ನಿಮ್ಮ ಮಕ್ಕಳು ಟಿವಿ, ಮೊಬೈಲ್ ನೋಡ್ತಾ ಊಟ ಮಾಡ್ತಾರಾ? ಈ ಅಪಾಯದ ಬಗ್ಗೆ ಅರಿವಿರಲಿ!

By Suvarna News  |  First Published Feb 19, 2024, 1:23 PM IST

ಮಕ್ಕಳು ಟಿವಿ ಮುಂದೆ ಕೂತೋ, ಮೊಬೈಲ್, ಲ್ಯಾಪ್‌ಟಾಪ್ ನೋಡ್ತಾನೋ ಊಟ ಮಾಡೋದು ಕಾಮನ್ ಅಂತಾಗಿದೆ. ಆದರೆ ಈ ಅಭ್ಯಾಸದಿಂದ ಮಕ್ಕಳಿಗೆ ಅಪಾಯ ಎದುರಾಗಬಹುದು.


'ಸೀತಾರಾಮ' ಅನ್ನೋ ಸೀರಿಯಲ್ ಅನ್ನು ನೀವು ನೋಡಿರಬಹುದು, ಅದರಲ್ಲಿ ಸಿಹಿ ಅನ್ನೋ ಪುಟಾಣಿ ಹುಡುಗಿ ಡಯಾಬಿಟೀಸ್ ಅನ್ನೋ ಸಮಸ್ಯೆಯಿಂದ ಬಳಲುತ್ತಾಳೆ. ಇದು ಈ ಮಗುವಿಗಷ್ಟೇ ಬಂದಿರುವ ಅಪರೂಪದ ಖಾಯಿಲೆ ಅಲ್ಲ. ಈ ಕಾಲದ ಮಕ್ಕಳನ್ನು ಈ ಪುಟಾಣಿ ಪ್ರತಿನಿಧಿಸುತ್ತಾಳೆ ಅಷ್ಟೇ. ಕೋವಿಡ್ ನಮಗೆ ನೀಡಿರುವ ಕೊಡುಗೆಗಳಲ್ಲಿ ಇದೂ ಒಂದು. ಕೋವಿಡ್ ನಂತರ ಮಕ್ಕಳಲ್ಲಿ ಡಯಾಬಿಟಿಸ್ ಪ್ರಮಾಣ ಅಪಾಯಕಾರಿ ಮಟ್ಟದಲ್ಲಿ ಏರುತ್ತಿದೆ ಎಂದು ಸರ್ವೇ ತಿಳಿಸುತ್ತದೆ. ಇದೆಲ್ಲ ಯಾರದೋ ಮಕ್ಕಳಿಗೆ ಬಂದಿರುವ ಸಮಸ್ಯೆ ಅಂತ ನೀವು ಅಂದುಕೊಂಡಿರಬಹುದು. ಆದರೆ ಟಿವಿ, ಗ್ಯಾಜೆಟ್ ಮುಂದೆ ಬಹಳ ಹೊತ್ತು ಕೂರುವ, ಊಟ, ತಿಂಡಿಯನ್ನೂ ಅದರೆದುರೇ ಮಾಡುವ ನಿಮ್ಮ ಮನೆ ಮಗುವಿಗೂ ಈ ಅಪಾಯ ಬಂದಿರಬಹುದು.

ಹೌದು, ಮಕ್ಕಳಲ್ಲಿ ಹೆಚ್ಚುತ್ತಿರುವ ಬೊಜ್ಜು (Obesity), ಒತ್ತಡ (Stress) ಎಲ್ಲ ಟೈಪ್ 1 ಡಯಾಬಿಟೀಸ್ ಬರಲು ಕಾರಣವಾಗುತ್ತಿದೆ. ಇದರಿಂದ ಸಾಕಷ್ಟು ಸಮಸ್ಯೆಗಳನ್ನು ಮಕ್ಕಳು ಎದುರಿಸಬೇಕಾಗುತ್ತದೆ. ಇದಲ್ಲದೇ ಇನ್ನಿತರ ಕೆಲವು ಸಮಸ್ಯೆಗಳೂ ಈ ಟಿವಿ ಮುಂದೆ ಊಟ ತಿಂಡಿ ಮಾಡುವುದರಿಂದ ಬರಬಹುದು. ಏಕೆಂದರೆ ರುಚಿಕರ ಹಾಗೂ ಆರೋಗ್ಯಕರವಾದುದನ್ನು ಕೊಟ್ಟರೆ ಬೇಡ ಎನ್ನುವ ಮಕ್ಕಳು ಕುರುಕಲು ತಿಂಡಿ, ಚಾಕ್ಲೇಟ್‌, ಬಿಸ್ಕೆಟ್‌ನಂತಹ ತಿನಿಸುಗಳನ್ನು ಬಾಯಿ ಚಪ್ಪರಿಸಿಕೊಂಡು ತಿನ್ನುತ್ತಾರೆ. ಅಂತಹ ಮಕ್ಕಳನ್ನು ಊಟ, ತಿಂಡಿಯ ಸಮಯದಲ್ಲಿ ಬಟ್ಟಲ ಮುಂದೆ ಕೂರಿಸುವುದಕ್ಕಾಗಿ ಹೆತ್ತವರು ಪಡುವ ಕಷ್ಟ ಅಷ್ಟಿಷ್ಟಲ್ಲ. ಊಟದ ಸಮಯದಲ್ಲಿ ಮಗುವಿಗೆ ಸಮತೋಲಿತ ಆಹಾರವನ್ನು ನೀಡುವುದು, ಆರೋಗ್ಯಕರ ಆಹಾರ ಪದ್ಧತಿಯನ್ನು ಪೋಷಿಸುವುದು ಮತ್ತು ಮಗುವಿನ ದೈಹಿಕ ಆರೋಗ್ಯವನ್ನು ಹೆಚ್ಚಿಸಲು ವಿವಿಧ ಆಹಾರಗಳನ್ನು ಪರಿಚಯಿಸುವುದು ಪೋಷಕರ ಹೊಣೆಯಾಗಿರುತ್ತದೆ. ಇದಲ್ಲದೆ, ಅದರ ಪೌಷ್ಟಿಕಾಂಶದ ಪ್ರಯೋಜನಗಳನ್ನು ಮೀರಿ, ಊಟದ ಸಮಯವು ತಮ್ಮ ಮಗುವಿನೊಂದಿಗೆ ಭಾವನಾತ್ಮಕ ಸಂಪರ್ಕಗಳನ್ನು (Emotional Connecitivy) ರೂಪಿಸಲು ಪೋಷಕರಿಗೆ ಅಮೂಲ್ಯವಾದ ಅವಕಾಶವಾಗಿದೆ.

Tap to resize

Latest Videos

ಪರೀಕ್ಷಾ ಸಮಯದಲ್ಲಿ ನಿದ್ರೆ ತಪ್ಪಿಸಲು ವಿದ್ಯಾರ್ಥಿಗಳಿಂದ 40 ಗಂಟೆ ನಿದ್ರೆ ಬಾರದ, ಉಗ್ರರು ಸೇವಿಸುವ ಮಾತ್ರೆ ಬಳಕೆ!

ಆದರೆ ಮಕ್ಕಳು ಟಿವಿ ಮುಂದೆ ಕೂತರೆ ಯಾವ ಭಾವನಾತ್ಮಕತೆಯೂ (emotinal bonding) ಇಲ್ಲದೇ ತಿನ್ನುವ ಬಗ್ಗೆ ಗಮನವೂ ಇಲ್ಲದೇ ತಿನ್ನುತ್ತಿರುತ್ತಾರೆ. ಇದು ಮಕ್ಕಳಲ್ಲಿ ಬೊಜ್ಜು ಹೆಚ್ಚಾಗುವ ಹಾಗೆ ಮಾಡಬಹುದು. ಇದರಿಂದ ಡಯಾಬಿಟೀಸ್ ಸೇರಿ ಅನೇಕ ದೈಹಿಕ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಮಾನಸಿಕವಾಗಿಯೂ ಅನೇಕ ಸಮಸ್ಯೆಗಳು ಇದರಿಂದ ಬರಬಹುದು. ಇದರಿಂದ ಹೊರಬರಬೇಕೆಂದರೆ ಟಿವಿ ಮುಂದೆ ಕೂತು ತಿನ್ನುವ ಅಭ್ಯಾಸ ಕಡಿಮೆ ಮಾಡುವುದು ಉತ್ತಮ. ಊಟದ ಸಮಯದಲ್ಲಿ ಟಿವಿ ನೋಡುವುದು ಈಗಾಗಲೇ ಅಭ್ಯಾಸವಾಗಿದ್ದರೆ, ಅದರಲ್ಲಿ ಕಳೆಯುವ ಸಮಯವನ್ನು ಒಮ್ಮಿಂದೊಮ್ಮೆಲೇ ಕಡಿಮೆ ಮಾಡುವುದಕ್ಕಿಂತ, ಕ್ರಮೇಣ ಕಡಿಮೆ ಮಾಡುವುದು ಉತ್ತಮ.

ಮಕ್ಕಳಿಗೆ ಊಟದ ನಿಯಮಗಳನ್ನು ಸ್ಪಷ್ಟವಾಗಿ ತಿಳಿಸಿ. ಅಲ್ಲದೆ, ಆಹಾರದ ಬಗ್ಗೆ ಆಸಕ್ತಿ ಹುಟ್ಟು ಹಾಕುವುದಕ್ಕಾಗಿ ಊಟ ತಯಾರಿಕೆಯಲ್ಲಿ ಮಕ್ಕಳನ್ನು (Kids) ತೊಡಗಿಸಿಕೊಳ್ಳಿ.ತಿಂಡಿಗಳನ್ನು ಆಯ್ಕೆ ಮಾಡುವುದು ಅಥವಾ ಊಟ ತಯಾರಿಕೆಯಲ್ಲಿ ಸಹಾಯ ಮಾಡುವುದು ಮುಂತಾದ ಆಹಾರ ಸಂಬಂಧಿತ ಆಯ್ಕೆಗಳಲ್ಲಿ ಮಕ್ಕಳನ್ನು ತೊಡಗಿಸಿಕೊಳ್ಳುವುದು ಅವರ ಸ್ವಾಯತ್ತತೆ ಮತ್ತು ನಿರ್ಧಾರ ತೆಗೆದುಕೊಳ್ಳುವ ಕೌಶಲವನ್ನು ಹೆಚ್ಚಿಸುತ್ತದೆ. ಅಲ್ಲದೆ ಕುಟುಂಬದ ಸದಸ್ಯರೆಲ್ಲರೂ ಜೊತೆ ಸೇರಿ ಊಟ ಮಾಡುವುದರಿಂದ ಮಕ್ಕಳಿಗೆ ದೈಹಿಕವಾಗಿಯೂ ಮಾನಸಿಕವಾಗಿಯೂ ಉತ್ತಮ.

ಒಟ್ಟಿನಲ್ಲಿ ಮಕ್ಕಳಲ್ಲಿ ಆರೋಗ್ಯಕರ ಅಭ್ಯಾಸಗಳನ್ನು (Healthy Habits) ಪ್ರೋತ್ಸಾಹಿಸುವುದೊಂದಿಗೆ ಆಹಾರದ (Food)  ಜೊತೆಗೆ ಸಕಾರಾತ್ಮಕ ಸಂಬಂಧವನ್ನು ಬೆಳೆಸಿ, ಪೋಷಕಾಂಶಯುಕ್ತ ಆಹಾರ ಕ್ರಮವನ್ನು ಬೆಳೆಸುವುದು ಅತಿ ಅವಶ್ಯಕ. ಇದಕ್ಕೆ ಊಟದ ವೇಳೆ ಟಿವಿ ಮುಕ್ತ ವಾತಾವರಣ ಮಾತ್ರವೇ ನೆರವಾಗಿದೆ. 

ಮಕ್ಕಳು ಸಿಕ್ಕಾಪಟ್ಟೆ ಸಣ್ಣಗಿದ್ದಾರೆ ಅನ್ನೋ ಚಿಂತೇನಾ, ಈ ಸೂಪರ್‌ ಫುಡ್ ಕೊಡಿ ಸಾಕು

click me!