ಸಕ್ಕರೆ ಸೇವನೆ ಆರೋಗ್ಯಕ್ಕೆ ಹಾನಿಕರ ಎನ್ನುವುದು ಎಲ್ಲರಿಗೂ ತಿಳಿದದ್ದೇ. ಹಾಗಿದ್ದರೆ 30 ದಿನಗಳು ನಿರಂತರವಾಗಿ ಸಕ್ಕರೆಯನ್ನು ಬಿಟ್ಟರೆ ಏನಾಗುತ್ತದೆ?
ಹಲವು ರೋಗಗಳು ಮತ್ತು ಕಾಯಿಲೆಗಳಿಗೆ ಕಾರಣವಾಗುವ ಅತ್ಯಂತ ಹಾನಿಕಾರಕ ಪದಾರ್ಥಗಳಲ್ಲಿ ಸಕ್ಕರೆಯೂ ಒಂದು. ಸೋಡಾ, ಕ್ಯಾಂಡಿ, ಬೇಕರಿ ವಸ್ತುಗಳು, ಸಿರಿಧಾನ್ಯಗಳು ಮುಂತಾದ ಆಹಾರಗಳಲ್ಲಿ ಸೇರಿಸಲಾದ ಸಕ್ಕರೆಯು ದೇಹಕ್ಕೆ ಬದಲಾಯಿಸಲಾಗದ ಹಾನಿಯನ್ನು ಹೇಗೆ ಉಂಟುಮಾಡುತ್ತದೆ ಎಂಬುದರ ಕುರಿತು ಆರೋಗ್ಯ ತಜ್ಞರು ಇದಾಗಲೇ ಸಾಬೀತುಪಡಿಸಿದ್ದಾರೆ. ಅದರಲ್ಲಿಯೂ ಮಧುಮೇಹಿ (Diabetes) ರೋಗಿಗಳ ಸಕ್ಕರೆ ಎಂದರೆ ಬೆಚ್ಚಿಬೀಳುತ್ತಾರೆ. ಅಧ್ಯಯನಗಳ ಪ್ರಕಾರ, ಪ್ರಪಂಚದಾದ್ಯಂತ 70 ಪ್ರತಿಶತದಷ್ಟು ಸಂಸ್ಕರಿಸಿದ ಆಹಾರಗಳಲ್ಲಿ ಸಕ್ಕರೆ ಸೇರಿಸಲಾಗುತ್ತದೆ. ಸ್ಥೂಲಕಾಯತೆಯ ಹೊರತಾಗಿ, ಯಕೃತ್ತಿನ ಸಮಸ್ಯೆ, ಟೈಪ್ -2 ಮಧುಮೇಹ, ಹೃದಯ ಸಮಸ್ಯೆಗಳು ಮತ್ತು ಹೆಚ್ಚಿನವುಗಳಂತಹ ಕಾಯಿಲೆಗಳನ್ನು ಉಂಟುಮಾಡುವಲ್ಲಿ ಸಕ್ಕರೆಯದ್ದು ಎತ್ತಿದ ಕೈ. ಇದೇ ಕಾರಣಕ್ಕೆ, ಸಕ್ಕರೆಯನ್ನು ಕಡಿಮೆ ಮಾಡುವುದು ಅತಿ ಮುಖ್ಯವಾಗಿದೆ. ಮಧುಮೇಹಿಗಳು ಮಾತ್ರವಲ್ಲದೇ ಆರೋಗ್ಯವಂತರೂ ಸಕ್ಕರೆ ತಿನ್ನಬಾರದು.
ಇದೇ ಕಾರಣಕ್ಕೆ ಆರೋಗ್ಯವನ್ನು ಕಾಪಾಡಿಕೊಳ್ಳಲು ನಿರ್ದಿಷ್ಟ ರೀತಿಯ ಆಹಾರ ಸೇವಿಸುವುದು ಅತಿ ಮುಖ್ಯ. ಆರೋಗ್ಯ ಕಾಪಾಡಿಕೊಳ್ಳಬೇಕಿದ್ದರೆ ಸಕ್ಕರೆಯ ಬಗ್ಗೆ ವಿಶೇಷ ಗಮನ ಹರಿಸಬೇಕು. ಇದರ ಸೇವನೆಯನ್ನು ಆದಷ್ಟು ಕಡಿಮೆ ಮಾಡಬೇಕು. ಒಂದು ವೇಳೆ ಸೇವನೆ ಮಾಡದೇ ಇದ್ದರೆ ಇನ್ನೂ ಒಳ್ಳೆಯದು. ನೈಸರ್ಗಿಕ ಸಕ್ಕರೆಗಳು ಈಗಾಗಲೇ ತರಕಾರಿಗಳು, ಹಣ್ಣುಗಳು ಮತ್ತು ಡೈರಿ ಉತ್ಪನ್ನಗಳಂತಹ ಆಹಾರಗಳಲ್ಲಿ ಕಂಡುಬರುತ್ತವೆ, ಇದು ಉತ್ತಮವಾಗಿದೆ ಮತ್ತು ನಿಮಗೆ ಶಕ್ತಿಯನ್ನು ನೀಡಲು ಸಹಾಯ ಮಾಡುತ್ತದೆ.
ಅಸಿಡಿಟಿ ವಿರುದ್ಧ ಹೋರಾಡಲು ಸಹಾಯ ಮಾಡುವ ಭಾರತೀಯ ಸೂಪರ್ ಫುಡ್‌ಗಳು
30 ದಿನಗಳವರೆಗೆ ಸಕ್ಕರೆಯನ್ನು ತ್ಯಜಿಸಿದಾಗ ಏನಾಗುತ್ತದೆ?
ಅಮೆರಿಕನ್ ಹಾರ್ಟ್ ಅಸೋಸಿಯೇಷನ್ (Heart association) ಪ್ರಕಾರ, ಪುರುಷರು 9 ಟೀ ಚಮಚಗಳಿಗಿಂತ ಹೆಚ್ಚು ಅಥವಾ 150 ಕ್ಯಾಲೊರಿಗಳನ್ನು ಸೇರಿಸಿದ ಸಕ್ಕರೆಯನ್ನು ಸೇವಿಸಬಾರದು. ಆದರೆ, ಮಹಿಳೆಯರು ಇನ್ನೂ ಕಡಿಮೆ ಸಕ್ಕೆ ತಿನ್ನಬೇಕು, ಅರ್ಥಾತ್ ದಿನಕ್ಕೆ 6 ಟೀ ಚಮಚಗಳು ಅಥವಾ 100 ಕ್ಯಾಲೊರಿಗಳಿಗಿಂತ ಕಡಿಮೆ. ಆದಾಗ್ಯೂ, ಜನರು ಸಾಮಾನ್ಯವಾಗಿ ದಿನಕ್ಕೆ ಎರಡು ಅಥವಾ ಮೂರು ಬಾರಿ 19.5 ಟೀ ಚಮಚಗಳು ಅಥವಾ 312 ಕ್ಯಾಲೊರಿಗಳನ್ನು ಸೇವಿಸುತ್ತಾರೆ. ಆದ್ದರಿಂದ, ಕನಿಷ್ಠ 30 ದಿನಗಳವರೆಗೆ ಸಕ್ಕರೆಯನ್ನು ತ್ಯಜಿಸುವುದು ನಿಮ್ಮ ದೇಹ ಮತ್ತು ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರುತ್ತದೆ. ಅರ್ಥಾತ್ ಒಳ್ಳೆಯ ಫಲಿತಾಂಶ ನೀಡುತ್ತದೆ.
ರಕ್ತದಲ್ಲಿನ ಸಕ್ಕರೆ ಮಟ್ಟಗಳ ನಿಯಂತ್ರಣ (Sugar Control in Blood)
ಸಕ್ಕರೆಯನ್ನು ಕಡಿತಗೊಳಿಸುವುದು ರಕ್ತದಲ್ಲಿನ ಸಕ್ಕರೆ (Sugar) ಮತ್ತು ಇನ್ಸುಲಿನ್ ಮಟ್ಟವನ್ನು ಸಮತೋಲನಗೊಳಿಸಲು ಉತ್ತಮ ಮಾರ್ಗವಾಗಿದೆ. ನೀವು ಆಗಾಗ್ಗೆ ಸಕ್ಕರೆ ಸೇರಿಸಿದ ಆಹಾರ ಮತ್ತು ಪಾನೀಯಗಳನ್ನು ಸೇವಿಸಿದರೆ ಅದು ನಿಮ್ಮ ಹಾನಿ ಟೈಪ್ -2 ಮಧುಮೇಹದ ಅಪಾಯವನ್ನು ಹೆಚ್ಚಿಸುತ್ತದೆ.
ತೂಕ ನಿರ್ವಹಣೆ (Weight Management)
ಸಕ್ಕರೆ ಸೇವನೆಯನ್ನು ಕಡಿಮೆ ಮಾಡುವುದರಿಂದ ತೂಕವನ್ನು ಕಳೆದುಕೊಳ್ಳಲು (Weight loss) ಸಹಾಯ ಮಾಡುತ್ತದೆ. ವಿಶೇಷವಾಗಿ ನೀವು ಹೆಚ್ಚಿನ ಪ್ರೋಟೀನ್ ಮತ್ತು ಫೈಬರ್‌ನಿಂದ ತುಂಬಿದ ಆಹಾರವನ್ನು ಸೇವಿಸಬೇಕಾಗುತ್ತದೆ. ನೀವು ಸಕ್ಕರೆಯನ್ನು ಸೇವಿಸಿದಾಗ, ಇದು ನಿಮ್ಮ ಅಂಗಗಳ ಸುತ್ತಲೂ ಅಂಟಿಕೊಳ್ಳುವ ಒಳಾಂಗಗಳ ಕೊಬ್ಬನ್ನು ಹೆಚ್ಚಿಸುತ್ತದೆ, ಇದು ಯಕೃತ್ತಿನ ಸಮಸ್ಯೆಗಳು ಸೇರಿದಂತೆ ವಿವಿಧ ಜೀವನಶೈಲಿಯ ಕಾಯಿಲೆಗಳ ಅಪಾಯವನ್ನು ಉಂಟುಮಾಡುತ್ತದೆ.
ದಂತ ಆರೋಗ್ಯ (Tooth Protection)
ಸಕ್ಕರೆಯ ಆಹಾರಗಳು ಮತ್ತು ಪಾನೀಯಗಳು ಬಾಯಿಯ ಆರೋಗ್ಯಕ್ಕೆ ಒಳ್ಳೆಯದಲ್ಲ, ಏಕೆಂದರೆ ಅವು ಕುಳಿಗಳು ಮತ್ತು ವಸಡು ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತವೆ. ವೈದ್ಯರ ಪ್ರಕಾರ, ನಿಮ್ಮ ಬಾಯಿಯಲ್ಲಿರುವ ಬ್ಯಾಕ್ಟೀರಿಯಾವು ಸಕ್ಕರೆಯನ್ನು ಒಡೆಯುತ್ತದೆ ಮತ್ತು ಆಮ್ಲವನ್ನು ಬಿಡುಗಡೆ ಮಾಡುತ್ತದೆ, ಇದು ಹಲ್ಲುಗಳ ದಂತಕವಚವನ್ನು ನಾಶಪಡಿಸುತ್ತದೆ. ನೀವು ಕನಿಷ್ಠ ಒಂದು ತಿಂಗಳ ಕಾಲ ಸಕ್ಕರೆಯನ್ನು ತೆಗೆದುಕೊಳ್ಳದಿದ್ದರೆ, ಅದು ನಿಮ್ಮ ಹಲ್ಲು ಮತ್ತು ಬಾಯಿಯ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ.
ಕಡಿಮೆ ಗ್ಲೈಸೆಮಿಕ್ ಇಂಡೆಕ್ಸ್ ಇರೋ ಸ್ವೀಟ್ಸ್, ಡಯಾಬಿಟಿಸ್ ಇರೋರು ಕೂಡಾ ಆರಾಮಾಗಿ ತಿನ್ಬೋದು
ಹೃದಯದ ಆರೋಗ್ಯ (Health of Heart)
ಅಧಿಕ ರಕ್ತದೊತ್ತಡ, ಕೊಲೆಸ್ಟ್ರಾಲ್ ಮತ್ತು ಹೃದಯಾಘಾತದಂತಹ ವಿವಿಧ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುವುದರಿಂದ ಸಕ್ಕರೆ ಭರಿತ ಆಹಾರವು ಹೃದಯದ ಆರೋಗ್ಯಕ್ಕೆ ಹಾನಿಕಾರಕವಾಗಿದೆ. ಆದಾಗ್ಯೂ, ಸಕ್ಕರೆ ಸೇವನೆಯನ್ನು ತ್ಯಜಿಸುವುದು ಅಥವಾ ಕಡಿಮೆ ಮಾಡುವುದು HDL ಕೊಲೆಸ್ಟ್ರಾಲ್ ಅನ್ನು ಗಮನಾರ್ಹವಾಗಿ ಹೆಚ್ಚಿಸುತ್ತದೆ.
ಹಾಗಿದ್ದರೆ ಇನ್ನೇಕೆ ತಡ, ಸಕ್ಕರೆಯಿಂದ ದೂರವಿದ್ದು, ಉತ್ತಮ ಆರೋಗ್ಯ ಪಡೆದುಕೊಳ್ಳಿ.