Men Health: ನಿಂತುಕೊಂಡಲ್ಲ.. ಪುರುಷರು ಹೀಗೆ ಮೂತ್ರ ವಿಸರ್ಜನೆ ಮಾಡಿದ್ರೆ ಬೆಸ್ಟ್

By Suvarna News  |  First Published Apr 15, 2023, 4:54 PM IST

ನಮ್ಮ ಆರೋಗ್ಯ ನಾವು ಮಾಡುವ ಪ್ರತಿಯೊಂದು ಕೆಲಸವನ್ನೂ ಅವಲಂಭಿಸಿರುತ್ತದೆ. ಮೂತ್ರವಿಸರ್ಜನೆಯನ್ನು ಸರಿಯಾಗಿ ಮಾಡಿಲ್ಲವೆಂದ್ರೂ ಸಮಸ್ಯೆ ಕಾಡುತ್ತದೆ. ಹಾಗೆಯೇ ಮೂತ್ರ ವಿಸರ್ಜನೆ ಮಾಡುವ ವಿಧಾನ ಕೂಡ ನಮ್ಮ ಆರೋಗ್ಯದ ಮೇಲೆ ಪ್ರಭಾವ ಬೀರುತ್ತದೆ. 
 


ಪುರುಷರು ನಿಂತು ಮೂತ್ರ ವಿಸರ್ಜನೆ ಮಾಡ್ತಾರೆ. ಸಾರ್ವಜನಿಕ ಶೌಚಾಲಯಗಳಲ್ಲೂ ಪುರುಷರಿಗೆ ನಿಂತು ಮೂತ್ರ ವಿಸರ್ಜನೆ ಮಾಡುವ ವ್ಯವಸ್ಥೆ ಇರುತ್ತದೆ. ಮನೆಯಲ್ಲಿ ಕೂಡ ಪುರುಷರು ನಿಂತೇ ಮೂತ್ರ ವಿಸರ್ಜನೆ ಮಾಡ್ತಾರೆ. ನಿಂತು ಮೂತ್ರ ವಿಸರ್ಜನೆ ಮಾಡುವುದ್ರಿಂದ ಪುರುಷರಿಗೆ ಕೆಲ ಅನುಕೂಲವಿದೆ. ಶೌಚಾಲಯ ನಿರ್ಮಾಣಕ್ಕೆ ಹೆಚ್ಚು ಜಾಗದ ಅವಶ್ಯಕತೆಯೂ ಇರೋದಿಲ್ಲ. ಸಣ್ಣ ಜಾಗದಲ್ಲಿಯೇ ಹೆಚ್ಚು ಪುರುಷರು ಮೂತ್ರ ವಿಸರ್ಜನೆ ಮಾಡಲು ಅವಕಾಶ ಮಾಡಿಕೊಡಬಹುದು. ಹಾಗೆಯೇ ನಿಂತು ಮೂತ್ರ ವಿಸರ್ಜನೆ ಮಾಡೋದ್ರಿಂದ ಪುರುಷರಿಗೆ ಹೆಚ್ಚು ಬಟ್ಟೆ ಬಿಚ್ಚಿವ ಅಗತ್ಯವಿರೋದಿಲ್ಲ.  ಆದ್ರೆ ನಿಂತು ಮೂತ್ರ ವಿಸರ್ಜನೆ ಮಾಡೋದು ಅಷ್ಟು ಒಳ್ಳೆಯದಲ್ಲ ಎನ್ನುತ್ತಾರೆ ತಜ್ಞರು. ಪುರುಷರು ನಿಂತು ಯೂರಿನ್ ಹೊರಹಾಕುವ ಬದಲು ಕುಳಿತು ಮಾಡಿದ್ರೆ ಒಳ್ಳೆಯದು. ಕುಳಿತು ಮೂತ್ರ ವಿಸರ್ಜನೆ ಮಾಡಿದ್ರೆ ಅನೇಕ ಪ್ರಯೋಜನಗಳಿವೆ. ನಾವಿಂದು ಅದ್ರ ಲಾಭವೇನು ಎಂಬುದನ್ನು ನಿಮಗೆ ಹೇಳ್ತೇವೆ.

ನೆದರ್ಲ್ಯಾಂಡ್ (Netherlands) ಮೂಲದ ವೈದ್ಯ (Doctor) ರು ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಪ್ರಾಸ್ಟೇಟ್ ಸಂಬಂಧಿತ ಸಮಸ್ಯೆಗಳನ್ನು ಎದುರಿಸುತ್ತಿರುವ ಪುರುಷರು ಕುಳಿತು ಮೂತ್ರ ವಿಸರ್ಜನೆ ಮಾಡೋದು ಒಳ್ಳೆಯದು. ನಿಂತು  ಮಾಡುವ ಬದಲು ಕುಳಿತು ಮಾಡೋದ್ರಿಂದ ಮೂತ್ರ ಬಲವಾಗಿ ಬರುತ್ತದೆ. ನಿಂತು ಮೂತ್ರ ವಿಸರ್ಜನೆ ಮಾಡೋದ್ರಿಂದ ಸೊಂಟ ಮತ್ತು ಬೆನ್ನುಮೂಳೆಯ ಸ್ನಾಯುಗಳು ಸಂಕುಚಿತಗೊಳ್ಳುತ್ತವೆ. ಅದೇ ಕುಳಿತುಕೊಂಡ್ರೆ ಸೊಂಟ ಮತ್ತು ಸೊಂಟ (Waist) ದ ಸ್ನಾಯು ಸಡಿಲಗೊಳ್ಳುತ್ತದೆ. ಇದು ಮೂತ್ರ (Urine) ವಿಸರ್ಜನೆಯನ್ನು ಸುಲಭಗೊಳಿಸುತ್ತದೆ ಎಂದು ವೈದ್ಯರು ಹೇಳಿದ್ದಾರೆ. ತುಂಬಾ ಹೊತ್ತು ನಿಂತುಕೊಳ್ಳಲು ಸಮಸ್ಯೆಯಾಗುತ್ತೆ ಎನ್ನುವವರು ಕುಳಿತು ಮೂತ್ರ ವಿಸರ್ಜನೆ ಮಾಡೋದು ಒಳ್ಳೆಯದು ಎನ್ನುತ್ತಾರೆ  ಯುಸಿಎಲ್‌ಎ ಮೂತ್ರಶಾಸ್ತ್ರ ವಿಭಾಗದಲ್ಲಿ ಸಹಾಯಕ ಕ್ಲಿನಿಕಲ್ ಪ್ರಾಧ್ಯಾಪಕ ಡಾ. ಜೆಸ್ಸಿ ಎನ್. ಮಿಲ್ಸ್. ಮೂತ್ರ ವಿಸರ್ಜನೆ ಮಾಡಿದ್ರೂ ಮೂತ್ರಕೋಶ ಸಂಪೂರ್ಣ ಖಾಲಿಯಾಗಿಲ್ಲ ಎನ್ನುವ ಜನರು ಕುಳಿತು ಮೂತ್ರ ವಿಸರ್ಜನೆ ಮಾಡ್ಬೇಕು ಎನ್ನುತ್ತಾರೆ ಮಿಲ್ಸ್.

Tap to resize

Latest Videos

ಬೇಸಿಗೆಯಲ್ಲಿ ಬಾತ್‌ ಟವೆಲ್ ಯಾಕೆ ವಾಸನೆ ಬರುತ್ತದೆ, ಇದನ್ನು ಹೋಗಲಾಡಿಸೋದು ಹೇಗೆ?

ಕುಳಿತು ಮೂತ್ರ ವಿಸರ್ಜನೆ ಮಾಡಿದಾಗ ಕಿಬ್ಬೊಟ್ಟೆಯ ಸ್ನಾಯುಗಳನ್ನು ಹೆಚ್ಚು ಬಳಸಲಾಗುತ್ತದೆ. ಹಾಗಾಗಿ ಮೂತ್ರಕೋಶದಲ್ಲಿರು ಮೂತ್ರ ಸಂಪೂರ್ಣ ಹೊರಗೆ ಬರುತ್ತದೆ. ಹಾಗಂತ ಎಲ್ಲರೂ ಮೂತ್ರವಿಸರ್ಜನೆಯನ್ನು ನಿಂತೇ ಮಾಡ್ಬೇಕಾಗಿಲ್ಲ. ಮೂತ್ರ ವಿಸರ್ಜನೆ ಮಾಡಿದ ನಂತ್ರ ಬ್ಲಾಡರ್ ಖಾಲಿಯಾಗುತ್ತೆ ಎನ್ನುವವರು ನೀವಾಗಿದ್ದರೆ ನಿಂತೇ ಮೂತ್ರ ಮಾಡಬಹುದು. ಆದ್ರೆ ಸದಾ ನಿಮ್ಮ ಬ್ಲಾಡರ್ ಫುಲ್ಲಾಗಿದೆ ಅನ್ನಿಸಿದ್ರೆ ನೀವು ವೈದ್ಯರನ್ನು ಭೇಟಿಯಾಗೋದು ಒಳ್ಳೆಯದು. ಬ್ಲಾಡರ್ ಸಂಪೂರ್ಣ ಖಾಲಿಯಾಗ್ತಿಲ್ಲವೆಂದ್ರೆ ಅದಕ್ಕೆ ನಾನಾ ಕಾರಣವಿರುತ್ತದೆ. ಬ್ಲಾಡರ್ ಖಾಲಿಯಾಗದೆ ಇರೋದು ಮೂತ್ರ ಧಾರಣಕ್ಕೆ ಕಾರಣವಾಗುತ್ತದೆ. ಇದ್ರಿಂದ ಸೋಂಕು ತಗಲುವುದಲ್ಲದೆ ಮೂತ್ರಕೋಶದಲ್ಲಿ ಕಲ್ಲಾಗುವ ಸಾಧ್ಯತೆಯಿರುತ್ತದೆ. ಸೆಪ್ಸಿಸ್ ಅಥವಾ ಮೂತ್ರಪಿಂಡದ ಸೋಂಕು ಕಾಡುತ್ತದೆ. 

Healthy Tips: ದಿನ ಈ ಮೂರು ಕೆಲಸ ಮಾಡಿದ್ರೆ ನೀವು ಫಿಟ್ ಆಗಿರ್ತೀರಿ

ಮೂತ್ರ ನಿಧಾನವಾಗಿ ಬರುವುದು, ಮೂತ್ರ ವಿಸರ್ಜನೆ ವೇಳೆ ಆಯಾಸ, ಬಿಟ್ಟು ಬಿಟ್ಟು ಮೂತ್ರ ವಿಸರ್ಜನೆ, ಮೂತ್ರ ವಿಸರ್ಜನೆಗೆ ಹೆಚ್ಚು ಸಮಯ ಬೇಕು ಎಂದಾದ್ರೆ ನೀವು ಮೂತ್ರಕೋಶದ ಸಮಸ್ಯೆ ನಿಮ್ಮನ್ನು ಕಾಡ್ತಿದೆ ಎಂದರ್ಥ.ಬ್ಲಾಡರ್ ಖಾಲಿಯಾಗ್ತಿಲ್ಲವೆಂದಾದ್ರೆ ಕಿಡ್ನಿ ಸ್ಟೋನ್ ಸಾಧ್ಯತೆ ಹೆಚ್ಚಿರುತ್ತದೆ. ಕಿಡ್ನಿ ಮೂತ್ರ ತಯಾರಿಸುವ ಕೆಲಸವನ್ನು ಮಾಡುತ್ತದೆ. 

ಮೂತ್ರಪಿಂಡಗಳು ನಮ್ಮ ರಕ್ತದಿಂದ ತ್ಯಾಜ್ಯವನ್ನು ಬೇರ್ಪಡಿಸುತ್ತವೆ. ನಂತರ ಈ ಮೂತ್ರವು ಮೂತ್ರಕೋಶದಲ್ಲಿ ಅಂದರೆ ಚೀಲದಲ್ಲಿ ಸಂಗ್ರಹವಾಗುತ್ತದೆ. ಈ ಕಾರಣಕ್ಕಾಗಿ, ನಾವು ಮತ್ತೆ ಮತ್ತೆ ಶೌಚಾಲಯಕ್ಕೆ ಹೋಗುವ ಅಗತ್ಯವಿರೋದಿಲ್ಲ. ಸಾಮಾನ್ಯವಾಗಿ ಮೂತ್ರಕೋಶವು 300 ರಿಂದ 600 ಮಿಲಿ ಮೂತ್ರವನ್ನು ಸಂಗ್ರಹಿಸುತ್ತದೆ. ಆದರೆ ಮೂತ್ರಕೋಶ ಮೂರನೇ ಎರಡರಷ್ಟು ತುಂಬಿದಾಗ ನಮಗೆ ಮೂತ್ರ ವಿಸರ್ಜನೆಯ ಅಗತ್ಯವಿದೆಯೆಂದು ಅನಿಸುತ್ತದೆ.
 

click me!