
ನವದೆಹಲಿ (ಮೇ.28): ಕೇಂದ್ರ ಆರೋಗ್ಯ ಸಚಿವಾಲಯ ಬಿಡುಗಡೆ ಮಾಡಿರುವ ಇತ್ತೀಚಿನ ವರದಿಯ ಪ್ರಕಾರ ಧೂಮಪಾನವು ಆರೋಗ್ಯದ ಎಚ್ಚರಿಕೆ ಮಾತ್ರವಲ್ಲದೆ ಗಂಭೀರ ಅಡ್ಡ ಪರಿಣಾಮಗಳನ್ನು ಉಂಟುಮಾಡುತ್ತದೆ. ಭಾರತದಲ್ಲಿ ಯುವ ಮತ್ತು ಹದಿಹರೆಯದ ಹುಡುಗಿಯರಲ್ಲಿ ಧೂಮಪಾನದ ಪ್ರಮಾಣವು ಎರಡು ಪಟ್ಟು ಹೆಚ್ಚಾಗಿದೆ ಎಂದು ಅಧ್ಯಯನವು ಬಿಗ್ ಡೇಟಾವನ್ನು ಬಹಿರಂಗಪಡಿಸಿದೆ. ಹದಿಹರೆಯದ ಹುಡುಗಿಯರಲ್ಲಿ ಧೂಮಪಾನದ ಪ್ರಮಾಣ ಏರಿಕೆ ಆಗುತ್ತಿದ್ದರೆ, ವಯಸ್ಸಾದ ಮಹಿಳೆಯರಲ್ಲಿ ಇದರ ಪ್ರಮಾಣ ಕಡಿಮೆಯಾಗಿದೆ ಎಂದು ಇಂಡಿಯಾ ಟಬಾಕೊ ಕಂಟ್ರೋಲ್ ಬಿಡುಗಡೆ ಮಾಡಿದ ವರದಿಯಲ್ಲಿ ತಿಳಿಸಿದೆ.
“2009 ಮತ್ತು 2019 ರ ನಡುವೆ, ಹುಡುಗರಿಗೆ ಹೋಲಿಸಿದರೆ ಹುಡುಗಿಯರಲ್ಲಿ ಧೂಮಪಾನವು ಶೇಕಡಾ 6.2 ರಷ್ಟು ಹೆಚ್ಚಾಗಿದೆ. ಈ ಏರಿಕೆಯು ಆತಂಕಕಾರಿಯಾಗಿದ., ವಿಶೇಷವಾಗಿ ವಯಸ್ಕರಲ್ಲಿ ಧೂಮಪಾನವು ಕಡಿಮೆಯಾಗಿದೆ, ಪುರುಷರಲ್ಲಿ ಶೇಕಡಾ 2.2 ರಷ್ಟು ಮತ್ತು ಮಹಿಳೆಯರಲ್ಲಿ ಶೇಕಡಾ 0.4 ರಷ್ಟು ಕಡಿಮೆಯಾಗಿದೆ" ಎಂದು ವರದಿ ತಿಳಿಸಿದೆ. ಆದರೆ, ಹದಿಹರೆಯದ ಹೆಣ್ಣುಮಕ್ಕಳಲ್ಲಿ ಧೂಮಪಾನದ ಹೆಚ್ಚಳ ವಯಸ್ಕ ಮಹಿಳೆಯರನ್ನೂ ಮೀರಿದಿದೆ. ಇದು ಯುವ ಪೀಳಿಗೆಯು ತಂಬಾಕಿನ ಮೇಲೆ ಹೆಚ್ಚು ಅವಲಂಬಿತವಾಗಿರುವ ಪ್ರವೃತ್ತಿಯನ್ನು ಸೂಚಿಸುತ್ತದೆ" ಎಂದು ತಿಳಿಸಿದೆ.
ತಜ್ಞರ ಪ್ರಕಾರ, ಟೀನೇಜ್ ಹುಡುಗಿಯರಲ್ಲಿ ಸಿಗರೇಟ್ ಸೇದುವುದರ ಪ್ರಮಾಣ ಏರಿಕೆಯಾಗಲು ಹಲವು ಕಾರಣಗಳಿವೆ.
* ಟೀನೇಜ್ ಹುಡುಗಿಯರ ಪೋಷಕರಲ್ಲಿ ಧೂಮಪಾನದ ಪ್ರವೃತ್ತಿ.
* ಸ್ನೇಹಿತರಿಂದ ಸಿಗರೇಟ್ ಸೇದೋದಕ್ಕೆ ಪ್ರೋತ್ಸಾಹ ಮತ್ತು ಒತ್ತಡ
* ಸಿಗರೇಟ್ ಸೇದೋದು ಸ್ಟೈಲಿಶ್ ಎನ್ನುವಂತೆ ಮಾಡುವ ಮಾರ್ಕೆಟಿಂಗ್ ಪ್ರಚಾರ
* ಟೀನೇಜ್ ಹುಡುಗಿಯರಲ್ಲಿ ಹೊಸದು ಮತ್ತು ಆಕರ್ಷಕವಾಗಿರೋದನ್ನ ಟ್ರೈ ಮಾಡಲು ಬಯಸುವ ಪ್ರವೃತ್ತಿ
* ಅತ್ಯಂತ ಸುಲಭವಾಗಿ ಸಿಗುವ ತಂಬಾಕು ಉತ್ಪನ್ನಗಳು
* ಹೆಚ್ಚುತ್ತಿರುವ ಒತ್ತಡ ಮತ್ತು ಆತಂಕದಂತಹ ಮಾನಸಿಕ ಆರೋಗ್ಯ ಪರಿಸ್ಥಿತಿಗಳು
*ಭಾವನಾತ್ಮಕ ನಿಂದನೆಯಂತಹ ನಕಾರಾತ್ಮಕ ಜೀವನ ಅನುಭವಗಳು
ಧೂಮಪಾನವು ಟೀನೇಜರ್ಸ್ ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತದೆ?
ಹದಿಹರೆಯದವರಲ್ಲಿ ಧೂಮಪಾನವು ಭಯಾನಕ ತಕ್ಷಣದ ಮತ್ತು ದೀರ್ಘಾವಧಿಯ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುತ್ತದೆ ಎಂದು ವೈದ್ಯರು ಹೇಳಿದ್ದಾರೆ. ಅವುಗಳಲ್ಲಿ ಪ್ರಮುಖವಾಗಿ:
* ದುರ್ವಾಸನೆ, ಹೊಗೆಯ ವಾಸನೆ ಮತ್ತು ಹಳದಿ ಹಲ್ಲುಗಳಂತಹ ಪರಿಣಾಮಗಳು
* ನಿಶ್ಯಕ್ತಿಯಂಥ ಸಮಸ್ಯೆ
* ಶೀತಗಳು ಮತ್ತು ಜ್ವರದ ಹೆಚ್ಚಿನ ಅಪಾಯ
* ಬ್ರಾಂಕೈಟಿಸ್ ಮತ್ತು ನ್ಯುಮೋನಿಯಾದಂತಹ ಉಸಿರಾಟದ ಕಾಯಿಲೆಗಳ ಅಪಾಯ
* ಹೃದಯರೋಗ
* ಸ್ಟ್ರೋಕ್
* ಶ್ವಾಸಕೋಶದ ಸಂಪೂರ್ಣ ಹಾನಿ
* ಶ್ವಾಸಕೋಶ, ಗಂಟಲು ಮತ್ತು ಹೊಟ್ಟೆಯ ಕ್ಯಾನ್ಸರ್ ಸೇರಿದಂತೆ ಹಲವು ವಿಧದ ಕ್ಯಾನ್ಸರ್
* ಖಿನ್ನತೆ, ಕಿರಿಕಿರಿ, ಚಡಪಡಿಕೆ ಮತ್ತು ಆತಂಕದಂತಹ ಮಾನಸಿಕ ಆರೋಗ್ಯ ಸಮಸ್ಯೆಗಳು
* ಕಡಿಮೆ ಜೀವಿತಾವಧಿ
ದಿನಾ ಮಾಡೋ ಇಂಥಾ ತಪ್ಪುಗಳೇ ಅಧಿಕ ರಕ್ತದೊತ್ತಡಕ್ಕೆ ಮುಖ್ಯ ಕಾರಣ!
ಇವುಗಳಲ್ಲದೆ, ವೈದ್ಯರ ಪ್ರಕಾರ, ಹದಿಹರೆಯದವರಲ್ಲಿ ಧೂಮಪಾನವು ಸಂತಾನೋತ್ಪತ್ತಿ ಸಮಸ್ಯೆಗಳಿಗೆ ಕಾರಣವಾಗುತ್ತದೆ ಮತ್ತು ಸೀಳು ತುಟಿ ಮತ್ತು ಸೀಳು ಅಂಗುಳಿನಂತಹ ಜನ್ಮ ದೋಷಗಳು ಉಂಟಾಗುತ್ತದೆ. ಗರ್ಭಾವಸ್ಥೆಯಲ್ಲಿ ನಿಮ್ಮ ಮಗುವಿನ ತುಟಿ ಅಥವಾ ಬಾಯಿ ಸರಿಯಾಗಿ ಬೆಳವಣಿಗೆಯಾಗದಿದ್ದಾಗ ಸಂಭವಿಸುತ್ತದೆ. ಧೂಮಪಾನವು ಹದಿಹರೆಯದ ಹುಡುಗಿಯ ಗರ್ಭಧರಿಸುವ ಸಾಮರ್ಥ್ಯದ ಮೇಲೆ ಪರಿಣಾಮ ಬೀರುತ್ತದೆ ಮತ್ತು ವೀರ್ಯಾಣು ಡಿಎನ್‌ಎಗೆ ಹಾನಿ ಮಾಡುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ.
ಸಣ್ಣ ವಯಸ್ಸಲ್ಲೇ ಸ್ಮೋಕರ್ ಆದ ಕಂಗನಾ, ಸ್ಮೋಕಿಂಗ್ ಇಷ್ಷ ಅಂತಾರೆ ವಿದ್ಯಾ ಬಾಲನ್!
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.