ಈಗಿನ ದಿನಗಳಲ್ಲಿ ಒಂದಲ್ಲ ಒಂದು ಆರೋಗ್ಯ ಸಮಸ್ಯೆ ಮನುಷ್ಯನನ್ನು ಕಾಡ್ತಿದೆ. ಕೆಲವೊಂದು ಹೇಳಿಕೊಳ್ಳುವಂತದ್ದಾಗಿದ್ರೆ ಮತ್ತೆ ಕೆಲವನ್ನು ಜನರು ಮುಚ್ಚಿಡ್ತಾರೆ. ಅದ್ರಲ್ಲಿ ಮಲವಿಸರ್ಜನೆ ವೇಳೆ ರಕ್ತ ಬರೋದು, ನೋವು ಕೂಡ ಸೇರಿದೆ. ಇದಕ್ಕೆ ನಿಮ್ಮಲ್ಲಿಯೇ ಪರಿಹಾರವಿದೆ.
ಹೊಟ್ಟೆ ಸ್ವಚ್ಛವಾಗ್ಬೇಕೆಂದ್ರೆ ಮಲವಿಸರ್ಜನೆ ಸರಿಯಾಗಿ ಆಗ್ಬೇಕು. ದಿನಕ್ಕೆ ಒಂದು ಬಾರಿ ಮಲವಿಸರ್ಜನೆ ಮಾಡದೆ ಹೋದ್ರೆ ಆರೋಗ್ಯ ಸಮಸ್ಯೆ ನಮ್ಮನ್ನು ಕಾಡುತ್ತದೆ. ಆದರೆ ಅನೇಕರಿಗೆ ಮಲವಿಸರ್ಜನೆ ಸುಲಭವಲ್ಲ. ಈ ಸಮಯದಲ್ಲಿ ಅನೇಕ ಸಮಸ್ಯೆಯನ್ನು ಜನರು ಎದುರಿಸುತ್ತಾರೆ. ಕೆಲವರಿಗೆ ಗುದದ್ವಾರದಲ್ಲಿ ನೋವು ಕಾಣಿಸಿಕೊಳ್ಳುತ್ತದೆ.
ಮಲ ವಿಸರ್ಜನೆ ವೇಳೆ ಕಾಣಿಸಿಕೊಳ್ಳುವ ನೋವು (Pain) ಭಯ ಹುಟ್ಟಿಸುತ್ತದೆ. ಸರಿಯಾಗಿ ಮಲವಿಸರ್ಜನೆ ಮಾಡದೆ ಜನರು ಒದ್ದಾಡುತ್ತಾರೆ. ಆದ್ರೆ ಇದನ್ನು ಬಹಿರಂಗವಾಗಿ ಹೇಳಲು ಜನರು ನಾಚಿಕೆಪಡ್ತಾರೆ. ಮಲವಿಸರ್ಜನೆ ವೇಳೆ ಮಲದ್ವಾರದಲ್ಲಿ ನೋವು ಕಾಣಿಸಿಕೊಳ್ತಿದ್ದಂತೆ ಅದನ್ನು ಮೂಲವ್ಯಾಧಿ (Piles) ಎಂದುಕೊಳ್ಳುವವರೇ ಹೆಚ್ಚು. ಹಾಗಾಗಿಯೇ ವೈದ್ಯರ ಬಳಿ ಹೋಗಲು ಜನರು ಹಿಂಜರಿಯುತ್ತಾರೆ. ಯಾವುದೇ ರೀತಿಯ ಸಮಸ್ಯೆಯನ್ನು ನಿರ್ಲಕ್ಷಿಸಬಾರದು. ವೈದ್ಯರ ಬಳಿ ಹೋಗಿ ಚಿಕಿತ್ಸೆ (Treatment) ಪಡೆಯಬೇಕು. ಮಲದ್ವಾರದಲ್ಲಿ ನೋವಾಗಲು ಮೂಲವ್ಯಾಧಿ ಮಾತ್ರ ಕಾರಣವಲ್ಲ. ಇನ್ನೂ ಅನೇಕ ಕಾರಣಕ್ಕೆ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ನಾವಿಂದು ಮಲದ್ವಾರದಲ್ಲಿ ನೋವಾಗಲು ಕಾರಣವೇನು ಹಾಗೆ ಇದಕ್ಕೆ ಮನೆ ಮದ್ದು ಏನು ಎಂಬುದನ್ನು ನಿಮಗೆ ಹೇಳ್ತೇವೆ.
SUMMER HEALTH TIPS: ಬೇಸಿಗೆಯಲ್ಲಿ ವಿಪರೀತ ಸುಸ್ತಾಗೋದು ಯಾಕೆ, ತಜ್ಞರು ಏನಂತಾರೆ?
ಗುದದ್ವಾರದಲ್ಲಿ ನೋವಾಗಲು ಇದು ಕಾರಣ :
ಮೂಲವ್ಯಾಧಿ : ಪೈಲ್ಸ್ ನಿಂದಾಗಿ ಗುದದ್ವಾರದಲ್ಲಿ ನೋವಾಗುತ್ತದೆ. ಮಲಬದ್ಧತೆಯಿಂದಾಗಿ ಮೂಲವ್ಯಾಧಿ ಕಾಣಿಸಿಕೊಳ್ಳುತ್ತದೆ.
ಫಿಶರ್ : ಫಿಶರ್ ಹಾಗೂ ಮೂಲವ್ಯಾಧಿ ಬೇರೆ ಬೇರೆ. ಅನೇಕರು ಇದನ್ನು ಒಂದೇ ಎಂದುಕೊಂಡಿದ್ದಾರೆ. ಫಿಶರ್ ಗೂ ಗುದದ್ವಾರಕ್ಕೂ ಸಂಬಂಧಿಸಿದೆ. ಕರುಳಿನ ಚಲನೆಯ ಸಮಯದಲ್ಲಿ ನಿಮ್ಮ ಗುದನಾಳದಲ್ಲಿ ಸ್ಕ್ರಾಚ್ ಇರುತ್ತದೆ. ಇದರಿಂದಾಗಿ ಮಲ ವಿಸರ್ಜನೆ ವೇಳೆ ನೋವಾಗುವ ಜೊತೆಗೆ ರಕ್ತವೂ ಬರುತ್ತದೆ.
ಪ್ರೊಕ್ಟಾಲ್ಜಿಯಾ ಫ್ಯೂಗಾಕ್ಸ್ : ಪ್ರೊಕ್ಟಾಲ್ಜಿಯಾ ಫ್ಯೂಗಾಕ್ಸ್ ಸಮಸ್ಯೆಯಿರುವ ವ್ಯಕ್ತಿಗೆ ಕೂಡ ಮಲದ್ವಾರದಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಗುದದ ಸ್ನಾಯುಗಳಲ್ಲಿ ಸೆಳೆತ ಉಂಟಾಗುತ್ತದೆ.
ತೊಂಡೆಕಾಯಿ ಇಷ್ಟಾನೇ ಇಲ್ಲ ಅನ್ಬೇಡಿ… ಆರೋಗ್ಯ ಪ್ರಯೋಜನಗಳು ಎಷ್ಟಿವೆ ನೋಡಿ…
ಲೆವೇಟರ್ ಆನಿ ಸಿಂಡ್ರೋಮ್ : ಈ ಸಮಸ್ಯೆ ಮುಖ್ಯವಾಗಿ ಮಹಿಳೆಯರಲ್ಲಿ ಹೆಚ್ಚು. ಈ ಸಮಸ್ಯೆ ಇರುವ ಮಹಿಳೆಯರಿಗೆ ಕೂಡ ಗುದದ್ವಾರದಲ್ಲಿ ನೋವು ಕಾಣಿಸಿಕೊಳ್ಳುತ್ತದೆ.
ಗುದನಾಳದ ನೋವಿಗೆ ಮನೆಮದ್ದು :
ಬೆಚ್ಚಗಿನ ನೀರಿನಲ್ಲಿ ಕುಳಿತುಕೊಳ್ಳಿ : ನೀವು ಕುಳಿತುಕೊಳ್ಳಲು ಸಾಧ್ಯವಾಗುವ ಟಬ್ ಗೆ ಬೆಚ್ಚಗಿನ ನೀರನ್ನು ಹಾಕಿ. ಅದಕ್ಕೆ ಸ್ವಲ್ಪ ಕಲ್ಲುಪ್ಪು ಹಾಕಿ. ನಂತ್ರ ಆ ನೀರಿನಲ್ಲಿ ಕುಳಿತುಕೊಳ್ಳಿ. ಬೆಚ್ಚಗಿನ ನೀರು, ನಿಮ್ಮ ಗುದಕ್ಕೆ ತಾಗುವಂತೆ ನೋಡಿಕೊಳ್ಳಿ. ಬೆಚ್ಚಗಿನ ನೀರು, ಗುದದ್ವಾರದ ಸೆಳೆತವನ್ನು ಕಡಿಮೆ ಮಾಡುತ್ತದೆ. ನೀವು ಈ ನೀರಿನಲ್ಲಿ 15 ರಿಂದ 20 ನಿಮಿಷಗಳ ಕಾಲ ಕುಳಿತುಕೊಳ್ಳಬೇಕು.
ತೆಂಗಿನ ಎಣ್ಣೆ : ತೆಂಗಿನ ಎಣ್ಣೆ ಔಷಧಿ ಗುಣವನ್ನು ಹೊಂದಿದೆ. ಗುದದ್ವಾರದಲ್ಲಿ ಸುಡುವ ಸಂವೇದನೆ ಅಥವಾ ನೋವು ಅನುಭವಿಸುತ್ತಿದ್ದರೆ ಗುದಕ್ಕೆ ತೆಂಗಿನ ಎಣ್ಣೆಯನ್ನು ಹಚ್ಚಬೇಕು. ಹತ್ತಿಯ ಸಹಾಯದಿಂದ ನೀವು ಎಣ್ಣೆಯನ್ನು ಹಚ್ಚಿ. ಬಿಸಿ ನೀರಿನಲ್ಲಿ ಕುಳಿತುಕೊಂಡ ನಂತ್ರ ನೀವು ತೆಂಗಿನ ಎಣ್ಣೆ ಹಚ್ಚಿದ್ರೆ ಮತ್ತಷ್ಟು ಬೇಗ ಫಲಿಶಾಂತ ಕಾಣಬಹುದು.
ತುರಿಕೆಯಾದಾಗ ಈ ತಪ್ಪು ಮಾಡ್ಬೇಡಿ : ಕೆಲವರು ಬಾರಿ ಗುದ ನಾಳದ ಚರ್ಮ ಸಿಪ್ಪೆ ಸುಲಿದಿರುತ್ತದೆ. ಇದ್ರಿಂದ ನಿಮಗೆ ತುರಿಕೆ ಕಾಣಿಸಿಕೊಳ್ಳುತ್ತದೆ. ಒಂದ್ವೇಳೆ ನೀವು ಅದನ್ನು ತುರಿಸಿಕೊಂಡ್ರೆ ಗಾಯವಾಗಬಹುದು.
ಸಡಿಲ ಬಟ್ಟೆ ಧರಿಸಿ : ನಾವು ಯಾವ ಬಟ್ಟೆ ಧರಿಸ್ತೇವೆ ಎಂಬುದು ಕೂಡ ಇಲ್ಲಿ ಮುಖ್ಯವಾಗುತ್ತದೆ. ಬಿಗಿಯಾದ ಬಟ್ಟೆ ಮತ್ತಷ್ಟು ಕಿರಿಕಿರಿಯುಂಟು ಮಾಡುತ್ತದೆ. ಹಾಗಾಗಿ ಸಡಲಿ ಬಟ್ಟೆಯನ್ನು ಧರಿಸಬೇಕು. ಗುದದ್ವಾರದಲ್ಲಿ ನೋವಿರುವಾಗ ನೀವು ಬಿಗಿಯಾದ ಬಟ್ಟೆ ಧರಿಸಿದ್ರೆ ಸಮಸ್ಯೆ ದೊಡ್ಡದಾಗುತ್ತದೆ.
ಇಂಥ ಆಹಾರವನ್ನು ನೀವು ಸೇವಿಸಿ : ಮಲಬದ್ಧತೆಯಿಂದ ಅನೇಕ ಬಾರಿ ಈ ಸಮಸ್ಯೆ ನಮ್ಮನ್ನು ಕಾಡುತ್ತದೆ. ನಾವು ಸೇವಿಸುವ ಆಹಾರ ಇದ್ರ ಮೇಲೆ ಪರಿಣಾಮ ಬೀರುತ್ತದೆ. ಮಲಬದ್ಧತೆ ಸಮಸ್ಯೆ ಕಾಡಬಾರದು ಅಂದ್ರೆ ನೀವು ಫೈಬರ್ ಭರಿತ ಆಹಾರವನ್ನು ಸೇವಿಸಬೇಕು. ಹಸಿರು ಎಲೆ, ತರಕಾರಿ ಸೇರಿದಂತೆ ಫೈಬರ್ ಅಂಶವಿರುವ ಆಹಾರವನ್ನು ತಿನ್ನಬೇಕು.
ನೀರಿನ ಸೇವನೆ ಹೀಗಿರಲಿ : ಕೆಲವರು ಅತಿ ಕಡಿಮೆ ನೀರನ್ನು ಕುಡಿಯುತ್ತಾರೆ. ಇದ್ರಿಂದ ಮಲಬದ್ಧತೆ ಕಾಡುತ್ತದೆ. ಪ್ರತಿ ದಿನ 7 ರಿಂದ 8 ಗ್ಲಾಸ್ ನೀರು ಕುಡಿದ್ರೆ ಈ ಸಮಸ್ಯೆಯಿಂದ ನೀವು ಹೊರಬರಬಹುದು.