ದೇಹಕ್ಕೆ ಮಾತ್ರವಲ್ಲ ಮನಸ್ಸಿಗೆ ಖಾಯಿಲೆ ಬಂದ್ರೂ ಅಪಾಯವೆ. ಮನಸ್ಸಿನ ರೋಗ ತಿಳಿಯದೆ ನಮ್ಮನ್ನು ತಿಂದಿರುತ್ತದೆ. ಖಿನ್ನತೆಗೆ ಮಹಿಳೆ ಮಾತ್ರವಲ್ಲ ಪುರುಷ ಕೂಡ ಬಲಿಯಾಗ್ತಾನೆ. ಅದ್ರ ಲಕ್ಷಣ ತಿಳಿದ್ರೆ ಚಿಕಿತ್ಸೆ ಸಾಧ್ಯ.
ಖಿನ್ನತೆ ಮತ್ತು ಒತ್ತಡ ಮಾನಸಿಕ ಸಮಸ್ಯೆಯಾಗಿದೆ. ಅದು ವ್ಯಕ್ತಿಯನ್ನು ಆಂತರಿಕವಾಗಿ ದುರ್ಬಲಗೊಳಿಸುತ್ತದೆ. ಖಿನ್ನತೆಯ ಕೆಲವು ಲಕ್ಷಣಗಳು ಪುರುಷರು ಮತ್ತು ಮಹಿಳೆಯರಲ್ಲಿ ಒಂದೇ ಆಗಿರುತ್ತವೆ. ಹತಾಶೆ, ದುಃಖ, ಆಯಾಸ ಮತ್ತು ನಿದ್ರಾಹೀನತೆಯಂತಹ ಕೆಲ ಲಕ್ಷಣಗಳು ಪುರುಷ ಹಾಗೂ ಮಹಿಳೆ ಇಬ್ಬರಲ್ಲೂ ಕಾಣಿಸಿಕೊಳ್ಳುತ್ತದೆ. ಆದರೆ ಒತ್ತಡ ಹಾಗೂ ಖಿನ್ನತೆ ಎರಡೂ ಸಮಸ್ಯೆಗಳ ಲಕ್ಷಣಗಳಲ್ಲಿ ಕೆಲವೊಂದು ಭಿನ್ನತೆ ಇರುತ್ತದೆ. ಅದು ಪುರುಷರಲ್ಲಿ ಮಾತ್ರ ಕಾಣಿಸಿಕೊಳ್ಳುತ್ತದೆ. ನಾವಿಂದು ಪುರುಷರ ಖಿನ್ನತೆ ಲಕ್ಷಣ ಹಾಗೂ ಅದರಿಂದ ಹೊರಬರುವುದು ಹೇಗೆ ಎಂಬುದನ್ನು ನಿಮಗೆ ಹೇಳ್ತೆವೆ.
ಪುರುಷ (Male) ರಲ್ಲಿ ಕಾಣಿಸಿಕೊಳ್ಳುವ ಖಿನ್ನತೆ (Depression) ಮೂಡ್ ಡಿಸಾರ್ಡರ್ ಆಗಿದೆ. ಖಿನ್ನತೆಯ ಮೊದಲ ಪುರುಷರ ಮನಸ್ಸಿ (Mind) ನ ಮೇಲೆ ಪರಿಣಾಮ ಬೀರುತ್ತದೆ. ಮನಸ್ಥಿತಿ ಬದಲಾವಣೆ, ದುಃಖ ಮತ್ತು ವಿವರಿಸಲಾಗದ ಅಳುವನ್ನು ಅವರು ಅನುಭವಿಸುತ್ತಾರೆ. ಕೆಲವು ಪುರುಷರು, ವಿಶೇಷವಾಗಿ ಹದಿಹರೆಯದವರಲ್ಲಿ ಬಹಳಷ್ಟು ಕಿರಿಕಿರಿ ಅನುಭವಿಸುತ್ತಾರೆ. ಇದಲ್ಲದೆ ಕೆಲಸದಲ್ಲಿ ಆಸಕ್ತಿ (Interest) ಅಥವಾ ಸಂತೋಷದ ಕೊರತೆಯನ್ನು ಎದುರಿಸುತ್ತಾರೆ.
ಕೆಲಸ ಅಥವಾ ಆಟದಲ್ಲಿ ಹೆಚ್ಚು ಸಮಯ ಕಳೆಯುವುದು, ಜೀರ್ಣಕ್ರಿಯೆಯ ಸಮಸ್ಯೆ, ನಿರಂತರ ತಲೆನೋವು, ಆಲ್ಕೊಹಾಲ್ ಸೇವನೆಯಲ್ಲಿ ಹೆಚ್ಚಳ, ಹಿಂಸಾತ್ಮಕ ನಡವಳಿಕೆ ನಿಮ್ಮಲ್ಲಿ ಕಂಡು ಬರ್ತಿದ್ದರೆ ನೀವು ಖಿನ್ನತೆಗೆ ಒಳಗಾಗಿದ್ದಿರಿ ಎಂದರ್ಥ. ಇದಲ್ಲದೆ ನಿದ್ರೆ ಮಾಡಲು ತೊಂದರೆಯಾಗ್ತಿದ್ದರೆ, ತೂಕ ಹೆಚ್ಚಾಗುವುದು ಅಥವಾ ಇಳಿಯುತ್ತಿದ್ದರೆ, ಹಸಿವು ಕಡಿಮೆಗಿದ್ದರೆ, ಅತಿಯಾದ ನಿದ್ರೆ ಅಥವಾ ಅತಿಯಾದ ಹಸಿವು ನಿಮ್ಮನ್ನು ಕಾಡ್ತಿದ್ರೆ ಕೂಡ ನೀವು ಎಚ್ಚರವಹಿಸಬೇಕಾಗುತ್ತದೆ.
ಊಟದ ಜೊತೆ ಸಲಾಡ್ ತಿನ್ನೋದು ನಿಜವಾಗಲೂ ಆರೋಗ್ಯಕ್ಕೆ ಒಳ್ಳೆಯದಾ?
ಖಿನ್ನತೆ ನಮ್ಮ ಜೀವ ತೆಗೆಯುವ ಕೆಲಸ ಮಾಡುತ್ತದೆ. ಪುರುಷರಲ್ಲಿ ಖಿನ್ನತೆಯ ಲಕ್ಷಣ ಕಂಡು ಬಂದ್ರೆ ಅದನ್ನು ನಿರ್ಲಕ್ಷಿಸಬಾರದು. ಸಾಮಾನ್ಯವಾಗಿ ಪುರುಷರು ತಮ್ಮ ಸಮಸ್ಯೆ, ನೋವು ಅಥವಾ ಖಾಯಿಲೆಯನ್ನು ಯಾರೊಂದಿಗೂ ಹಂಚಿಕೊಳ್ಳುವುದಿಲ್ಲ. ಸಮಸ್ಯೆ ಮನಸ್ಸಿನಲ್ಲಿದ್ದಷ್ಟು ಅಪಾಯ ಹೆಚ್ಚು. ಇದ್ರಿಂದ ಮುಂದೆ ಆತ್ಮಹತ್ಯೆಗೆ ಅವರು ಪ್ರಯತ್ನಿಸುವ ಸಾಧ್ಯತೆಯಿರುತ್ತದೆ. ಪುರುಷರು ತಾವೇಗಿಯೇ ಆಸ್ಪತ್ರೆಗೆ ಹೋಗುವುದು ಅಪರೂಪ. ಹಾಗಾಗಿ ಕುಟುಂಬಸ್ಥರು ಅವರ ಸಮಸ್ಯೆ ಅರಿತು ಖಿನ್ನತೆಯಿಂದ ಹೊರಗೆ ಬರಲು ಅವರಿಗೆ ನೆರವಾಗಬೇಕು. ಮನೋವೈದ್ಯರ ಬಳಿ ಕರೆದುಕೊಂಡು ಹೋಗಲು ಹಿಂಜರಿಯಬಾರದು.
ಮನುಷ್ಯನನ್ನು ಕಾಡುವ ಹತಾಶೆ, ಅಸಹಾಯಕತೆ ಅಥವಾ ತನ್ನಿಂದ ಏನೂ ಸಾಧ್ಯವಿಲ್ಲ ಎನ್ನುವ ಭಾವನೆ ಆತನನ್ನು ಖಿನ್ನತೆಗೆ ನೂಕುತ್ತದೆ. ಮತ್ತೆ ಎದ್ದು ನಿಲ್ಲುವ ಭರವಸೆಯನ್ನು ವ್ಯಕ್ತಿ ಕಳೆದುಕೊಳ್ಳುತ್ತಾನೆ ಹತಾಶೆಯಲ್ಲಿಯೇ ದಿನ ಕಳೆಯಲು ಶುರು ಮಾಡ್ತಾನೆ. ಅಂತಿಮವಾಗಿ ಈ ಜೀವಕ್ಕೆ ನಾನು ಯೋಗ್ಯನಲ್ಲ ಎಂದು ಭಾವಿಸುವ ವ್ಯಕ್ತಿ ಜೀವನವನ್ನು ಕೊನೆಗೊಳಿಸುವ ನಿರ್ಧಾರ ತೆಗೆದುಕೊಳ್ಳುತ್ತಾನೆ.
ಖಿನ್ನತೆಯಿಂದ ಹೊರಬರಲು ಏನು ಮಾಡ್ಬೇಕು? :
ಖಿನ್ನತೆಯಿಂದ ಹೊರಬರುವುದು ನಮ್ಮೊಳಗೆ ನಡೆಯುವ ಯುದ್ಧದಲ್ಲಿ ಗೆದ್ದು ಬಂದಂತೆ. ಇದಕ್ಕೆ ನಮ್ಮವರ ಸಹಾಯ ಅಗತ್ಯವಾಗಿರುತ್ತದೆ. ಖಿನ್ನತೆಯಿಂದ ಬಳಲುವ ವ್ಯಕ್ತಿ ಸದಾ ಕೆಟ್ಟದ್ದನ್ನು ಯೋಚಿಸುವುದನ್ನು ಬಿಡಬೇಕು. ಅನೇಕ ಬಾರಿ ನಕಾರಾತ್ಮಕ ಭಾವನೆ ನಮ್ಮ ಮನಸ್ಸಿಗೆ ಅರಿಯದ ಸಂತೋಷ ನೀಡಲು ಶುರು ಮಾಡುತ್ತದೆ. ಹಾಗಾಗಿ ಜನರು ಆ ಸಂತೋಷದಲ್ಲಿ ಕಳೆದುಹೋಗ್ತಾರೆ. ದಿನ ಕಳೆದಂತೆ ಅದು ಮನಸ್ಸಿನಲ್ಲಿ ವಿಷ ಉತ್ಪತ್ತಿ ಮಾಡುತ್ತದೆ. ಹತಾಶೆ, ನೋವಿನ ವಿಚಾರ ಮನಸ್ಸಿಗೆ ಬರ್ತಿದ್ದಂತೆ ಮೊದಲು ನೀವಿರುವ ಸ್ಥಳವನ್ನು ಬದಲಿಸಿ. ನಿಮ್ಮ ಆಲೋಚನೆಯನ್ನು ಬೇರೆಡೆ ತಿರುಗಿಸಿ.
ಚಳಿಗಾಲದಲ್ಲಿ ಅಧಿಕವಾಗುತ್ತೆ ವೃದ್ಧರ ಸಾವು ! ಈ ರೀತಿಯಾಗಿ ಕಾಳಜಿ ವಹಿಸಿ
ಸಂತೋಷ ಮೇಲಿನಿಂದ ಕಾಣಬಾರದು. ಸಂತೋಷ ಮನಸ್ಸಿನಿಂದ ಬರಬೇಕು. ಹಾಗಾಗಿ ಸಂತೋಷವಾಗಿರಲು ಏನು ಮಾಡ್ಬೇಕು ಎಂಬುದನ್ನು ಅರಿತು, ಅದ್ರಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಳ್ಳಿ.
ಕುಟುಂಬದ ಜೊತೆ ಹೆಚ್ಚು ಸಮಯ ಕಳೆಯಿರಿ. ಸ್ನೇಹಿತರ ಜೊತೆ ಹೊರಗೆ ಹೋಗಿ. ನಿಮ್ಮ ಸಮಸ್ಯೆಗಳನ್ನು ಅವರ ಮುಂದೆ ಹೇಳಿದ್ರೆ ಎದೆಯಲ್ಲಿರುವ ಭಾರ ಕಡಿಮೆಯಾಗುತ್ತದೆ. ನಿಮ್ಮ ಸಮಸ್ಯೆಗೆ ಅವರು ನೆರವಾಗುವ ಸಾಧ್ಯತೆ ಕೂಡ ಇರುತ್ತದೆ.
ಬೆಳಿಗ್ಗೆ ತಾಜಾ ಗಾಳಿಯನ್ನು ತೆಗೆದುಕೊಳ್ಳಿ. ನಿಮ್ಮಿಷ್ಟದ ಹವ್ಯಾಸದಲ್ಲಿ ತೊಡಗಿಕೊಳ್ಳಿ. ಖಾಲಿ ಕುಳಿತು ಅನವಶ್ಯಕ ಆಲೋಚನೆ ಮಾಡುವ ಬದಲು ಧ್ಯಾನ ಮಾಡಲು ಪ್ರಯತ್ನಿಸಿ. ಧ್ಯಾನವು ಒತ್ತಡ ಮತ್ತು ಖಿನ್ನತೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.