ಜನರೇ ಎಚ್ಚರ, ನಾವು ತಿನ್ನುತ್ತಿರೋದು ಉಪ್ಪು-ಸಕ್ಕರೆಯಲ್ಲ ಬರೀ ಪ್ಲಾಸ್ಟಿಕ್‌!

indian salt packets microplastic ಫೈಬರ್‌, ಪೆಲ್ಲೆಟ್ಸ್‌,  ಫಿಲ್ಮ್‌ ಹಾಗೂ ತುಣುಕುಗಳು ಸೇರಿದಂತೆ ವಿವಿಧ ರೂಪಗಳಲ್ಲಿ ದೇಶದ ಎಲ್ಲಾ ಬ್ರ್ಯಾಂಡ್‌ಗಳ ಉಪ್ಪು ಹಾಗೂ ಸಕ್ಕರೆ ಮಾದರಿಗಳಲ್ಲಿ ಮೈಕ್ರೋಪ್ಲಾಸ್ಟಿಕ್ಸ್‌ ಪತ್ತೆಯಾಗಿದೆ ಎಂದು ಹೊಸ ಅಧ್ಯಯನ ಬಹಿರಂಗಪಡಿಸಿದೆ.


ನವದೆಹಲಿ (ಆ.13): ಹೊಸ ಅಧ್ಯಯನದ ಪ್ರಕಾರ, ಭಾರತದಲ್ಲಿರುವ ಎಲ್ಲಾ ಮಾದರಿಯ ಉಪ್ಪು ಹಾಗೂ ಸಕ್ಕರೆಯ ಬ್ರ್ಯಾಂಡ್‌ಗಳಲ್ಲಿ, ಈ ಬ್ರ್ಯಾಂಡ್‌ಗಳು ಎಷ್ಟೇ ದೊಡ್ಡದಾಗಿರಲಿ, ಅಥವಾ ಚಿಕ್ಕದೇ ಆಗಿರಲಿ, ಪ್ಯಾಕ್‌ ಮಾಡಿರಲಿ ಅಥವಾ ಪ್ಯಾಕ್‌ ಮಾಡದೇ ಇರಲಿ.. ಅವುಗಳಲ್ಲಿ ಮೈಕ್ರೋಪ್ಲಾಸ್ಟಿಕ್ಸ್‌ಗಳ ಅಂಶ ಕಂಡು ಬಂದಿದೆ ಎಂದು ತಿಳಿಸಿದೆ. ಮಂಗಳವಾರ ಈ ಅಧ್ಯಯನ ಪ್ರಕಟವಾಗಿದೆ. "ಉಪ್ಪು ಮತ್ತು ಸಕ್ಕರೆಯಲ್ಲಿ ಮೈಕ್ರೋಪ್ಲಾಸ್ಟಿಕ್ಸ್" ಮತ್ತು ಪರಿಸರ ಸಂಶೋಧನಾ ಸಂಸ್ಥೆ ಟಾಕ್ಸಿಕ್ಸ್ ಲಿಂಕ್ ನಡೆಸಿದ ಅಧ್ಯಯನವು 10 ವಿಧದ ಉಪ್ಪುಗಳನ್ನು ಪರೀಕ್ಷೆ ಮಾಡಿದೆ. ಇವುಗಳಲ್ಲಿ ಟೇಬಲ್ ಉಪ್ಪು, ಕಲ್ಲು ಉಪ್ಪು, ಸಮುದ್ರ ಉಪ್ಪು ಮತ್ತು ಸ್ಥಳೀಯ ಕಚ್ಚಾ ಉಪ್ಪುಗಳ ಪರೀಕ್ಷೆ ನಡೆಸಿದೆ. ಅದರೊಂದಿಗೆ ಆನ್‌ಲೈನ್‌ ಹಾಗೂ ಸ್ಥಳೀಯ ಮಾರುಕಟ್ಟೆಯಿಂದ ಖರೀದಿ ಮಾಡಲಾಗಿದೆ. ಐದು ಮಾದರಿಯ ಸಕ್ಕರೆಗಳನ್ನೂ ಪರೀಕ್ಷೆ ಮಾಡಿದೆ. ಫೈಬರ್, ಪೆಲ್ಲೆಟ್ಸ್‌, ಫಿಲ್ಮ್‌ಗಳು ಮತ್ತು ತುಣುಕುಗಳು ಸೇರಿದಂತೆ ವಿವಿಧ ರೂಪಗಳಲ್ಲಿ ಎಲ್ಲಾ ಉಪ್ಪು ಮತ್ತು ಸಕ್ಕರೆ ಮಾದರಿಗಳಲ್ಲಿ ಮೈಕ್ರೋಪ್ಲಾಸ್ಟಿಕ್‌ಗಳು ಕಂಡಿವೆ.ಈ ಮೈಕ್ರೋಪ್ಲಾಸ್ಟಿಕ್‌ಗಳ ಗಾತ್ರವು 0.1 mm ನಿಂದ 5 mm ವರೆಗೆ ಇವೆ ಎಂದು ತಿಳಿಸಿದೆ.

ಬಹು-ಬಣ್ಣದ ತೆಳುವಾದ ಫೈಬರ್ ಮತ್ತು ಫಿಲ್ಮ್‌ಗಳ ರೂಪದಲ್ಲಿ ಅಯೋಡಿಕರಿಸಿದ ಉಪ್ಪಿನಲ್ಲಿ ಅತ್ಯಧಿಕ ಮಟ್ಟದ ಮೈಕ್ರೋಪ್ಲಾಸ್ಟಿಕ್‌ಗಳು ಕಂಡುಬಂದಿವೆ. ಟಾಕ್ಸಿಕ್ಸ್ ಲಿಂಕ್ ಸಂಸ್ಥಾಪಕ-ನಿರ್ದೇಶಕ ರವಿ ಅಗರ್ವಾಲ್ ಈ ಬಗ್ಗೆ ಮಾತನಾಡಿದ್ದು, "ನಮ್ಮ ಅಧ್ಯಯನದ ಉದ್ದೇಶವು ಮೈಕ್ರೋಪ್ಲಾಸ್ಟಿಕ್‌ಗಳ ಕುರಿತು ಅಸ್ತಿತ್ವದಲ್ಲಿರುವ ವೈಜ್ಞಾನಿಕ ಡೇಟಾಬೇಸ್‌ಗೆ ಕೊಡುಗೆ ನೀಡುವುದಾಗಿದೆ, ಇದರಿಂದಾಗಿ ಜಾಗತಿಕ ಪ್ಲಾಸ್ಟಿಕ್ ಒಪ್ಪಂದವು ಈ ಸಮಸ್ಯೆಯನ್ನು ಕೇಂದ್ರೀಕೃತ ರೀತಿಯಲ್ಲಿ ಪರಿಹರಿಸುತ್ತದೆ' ಎಂದು ತಿಳಿಸಿದ್ದಾರೆ.

"ನಾವು ನೀತಿ ಕ್ರಿಯೆಯನ್ನು ಪ್ರಚೋದಿಸುವ ಗುರಿಯನ್ನು ಹೊಂದಿದ್ದೇವೆ ಮತ್ತು ಮೈಕ್ರೋಪ್ಲಾಸ್ಟಿಕ್‌ಗಳಿಗೆ ಒಡ್ಡಿಕೊಳ್ಳುವ ಅಪಾಯಗಳನ್ನು ಕಡಿಮೆ ಮಾಡುವ ಸಂಭಾವ್ಯ ತಾಂತ್ರಿಕ ಮಧ್ಯಸ್ಥಿಕೆಗಳಿಗೆ ಸಂಶೋಧಕರ ಗಮನವನ್ನು ಸೆಳೆಯುತ್ತೇವೆ." ಟಾಕ್ಸಿಕ್ಸ್ ಲಿಂಕ್ ಅಸೋಸಿಯೇಟ್ ಡೈರೆಕ್ಟರ್ ಸತೀಶ್ ಸಿನ್ಹಾ ಅವರು, "ನಮ್ಮ ಅಧ್ಯಯನವು ಎಲ್ಲಾ ಉಪ್ಪು ಮತ್ತು ಸಕ್ಕರೆಯ ಮಾದರಿಗಳಲ್ಲಿ ಗಣನೀಯ ಪ್ರಮಾಣದ ಮೈಕ್ರೋಪ್ಲಾಸ್ಟಿಕ್‌ಗಳ ಪತ್ತೆಗೆ ಸಂಬಂಧಿಸಿದ್ದಾರೆ.  ಮಾನವನ ಆರೋಗ್ಯದ ಮೇಲೆ ಮೈಕ್ರೋಪ್ಲಾಸ್ಟಿಕ್‌ನ ದೀರ್ಘಕಾಲೀನ ಆರೋಗ್ಯದ ಪರಿಣಾಮಗಳ ಬಗ್ಗೆ ತುರ್ತು, ಸಮಗ್ರ ಸಂಶೋಧನೆಗೆ ಕರೆ ನೀಡಿದೆ' ಎಂದಿದ್ದಾರೆ.

ಅಯೋಡೈಸ್ಡ್ ಉಪ್ಪು ಅತಿ ಹೆಚ್ಚು ಮೈಕ್ರೊಪ್ಲಾಸ್ಟಿಕ್‌ಗಳನ್ನು ಹೊಂದಿತ್ತು (ಪ್ರತಿ ಕಿಲೋಗ್ರಾಂಗೆ 89.15 ಪೀಸ್‌ಗಳು) ಆದರೆ ಸಾವಯವ ಕಲ್ಲು ಉಪ್ಪು ಕಡಿಮೆ (ಪ್ರತಿ ಕಿಲೋಗ್ರಾಂಗೆ 6.70 ಪೀಸ್‌ಗಳಿವೆ) ಪ್ರಮಾಣದ ಪ್ಲಾಸ್ಟಿಕ್‌ ಅಂಶ ಹೊಂದಿದೆ ಎಂದು ಅಧ್ಯಯನ ತಿಳಿಸಿದೆ.

ಸಕ್ಕರೆಯ ಮಾದರಿಗಳಲ್ಲಿ, ಮೈಕ್ರೊಪ್ಲಾಸ್ಟಿಕ್‌ಗಳ ಸಾಂದ್ರತೆಯು ಪ್ರತಿ ಕಿಲೋಗ್ರಾಮ್‌ಗೆ 11.85 ರಿಂದ 68.25 ಪೀಸ್‌ಗಳವರೆಗೆ ಇರುತ್ತದೆ, ಹೆಚ್ಚಿನ ಸಾಂದ್ರತೆಯು ಸಾವಯವವಲ್ಲದ ಸಕ್ಕರೆಯಲ್ಲಿ ಕಂಡುಬಂದಿದೆ. ಮೈಕ್ರೋಪ್ಲಾಸ್ಟಿಕ್‌ಗಳು ಜಾಗತಿಕವಾಗಿ ಬೆಳೆಯುತ್ತಿರುವ ಸಮಸ್ಯೆ ಆಗಿದೆ. ಏಕೆಂದರೆ ಅವು ಆರೋಗ್ಯ ಮತ್ತು ಪರಿಸರ ಎರಡನ್ನೂ ಹಾನಿಗೊಳಿಸುತ್ತವೆ. ಈ ಸಣ್ಣ ಪ್ಲಾಸ್ಟಿಕ್ ಕಣಗಳು ಆಹಾರ, ನೀರು ಮತ್ತು ಗಾಳಿಯ ಮೂಲಕ ಮಾನವ ದೇಹವನ್ನು ಪ್ರವೇಶಿಸಬಹುದು. ಇತ್ತೀಚಿನ ಸಂಶೋಧನೆಯು ಶ್ವಾಸಕೋಶಗಳು, ಹೃದಯ, ಮತ್ತು ಎದೆ ಹಾಲು ಮತ್ತು ಹುಟ್ಟಲಿರುವ ಶಿಶುಗಳಲ್ಲಿಯೂ ಮೈಕ್ರೋಪ್ಲಾಸ್ಟಿಕ್ಸ್‌ ಇದೆ ಎಂದು ಹೇಳಿದೆ.

ಪ್ರತಿ ದಿನ ಸರಾಸರಿ ಭಾರತೀಯರು 10.98 ಗ್ರಾಂ ಉಪ್ಪು ಮತ್ತು ಸುಮಾರು 10 ಚಮಚ ಸಕ್ಕರೆಯನ್ನು ಸೇವಿಸುತ್ತಾರೆ ಎಂದು ಹಿಂದಿನ ಅಧ್ಯಯನಗಳು ಕಂಡುಕೊಂಡಿವೆ - ವಿಶ್ವ ಆರೋಗ್ಯ ಸಂಸ್ಥೆಯ ಶಿಫಾರಸು ಮಿತಿಗಳಿಗಿಂತ ಇದು ಹೆಚ್ಚಾಗಿದೆ.
 

click me!