು. 

ಮೊದಲು ಡಿಟಾಕ್ಸ್ ಎಂದ್ರೇನು ಎಂಬುದನ್ನು ತಿಳಿಯೋಣ. ದೇಹದಲ್ಲಿ ಇರುವ ಕೊಳೆಯನ್ನು ದೇಹದಿಂದ ಹೊರ ಹಾಕುವುದನ್ನು ಡಿಟಾಕ್ಸ್ ಎಂದು ಕರೆಯುತ್ತಾರೆ. ಮಲ-ಮೂತ್ರದ ಮೂಲಕ ಇದನ್ನು ತೆಗೆದುಹಾಕಬೇಕಾಗುತ್ತದೆ.

ದೇಹವನ್ನು ಡಿಟಾಕ್ಸ್ ಮಾಡುವ ವಿಧಾನ 

Tap to resize

Latest Videos

ನೀರು : ದೇಹವನ್ನು ಡಿಟಾಕ್ಸ್ ಮಾಡಲು ಇರುವ ಅತ್ಯಂತ ಸುಲಭ ವಿಧಾನವೆಂದ್ರೆ ನೀರು. ದಿನದಲ್ಲಿ 8-10 ಗ್ಲಾಸ್ ನೀರಿನ ಸೇವನೆ ಮಾಡಿದ್ರೆ ನೀವು ಸುಲಭವಾಗಿ ಆರೋಗ್ಯ ಕಾಪಾಡಿಕೊಳ್ಳಬಹುದು. ನೀರು ದೇಹದಿಂದ ವಿಷವನ್ನು ಹೊರಹಾಕಲು ಸಹಾಯ ಮಾಡುತ್ತದೆ ಮತ್ತು ಮೂತ್ರಪಿಂಡಗಳನ್ನು ಫಿಲ್ಟರ್ ಮಾಡುತ್ತದೆ.

ಡಿಟಾಕ್ಸ್ ಡ್ರಿಂಕ್ಸ್ : ನೀರು ಅನೇಕರಿಗೆ ಇಷ್ಟವಾಗುವುದಿಲ್ಲ. ಸೆಪ್ಪೆ ನೀರನ್ನು ಕುಡಿಯಲು ಮನಸ್ಸಾಗುವುದಿಲ್ಲ. ಅಂಥವರು ಡಿಟಾಕ್ಸ್ ಡ್ರಿಂಕ್ ಸೇವನೆ ಮಾಡಬಹುದು. ಕಿತ್ತಳೆ ಜ್ಯೂಸ್ ಸೇವನೆ ಮಾಡಬಹುದು. ಇಲ್ಲವೆ ನೀರಿಗೆ ಪುದೀನಾ ಅಥವಾ ತುಳಸಿ ಎಲೆ ಸೇರಿಸಿ ಸೇವನೆ ಮಾಡಬಹುದು. ಬೀಟ್ರೋಟ್ ಜ್ಯೂಸ್ ಅಥವಾ ಪಾಲಕ್ ಜ್ಯೂಸ್ ಕೂಡ ಸೇವನೆ ಮಾಡ್ಬಹುದು. 

ದೇಹವನ್ನು ಒಳಗಿನಿಂದ ಶುದ್ಧೀಕರಿಸಲು ಇದು ಸಹಾಯ ಮಾಡುತ್ತದೆ. ಶಕ್ತಿಯ ಮಟ್ಟವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಈ ಜ್ಯೂಸ್ ಗಳು ಚಯಾಪಚಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ತೂಕ ಇಳಿಸಲು ಇದು ನೆರವಾಗುತ್ತದೆ. ಡಿಟಾಕ್ಸ್ ಪಾನೀಯಗಳು ಯಕೃತ್ತಿ ಆರೋಗ್ಯವನ್ನು ರಕ್ಷಿಸುತ್ತವೆ. ಜೀರ್ಣಾಂಗ ವ್ಯವಸ್ಥೆಯನ್ನು ಆರೋಗ್ಯಕರವಾಗಿಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ಉರಿಯೂತವನ್ನು ಕಡಿಮೆ ಮಾಡುವ ಜೊತೆಗೆ ದೇಹದಿಂದ ವಿಷವನ್ನು ಹೊರಹಾಕುವ ಮೂಲಕ ದೇಹದ ವಯಸ್ಸನ್ನು ಮರೆಮಾಚುತ್ತದೆ.

ಪಾಲಾಕ್ ಸೊಪ್ಪು: ಹೋಳಿ ನಂತ್ರ ಪಾಲಾಕ್ ಸೊಪ್ಪು ಸೇವನೆ ಮಾಡುವುದು ಬಹಳ ಒಳ್ಳೆಯದು. ಇದು ಜೀರ್ಣಕ್ರಿಯೆ ಸರಾಗಗೊಳಿಸಿ, ಜಠರದ ಆರೋಗ್ಯವನ್ನೂ ಕಾಪಾಡುತ್ತದೆ.

ಹೋಳಿ ನಂತರ ಉಪವಾಸ : ವಾರಕ್ಕೊಮ್ಮೆ ಇಲ್ಲವೆ ತಿಂಗಳಿಗೊಮ್ಮೆಯಾದ್ರೂ ಉಪವಾಸ ಮಾಡಬೇಕು. ಹೋಳಿ ಹಬ್ಬದ ನಂತ್ರ ಉಪವಾಸ ಮಾಡಿದ್ರೆ ಜೀರ್ಣಾಂಗ ವ್ಯವಸ್ಥೆಗೆ ವಿಶ್ರಾಂತಿ ಸಿಗುತ್ತದೆ.  

ಆಯಿಲ್ ಪುಲ್ಲಿಂಗ್ : ಆಯಿಲ್ ಬಾಯಿಗೆ ಹಾಕಿ ಮುಕ್ಕಳಿಸಬೇಕು. ಇದು ಮೌತ್ ಕ್ಲೆನ್ಸರ್ ಆಗಿ ಕಾರ್ಯನಿರ್ವಹಿಸುತ್ತದೆ. ತೆಂಗಿನ ಎಣ್ಣೆ ಅಥವಾ ಯಾವುದಾದರೂ ಒಂದು ಚಮಚ ಎಣ್ಣೆಯನ್ನು ಬೆಳಿಗ್ಗೆ ಬಾಯಿಗೆ ಹಾಕಿ ಮುಕ್ಕಳಿಸಬೇಕು. ಎಣ್ಣೆಯನ್ನು ನುಂಗಬಾರದು. ಇದು ದೇಹದಲ್ಲಿ ರೂಪುಗೊಂಡ ವಿಷಕಾರಿ ಅಂಶಗಳನ್ನು ಹೊರಹಾಕುತ್ತದೆ ಮತ್ತು ಹೊಟ್ಟೆ ಆರೋಗ್ಯವನ್ನು ಕಾಪಾಡುತ್ತದೆ.  

Dry mouth at night: ರಾತ್ರಿ ಸಿಕ್ಕಾಪಟ್ಟೆ ಬಾಯಿ ಒಣಗಿದ್ರೆ ಏನ್ಬಾಡ್ಮೇಕು?

ಹಣ್ಣುಗಳ ಸೇವನೆ : ದೇಹವನ್ನು ಶುದ್ಧಗೊಳಿಸಲು ಹಣ್ಣುಗಳು ಒಳ್ಳೆಯದು. ಸೇಬು ಹಣ್ಣು, ದ್ರಾಕ್ಷಿ, ಪೇರಲೆ ಹಣ್ಣು, ಸ್ಟ್ರಾಬೆರಿಗಳಂತಹ ಹಣ್ಣುಗಳನ್ನು ಸೇವಿಸಬೇಕು. ಇದಲ್ಲದೇ ಫ್ರೂಟ್ ಸಲಾಡ್ ಅಥವಾ ಜ್ಯೂಸ್  ಸೇವನೆ ಕೂಡ ಮಾಡಬಹುದು. 

ತಾಜಾ ತರಕಾರಿ ರಸ : ಹೆಚ್ಚು ತರಕಾರಿಗಳನ್ನು ಸೇವಿಸಿ. ತರಕಾರಿ ರಸ, ಸ್ಮೂಥಿ ಅಥವಾ ಸಲಾಡ್ ಅನ್ನು ಸಹ ಸೇವಿಸಬಹುದು. ಕ್ಯಾರೆಟ್, ಬೀಟ್‌ರೂಟ್‌ನಂತಹ ತರಕಾರಿಗಳ ಸೇವನೆಯು ಹೊಟ್ಟೆಯ ಆರೋಗ್ಯಕ್ಕೆ ಒಳ್ಳೆಯದು. 

Sex Life : ಲೈಂಗಿಕ ಜೀವನದ ಪ್ರಯೋಜನ ತಿಳಿದ್ರೆ ಅಚ್ಚರಿ ಪಡುತ್ತೀರಿ!

ಒಳ್ಳೆಯ ನಿದ್ರೆ : ನಿದ್ದೆ ಆರೋಗ್ಯಕ್ಕೆ ಅತ್ಯಗತ್ಯ. ನಿದ್ರೆಯಲ್ಲಿ ದೇಹವು ವಿಶ್ರಾಂತಿ ಪಡೆಯುತ್ತದೆ. ಜೀವಕೋಶಗಳನ್ನು ಸರಿಪಡಿಸುತ್ತದೆ. ಪೂರ್ಣ ನಿದ್ರೆಯಾದಾಗ ದೇಹದ ವಿಷಗಳು ಹೊರಬರುತ್ತವೆ.  

ಯೋಗ : ದೇಹವನ್ನು ಆರೋಗ್ಯವಾಗಿಡಲು ಕೆಲವು ಯೋಗಾಸನಗಳು, ಪ್ರಾಣಾಯಾಮಗಳನ್ನು ಮಾಡಬೇಕು. ಸೂರ್ಯ ನಮಸ್ಕಾರ, ಶಲಭಾಸನ, ನೌಕಾಸನ, ಮಲಾಸನ, ಭುಜಂಗಾಸನಗಳನ್ನು ಮಾಡಬೇಕು.

click me!