ಪರೀಕ್ಷೆ ಹತ್ತಿರ ಬರ್ತಿದ್ದಂತೆ ಮಕ್ಕಳ ಜೊತೆ ಪಾಲಕರ ಟೆನ್ಷನ್ ಜಾಸ್ತಿಯಾಗುತ್ತದೆ. ಹಗಲು – ಇರುಳು ಎನ್ನದೆ ಎಲ್ಲ ಬಿಟ್ಟು ಮಕ್ಕಳು ಓದಲು ಶುರು ಮಾಡ್ತಾರೆ. ನಿದ್ರೆ ಮರೆತು ವಾರಗಟ್ಟಲೆ ಪರೀಕ್ಷೆಗೆ ತಯಾರಿ ನಡೆಸುವ ಮಕ್ಕಳು ಪರೀಕ್ಷೆ ದಿನ ಹಾಸಿಗೆ ಹಿಡಿಯುವ ಸ್ಥಿತಿ ತಂದುಕೊಳ್ತಾರೆ.
ಇದು ಎಗ್ಸಾಂ ಟೈಂ. ಕೆಲ ಮಕ್ಕಳಿಗೆ ಪರೀಕ್ಷೆ ನಡೆಯುತ್ತಿದ್ರೆ ಮತ್ತೆ ಕೆಲ ಮಕ್ಕಳಿಗೆ ಪರೀಕ್ಷೆ ಇನ್ನೇನು ಶುರುವಾಗಲಿದೆ. ಪ್ರತಿಯೊಬ್ಬ ವಿದ್ಯಾರ್ಥಿ ಜೀವನದಲ್ಲಿ ಎಗ್ಸಾಂ ಒಂದು ದೊಡ್ಡ ತಲೆನೋವು. ವರ್ಷಪೂರ್ತಿ ಆರಾಮವಾಗಿ ಆಟವಾಡ್ತಾ ಇದ್ದ ಮಕ್ಕಳನ್ನು ಪರೀಕ್ಷೆ ಭೂತ ಹಿಡಿದಿಡುತ್ತದೆ. ಎಲ್ಲ ಮಕ್ಕಳೂ ಪರೀಕ್ಷೆ ಸಮಯದಲ್ಲಿ ಒತ್ತಡಕ್ಕೆ ಒಳಗಾಗ್ತಾರೆ.
ಪರೀಕ್ಷೆ (Test) ಅಂದ್ರೆ ವಿದ್ಯಾರ್ಥಿಗಳಿಗೆ ಮಾತ್ರವಲ್ಲ ಪಾಲಕರಿಗೂ ಸವಾಲು. ಮಕ್ಕಳನ್ನು ಓದಿಸುವ ಹೊಣೆ ಪಾಲಕರಿಗಿದ್ರೆ ಪಾಲಕರು ನಿರೀಕ್ಷೆ ಮಾಡಿದಷ್ಟು ಅಂಕ ತರುವ ಜವಾಬ್ದಾರಿ ಮಕ್ಕಳಿಗಿರುತ್ತದೆ. ಸ್ಪರ್ಧಾಯುಗದಲ್ಲಿ ಅಂಕ ಅನೇಕ ಬಾರಿ ಮಹತ್ವಪಡೆಯುತ್ತದೆ. ಈ ಅಂಕದ ಹಿಂದೆ ಓಡುವ ಮಕ್ಕಳು ಪರೀಕ್ಷೆ ಸಮಯದಲ್ಲಿ ನಿದ್ರೆಬಿಟ್ಟು ಓದು (Read) ತ್ತಾರೆ. ಬಹುತೇಕ ಮಕ್ಕಳು (Children) ಪರೀಕ್ಷೆ ಬಂತು ಅಂದ್ರೆ ನಿದ್ರೆಗೆಡುತ್ತಾರೆ. ಪರೀಕ್ಷೆ ಹಿಂದಿನ ದಿನ ರಾತ್ರ ಪೂರ್ತಿ ಓದುವ ಮಕ್ಕಳಿದ್ದಾರೆ. ಬೆಳಿಗ್ಗೆ ಪರೀಕ್ಷೆ ಬರೆಯಲು ಹೋಗುವ ಕೊನೆ ಕ್ಷಣದವರೆಗೂ ಪಠ್ಯವನ್ನು ತಿರುಗಿ ಮುರುಗಿ ನೋಡ್ತಾರೆ. ಪರೀಕ್ಷೆ ಸಂದರ್ಭದಲ್ಲಿ ನಿದ್ರೆ ಬಿಟ್ಟರೆ ಆಗೋದು ಏನೂ ಇಲ್ಲ ಎಂದು ಭಾವಿಸುವವರೇ ಹೆಚ್ಚು. ಅನೇಕ ಪಾಲಕರು ಕೂಡ ಇದಕ್ಕೆ ಪ್ರೋತ್ಸಾಹ ನೀಡ್ತಾರೆ. ಇನ್ನೊಂದೇ ದಿನ ಬಾಕಿಯಿದೆ, ಇನ್ನೊಂದೇ ಗಂಟೆ ಬಾಕಿಯಿದೆ, ಎಷ್ಟು ಸಾಧ್ಯವೋ ಅಷ್ಟು ಓದು ಅಂತಾ ಮಕ್ಕಳ ಮೇಲೆ ಒತ್ತಡ ಹಾಕ್ತಾರೆ. ಆದ್ರೆ ಪರೀಕ್ಷೆ ಸಮಯದಲ್ಲಿ ನಿದ್ರೆ ಮಹತ್ವದ ಪಾತ್ರವನ್ನು ವಹಿಸುತ್ತದೆ. ಪರೀಕ್ಷೆ ಮೊದಲು ನಿದ್ರೆ ಮಾಡದೆ ಹೋದ್ರೆ ಸಾಕಷ್ಟು ನಷ್ಟವನ್ನು ಎದುರಿಸಬೇಕಾಗುತ್ತದೆ.
undefined
HEALTH TIPS: ಕಿಟಕಿ ಗಾಜಿನಿಂದ ಬರೋ ಸೂರ್ಯನ ಕಿರಣ ನೀಡುತ್ತಾ ವಿಟಮಿನ್ ಡಿ?
ಪರೀಕ್ಷೆ ಹಿಂದಿನ ದಿನವೂ ನಿದ್ರೆ ಏಕೆ ಬೇಕು? :
ಪರೀಕ್ಷೆ ದಿನ ಚೆನ್ನಾಗಿರಬೇಕೆಂದ್ರೆ ರಾತ್ರಿ ನಿದ್ರೆ ಮಾಡ್ಬೇಕು : ಪ್ರತಿ ದಿನ ವ್ಯಕ್ತಿಯೊಬ್ಬನಿಗೆ 7 – 8 ಗಂಟೆ ನಿದ್ರೆ ಅಗತ್ಯವಿರುತ್ತದೆ. ಅದ್ರಲ್ಲೂ ಮಕ್ಕಳು ಇನ್ನಷ್ಟು ಹೆಚ್ಚಿನ ಸಮಯ ನಿದ್ರೆ ಮಾಡ್ಬೇಕು. ನೀವು ರಾತ್ರಿ ಸರಿಯಾಗಿ ನಿದ್ರೆ ಮಾಡಿದ್ರೆ ಹೊಸ ದಿನವನ್ನು ಹೊಸದಾಗಿ ಶುರು ಮಾಡಬಹುದು. ಅದೇ ನೀವು ರಾತ್ರಿ ಸರಿಯಾಗಿ ನಿದ್ರೆ ಮಾಡಿಲ್ಲವೆಂದ್ರೆ ನಿಮ್ಮ ದಿನದ ಆರಂಭ ಚೆನ್ನಾಗಿರೋದಿಲ್ಲ. ಚಟುವಟಿಕೆಯಿಂದ ಕಳೆಯಲು ಸಾಧ್ಯವಾಗೋದಿಲ್ಲ. ಪರೀಕ್ಷೆಯಲ್ಲಿ ನಿಮ್ಮ ಏಕಾಗ್ರತೆ ನಷ್ಟವಾಗಬಹುದು. ಅಲ್ಲಯೇ ನೀವು ತೂಕಡಿಸಬಹುದು. ಇಲ್ಲವೆ ಆಲಸ್ಯ ನಿಮ್ಮನ್ನು ಮನೆ ಮಾಡಬಹುದು.
ಹಾರ್ಮೋನುಗಳ ಏರುಪೇರು : ನಿದ್ರೆ ಸರಿಯಾಗಿಲ್ಲವೆಂದ್ರೆ ರಕ್ತದಲ್ಲಿನ ಸಕ್ಕರೆ ಮಟ್ಟದಲ್ಲಿ ಏರುಪೇರಾಗುತ್ತದೆ. ಇನ್ಸುಲಿನ್ ಮಟ್ಟ, ಕೊಲೆಸ್ಟ್ರಾಲ್, ಲೆಪ್ಟಿನ್, ಗ್ರೆಲಿನ್ ಮತ್ತು ಕಾರ್ಟಿಸೋಲ್ ಮಟ್ಟಗಳಂತಹ ಹಾರ್ಮೋನುಗಳು ದೇಹದಲ್ಲಿ ಸ್ಥಿರವಾಗಿರೋದಿಲ್ಲ. ಇದ್ರಿಂದ ನಿತ್ಯದ ಕೆಲಸಕ್ಕೆ ತೊಂದರೆಯಾಗುತ್ತದೆ. ಆರೋಗ್ಯವಂತ ವ್ಯಕ್ತಿಗೆ ಹಾರ್ಮೋನ್ ಸರಿಯಾಗಿ ಕೆಲಸ ಮಾಡುವುದು ಬಹಳ ಮುಖ್ಯ.
ದಿಢೀರ್ ಬಿಪಿ ಹೆಚ್ಚಾದ್ರೆ ಗಾಬರಿ ಬೇಡ, ಕಿಚನ್‌ನಲ್ಲಿರೋ ಈ ಆಹಾರ ತಿನ್ನಿ ಸಾಕು
ವಾರಗಟ್ಟಲೆ ನಿದ್ರೆ ಬಿಟ್ರೆ ಕಾಡುತ್ತೆ ಸಮಸ್ಯೆ : ಪರೀಕ್ಷೆ ಹಿಂದಿನ ದಿನ ಮಾತ್ರವಲ್ಲ ವಾರಗಟ್ಟೆಲೆ ಮಕ್ಕಳು ನಿದ್ರೆ ಮಾಡೋದಿಲ್ಲ. ಅದಕ್ಕೆ ಕಾರಣ ಪರೀಕ್ಷೆ ಭಯ. ಹಾಗೆ ವಾರಪೂರ್ತಿ ನಡೆಯುವ ಪರೀಕ್ಷೆ. ನೀವು ಅಪರೂಪಕ್ಕೆ ಒಮ್ಮೆ ರಾತ್ರಿ ಸರಿಯಾಗಿ ನಿದ್ರೆ ಮಾಡಿಲ್ಲವೆಂದ್ರೆ ಅನೇಕ ಸಮಸ್ಯೆ ಕಾಡುತ್ತದೆ. ಇನ್ನು ವಾರಗಟ್ಟಲೆ ನಿದ್ರೆ ಬಿಟ್ರೆ ಕಾರ್ಟಿಸೋಲ್ ಮಟ್ಟವು ಹೆಚ್ಚಾಗುತ್ತದೆ. ಇದರಿಂದಾಗಿ ದೇಹದಲ್ಲಿ ಉರಿಯೂತದ ಸಮಸ್ಯೆ ಉಂಟಾಗುತ್ತದೆ. ರೋಗನಿರೋಧಕ ಶಕ್ತಿಯೂ ಕಡಿಮೆಯಾಗುತ್ತದೆ. ಅನಾರೋಗ್ಯಕ್ಕೆ ಒಳಗಾಗುವ ಅಪಾಯ ಹೆಚ್ಚಿರುತ್ತದೆ. ಪರೀಕ್ಷೆಯ ಸಮಯದಲ್ಲಿ ಅನಾರೋಗ್ಯಕ್ಕೆ ಒಳಗಾದ್ರೆ ಅದು ವಿದ್ಯಾರ್ಥಿಯ ಕಾರ್ಯಕ್ಷಮತೆಯ ಮೇಲೆ ಪರಿಣಾಮ ಬೀರುತ್ತದೆ.
ಇದಲ್ಲದೆ ಕಾರ್ಟಿಸೋಲ್ ಮಟ್ಟ ಹೆಚ್ಚಾದ್ರೆ ಅದು ಮಗುವಿನ ನೆನಪಿನ ಶಕ್ತಿ ಮೇಲೆ ಪರಿಣಾಮ ಬೀರುತ್ತದೆ. ಮಗು ಓದಿದ್ದನ್ನೆಲ್ಲ ಮರೆಯುತ್ತದೆ. ಪರೀಕ್ಷೆಯಲ್ಲಿ ಆತಂಕ, ಉದ್ವೇಗ ಹೆಚ್ಚಾಗಿ ಫಲಿತಾಂಶ ಕಳಪೆಯಾಗುತ್ತದೆ.