ನಮ್ಮ ದೇಹದಲ್ಲಿ ನಡೆಯುವ ಕೆಲ ಬದಲಾವಣೆಗಳನ್ನು ತಿಳಿಯಲು ಸಾಧ್ಯವಿಲ್ಲ. ಪ್ರೋಟೀನ್ ದೇಹಕ್ಕೆ ಹೆಚ್ಚಾದ್ರೂ ಸಮಸ್ಯೆಯುಂಟಾಗುತ್ತದೆ. ಕೆಲ ಪ್ರೋಟೀಸ್ ಏರುಪೇರು ಹಾಸಿಗೆ ಹಿಡಿಯೋದು ಮಾತ್ರವಲ್ಲ ಸಾವಿಗೆ ದಾರಿ ಮಾಡುತ್ತದೆ.
ಪಾಕಿಸ್ತಾನದ ಮಾಜಿ ಅಧ್ಯಕ್ಷ ಹಾಗೂ ನಿವೃತ್ತ ಸೇವಾ ಮುಖ್ಯಸ್ಥ ಜನರಲ್ ಪರ್ವೇಜ್ ಮುಷರಫ್ ಭಾನುವಾರ ನಿಧನರಾಗಿದ್ದಾರೆ. ಪರ್ವೇಜ್ ಮುಷರಫ್ ದೀರ್ಘಕಾಲದಿಂದ ಅಮಿಲೋಯ್ಡೋಸಿಸ್ ಎಂಬ ಅಪರೂಪದ ಖಾಯಿಲೆಯಿಂದ ಬಳಲುತ್ತಿದ್ದರು. ಹಿಂದಿನ ವರ್ಷ ಜೂನ್ ನಲ್ಲಿ ಯುಎಇ ಆಸ್ಪತ್ರೆಗೆ ದಾಖಲಾಗಿದ್ದ ಮುಷರಫ್ ಅಂಗಗಳು ನಿಧಾನವಾಗಿ ಫೇಲ್ ಆಗಲು ಶುರುವಾಗಿದ್ದವು. ನಂತ್ರ ವೆಂಟಿಲೇಟರ್ ನಲ್ಲಿ ಚಿಕಿತ್ಸೆ ನಡೆಯುತ್ತಿತ್ತು. ಲಂಡನ್ ನಲ್ಲಿಯೂ ಅವರಿಗೆ ಕೆಲ ದಿನ ಚಿಕಿತ್ಸೆ ನಡೆದಿತ್ತು. ಅಮಿಲೋಯ್ಡೋಸಿಸ್ ಖಾಯಿಲೆಯಲ್ಲಿ ಜನರಿಗೆ ಎದ್ದು ನಿಲ್ಲಲ್ಲು, ನಡೆಯಲು ಸಾಧ್ಯವಾಗುವುದಿಲ್ಲ. ನಾವಿಂದು ಮುಷರಪ್ ಸಾವಿಗೆ ಕಾರಣವಾದ ಅಪರೂಪದ ಖಾಯಿಲೆ ಅಮಿಲೋಯ್ಡೋಸಿಸ್ ಎಂದ್ರೇನು? ಅದ್ರ ಲಕ್ಷಣವೇನು ಎಂಬುದನ್ನು ನಿಮಗೆ ಹೇಳ್ತೇವೆ.
ಅಮಿಲೋಯ್ಡೋಸಿಸ್ (Amyloidosis) ಅಂದ್ರೇನು? : ಅಮಿಲೋಯ್ಡೋಸಿಸ್ ಎಂಬ ಪ್ರೋಟೀನ್ (Protein) ದೇಹದ ಭಾಗಗಳಲ್ಲಿ ರೂಪುಗೊಳ್ಳಲು ಪ್ರಾರಂಭಿಸುತ್ತದೆ. ಇದು ದೇಹದ ಎಲ್ಲ ಭಾಗಗಳಲ್ಲಿ ನೆಲೆಗೊಳ್ಳಲು ಶುರುವಾಗುತ್ತದೆ. ದೇಹದೊಳಗೆ ಇರುವುದರಿಂದ ದೇಹದ ಭಾಗಗಳು ಕೆಲಸ ಮಾಡುವುದನ್ನು ನಿಲ್ಲಿಸುತ್ತವೆ. ಇದ್ರಿಂದ ಅಂಗವೈಫಲ್ಯ ಕಾಣಿಸಿಕೊಳ್ಳುತ್ತದೆ. ಅಮಿಲೋಯ್ಡ ಪ್ರೋಟೀನ್ ಯಕೃತ್ತು, ಮೂತ್ರಪಿಂಡ, ಹೃದಯ, ನರ, ರಕ್ತ ಕಣಗಳಲ್ಲಿ ಸಂಗ್ರಹವಾಗಲು ಶುರುವಾಗುತ್ತದೆ. ಕೆಲವೊಮ್ಮೆ ಅಮಿಲೋಯ್ಡ ದೇಹದ ಎಲ್ಲ ಭಾಗಗಳಲ್ಲಿ ಸಂಗ್ರಹವಾಗಲು ಶುರುವಾಗುತ್ತದೆ. ಆಗ ಅದಕ್ಕೆ ಅಮಿಲೋಯ್ಡೋಸಿಸ್ ಎಂದು ಕರೆಯಲಾಗುತ್ತದೆ. ಇದು ಗುಣವಾಗದ ರೋಗಗಳಲ್ಲಿ ಒಂದು. ಆದ್ರೆ ಚಿಕಿತ್ಸೆ ಮೂಲಕ ಇದ್ರ ಗಂಭೀರತೆಯನ್ನು ಕಡಿಮೆ ಮಾಡಬಹುದು.
ಅಮಿಲೋಯ್ಡೋಸಿಸ್ ಖಾಯಿಲೆ (Disease) ಲಕ್ಷಣಗಳು : ಆರಂಭದಲ್ಲಿ ಈ ಖಾಯಿಲೆಯಿಂದ ಬಳಲುವವರಲ್ಲಿ ಯಾವುದೇ ಲಕ್ಷಣ ಕಾಣಿಸುವುದಿಲ್ಲ. ಆದ್ರೆ ಸಮಸ್ಯೆ ಹೆಚ್ಚಾದಂತೆ ನಮ್ಮ ದೇಹದ ಮುಖ್ಯ ಅಂಗಗಳಿಗೆ ಸಮಸ್ಯೆಯೊಡ್ಡಲು ಶುರು ಮಾಡುತ್ತದೆ. ಉದಾಹರಣೆಗೆ ಯಾರಿಗಾದ್ರೂ ಹೃದಯ ಅಮಿಲೋಯ್ಡೋಸಿಸ್ ಕಾಣಿಸಿಕೊಂಡ್ರೆ ಉಸಿರಾಡಲು ಸಮಸ್ಯೆ, ಕಡಿಮೆಯಾಗುವ ಅಥವಾ ಅಧಿಕವಾಗುವ ಹೃದಯ ಬಡಿತ ಹಾಗೂ ಎದೆಯಲ್ಲಿ ನೋವು ಹಾಗೂ ಕಡಿಮೆ ರಕ್ತದೊತ್ತಡ ಕಾಣಿಸಿಕೊಳ್ಳುತ್ತದೆ. ಮೂತ್ರಕೋಶದಲ್ಲಿ ಈ ಸಮಸ್ಯೆ ಕಾಣಿಸಿಕೊಂಡ್ರೆ ಅಂಥವರ ಮೂತ್ರದಲ್ಲಿ ನೊರೆ ಬರುತ್ತದೆ. ಹಾಗೆಯೇ ಕಾಲುಗಳು ಊದಿಕೊಳ್ಳುತ್ತವೆ. ಜಠರದಲ್ಲಿ ಅಮಿಲೋಯ್ಡೋಸಿಸ್ ಕಾಣಿಸಿಕೊಂಡ್ರೆ ವಾಕರಿಕೆ, ಅತಿಸಾರ ಮಲಬದ್ಧತೆ, ಹಸಿವು ಕಡಿಮೆಯಾಗುವುದು,ತೂಕ ಇಳಿಕೆ, ಸ್ವಲ್ಪ ತಿಂದ್ರೂ ಹೊಟ್ಟೆ ತುಂಬಿದ ಅನುಭವವಾಗುವಂತಹ ಲಕ್ಷಣ ಕಾಣಿಸಿಕೊಳ್ಳುತ್ತದೆ. ಕೈಕಾಲುಗಳು ಮರುಗಟ್ಟುವುದು, ಜೋಮು ಹಿಡಿದಂತೆ ಆಗುವುದು, ತಲೆಸುತ್ತುವ ಅನುಭವ, ವಾಕರಿಕೆ, ಅತಿಸಾರ, ಶೀತ ಅಥವಾ ಸೆಕೆಯಾಗದೆ ಇರುವಂತಹ ಲಕ್ಷಣಗಳು ನರ ಅಮಿಲೋಯ್ಡೋಸಿಸ್ ಗೆ ಕಾರಣವಾಗಿರಬಹುದು.
ತೂಕ ಇಳಿಸಿಕೊಂಡು, ಯಂಗ್ ಆಗಿ ಕಾಣಲು ಈ ವಿಶೇಷ ನೀಲಿ ಚಹಾ ಬೆಸ್ಟ್
ಅಮಿಲೋಯ್ಡೋಸಿಸ್ ನಿಂದ ಬಳಲುತ್ತಿರುವ ಜನರ ಸಾಮಾನ್ಯ ಲಕ್ಷಣಗಳು : ಯಾವುದೇ ಭಾಗದಲ್ಲಿ ಅಮಿಲೋಯ್ಡೋಸಿಸ್ ಕಾಣಿಸಿಕೊಂಡ್ರೂ ಆಯಾಸ, ದೌರ್ಬಲ್ಯ, ನಾಲಿಗೆ ಊದಿಕೊಳ್ಳುವುದು, ಕೀಲು ನೋವು, ಕೈ ಮತ್ತು ಹೆಬ್ಬೆರಳಿನಲ್ಲಿ ಮರಗಟ್ಟಿದ ಅನುಭವ ಕಾಣಿಸುತ್ತದೆ. ಈ ಮೇಲಿನ ಎಲ್ಲ ಲಕ್ಷಣಗಳು ಒಬ್ಬ ವ್ಯಕ್ತಿಗೆ ಒಂದಕ್ಕಿಂತ ಹೆಚ್ಚು ದಿನವಿದ್ರೆ ತಕ್ಷಣ ವೈದ್ಯರನ್ನು ಭೇಟಿಯಾಗುವುದು ಒಳ್ಳೆಯದು.
ಅಮಿಲೋಯ್ಡೋಸಿಸ್ ಯಾರಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತದೆ? : ಆರೋಗ್ಯ ತಜ್ಞರ ಪ್ರಕಾರ ಅಮಿಲೋಯ್ಡೋಸಿಸ್ ಎಲ್ಲರಲ್ಲೂ ಕಾಣಿಸಿಕೊಳ್ಳಬಹುದು. ಆದ್ರೆ ಈಗಾಗಲೇ ಕೆಲ ಖಾಯಿಲೆಯಿಂದ ಬಳಲುತ್ತಿರುವ ವ್ಯಕ್ತಿಗಳಲ್ಲಿ ಅಮಿಲೋಯ್ಡೋಸಿಸ್ ಅಪಾಯ ಹೆಚ್ಚು.
ವಯಸ್ಸು : 50 ವರ್ಷ ಮೇಲ್ಪಟ್ಟ ವ್ಯಕ್ತಿಗಳಲ್ಲಿ ಅಮಿಲೋಯ್ಡೋಸಿಸ್ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ.
ಲಿಂಗ : ಮಹಿಳೆ ಹಾಗೂ ಪುರುಷ ಇಬ್ಬರಲ್ಲೂ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಆದ್ರೆ ಶೇಕಡಾ 60ರಷ್ಟು ಪುರುಷರಿಗೆ ಅಮಿಲೋಯ್ಡೋಸಿಸ್ ಕಾಡುವ ಸಾಧ್ಯತೆಯಿರುತ್ತದೆ.
ಜಾತಿ : ಬೇರೆಯವರಿಗೆ ಹೋಲಿಕೆ ಮಾಡಿದ್ರೆ ಆಫ್ರಿಕನ್ ಅಮೆರಿಕನ್ ಜನಾಂಗದಲ್ಲಿ ಇದು ಹೆಚ್ಚು.
ವೈದ್ಯಕೀಯ ಹಿನ್ನಲೆ : ಸೋಂಕು ಅಥವಾ ಯಾವುದೇ ಉರಿಯೂತ ಸಂಬಂಧಿತ ಕಾಯಿಲೆ ಹೊಂದಿದ್ದರೆ ಆತನಿಗೆ ಇದ್ರ ಅಪಾಯವಿರುತ್ತದೆ.
ಕಿಡ್ನಿ ಸಮಸ್ಯೆ : ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ವ್ಯಕ್ತಿಗೆ ಅಮಿಲೋಯ್ಡೋಸಿಸ್ ಅಪಾಯವಿರುತ್ತದೆ.