ನಮ್ಮಂತೆ ನಮ್ಮ ಮಕ್ಕಳಿಗೆ ಕಷ್ಟಬರಬಾರದು ಎನ್ನುವ ಕಾರಣಕ್ಕೆ ಪಾಲಕರು ಮಕ್ಕಳನ್ನು ಬೈಕ್, ಕಾರಿನಲ್ಲಿ ಸುತ್ತಿಸ್ತಾರೆ. ಮನೆಯಿಂದ ಹೊರಗೆ ಬೀಳ್ತಿದ್ದಂತೆ ಮಕ್ಕಳು ವಾಹನ ಹತ್ತುತ್ತಾರೆ. ಇದು ಮಕ್ಕಳಿಗೆ ಸಂತೋಷ ನೀಡ್ಬಹುದು. ಆದ್ರೆ ಅವರ ದೈಹಿಕ ಆರೋಗ್ಯದ ಜೊತೆ ಮಾನಸಿಕ ಆರೋಗ್ಯವನ್ನೂ ಹಾಳು ಮಾಡುತ್ತೆ ಎಚ್ಚರ.
ನಾಲ್ಕು ಹೆಜ್ಜೆ ನಡಿಗೆ ನಮಗೆ ಎಷ್ಟೊಂದು ಸಮಾಧಾನ, ನೆಮ್ಮದಿಯನ್ನು ಕೊಡುತ್ತೆ ಅಲ್ಲವಾ? ಬೆಳಗ್ಗಿನ ಚುಮು ಚುಮು ಚಳಿಯಲ್ಲೋ ಅಥವಾ ಇಬ್ಬನಿ ತುಂಬಿದ ರಸ್ತೆಯಲ್ಲೋ ಅಥವಾ ಸಂಜೆಯ ತಿಳಿ ಬೆಳಕಿನ ಜೊತೆಗೆ ನಡೆಯುತ್ತಿದ್ದರೆ ಇನ್ನಷ್ಟು ದೂರ ಮತ್ತಷ್ಟು ದೂರ ನಡೆದೇ ಹೋಗಬೇಕಿನುವಷ್ಟು ಹಿತ ಎನಿಸುತ್ತದೆ.
ಈಗಿನ ಜೀವನಶೈಲಿಯಲ್ಲಿ ಮನೆಯ ಹೊರಗೆ ಕಾಲಿಟ್ಟರೆ ಬೈಕ್, ಕಾರು ಅಥವಾ ಕ್ಯಾಬ್ ಹತ್ತಿ ಓಡಾಡುವ ಮಂದಿಯೇ ತುಂಬಿಹೋಗಿದ್ದಾರೆ. ದೊಡ್ಡವರ ಜೊತೆಗೆ ಮಕ್ಕಳಿಗೂ ಕೂಡ ನಡಿಗೆಯ ಅನುಭವವನ್ನು ಸವಿಯುವ ಅವಕಾಶವಿಲ್ಲ ಎಂಬುದು ದುಃಖದ ಸಂಗತಿ. ಮೊದಲೆಲ್ಲ ಶಾಲೆಗೆ ಹೋಗುವಾಗ ಬರುವಾಗ ನಡೆದೇ ಹೋಗಬೇಕಿತ್ತು. ಆದರೆ ಈಗಿನ ಮಕ್ಕಳು ಅದರಿಂದಲೂ ವಂಚಿತರಾಗಿದ್ದಾರೆ. ಶಾಲೆಗೆ ಹೋಗಲು ಸ್ಕೂಲ್ ಬಸ್ ಅಥವಾ ಆಟೋ ವ್ಯವಸ್ಥೆ ಇರುವುದರಿಂದ ಅವರು ಅದರಲ್ಲೇ ಹೋಗಬೇಕಾಗುತ್ತದೆ. ಅದರಿಂದ ಮಕ್ಕಳ ಶರೀರಕ್ಕೆ ಸರಿಯಾದ ವ್ಯಾಯಾಮ ಸಿಗುವುದಿಲ್ಲ. ಮಕ್ಕಳು ಅವಶ್ಯಕವಾಗಿ ವಾಕಿಂಗ್ ಮಾಡಬೇಕು. ವಾಕಿಂಗ್ ಮಾಡುವುದರಿಂದ ಕ್ಯಾಲೊರಿ ಬರ್ನ್ ಆಗುತ್ತದೆ, ರಕ್ತದ ಸಂಚಲನ ಸರಿಯಾಗಿ ಆಗುತ್ತದೆ, ಡಯಾಬಿಟೀಸ್ ನಿಂದ ದೂರವಿರಬಹುದು, ಇಮ್ಯುನಿಟಿ ಕೂಡ ಹೆಚ್ಚುತ್ತದೆ ಮತ್ತು ಮಾಂಸಖಂಡಗಳು ಕೂಡ ಗಟ್ಟಿಯಾಗುತ್ತದೆ.
ಕೆಲವು ಹಣ್ಣು ತಿಂದ ಮೇಲೆ ನೀರು ಕುಡೀಬಾರದು ಅನ್ನೋದು ಗೊತ್ತಾ?
ಕುಟುಂಬ, ಮಕ್ಕಳ ಜೊತೆ ವಾಕ್ (Walk) ಮಾಡಿ : ವಾಕಿಂಗ್ ಅನ್ನು ಎಲ್ಲ ವಯಸ್ಸಿನವರೂ ಮಾಡಬಹುದು. ಇದರಿಂದ ಆಮ್ಲಜನಕದ ಹರಿವು ಹೆಚ್ಚುತ್ತದೆ. ಇದು ದೇಹದಲ್ಲಿ ಅಡ್ರಿನಾಲಿನ್ ಮತ್ತು ಎಂಡೊರ್ಫಿನ್ ಮಟ್ಟವನ್ನು ಹೆಚ್ಚಿಸುತ್ತದೆ. ನಡೆಯುವುದರಿಂದ ಖಿನ್ನತೆ, ಕೋಪ ಮತ್ತು ಒತ್ತಡದಿಂದ ಕೂಡ ದೂರವಿರಬಹುದು. ಕೆಲಸದ ಕಾರಣಕ್ಕೆ ಸದಾ ಮನೆಯಿಂದ ಹೊರಗೆ ಇರುವವರ ಮಕ್ಕಳು ಪ್ರೀತಿಯಿಂದ ವಂಚಿತರಾಗುತ್ತಾರೆ. ಅಂತವರು ದಿನದ ಸ್ವಲ್ಪ ಸಮಯವನ್ನು ತಮ್ಮ ಮಕ್ಕಳಿಗಾಗಿ ಮೀಸಲಿಟ್ಟು, ಮಕ್ಕಳನ್ನು ಪಾರ್ಕ್ ಗಳಿಗೆ ಕರೆದುಕೊಂಡು ಹೋದರೆ ಮಕ್ಕಳು ಆನಂದದಿಂದ ಇರುತ್ತಾರೆ. ಇದರಿಂದ ಅವರ ಮಾನಸಿಕ ಸ್ಥಿತಿ ಕೂಡ ಉತ್ತಮವಾಗಿರುತ್ತದೆ.
ಮಕ್ಕಳು (Children) ವಾಕಿಂಗ್ ಮಾಡೋದ್ರಿಂದ ಈ ಎಲ್ಲ ಲಾಭ : ಮಕ್ಕಳು ಪಟಾಣಿ ಹೆಜ್ಜೆಯಿಟ್ಟು ನಡೆದಾಡಲು ಶುರು ಮಾಡಿದ ನಂತ್ರ ಮಕ್ಕಳನ್ನು ಆದಷ್ಟು ನಡೆಯಲು ಬಿಡಿ. ಇದರಿಂದ ಮಗುವಿನ ಶಾರೀರಿಕ ಮತ್ತು ಮಾನಸಿಕ ಆರೋಗ್ಯ ವೃದ್ಧಿಯಾಗುತ್ತೆ. ಮಕ್ಕಳು ವಾಕಿಂಗ್ ಮಾಡುವುದು ಮತ್ತು ಆಟ ಆಡುವುದರಿಂದ ಮಗುವಿನ ಆರೋಗ್ಯ ಸುಧಾರಿಸುತ್ತದೆ. ಮಗುವಿನ ದೈಹಿಕ ಬೆಳವಣಿಗೆ ಕೂಡ ಸುಧಾರಿಸುತ್ತದೆ.
ಮಕ್ಕಳ ಏಳ್ಗೆಗೆ ಸಹಕಾರಿ : ಸೂರ್ಯ (Sun) ನ ಬೆಳಕು, ಮರ ಗಿಡಗಳ ಶುದ್ಧ ಗಾಳಿ, ಹೂವು, ಮಣ್ಣುಗಳ ಜೊತೆ ಮಕ್ಕಳು ಬೆರೆಯುವುದರಿಂದ ಅವರ ಇಂದ್ರಿಯಗಳ ಬೆಳವಣಿಗೆ ಆಗುತ್ತದೆ. ಪ್ರಾಕೃತಿಕ ಸೌಂದರ್ಯವನ್ನು ಸವಿಯುವುದರಿಂದ, ನೋಡುವುದರಿಂದ ಮತ್ತು ಮುಟ್ಟುವುದರಿಂದ ಮಕ್ಕಳು ಹೆಚ್ಚು ಕಲಿಯುತ್ತಾರೆ. ಸುತ್ತಲ ಸಮಾಜದ ಬಗ್ಗೆ ಅವರಿಗೆ ಜ್ಞಾನ ಮೂಡುತ್ತದೆ. ವಾಕಿಂಗ್ ನಿಂದ ಅಲ್ಲಿರುವ ಹತ್ತಾರು ಮಕ್ಕಳ ಜೊತೆ ಮಗು ಕೂಡಿ ಆಡುವುದರಿಂದ ಮಕ್ಕಳ ಭಾಷೆ ಮತ್ತು ಕೌಶಲ್ಯಗಳು ಬೆಳೆಯುತ್ತದೆ. ಹೊರಗಿನ ಜನರೊಂದಿಗೆ ಹೇಗೆ ಮಾತನಾಡಬೇಕು, ಹೇಗೆ ವರ್ತಿಸಬೇಕು, ಜನರನ್ನು ಹೇಗೆ ಗೌರವಿಸಬೇಕು ಎಂಬ ಅರಿವು ಚಿಕ್ಕಂದಿನಲ್ಲೇ ಅವರಿಗೆ ಮೂಡುತ್ತದೆ. ಇದರಿಂದ ಮಗುವಿನ ಸರ್ವತೋಮುಖ ಬೆಳವಣಿಗೆಯಾಗುತ್ತದೆ. ಕೆಲವು ವರದಿಗಳ ಪ್ರಕಾರ, ವಾಹನದ ಮೇಲೆ ಬಂದ ಮಕ್ಕಳಿಗಿಂತ ನಡೆದುಕೊಂಡು ಶಾಲೆಗೆ ಬಂದ ಮಕ್ಕಳಲ್ಲೇ ಕಲಿಯುವ ಉತ್ಸಾಹ ಹೆಚ್ಚಿರುತ್ತದೆಯಂತೆ.
ರಿವರ್ಸ್ ಡಯಟಿಂಗ್ ಎಂದರೇನು? ಈ ಟೆಕ್ನಿಕ್ ಆರೋಗ್ಯಕ್ಕೇಕೆ ಬೇಕು?
ನಡಿಗೆಯಿಂದ ಬರುತ್ತೆ ಒಳ್ಳೆಯ ನಿದ್ದೆ : ಯಾವ ಮಗುವು ಹಗಲಿನಲ್ಲಿ ಹೆಚ್ಚು ಸಕ್ರಿಯವಾಗಿರುತ್ತದೆಯೋ ಅಥವಾ ಆಟ ಆಡುತ್ತದೆಯೋ ಆ ಮಗು ರಾತ್ರಿಯಲ್ಲಿ ಒಳ್ಳೆಯ ನಿದ್ದೆ ಮಾಡುತ್ತದೆ. ಮಕ್ಕಳು ತಂದೆ ತಾಯಿಯೊಡನೆ ಹೆಚ್ಚಿನ ಸಮಯ ಹೊರಗೆ ಕಳೆಯುವುದರಿಂದ ಅವರ ಸಿರ್ಕಾಡಿಯನ್ ರಿದಮ್ ಬಹಳ ಬೇಗ ಬೆಳವಣಿಗೆಯಾಗುತ್ತದೆ. ನೈಸರ್ಗಿಕ ಬೆಳಕು ಸಿರ್ಕಾಡಿಯನ್ ವ್ಯವಸ್ಥೆಯನ್ನು ನಿಯಂತ್ರಿಸುತ್ತದೆ ಮತ್ತು ಮೆಲಟೋನಿನ್ ಸ್ರವಿಸುವಿಕೆಯ ಮೇಲೆ ನೇರ ಪರಿಣಾಮ ಬೀರುತ್ತದೆ.