ಕೂತಲ್ಲಿ, ನಿಂತಲ್ಲಿ ನಿದ್ರೆ ಮಾಡುವವರನ್ನು ನೋಡಿರಬಹುದು. ಹಗಲು-ರಾತ್ರಿಗಳ ಭೇದವಿಲ್ಲದೆ ಇವರು ನಿದ್ರೆ ಮಾಡಬಲ್ಲರು. ನಿದ್ರಾಹೀನತೆಯಂತೆಯೇ ಅತಿಯಾದ ನಿದ್ರೆಯೂ ಒಂದು ಆರೋಗ್ಯ ಸಮಸ್ಯೆಯೇ ಆಗಿದೆ. ಇದರ ಬಗ್ಗೆ ಅನಾದರ ಬೇಡ. ಎಚ್ಚರಿಕೆ ವಹಿಸುವುದು ಅತ್ಯಗತ್ಯ.
ನಿದ್ರೆ ಬಾರದಿರುವುದು ಒಂದು ಸಮಸ್ಯೆಯಾದರೆ, ಅತಿಯಾದ ನಿದ್ರೆಯೂ ಮತ್ತೊಂದು ರೀತಿಯದ್ದು. ಕೆಲವರನ್ನು ನೋಡಿರಬಹುದು. ರಾತ್ರಿ ಚೆನ್ನಾಗಿ ನಿದ್ರೆ ಮಾಡಿದ ಬಳಿಕವೂ ಅಲ್ಲಲ್ಲಿ ಕೂತಲ್ಲಿ ಸರಕ್ಕನೆ ನಿದ್ರೆಗೆ ಜಾರುತ್ತಾರೆ. ಕೆಲವೊಮ್ಮೆ ಸುಸ್ತು, ಚಿಂತೆ ಅಥವಾ ಔಷಧಿ ಇನ್ಯಾವುದೋ ಕಾರಣದಿಂದಾಗಿ ಹೀಗಾಗಬಹುದಾದರೂ ಪದೇ ಪದೆ ಕಾರಣವಿಲ್ಲದೆ ಹೀಗಾಗುತ್ತಿದ್ದರೆ ಅದು ಹೈಪರ್ ಸೋಮ್ನಿಯಾ. ಇನ್ ಸೋಮ್ನಿಯಾ ಅಂದರೆ ನಿದ್ರಾಹೀನತೆಯಂತೆಯೇ ಇದೂ ಸಹ ಒಂದು ಡಿಸಾರ್ಡರ್. ಈ ಸಮಸ್ಯೆ ಇರುವಾಗ ವ್ಯಕ್ತಿ ಸದಾಕಾಲ ನಿದ್ರೆ ಮಾಡಲು ಬಯಸುತ್ತಾನೆ. ಮುಖ್ಯವಾಗಿ, ಹಗಲಿನಲ್ಲಿ ಹೆಚ್ಚು ನಿದ್ರೆ ಮಾಡುತ್ತಾನೆ. ಇದರಿಂದಾಗಿ ಈತನ ದೈನಂದಿನ ಆಗುಹೋಗುಗಳಲ್ಲಿ ವ್ಯತ್ಯಾಸ ಉಂಟಾಗಬಹುದು. ನಿದ್ರೆ ನಮ್ಮ ಆರೋಗ್ಯಕ್ಕೆ ಅತ್ಯಗತ್ಯ. ಮನುಷ್ಯ ಸರಿಯಾಗಿ ತನ್ನ ಕೆಲಸ ನಿರ್ವಹಿಸಲು ದಿನಕ್ಕೆ ಏಳು ಗಂಟೆಗಳ ನಿದ್ರೆ ಅಗತ್ಯ. ರಾತ್ರಿ ಸರಿಯಾಗಿ ನಿದ್ರೆ ಆಗಿಲ್ಲವೆಂದಾದರೆ ಹಗಲಿನಲ್ಲಿ ನಿದ್ರೆ ಬರುವುದು ಸಹಜ. ಆದರೆ, ರಾತ್ರಿ ಸರಿಯಾಗಿ ನಿದ್ರೆ ಮಾಡಿದ ಬಳಿಕವೂ ಪದೇ ಪದೆ ತೂಕಡಿಸುತ್ತಿರುವುದು ಆರೋಗ್ಯಕ್ಕೆ ಉತ್ತಮವಲ್ಲ. ಹೈಪರ್ ಸೋಮ್ನಿಯಾ ಸಮಸ್ಯೆ ಅಧಿಕ ಮದ್ಯಪಾನದ ಸೇವನೆ, ಒತ್ತಡ ಹಾಗೂ ಖಿನ್ನತೆಯಿಂದಲೂ ಉಂಟಾಗಬಹುದು.
ಹೈಪರ್ ಸೋಮ್ನಿಯಾಕ್ಕೆ (Hypersomnia) ತುತ್ತಾದವರು ರಾತ್ರಿ (Night) ಸಾಕಷ್ಟು ನಿದ್ರೆ (Sleep) ಮಾಡಿದ ಬಳಿಕವು ದಿನದಲ್ಲಿ ನಿದ್ರೆಯ ಮೂಡ್ ನಲ್ಲಿರುತ್ತಾರೆ. ಹಗಲಿನ (Day) ಸಮಯದಲ್ಲಿ ಪದೇ ಪದೆ ನಿದ್ರೆ ಬರುತ್ತಿದ್ದರೆ ಅದನ್ನು ಹೋಗಲಾಡಿಸಲು ಹಲವರು ಆಗಾಗ ಟೀ, ಕಾಫಿ ಸೇವನೆ ಮಾಡುವ ಅಭ್ಯಾಸ (Habit) ಮಾಡಿಕೊಳ್ಳುತ್ತಾರೆ. ಇದರಿಂದ ಬೇರೊಂದು ರೀತಿಯಲ್ಲಿ ಸಮಸ್ಯೆ ಉಂಟಾಗುತ್ತದೆ. ಹೀಗಾಗಿ, ಈ ಸಮಸ್ಯೆ ಇದ್ದರೆ ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡಬಾರದು. ಸೂಕ್ತ ರೀತಿಯಲ್ಲಿ ಜೀವನಶೈಲಿ (Lifestyle) ಬದಲಾವಣೆ ಮಾಡಿಕೊಂಡರೆ ಈ ಸಮಸ್ಯೆಯನ್ನು ಖುದ್ದಾಗಿ ನಿವಾರಣೆ ಮಾಡಿಕೊಳ್ಳಬಹುದು.
ಯಾರು ನೋಡಲಿ ಸರಿಯಾಗಿ ನಿದ್ರೆ ಬರೋಲ್ಲ ಅಂತಾರೆ, ಅದಕ್ಕೆ ಈ ಟೀ ಬೆಸ್ಟ್!
• ನಿದ್ರೆಯ ಚಕ್ರ (Sleep Cycle) ಸರಿಯಾಗಿರಲಿ
ಪ್ರತಿಯೊಬ್ಬರಿಗೂ ದಿನದಲ್ಲಿ 7-8 ಗಂಟೆಗಳ ನಿದ್ರೆ ಅವಶ್ಯ. ದಿನವೂ ನಿಗದಿತ ಸಮಯಕ್ಕೆ ಮಲಗುವ, ಏಳುವ ಪರಿಪಾಠ ಅಭ್ಯಾಸ ಮಾಡಿಕೊಳ್ಳಿ. ಇದನ್ನು ಹೊರತುಪಡಿಸಿ ದಿನದ ಸಮಯದಲ್ಲಿ ಮಲಗುವುದನ್ನು ಅವಾಯ್ಡ್ (Avoid) ಮಾಡಿ.
undefined
• ಆರೋಗ್ಯಕರ (Healthy) ಜೀವನಶೈಲಿ ಅನುಸರಿಸಿ
ಪೋಷಕಾಂಶಗಳಿಂದ (Nutrition) ಕೂಡಿದ ಆಹಾರ (Food) ಸೇವನೆ ಅತ್ಯಗತ್ಯ. ಇದರಿಂದ ದೇಹದಲ್ಲಿ ಶಕ್ತಿ (Energy), ಉತ್ಸಾಹ ವರ್ಧಿಸುತ್ತದೆ. ಅನಗತ್ಯ ಸುಸ್ತು, ಬೇಸರ Bore) ಕಾಡುವುದು ಕಡಿಮೆಯಾಗುತ್ತದೆ. ಆಹಾರದಲ್ಲಿ ಪ್ರೊಟೀನ್, ವಿಟಮಿನ್ ಹಾಗೂ ಹಾರ್ಬೋಹೈಡ್ರೇಟ್ ಗಳ ಪ್ರಮಾಣ ಸರಿಯಾಗಿರುವಂತೆ ಎಚ್ಚರಿಕೆ ವಹಿಸುವುದು ಸೂಕ್ತ. ಹೆಚ್ಚು ಪ್ರೊಟೀನ್ (Protein) ಸೇವನೆ ಮಾಡುವುದರಿಂದ ದೇಹ ಉಲ್ಲಾಸಭರಿತವಾಗಿ ಇರುವುದು ಸಾಧ್ಯ. ಹಾರ್ಬೋಹೈಡ್ರೇಟ್ ಅಂಶ ಹೆಚ್ಚಾದರೆ ಆಲಸ್ಯ ಕಾಡುತ್ತದೆ.
ಚಳಿಗಾಲದಲ್ಲೂ ನಿದ್ರೆ ಬರ್ತಿಲ್ವಾ? ಈ ವ್ಯಾಯಾಮ ಬೆಸ್ಟ್ ಮದ್ದು!
• ಸಾಕಷ್ಟು ನೀರು (Water) ಕುಡಿಯಿರಿ
ದೇಹಕ್ಕೆ ಸಾಕಷ್ಟು ಪ್ರಮಾಣದಲ್ಲಿ ನೀರು ಅಗತ್ಯ. ದೇಹವನ್ನು ಹೈಡ್ರೇಟ್ (Hydrate) ಆಗಿರಿಸಿಕೊಂಡರೆ ದೇಹದ ಸಾಮರ್ಥ್ಯ ವೃದ್ಧಿಸುತ್ತದೆ. ಉದಾಸೀನತೆ ಕಡಿಮೆ ಆಗುತ್ತದೆ. ನೀರಿನ ಅಂಶ ಕಡಿಮೆ ಆದಾಗ ಸುಸ್ತು (Fatigue) ಅಥವಾ ಬೇಸರ ಹೆಚ್ಚುತ್ತದೆ.
• ದಿನವೂ ವ್ಯಾಯಾಮ (Exercise) ಮಾಡಿ
ವ್ಯಾಯಾಮ ಎಲ್ಲರಿಗೂ ಅಗತ್ಯ. ಹೈಪರ್ ಸೋಮ್ನಿಯಾದಿಂದ ಬಳಲುವವರಿಗಂತೂ ಇದು ಅತ್ಯಗತ್ಯ. ವ್ಯಾಯಾಮ ಮಾಡುವುದರಿಂದ ದೇಹದಲ್ಲಿ ರಕ್ತದ ಸಂಚಾರ ಹೆಚ್ಚುತ್ತದೆ. ಇದರಿಂದ ದೇಹ ಫಿಟ್ (Fit) ಆಗಿರುವ ಜತೆಗೆ, ಒತ್ತಡ (Stress) ಕಡಿಮೆಯಾಗುತ್ತದೆ. ದಿನವೂ ಬೆಳಗ್ಗೆ ವ್ಯಾಯಾಮ ಮಾಡುವುದರಿಂದ ಶರೀರದಲ್ಲಿ ಖುಷಿಯ ಹಾರ್ಮೋನ್ ಸ್ರವಿಕೆ ಹೆಚ್ಚಾಗಿ ಉಲ್ಲಸಿತವಾಗಿ ಕೆಲಸದಲ್ಲಿ ನಿರತವಾಗಲು ಸಾಧ್ಯವಾಗುತ್ತದೆ.
• ಒತ್ತಡದಿಂದ ದೂರವಿರಿ (Away from Stress)
ಯಾವುದೇ ಕಾರಣಕ್ಕೂ ಒತ್ತಡ ಮಾಡಿಕೊಳ್ಳಬಾರದು. ಇದು ಹೇಳುವುದು ಸುಲಭ, ಅನುಸರಿಸುವುದು ಕಷ್ಟ. ಆದರೆ, ಒತ್ತಡದಿಂದ ಸಮಸ್ಯೆ ಇನ್ನಷ್ಟು ಹೆಚ್ಚಬಲ್ಲದೇ ಹೊರತು ಪರಿಹಾರವಾಗುವುದಿಲ್ಲ. ಒತ್ತಡ ದೂರವಿರಿಸಲು ವ್ಯಾಯಾಮ, ಪ್ರಾಣಾಯಾಮ, ಧ್ಯಾನಗಳು ಸಹಕಾರಿ.