ಕಿವಿಯಲ್ಲಿ ಆಗಾಗ್ಗೆ ಗುನುಗುನಿಸುವ ಶಬ್ದ ಕೇಳಿದರೆ ನಿರ್ಲಕ್ಷಿಸಬೇಡಿ

By Megha MS  |  First Published Dec 11, 2022, 4:07 PM IST

ಸುಖಾಸುಮ್ಮನೆ ಯಾವುದೋ ಶಬ್ಧ ಗುನುಗುನಿಸುವುದು, ಸುತ್ತಲು ಯಾರು ಇಲ್ಲ, ಯಾವ ಶಬ್ದವೂ ಇಲ್ಲ ಆದರೂ ಕಿವಿಯಲ್ಲಿ ಗುಯ್ ಎನ್ನುತ್ತಿದೆ. ಈ ರೀತಿಯ ಸಮಸ್ಯೆಗಳನ್ನು ನೀವು ಎಂದಾದರೂ ಅನುಭವಿಸಿದ್ದೀರಾ? ಈ ರೀತಿಯ ಹಾಡುಗಳು, ರಿಂಗಿಂಗ್ ಅಥವಾ ಶಿಳ್ಳೆಗಳನ್ನು ಅನುಭವಿಸಿದರೆ ಅದು ಯಾವುದೇ ಕಾಯಿಲೆಯ ಸಂಕೇತವಲ್ಲ ಬದಲಾಗಿ ಪದೇ ಪದೇ ಈ ರೀತಿಯಾದರೆ ಅಪಾಯವೂ ಇದೆ. ಹಾಗಾದರೆ ಕಿವಿಯಲ್ಲಿ ಈ ರೀತಿ ರಿಂಗ್ ಆಗುವುದು ಏಕೆ? ಈ ಬಗ್ಗೆ ಇಲ್ಲಿದೆ ಮಾಹಿತಿ. 


ಓದುತ್ತಿರುವಾಗ ದುಂಬಿಯೊಂದು ಬಂದು ಕಿವಿಯ ಬಳಿ ಗುಯ್ ಎಂದು ಶಬ್ದ ಮಾಡಿದ ಅನುಭವ. ನೋಡಿದರೆ ಯಾವ ದುಂಬಿಯೂ ಇಲ್ಲ. ಪದೇ ಪದೇ ಕಿವಿಯಲ್ಲಿ ಈ ರೀತಿ ಶಬ್ದ ಕೇಳಿಸುತ್ತಿದೆ ಎಂದು ತಳ್ಳಿಹಾಕುವಂತಿಲ್ಲ. ಕುಳಿತುಕೊಂಡಾಗ ದೊಡ್ಡ ಶಿಳ್ಳೆ ಕಿವಿಯಲ್ಲಿ ರಿಂಗಣಿಸುವುದು ಮತ್ತು ಸ್ವಲ್ಪ ಸಮಯ ಎಲ್ಲವೂ ಸಾಮಾನ್ಯವಾಗುತ್ತದೆ. ಕಿವಿಯಲ್ಲಿ ಗುನುಗುನಿಸುವ ಅಥವಾ ಯಾವುದೇ ವಿಚಿತ್ರವಾದ ಶಬ್ದವನ್ನು ಅನುಭವಿಸಿದಾಗ ಅದನ್ನು ಟಿನ್ನಿಟಸ್(Tinnitus) ಎಂದು ಕರೆಯಲಾಗುತ್ತದೆ. ಇದು ಯಾವುದೇ ಕಾಯಿಲೆಯಲ್ಲವಾದರೂ ಅಪಾಯದ ಮುನ್ಸೂಚನೆ.

ವ್ಯಕ್ತಿಯ ಸುತ್ತ ಯಾವುದೇ ಶಬ್ದವಿಲ್ಲದಿದ್ದರೂ, ಕಿವಿಯ ಒಳಗಿನಿಂದ ಬರುವ ವಿವಿಧ ರೀತಿಯ ಶಬ್ದಗಳನ್ನು ಕೇಳಲಾಗುತ್ತದೆ. ಕಿವಿ ಕೋಶಗಳಿಗೆ ಹಾನಿಯಾಗುವುದರಿಂದ ಇದು ಸಂಭವಿಸುತ್ತದೆ. ಇದಲ್ಲದೆ, ವಯಸ್ಸು, ಲಿಂಗ, ಜೀವನಶೈಲಿ(Lifestyle) ಮತ್ತು ಶಬ್ದಕ್ಕೆ  ಒಡ್ಡಿಕೊಳ್ಳುವುದು ಮುಂತಾದ ವಿವಿಧ ಅಪಾಯಕಾರಿ ಅಂಶಗಳು ಟಿನ್ನಿಟಸ್‌ಗೆ ಕಾರಣವಾಗುತ್ತವೆ. ಸಮಯಕ್ಕೆ ಚಿಕಿತ್ಸೆ ನೀಡದಿದ್ದರೆ, ವ್ಯಕ್ತಿಯು ಖಿನ್ನತೆಗೆ ಒಳಗಾಗುವ ಸಾಧ್ಯತೆ ಹೆಚ್ಚು. ಕೆಲವೊಮ್ಮೆ ತೀವ್ರವಾದ ಟಿನ್ನಿಟಸ್ ಹೊಂದಿರುವ ಜನರು ಶ್ರವಣ, ಕೆಲಸ ಅಥವಾ ನಿದ್ರೆಯಲ್ಲಿ (Sleep) ಸಮಸ್ಯೆಗಳನ್ನು ಹೊಂದಿರಬಹುದು. ಅಲ್ಲದೆ ಇದು ಶ್ರವಣ ವ್ಯವಸ್ಥೆತ ನಾಲ್ಕು ವಿಭಾಗಗಳಲ್ಲಿ ಎಲ್ಲಿಯಾದರೀ ಪ್ರಾರಂಭವಾಗಬಹುದು. ಹೊರ ಕಿವಿ (Outer Ear), ಮಧ್ಯಕಿವಿ (Middle Ear), ಒಳಗಿನ ಕಿವಿ(Inner Ear) ಅಥವಾ ಮೆದುಳಿನಲ್ಲಿದ್ದರೂ (Brain) ಗುನುಗುನಿಸಬಹುದು. ಕಾರಣ ತಿಳಿದುಕೊಳ್ಳುವುದೇ ಮೊದಲ ಹಂತವಾಗಿದೆ. ಇದನ್ನು ತಡೆಯಲು ಸುಲಭವಾದ ಮಾರ್ಗಗಳಿವೆ. ಕಿವಿಯಲ್ಲಿ ರಿಂಗಣಿಸುತ್ತಿದ್ದರೆ, ನೀವು ಟಿನ್ನಿಟಸ್‌ನಿಂದ ಬಳಲುತ್ತಿದ್ದೀರಿ ಎಂದರ್ಥ. ಅದರ ಲಕ್ಷಣಗಳನ್ನು ತಕ್ಷಣವೇ ಗುರುತಿಸಿ ಚಿಕಿತ್ಸೆ ಪಡೆಯುವುದು ಉತ್ತಮ, ಇಲ್ಲದಿದ್ದರೆ ಕಿವಿಗಳ ಶ್ರವಣ ಸಾಮರ್ಥ್ಯದ(Listening Power) ಮೇಲೆ ಪರಿಣಾಮ ಬೀರಬಹುದು.

ನಿಮ್ಮಈ ಗುಣಗಳು ಒತ್ತಡಕ್ಕೆ ಒಳಗಾಗಿದ್ದೀರಿ ಎಂದು ತಿಳಿಸುತ್ತೆ

Tap to resize

Latest Videos

ಲಕ್ಷಣಗಳು
ಕಿವಿಯಲ್ಲಿ ವಿವರಿಸಲಾಗದ ಶಬ್ದ ಅಂದರೆ ರಿಂಗಿಂಗ್(Ringing), ಝೇಂಕರಿಸುವುದು, ಶಿಳ್ಳೆ ಅಥವಾ ಹಿಸ್ಸಿಂಗ್(Hissing) ಶಬ್ದಗಳು, ನಿರಂತರವಾದ ಅಥವಾ ಮಧ್ಯಂತರವಾದ ಶಬ್ದಗಳು, ಬೇರೆ ಯಾರೂ ಮಾಡದಿರುವಂತೆ ಕೇಳುವ ಶಬ್ದಗಳು.

ಟಿನ್ನಿಟಸ್‌ಗೆ ಕಾರಣ
1. ವಯಸ್ಸಿಗೆ ಸಂಬಂಧಿಸಿದ ಶ್ರವಣ ದೋಷ:
ವಯಸ್ಸಾದ ಸಂಬಂಧಿ ನಿಮ್ಮ ಮಾತನ್ನು ಕೇಳಲು ಸಾಧ್ಯವಾಗದಿದ್ದರೆ, ವಯಸ್ಸಿಗೆ ಸಂಬಂಧಿಸಿದ ಶ್ರವಣದೋಷ ಎನ್ನಲಾಗುತ್ತದೆ. ವಯಸ್ಸಿನೊಂದಿಗೆ ಇದು ಸಾಮಾನ್ಯವಾಗಿದ್ದರೂ, ಇದು ಟಿನ್ನಿಟನ್ ಅನ್ನು ಹೆಚ್ಚು ಸಾಮಾನ್ಯಗೊಳಿಸುತ್ತದೆ.
2. ಜೋರು ಶಬ್ದ: ಸಂಗೀತ ಕಚೇರಿಗಳು ಅಥವಾ ಕೆಲಸದ ಪರಿಸರಗಳು ನಿಮ್ಮ ಟಿನ್ನಿಟಸ್‌ಗೆ ಕಾರಣವಾಗಿರಬಹುದು.

ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳಿ 
ದೇಹದ ತೂಕವು(Body Weight) ಸಹ ಕೇಳುವ ಸಾಮರ್ಥ್ಯದ ಮೇಲೆ ಪರಿಣಾಮ ಬೀರಬಹುದು. ಆರೋಗ್ಯಕರ ಹೃದಯ (Heart), ರಕ್ತಪರಿಚಲನೆ (Blood Circulation) ಮತ್ತು ಇತರೆ ದೇಹ ವ್ಯವಸ್ಥೆಗಳನ್ನು ನಿಯಂತ್ರಿಸಲು ಆರೋಗ್ಯಕರ ತೂಕವನ್ನು ಹೊಂದಿರುವುದು ಬಹಳ ಮುಖ್ಯ. ಅಧಿಕ ತೂಕ (Weight Gain) ಅಥವಾ ಬೊಜ್ಜು (Cholesterol), ರಕ್ತ ಪರಿಚಲನೆಯಲ್ಲಿ ಅಡಚಣೆಯನ್ನು ಉಂಟುಮಾಡಬಹುದು.

How To Clean Ears: ಕಿವಿಗಳನ್ನು ಸುರಕ್ಷಿತವಾಗಿ ಸ್ವಚ್ಛಗೊಳಿಸುವುದು ಹೇಗೆ?

ಟಿನ್ನಿಟಸ್ ಅನ್ನು ತಡೆಯಲು ಮಾರ್ಗಗಳು ಇಲ್ಲಿವೆ.
1. ಕಡಿಮೆ ಧ್ವನಿಯಲ್ಲಿ ಆಲಿಸಿ

ಎಷ್ಟು ಹೊತ್ತಿಗೂ ಇಯರ್‌ಫೋನ್(Earphone), ಟಿವಿ ಯನ್ನು ಜೋರು ಧ್ವನಿಯಲ್ಲಿ ಕೇಳುವ ಅಭ್ಯಾಸ ನಿಮಗಿದ್ದರೆ ಅದು ಇಂದೇ ಬಿಟ್ಟುಬಿಡಿ. ಹೌದು ಜೋರು ಧ್ವನಿಯಲ್ಲಿ ಹಾಡು ಕೇಳುವುದು ಅಥವಾ ಹೆಚ್ಚಿನ ಪ್ರಮಾಣದಲ್ಲಿ ಟಿವಿ ನೋಡುವುದರಿಂದ ಟಿನ್ನಿಟಸ್ ಸಮಸ್ಯೆ ಉಂಟಾಗಬಹುದು. ಹಾಗಾಗಿ ಇಯರ್‌ಫೋನ್‌ನೊಂದಿಗೆ ಕೆಲಸ ಮಾಡುವಾಗ ಕಡಿಮೆ ಧ್ವನಿಯಲ್ಲಿ ಕೇಳಿ.

2. ಕಿವಿಗಳನ್ನು ರಕ್ಷಿಸಿ 
ನೀವು ಬಯಸದಿದ್ದರೂ ಸಹ ಜೋರಾದ ಶಬ್ದ ಸುತ್ತಲಿನ ಪರಿಸರದಿಂದ ಕೇಳಿದರೂ ಮೊದಲು ನಿಮ್ಮ ಕಿವಿಯನ್ನು ರಕ್ಷಿಸಿಕೊಳ್ಳಿ. ಕಿವಿಗಳಿಗೆ ಹತ್ತಿ ಹಾಕಿಕೊಳ್ಳುವುದು, ಇಯರ್ ಪ್ರೊಟೆಕ್ಟರ್(Ear Protecter) ಅನ್ನು ಬಳಸಿ.

3. ಜೀವನಶೈಲಿ ನಿಯಂತ್ರಿಸಿ 
ಟಿನ್ನಿಟಸ್ ಸಮಸ್ಯೆಗೆ ಜೀವನಶೈಲಿಯೂ(Lifestyle) ಒಂದು ಕಾರಣ. ಕೆಟ್ಟ ಅಭ್ಯಾಸಗಳಿಂದ ದೂರವಿರಿ. ಆರೋಗ್ಯದ ತೊಂದರೆಗಳನ್ನು ತಪ್ಪಿಸಲು ನಿಯಮಿತವಾಗಿ ವ್ಯಾಯಾಮ ಮಾಡಿ(Exercise), ಆಲ್ಕೋಹಾಲ್(Alcohol) ಸೇವನೆಯನ್ನು ತಪ್ಪಿಸಿ ಮತ್ತು ಧೂಮಪಾನದಿಂದ(Smoking) ದೂರವಿರುವುದು ಉತ್ತಮ.

ಟಿನ್ನಿಟಸ್ ಒಂದು ರೋಗವಲ್ಲ ಆದರೆ ಸರಳವಾದ ಚಿಕಿತ್ಸೆ ಇಲ್ಲದ ಲಕ್ಷಣವಾಗಿದೆ. ಇದು ಶ್ರವಣ ವ್ಯವಸ್ಥೆಯಲ್ಲಿ ಏನಾದರೂ ತಪ್ಪಾಗಿದೆ ಎಂಬುದರ ಸಂಕೇತವಾಗಿದೆ. ತಜ್ಞರ ಪ್ರಕಾರ, ಜನರು ಸಾಮಾನ್ಯವಾಗಿ ತಮ್ಮ ಕಿವಿ ಮತ್ತು ಮೂಗಿಗೆ ಸಂಬAಧಿಸಿದ ಸಮಸ್ಯೆಯನ್ನು ಚಿಕ್ಕದಾಗಿದೆ ನಿರ್ಲಕ್ಷಿಸುತ್ತಾರೆ. ಆದರೆ, ಈ ಅಭ್ಯಾಸ ಅತ್ಯಂತ ಅಪಾಯಕಾರಿ. ಜೀವನದ ಗುಣಮಟ್ಟವನ್ನು ಸುಧಾರಿಸುವ ಮೂಲಕ ಇದನ್ನು ತಪ್ಪಿಸಬಹುದು. 
 

click me!