ಮಕ್ಕಳು ಪೌಷ್ಟಿಕ ಮತ್ತು ಆರೋಗ್ಯಕರ ಆಹಾರ ಸೇವಿಸುವಂತೆ ಮಾಡುವುದು ಹೇಗೆ ಎನ್ನುವುದು ಬಹುತೇಕ ಎಲ್ಲ ಪಾಲಕರ ತಲೆನೋವು ಎಂದರೆ ತಪ್ಪಾಗಲಿಕ್ಕಿಲ್ಲ. ಆದರೆ, ಮಕ್ಕಳಿಗೆ ಬೇಕರಿ, ಫಾಸ್ಟ್ ಫುಡ್ ಗಳ ಸೇವನೆಯನ್ನು ರೂಢಿಸಿದವರೇ ನಾವು ಎನ್ನುವುದನ್ನು ಮರೆಯುವಂತಿಲ್ಲ. ಹೀಗಾಗಿ, ಮಕ್ಕಳು ಮನೆಯ ಉತ್ತಮ ಆಹಾರವನ್ನೇ ಇಷ್ಟಪಟ್ಟು ತಿನ್ನಲು ಜಾಣತನದಿಂದ ಉತ್ತೇಜನ ನೀಡಬೇಕು.
ಮಕ್ಕಳು ಪೌಷ್ಟಿಕ ಮತ್ತು ಆರೋಗ್ಯಕರ ಆಹಾರಗಳನ್ನು ಸೇವಿಸುವಂತೆ ಮಾಡುವುದು ಇಂದಿನ ದಿನಗಳಲ್ಲಿ ಅತಿದೊಡ್ಡ ಸವಾಲು. ಪಾಲಕರು ಎಷ್ಟೇ ಕಷ್ಟಪಟ್ಟರೂ ಇಂದಿನ ಮಕ್ಕಳು ಕರಿದ, ಸಂಸ್ಕರಿತ ಮತ್ತು ಸಕ್ಕರೆಭರಿತ ಆಹಾರಗಳನ್ನೇ ಇಷ್ಟಪಡುವಾಗ ಪೌಷ್ಟಿಕ ಆಹಾರಗಳನ್ನು ಅವರಿಗೆ ತಲುಪಿಸುವುದು ಸಾಧ್ಯವೇ ಇಲ್ಲ ಎನ್ನುವಷ್ಟರ ಮಟ್ಟಿಗೆ ಹತಾಶೆ ಕಾಡಬಹುದು. ಇಂತಹ ಆಹಾರಗಳಿಂದಾಗಿ ಮಕ್ಕಳಲ್ಲಿ ಬೊಜ್ಜು ಬೆಳೆಯಬಹುದು. ಹಲವು ಪೋಷಕಾಂಶಗಳ ಕೊರತೆ ಕಾಡಬಹುದು. ಇನ್ನು, ಬಾಲ್ಯದಲ್ಲಿ ಹೆಚ್ಚಿನ ಪರಿಣಾಮ ಕಂಡುಬರದಿದ್ದರೂ ಬೆಳೆಯುತ್ತ ಮಧುಮೇಹ ಸೇರಿದಂತೆ ಹಲವು ಸಮಸ್ಯೆ ಉಂಟಾಗಬಹುದು. ಇವೆಲ್ಲದರ ಅರಿವಿದ್ದರೂ ಎಷ್ಟೋ ಪಾಲಕರು ಪೌಷ್ಟಿಕ ಆಹಾರವನ್ನಷ್ಟೇ ಮಕ್ಕಳಿಗೆ ನೀಡಲಾಗದೆ ಅಸಹಾಯರಾಗುವ ಪರಿಸ್ಥಿತಿ ಎದುರಾಗಿರುವುದು ಸತ್ಯ. ಹೀಗಾಗಿ, ಪೌಷ್ಟಿಕಾಂಶಭರಿತ ಆರೋಗ್ಯಕರ ತಿನಿಸುಗಳನ್ನಷ್ಟೇ ನೀಡುವುದು ಪಾಲಕರಿಗೆ ನಿಜಕ್ಕೂ ಸವಾಲಿನ ಕಾರ್ಯವೇ ಆಗಿದೆ. ಇಂಥ ದಿನಗಳಲ್ಲಿ ಬಹಳ ಎಚ್ಚರಿಕೆಯಿಂದ ನಡೆದುಕೊಳ್ಳಬೇಕು. ಸ್ವತಃ ಪಾಲಕರು ಉತ್ತಮ ಜೀವನಶೈಲಿ ಅನುಸರಿಸುವ ಮೂಲಕ, ಮನೆಯಲ್ಲಿ ಒಳ್ಳೆಯ ಆಹಾರಗಳನ್ನೇ ಸೇವಿಸುವ ಮೂಲಕ ಮಕ್ಕಳ ಮೇಲೆ ಪ್ರಭಾವ ಬೀರಬಹುದು. ಆದರೆ, ಇದಕ್ಕೂ ಸಾಕಷ್ಟು ಜಾಣ್ಮೆ ಮತ್ತು ತಾಳ್ಮೆ ಅತ್ಯಗತ್ಯ.
• ಪಾಲಕರೇ ಮಾದರಿ (Model) ಆಗಬೇಕಲ್ಲವೇ?
ಬಹಳಷ್ಟು ಮನೆಗಳಲ್ಲಿ ಪಾಲಕರೇ (Parents) ಮಕ್ಕಳಿಗೆ ಅನಾರೋಗ್ಯಕರ (Unhealthy) ಜೀವನಶೈಲಿ (Lifestyle) ರೂಢಿಸುತ್ತಾರೆ. ದಿನವೂ ಕರಿದ (Fried), ಸಿಹಿಯುಕ್ತ (Sugar) ತಿನಿಸುಗಳನ್ನು ಸೇವಿಸುವ ಮೂಲಕ ಕೆಟ್ಟ ಪದ್ಧತಿಗೆ ನಾಂದಿ ಹಾಡುತ್ತಾರೆ. ಮನೆಯಲ್ಲಿ ಆರೋಗ್ಯದೆಡೆ (Health) ಗಮನ ಹರಿಸುವ ವಾತಾವರಣವಿದ್ದಾಗ ಮಕ್ಕಳಿಗೂ ಅದರ ಬಗ್ಗೆ ಅರಿವು ಮೂಡುತ್ತದೆ. ಹಿರಿಯರು ಪೌಷ್ಟಿಕಾಂಶಯುಕ್ತ ಆಹಾರ, ಮನೆಯಲ್ಲೇ ಸಿದ್ಧಪಡಿಸಿದ ಊಟ ಸೇವಿಸುವ ಪರಿಪಾಠ ಅನುಸರಿಸಿದಾಗ ಮಕ್ಕಳಿಗೂ ಸಹಜವಾಗಿ ಅಭ್ಯಾಸವಾಗುತ್ತದೆ. ಆದರೂ ಅವರಿಗೆ ಬಾಹ್ಯ ತಿನಿಸುಗಳ ಮೋಹ ಹೆಚ್ಚೇ ಇರುತ್ತದೆ. ಅದನ್ನು ಜಾಣತನದಿಂದ ನಿಭಾಯಿಸಬೇಕು.
Women Health: ಕೂತ್ಕೊಂಡು ನೆಲ ಒರೆಸಿ, ಹೊಟ್ಟೆ ಕರಗಲು ಬೆಸ್ಟ್ ಈ ಮಲಾಸನ!
• ಮಕ್ಕಳಲ್ಲಿ ಅರಿವು (Awareness)
ಆಹಾರ (Food) ನಮಗೆಷ್ಟು ಮುಖ್ಯ, ಆಹಾರದಿಂದ ಹೇಗೆ ಆರೋಗ್ಯ ಲಭಿಸುತ್ತದೆ, ಮನೆಯಲ್ಲಿ ಸಿದ್ಧಪಡಿಸಿದ ಆಹಾರದಲ್ಲಿ ಏನೆಲ್ಲ ಇರುತ್ತದೆ, ಬಾಹ್ಯ ತಿನಿಸುಗಳು ಅದೆಷ್ಟು ಅಪಾಯಕಾರಿ ಎನ್ನುವ ಬಗ್ಗೆ ಮಕ್ಕಳಿಗೆ ಆಗಾಗ ತಿಳಿಸಿ ಹೇಳುತ್ತಿರಬೇಕು. ಇದನ್ನು ಕತೆಯ (Story) ರೂಪದಲ್ಲೂ ಹೇಳಬಹುದು. ಸಂಸ್ಕರಿತ (Processed) ಆಹಾರದಿಂದ ಆಗುವ ಪರಿಣಾಮಗಳ ಬಗ್ಗೆ ಅರಿವು ಮೂಡಿಸಬೇಕು. ಪಾಲಕರು, ಮನೆಯ ಸದಸ್ಯರೆಲ್ಲರೂ ಇಂಥದ್ದೇ ಆಹಾರ ಪದ್ಧತಿ ಅನುಸರಿಸಿದರೆ ಮಕ್ಕಳಿಗೂ ಸಹಜವಾಗಿ ಅಭ್ಯಾಸವಾಗುತ್ತದೆ.
• ಅಡುಗೆ ಸಿದ್ಧತೆಯಲ್ಲಿ (Meal Preparation) ಜತೆಗಿರಲಿ ಮಕ್ಕಳು
ಮಕ್ಕಳ ರಜಾದಿನಗಳಲ್ಲಿ ಊಟ, ತಿಂಡಿ ಸಿದ್ಧಪಡಿಸುವ ಸಮಯದಲ್ಲಿ ಅವರನ್ನು ಸೇರಿಸಿಕೊಳ್ಳುವುದು ಉತ್ತಮ ಅಭ್ಯಾಸ. ಇದರಿಂದ ಅವರಲ್ಲಿ ಊಟ-ತಿನಿಸುಗಳ ಬಗ್ಗೆ ಹೆಚ್ಚು ಅರಿವು ಮೂಡುತ್ತದೆ. ಅಂಗಡಿಗೆ ಹೋದಾಗ ತರಕಾರಿ, ಹಣ್ಣುಗಳನ್ನು ಆಯ್ಕೆ ಮಾಡುವಂತೆ ತಿಳಿಸಬೇಕು. ಅವುಗಳಿಂದ ಸಿದ್ಧಪಡಿಸುವ ಆಹಾರ ಪದಾರ್ಥಗಳನ್ನು ಆಯ್ಕೆ ಮಾಡಲು ಸೂಚಿಸಬೇಕು. ಇದರಿಂದ ಆರೋಗ್ಯಕರ ಆಹಾರಕ್ಕೆ ಹೆಚ್ಚಿನ ಉತ್ತೇಜನ ನೀಡಿದಂತಾಗುತ್ತದೆ.
ಬೋಳು ತಲೆಯಿದ್ದವರಿಗೆ ಲೈಂಗಿಕ ಶಕ್ತಿ ಹೆಚ್ಚಿರುತ್ತೆ ಅನ್ನೋದು ನಿಜಾನ?
• ಫಾಸ್ಟ್ ಫುಡ್ (Fast Food) ಮಿತಿಯಲ್ಲಿರಲಿ
ಬಾಹ್ಯ ತಿನಿಸು ಅಥವಾ ಫಾಸ್ಟ್ ಫುಡ್ 15 ದಿನಗಳಿಗೆ ಒಮ್ಮೆಯೋ, ತಿಂಗಳಿಗೆ ಒಮ್ಮೆಯೋ ಸೀಮಿತವಾಗಿರಲಿ. ಇಲ್ಲೂ ಸಹ ಅನೇಕ ರೀತಿಯ ಆರೋಗ್ಯಕ್ಕೆ ಹಾನಿಯಾಗದ ತಿನಿಸುಗಳ ಆಯ್ಕೆ ಮಾಡುವುದನ್ನು ಪಾಲಕರು ಕಲಿತುಕೊಳ್ಳಬೇಕು. ಪಿಜ್ಜಾ, ಬರ್ಗರ್ ಗಳಲ್ಲೂ ಸಾಧ್ಯವಾದಷ್ಟು ಉತ್ತಮ ಆಯ್ಕೆ ಮಾಡುವ ಮೂಲಕ ಮಕ್ಕಳಿಗೂ ಅದನ್ನು ಅಭ್ಯಾಸ ಮಾಡಿಸಬೇಕು. ಮನೆಯಲ್ಲೇ ಕೆಲ ಸ್ನ್ಯಾಕ್ಸ್ (Snacks) ಸಿದ್ಧಪಡಿಸಬಹುದು. ಸಲಾಡ್, ಹಣ್ಣುಗಳ ಸ್ನ್ಯಾಕ್ಸ್ ಗಳನ್ನು ಮಕ್ಕಳಿಗೆ ಅಭ್ಯಾಸ ಮಾಡಿಸಬೇಕು. ಸ್ನೇಹಿತರು, ನೆಂಟರಿಷ್ಟರು ಬಾಹ್ಯ ತಿನಿಸುಗಳನ್ನು ಮಕ್ಕಳಿಗೆ ನೀಡದಂತೆ ಸೂಚಿಸುವುದು ಕೆಲವೊಮ್ಮೆ ಅನಿವಾರ್ಯ.