ಕೆಲವೊಬ್ಬರು ನಿದ್ದೆಯಿಂದ ದಿಢೀರ್ ಏಳುವ ಅಭ್ಯಾಸವನ್ನು ಹೊಂದಿರುತ್ತಾರೆ. ಮಲಗಿದ್ದವರು ನೀರು ಕುಡಿಯಲೆಂದೋ, ಮೂತ್ರ ವಿಸರ್ಜನೆಗೆಂದೋ ಥಟ್ಟಂತ ಎದ್ದು ಬಿಡುತ್ತಾರೆ. ಆದ್ರೆ ಹೀಗೆ ಮಾಡೋದು ಆರೋಗ್ಯಕ್ಕೆ ಎಷ್ಟು ಕೆಟ್ಟದ್ದು ಗೊತ್ತಾ ? ಇಂಥಾ ಅಭ್ಯಾಸ ಹೃದಯಾಘಾತಕ್ಕೂ ಕಾರಣವಾಗ್ಬೋದು.
ಇತ್ತೀಚಿನ ದಿನಗಳಲ್ಲಿ ಹೃದಯಾಘಾತದಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಅದರಲ್ಲೂ ರಾತ್ರಿಯಲ್ಲಿ ಹಠಾತ್ ಹೃದಯಾಘಾತದ ಅಪಾಯದ ಸಾಧ್ಯತೆ ದಟ್ಟವಾಗಿರುತ್ತದೆ. ಹೃದಯ ಸಂಬಂಧಿ ಕಾಯಿಲೆಗಳಿಂದ ಪ್ರತಿ ವರ್ಷ ಸುಮಾರು 17.9 ಮಿಲಿಯನ್ ಜನರು ಸಾಯುತ್ತಾರೆ. ಆತಂಕಕಾರಿಯಾಗಿ, ಪ್ರತಿ ಐದು ಸಾವುಗಳಲ್ಲಿ ನಾಲ್ಕು ಹೃದಯಾಘಾತ (Heartattack) ಮತ್ತು ಪಾರ್ಶ್ವವಾಯುಗಳಿಂದ ಉಂಟಾಗುತ್ತವೆ ಮತ್ತು ಈ ಸಾವುಗಳಲ್ಲಿ (Death) ಮೂರನೇ ಒಂದು ಭಾಗವು 70 ವರ್ಷಕ್ಕಿಂತ ಕಡಿಮೆ ವಯಸ್ಸಿನವರಲ್ಲಿ ಅಕಾಲಿಕವಾಗಿ ಸಂಭವಿಸುತ್ತದೆ. ಅದರಲ್ಲೂ ಚಳಿಗಾಲದಲ್ಲಿ ಜನರು ಹೆಚ್ಚಾಗಿ ಹೃದಯಾಘಾತದಿಂದ ಸಾವನ್ನಪ್ಪುತ್ತಾರೆ. ಅದಕ್ಕೇನು ಕಾರಣ ?
ತೀವ್ರ ಚಳಿಯಲ್ಲಿ 45 ವರ್ಷ ಮೇಲ್ಪಟ್ಟವರು ರಾತ್ರಿ 10 ಗಂಟೆಗೆ ಮಲಗಿದ ತಕ್ಷಣ ಏಳಬಾರದು ಎಂದು ಡಾ. ದೀಪಾಲಿ ಹೇಳುತ್ತಾರೆ. ಏಕೆಂದರೆ ಶೀತದಿಂದ ದೇಹದ ರಕ್ತ ದಪ್ಪವಾಗುತ್ತದೆ, ನಂತರ ನಿಧಾನವಾಗಿ ಕೆಲಸ ಮಾಡುವುದರಿಂದ ಹೃದಯವನ್ನು ಸಂಪೂರ್ಣವಾಗಿ ತಲುಪಲು ಸಾಧ್ಯವಾಗದೆ ದೇಹವು ಹೊರಗುಳಿಯುತ್ತದೆ. ಈ ಕಾರಣಕ್ಕಾಗಿ, 40 ವರ್ಷ ವಯಸ್ಸಿನ ಜನರು ಅಥವಾ 40 ವರ್ಷಕ್ಕಿಂತ ಮೇಲ್ಪಟ್ಟ ಜನರು ಚಳಿಗಾಲದ ತಿಂಗಳುಗಳಲ್ಲಿ ಹೃದಯ ಸ್ತಂಭನದಿಂದ ಸಾವನ್ನಪ್ಪುತ್ತಾರೆ. ಆದ್ದರಿಂದ ನಾವು ಅತ್ಯಂತ ಜಾಗರೂಕರಾಗಿರಬೇಕು ಎಂದು ವೈದ್ಯರು ಸೂಚಿಸುತ್ತಾರೆ.
ಹಾರ್ಟ್ ಅಟ್ಯಾಕ್ ಆಗ್ಬಾರ್ದು ಆದ್ರೆ ಮೊದ್ಲೇ ಈ ಟೆಸ್ಟ್ ಮಾಡಿಸ್ಕೊಳ್ಳಿ
ಯಾವಾಗ ಹೃದಯಾಘಾತವಾಗುತ್ತದೆ ?
ಹೃದಯಾಘಾತವಾಗುವ ಬಗ್ಗೆ ಎಲ್ಲರಿಗೂ ಗೊತ್ತು. ಆದರೆ ಯಾವಾಗ ಆಗುತ್ತದೆ ಎಂಬುದು ಹಲವರಿಗೆ ಗೊತ್ತಿಲ್ಲ.ಹೃದಯಾಘಾತದಲ್ಲಿ ಹೃದಯಕ್ಕೆ ರಕ್ತ ಸಂಚಲನೆ (Blood circulation) ಹಠಾತ್ ಆಗಿ ಬ್ಲಾಕ್ ಆಗುತ್ತದೆ. ಪ್ರತಿಫಲವಾಗಿ ಹೃದಯ ಸ್ತಂಭನ ಉಂಟಾಗಿ ಬಳಿಕ ಹೃದಯದಿಂದ ದೇಹಕ್ಕೆ ರಕ್ತ ಸಂಚಾರ ನಿಂತು ಹೋಗುತ್ತದೆ.
ರಾತ್ರಿ ಹೆಚ್ಚು ಹೃದಯಾಘಾತವಾಗೋದು ಯಾಕೆ ?
ರಾತ್ರಿ ಬಹಳಷ್ಟು ಮಂದಿ ಹೃದಯಾಘಾತದಿಂದ ಸಾವನ್ನಪ್ಪುವ ಬಗ್ಗೆ ನಾವು ಕೇಳಿದ್ದೇವೆ. ಇದ್ದಕ್ಕಿದ್ದಂತೆ ಏನಾಯಿತು? ಹೇಗೆ ಸತ್ತರು ಎಂದು ನಾವು ಮಾತನಾಡಿಕೊಳ್ಳುತ್ತೇವೆ. ಇದಕ್ಕೆ ಮುಖ್ಯ ಕಾರಣ ಏನೆಂಬುದನ್ನು ಡಾ. ವಿಜಯ್ ಸಿಂಗ್ ರಜಪೂತ್ ವಿವರಿಸಿದ್ದಾರೆ. ಇದಕ್ಕೆ ಮುಖ್ಯ ಕಾರಣ ರಾತ್ರಿ ಮೂತ್ರ ಮಾಡಲು ಹೋದಾಗಲೆಲ್ಲ ನಾವು ಹಠಾತ್ತನೆ ಅಥವಾ ಆತುರದಿಂದ ಎದ್ದೇಳುತ್ತೇವೆ. ಇದರಿಂದ ನಮ್ಮ ಇಸಿಜಿ ಮಾದರಿಯು ಬದಲಾಗಬಹುದು. ಪರಿಣಾಮವಾಗಿ ರಕ್ತವು ಮೆದುಳಿಗೆ ತಲುಪುವುದಿಲ್ಲ.ಮತ್ತು ನಮ್ಮ ಹೃದಯದ ಕಾರ್ಯವು ನಿಲ್ಲುತ್ತದೆ.
ರಾತ್ರಿಯಲ್ಲಿ ಮೂರೂವರೆ ನಿಮಿಷದ ಪ್ರಾಮುಖ್ಯತೆ
ರಾತ್ರಿಯಲ್ಲಿ ಮೂರೂವರೆ ನಿಮಿಷ ಹೆಚ್ಚು ಪ್ರಾಮುಖ್ಯತೆ ಪಡೆದುಕೊಳ್ಳುತ್ತದೆ ಎಂದು ಡಾ.ವಿಜಯ್ ಸಿಂಗ್ ರಜಪೂತ್ ಹೇಳುತ್ತಾರೆ ಬೆಳಿಗ್ಗೆ ಅಥವಾ ರಾತ್ರಿ ಮಲಗುವಾಗ ಮೂತ್ರ ವಿಸರ್ಜನೆ ಮಾಡಬೇಕಾದವರು ಇದನ್ನು ಪ್ರತ್ಯೇಕವಾಗಿ ಗಮನಿಸಿಕೊಳ್ಳಬೇಕು. ಈ ಮೂರೂವರೆ ನಿಮಿಷದಲ್ಲಿ ಪ್ರತಿಯೊಬ್ಬ ವ್ಯಕ್ತಿಯೂ ಜಾಗರೂಕರಾಗಿರಬೇಕು. ಯಾಕೆಂದರೆ ಈ ಮೂರೂವರೆ ನಿಮಿಷ ಸಾವಿನ ಸಂಖ್ಯೆಯನ್ನು ಕಡಿಮೆ ಮಾಡಬಹುದು.
ಉದ್ಯೋಗಸ್ಥರು ಹೃದಯದ ಆರೋಗ್ಯ ಕಾಪಾಡಿಕೊಳ್ಳಲು ಇಲ್ಲಿವೆ ಕೆಲವು ಟಿಪ್ಸ್
ಹೀಗಾಗಿ ರಾತ್ರಿ ನಿದ್ದೆಯಿಂದ ದಿಢೀರ್ ಏಳುವಾಗ ಮೂರೂವರೆ ನಿಮಿಷಗಳ ಪ್ರಯತ್ನವು ಉತ್ತಮ ಮಾರ್ಗವಾಗಿದೆ. ನಿದ್ದೆಯಿಂದ ಏಳುವಾಗ ಹಾಸಿಗೆಯ ಮೇಲೆ ಅರ್ಧ ನಿಮಿಷ ಮಲಗಿ. ಮುಂದಿನ ಅರ್ಧ ನಿಮಿಷ ಹಾಸಿಗೆಯ ಮೇಲೆ ಕುಳಿತುಕೊಳ್ಳಿ. ಮುಂದಿನ ಎರಡೂವರೆ ನಿಮಿಷ ಕಾಲನ್ನು ಹಾಸಿಗೆಯ ಕೆಳಗೆ ತೂಗಾಡುವಂತೆ ಬಿಡಿ. ಮೂರೂವರೆ ನಿಮಿಷಗಳ ನಂತರ, ನಿಮ್ಮ ಮೆದುಳು ರಕ್ತವಿಲ್ಲದೆ ಉಳಿಯುವುದಿಲ್ಲ ಮತ್ತು ಹೃದಯದ ಕ್ರಿಯೆಯೂ ನಿಲ್ಲುವುದಿಲ್ಲ. ಇದರಿಂದ ಹಠಾತ್ ಸಾವುಗಳೂ ಕಡಿಮೆಯಾಗುತ್ತವೆ ಎಂದು ತಜ್ಞರು ಹೇಳುತ್ತಾರೆ.