ಅನುಭವಗಳಿಂದ ಪಾಠ ಕಲಿಯಬೇಕು ಎನ್ನುವುದು ಎಲ್ಲರಿಗೂ ತಿಳಿದ ಸಂಗತಿ. ಆದರೆ, ಎಷ್ಟು ಜನ ಇದನ್ನು ನಿಜಕ್ಕೂ ಪರಿಪಾಲನೆ ಮಾಡುತ್ತಾರೆ? ಇತಿಹಾಸದ ಘಟನೆಗಳ ಬಗ್ಗೆ ಒಂದೋ ಕೋಪ, ಪಶ್ಚಾತ್ತಾಪ ಅಥವಾ ನೋವು ಪಡುವವರೇ ಹೆಚ್ಚು. ಸಮಚಿತ್ತದಿಂದ ಇತಿಹಾಸವನ್ನು ನೋಡದ ಹೊರತು ಪ್ರಗತಿ ಸಾಧ್ಯವಿಲ್ಲ.
ಕೆಲವರನ್ನು ನೋಡಿ, ಪದೇ ಪದೆ ಹಿಂದೆಂದೋ ತಮಗಾದ ಅವಮಾನ, ನೋವಿನ ಘಟನೆಗಳನ್ನು ಪದೇ ಪದೆ ನೆನಪಿಸಿಕೊಂಡು ಕೊರಗುತ್ತಾರೆ. ಎಲ್ಲರ ಬಳಿಯೂ ಅದನ್ನೇ ಹೇಳಿಕೊಂಡು ಜೀವನದಲ್ಲಿ ತಾವೆಷ್ಟು ದುಃಖ ಅನುಭವಿಸಿದ್ದೇವೆ ಎನ್ನುವುದನ್ನು ಹೇಳುತ್ತಲೇ ಇರುತ್ತಾರೆ. ಅದು ಅವರಿಗೇನೋ ಅಭ್ಯಾಸವಾಗಿರಬಹುದು. ಆದರೆ, ಕೊನೆಗೊಮ್ಮೆ ಎಷ್ಟರ ಮಟ್ಟಿಗೆ ಹಿಂಸೆ ನೀಡಬಹುದು ಎಂದರೆ, ಪ್ರಸ್ತುತ ಜೀವನದ ಸಿಹಿಯನ್ನೂ ಅನುಭವಿಸಲಾರದಂತೆ ಮಾಡಬಹುದು. ಹಿಂದೆ ಆಗಿ ಹೋದ ಘಟನೆಗಳನ್ನು ಮೆಲುಕು ಹಾಕುವುದು ಬೇರೆ. ಆ ಅನುಭವಗಳಿಂದ ಪಾಠ ಕಲಿಯುವುದು ಬೇರೆ. ಇತಿಹಾಸದಲ್ಲಿ ಬದುಕುವುದರಿಂದ ಹಾಲಿ ಜೀವನದ ಸೌಂದರ್ಯ ನಿಮಗೆ ಕಾಣಿಸದೇ ಇರಬಹುದು. ಅಥವಾ ನಿಮ್ಮ ಪ್ರಗತಿ ಅಷ್ಟರ ಮಟ್ಟಿಗೆ ಕುಂದಬಹುದು. ಎಂದೋ ಘಟಿಸಿದ ನೋವನ್ನು ಮತ್ತೆ ಮತ್ತೆ ಹೇಳುವುದರಿಂದ ಏನು ಪ್ರಯೋಜನ ಎನ್ನುವುದನ್ನು ಪ್ರ್ಯಾಕ್ಟಿಕಲ್ ಆಗಿ ಯೋಚಿಸಬೇಕು. ಸಾಮಾನ್ಯವಾಗಿ ಇತಿಹಾಸದಲ್ಲಿ ಬದುಕುವವರಲ್ಲಿ ಕೆಲವು ಅಭ್ಯಾಸಗಳು ಕಂಡುಬರುತ್ತವೆ. ನಿಮ್ಮಲ್ಲಿ ಅಥವಾ ನಿಮ್ಮ ಹತ್ತಿರದವರಲ್ಲಿ ಈ ಕೆಲವು ಅಭ್ಯಾಸಗಳಿದ್ದರೆ ಅವರು ಇತಿಹಾಸದಲ್ಲೇ ಬಂಧಿಯಾಗಿದ್ದಾರೆ ಎಂದು ತಿಳಿಯಬಹುದು.
• ಬದಲಾವಣೆಗೆ (Change) ಒಪ್ಪಲ್ಲ
ಬದಲಾವಣೆ ಜಗದ ನಿಯಮ. ಆದರೆ, ನೀವು ಇದನ್ನು ತಡೆಯಲು (Resist) ಯತ್ನಿಸುತ್ತೀರಿ ಎಂದಾದರೆ ಇತಿಹಾಸದಲ್ಲಿ (History) ಬಂಧಿಯಾಗಿದ್ದೀರಿ ಎಂದರ್ಥ. ಪ್ರತಿ ಸನ್ನಿವೇಶವನ್ನೂ ಮುಕ್ತ ಮನದಿಂದ (Open Mind) ಸ್ವೀಕರಿಸಬೇಕು. ಹೊಸ ಪದ್ಧತಿಗಳನ್ನು ಅನುಸರಿಸುವುದು, ಹೊಸ ವಿಚಾರಗಳನ್ನು ಅಳವಡಿಸಿಕೊಳ್ಳುವುದು ಅಗತ್ಯ. ಈ ಗುಣ ನಿಮ್ಮಲ್ಲಿ ಇಲ್ಲವಾದರೆ ಪ್ರಗತಿ (Development) ಕುಂಠಿತವಾಗುತ್ತದೆ. ಕೆಲವೊಮ್ಮೆ ಬದಲಾವಣೆ ಭಯ ಮೂಡಿಸಬಹುದು, ಆದರೆ ಅದು ಅನಿವಾರ್ಯ ಎಂದು ಅರಿಯಬೇಕು.
Stressನಲ್ಲಿದ್ದಾಗ ಈ ಫುಡ್ ಅಪ್ಪಿ ತಪ್ಪಿಯೂ ತಿನ್ನಬೇಡಿ!
• ಅನುಭವಗಳನ್ನಾಧರಿಸಿ ದ್ವೇಷ (Grudge)
ಹಿಂದಿನ ಅನುಭವಗಳ (Experience) ಮೇಲೆ ಇಂದಿಗೂ ಯಾರನ್ನೋ ದ್ವೇಷ ಮಾಡುವುದು ಸಮಯವನ್ನು ವ್ಯರ್ಥ ಮಾಡುವ ಗುಣ. ಯಾರದ್ದಾದರೂ ಬಗ್ಗೆ ಪ್ರತೀಕಾರ ಹಾಗೂ ಇನ್ನೊಬ್ಬರ ಬಗ್ಗೆ ಕೆಟ್ಟದ್ದನ್ನು ಬಯಸುತ್ತೀರಿ ಎಂದಾದರೆ ನಿಮ್ಮಲ್ಲಿ ದ್ವೇಷವಿದೆ ಎಂದರ್ಥ. ಇದರಿಂದ ಅವರಿಗೆ ಸಮಸ್ಯೆ ಆಗುವುದೋ ಇಲ್ಲವೋ, ನಿಮಗಾಗುವುದು ಗ್ಯಾರೆಂಟಿ. ಸ್ವಯಂ ಪ್ರೀತಿ (Love) ಹಾಗೂ ಮತ್ತೊಬ್ಬರ ಬಗ್ಗೆ ಸಹಾನುಭೂತಿ ಗುಣ ಬೆಳೆಸಿಕೊಂಡರೆ ನೆಮ್ಮದಿ ಸಾಧ್ಯ.
• ಹಿಂದಿನ ನಿರ್ಧಾರಗಳ ಬಗ್ಗೆ ಪಶ್ಚಾತ್ತಾಪ (Regret)
ಹಿಂದಿನ ಯಾವುದೋ ನಿರ್ಧಾರದ ಬಗ್ಗೆ ನಿಮ್ಮಲ್ಲಿ ಇಂದಿಗೂ ಪಶ್ಚಾತ್ತಾಪವಿದೆ ಎಂದಾದರೆ ಇತಿಹಾಸದ ಕೆಟ್ಟ ಅನುಭವವನ್ನು ಇಂದಿಗೂ ಮರೆತಿಲ್ಲ ಎಂದರ್ಥ. ಕೆಲವರು “ಅದೊಂದು ನಿರ್ಧಾರ ಕೈಗೊಳ್ಳದೆ ಇದ್ದರೆ, ಇವತ್ತು ಹೇಗಿರುತ್ತಿದ್ದೆ’ ಎಂದು ಪಶ್ಚಾತ್ತಾಪ ಪಡುತ್ತಾರೆ. ಇದು ಜೀವನ. ಎಲ್ಲವೂ ನಮ್ಮ ಕೈ ಅಳತೆಯಲ್ಲಿಲ್ಲ ಎನ್ನುವುದು ಸತ್ಯ. ನಿಮಗೆ ಯಾವುದರ ಬಗ್ಗೆ ಪಶ್ಚಾತ್ತಾಪ ಇದೆಯೋ ಆ ಅಂಶವನ್ನು ಸುಧಾರಿಸಿಕೊಳ್ಳಲು ಯತ್ನಿಸಿ.
ಬರೀ ಮನೆಯವರ ಸುಖ ದುಃಖ ನೋಡಿದರೆ ಸಾಲದು, ಮಹಿಳೆಯರು ತಮಗೂ ಹೀಗ್ ಟೈಂ ಇಟ್ಕೋಬೇಕು!
• ಭವಿಷ್ಯದ (Future) ಬಗ್ಗೆ ಯೋಜನೆಗಳೇ ಇಲ್ಲ
ಸಾಮಾನ್ಯವಾಗಿ ಎಲ್ಲರೂ ಭವಿಷ್ಯದ ಬಗ್ಗೆ ಯೋಚಿಸುತ್ತಾರೆ. ಆದರೆ, ನಿಮ್ಮಲ್ಲಿ ಮಾತ್ರ ಈ ವಿಚಾರ ಇಲ್ಲವೆಂದಾದರೆ, ಬದುಕನ್ನು ಹೊಸದಾಗಿ (New Life) ಪರಿಗಣಿಸುವ ಅಗತ್ಯ ಬಂದಿದೆ ಎಂದರ್ಥ. ಯಾವ ಸಂಗತಿ ನಿಮ್ಮನ್ನು ಕಾಡುತ್ತಿದೆ ಎಂದು ಗುರುತಿಸಿಕೊಂಡು ಅದರ ಬಗ್ಗೆ ಒಂದು ನಿರ್ಣಯಕ್ಕೆ ಬಂದು ನಿಶ್ಚಿಂತರಾಗಿ, ಇಂದಿನ ಬದುಕನ್ನು ಬಾಳಿ.
ಇತಿಹಾಸದಲ್ಲಿ ಬದುಕೋರಿಗೆ...
• ಹೊಸ ಅವಕಾಶಗಳನ್ನು (Opportunities) ಬಿಟ್ಟುಬಿಡುತ್ತೀರಾ? ಹಳೆಯದಕ್ಕೇ ಅಂಟಿಕೊಂಡು ಕೂರುತ್ತೀರಾ? ಹೊಸದರ ಬಗ್ಗೆ ನಿಮಗೆ ಭಯವೇ?
• ನೀವು ನಂಬಿಕೊಂಡು ಬಂದಿರುವ ಸಂಗತಿಗಳ ಬಗ್ಗೆ ಹೊಸ ಮಾಹಿತಿ ಅಥವಾ ಫೀಡ್ ಬ್ಯಾಕ್ (Feedback) ದೊರೆತಾಗ ತಿರಸ್ಕರಿಸುತ್ತೀರಾ? ಅಥವಾ ಪರಾಮರ್ಶೆ ಮಾಡುತ್ತೀರಾ?
• ಅತಿಯಾಗಿ ನಿಮ್ಮನ್ನು ನೀವು ದೂಷಿಸಿಕೊಳ್ತೀರಾ (Blame)?
• ಹಿಂದಿನ ವೈಭವದ ಜೀವನದ ನೆನಪಿನಲ್ಲಿ (Old Memories) ಬದುಕುತ್ತೀರಾ? ಇದನ್ನು ನೋಸ್ಟಾಲ್ಜಿಯಾ (Nostalgia) ಎನ್ನಲಾಗುತ್ತದೆ. ಗತ ವೈಭವದ ಅತಿಯಾದ ನೆನಪು ಸಹ ಒಳ್ಳೆಯದಲ್ಲ.